ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಶ್ರೀ ಪಿಯೂಷ್ ಗೋಯಲ್ ರಿಂದ  ನವೋದ್ಯಮ  ಪರಿಸರ ವ್ಯವಸ್ಥೆಯ ಪಾಲುದಾರರೊಂದಿಗೆ ವಿಡಿಯೋ ಕಾನ್ಫರೆನ್ಸ್

Posted On: 02 APR 2020 7:34PM by PIB Bengaluru

ಶ್ರೀ ಪಿಯೂಷ್ ಗೋಯಲ್ ರಿಂದ  ನವೋದ್ಯಮ  ಪರಿಸರ ವ್ಯವಸ್ಥೆಯ ಪಾಲುದಾರರೊಂದಿಗೆ ವಿಡಿಯೋ ಕಾನ್ಫರೆನ್ಸ್

 

ದೇಶದಲ್ಲಿ  ಕೋವಿಡ್-19 ಮತ್ತು ಲಾಕ್‌ಡೌನ್‌ನ ಪರಿಣಾಮವನ್ನು ಪರಿಶೀಲಿಸಲು ರೈಲ್ವೆ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ರವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಯ ಪಾಲುದಾರರೊಂದಿಗೆ ಡೆವಲಪರ್‌ಗಳು, ಪ್ರಮುಖ ನವೋದ್ಯಮಗಳು, ಏಂಜಲ್ ಹೂಡಿಕೆದಾರರು ಮತ್ತು ಇತರರು ಸೇರಿದಂತೆ ಸಭೆ ನಡೆಸಿದರು. ಸಭೆಯಲ್ಲಿ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ, ಸೆಬಿ, ಸಿಬಿಡಿಟಿ, ಸಿಬಿಐಸಿ, ಎನ್‌ಐಟಿಐ ಆಯೋಗ್, ಮತ್ತು ಎಸ್‌ಐಡಿಬಿಐ ಅಧಿಕಾರಿಗಳು ಭಾಗವಹಿಸಿದ್ದರು.

ದೇಶದಲ್ಲಿ ನವೋದ್ಯಮಗಳು  ಭರವಸೆಯ ಮುಂಚೂಣಿಯಲ್ಲಿರುವವು ಮತ್ತು ದೇಶದ ಭವಿಷ್ಯಕ್ಕಾಗಿ ವಹಿಸುತ್ತಿರುವ ಪ್ರಮುಖ ಪಾತ್ರವನ್ನು ಸಚಿವರು ಒತ್ತಿ ಹೇಳಿದರು. ದೇಶವು  ಹಿಂದೆಂದೂ ಕಾಣದಂತಹ ಬಿಕ್ಕಟ್ಟಿನ ಮೂಲಕ ಸಾಗುತ್ತಿದೆ ಮತ್ತು ಇದಕ್ಕೆ ತ್ವರಿತ ಪರಿಹಾರ ಕ್ರಮಗಳ ಅಗತ್ಯವಿದೆ ಎಂದು ಅವರು ಹೇಳಿದರು. ಉದ್ಯಮವು, ವಿಶೇಷವಾಗಿ ನವೋದ್ಯಮಗಳು ಎದುರಿಸುತ್ತಿರುವ ಕಷ್ಟಗಳನ್ನು ನಿವಾರಿಸಲು ಪ್ರತಿಯೊಬ್ಬರ ಸಹಕಾರವನ್ನು ಅವರು ಕೋರಿದರು. ನವೋದ್ಯಮದ ಉದ್ಯಮಿಗಳ ಸಕಾರಾತ್ಮಕ ಮನೋಭಾವವೇ ಅವರನ್ನು ಈ ಕಠಿಣ ಸಂದರ್ಭಕ್ಕೆ ತಕ್ಕಂತೆ ಅಗತ್ಯ ಕಾರ್ಯಗಳನ್ನು ಕೈಗೊಳ್ಳುವಂತೆ ಮಾಡುತ್ತದೆ ಮತ್ತು ಕೋವಿಡ್-19ಕ್ಕೆ  ಸಂಬಂಧಿಸಿದ ವಿವಿಧ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಶ್ರೀ ಗೋಯಲ್ ಹೇಳಿದರು.  ಭಾರತದಲ್ಲಿ ಕೋವಿಡ್-19 ನಿಂದಾದ ಆರ್ಥಿಕ ಕುಸಿತವನ್ನು ಎದುರಿಸಲು ಅನುದಾನದ ಮೂಲಕ 50 ಕ್ಕೂ ಹೆಚ್ಚು ಉಪಕ್ರಮಗಳನ್ನು ಪ್ರಾರಂಭಿಸುವ ಗುರಿಯನ್ನು ಹೊಂದಿರುವ 100 ಕೋಟಿ ರೂಪಾಯಿಗಳ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿರುವ ಆಕ್ಷನ್ ಕೋವಿಡ್-19 ತಂಡವನ್ನು (ACT) ಪ್ರಾರಂಭಿಸುವುದನ್ನು ಅವರು ಸ್ವಾಗತಿಸಿದರು.  ಶ್ರೇಣಿ- 2 ಮತ್ತು ಶ್ರೇಣಿ -3 ಪಟ್ಟಣಗಳಲ್ಲಿನ ಕಿರಾಣಿ ಚಿಲ್ಲರೆ ಅಂಗಡಿಗಳಿಗೆ ಸಹಾಯ ಮಾಡಲು, ಪೂರೈಕೆ ಸರಪಳಿ ಮತ್ತು ಸಂಪನ್ಮೂಲಗಳ ಕೊರತೆಯ ಸಮಸ್ಯೆಗಳನ್ನು ನಿವಾರಿಸಲು ಪ್ರಯತ್ನಿಸುತ್ತಿರುವ ಮತ್ತೊಂದು ನವೋದ್ಯಮವನ್ನು ಸಚಿವರು ಸ್ವಾಗತಿಸಿದರು.  ನವೋದ್ಯಮದ ಪಾಲುದಾರಾರ ವಿವಿಧ ಸಮಸ್ಯೆಗಳು ಮತ್ತು ಸಲಹೆಗಳನ್ನು ಆಲಿಸಿದ ನಂತರ ಶ್ರೀ ಗೋಯಲ್ ಸಹಕಾರಿ ಪ್ರಯತ್ನಗಳಿಗೆ ಕರೆ ನೀಡಿದರು.

ಸಾಂಕ್ರಾಮಿಕ ರೋಗದ ತಡೆಗಟ್ಟುವಿಕೆ, ಸಹಾಯಕ ಮತ್ತು ರೋಗನಿರೋಧಕ ಅಂಶಗಳನ್ನು ಕೇಂದ್ರೀಕರಿಸಿ ಕೋವಿಡ್-19 ಸಮಸ್ಯೆಗಳಿಗೆ ವಿವಿಧ ಪರಿಹಾರಗಳನ್ನು ಕಂಡುಹಿಡಿಯುವಲ್ಲಿ ಅನೇಕ ನವೋದ್ಯಮಗಳು ಕಾರ್ಯನಿರ್ವಹಿಸುತ್ತಿವೆ ಎಂದು ಸಭೆಯಲ್ಲಿ ಉಲ್ಲೇಖಿಸಲಾಯಿತು.  ಅನೇಕ ಉದ್ಯಮಗಳು  ಚಾಲನೆಯ ಅಂತಿಮ ಹಂತದಲ್ಲಿವೆ ಮತ್ತು ಇತರವು ನಿರ್ದಿಷ್ಟ ರೂಪ  ಪಡೆಯಲು ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ. ಈ ಉದ್ಯಮಗಳಿಗೆ ಮಾರ್ಗ, ಧನಸಹಾಯದೃಢೀಕರಣ, ವಿಸ್ತರಿಸುವಿಕೆ  ಮತ್ತು ಬೆಂಬಲದ ಅಗತ್ಯವಿರುತ್ತದೆ.  ಸರ್ಕಾರದ ವಿವಿಧ ಇಲಾಖೆಗಳು ಮತ್ತು ಉದ್ಯಮ ಸಂಘಗಳ ಜಂಟಿ ಸಮಿತಿಯು ಈ ಉಪಕ್ರಮಗಳ ಮೌಲ್ಯ ರೂಪಿಸುತ್ತಿವೆ. ಸಭೆಯಲ್ಲಿ ಭಾಗವಹಿಸುವಹಿಸಿದ್ದವರು ಹಾಜರಿದ್ದ ಅಧಿಕಾರಿಗಳೊಂದಿಗೆ ನಿರ್ದಿಷ್ಟ ಸಮಸ್ಯೆಗಳ ಬಗ್ಗೆ ಕೇಳಿದರು. ಸಭೆಯಲ್ಲಿ ಅನೇಕ ಪರಿಹಾರಗಳನ್ನು ಸೂಚಿಸಲಾಯಿತು ಮತ್ತು ನವೋದಯ ಭಾಂದವರ ಕೆಲವು ಸಲಹೆಗಳಿಗೆ ವಿವರವಾದ ಪರಿಗಣನೆಯ ಅಗತ್ಯವಿದೆ ಎಂದು ನಿರ್ಧರಿಸಲಾಯಿತು.  ನವೋದಯದ ಪ್ರತಿನಿಧಿಗಳು ತಮ್ಮ  , ಉಳಿಯುವಿಕೆ, ದ್ರವ್ಯತೆ ಬಿಕ್ಕಟ್ಟು, ಹಣದ ಹರಿವು ಮತ್ತು ಆದಾಯದ ತೊಂದರೆಗಳು, ಕಾರ್ಮಿಕ ವಿಷಯಗಳು ಮತ್ತು ಲಾಕ್‌ಡೌನ್ ಕಾರಣದಿಂದಾಗಿ ಉದ್ಯಮಗಳನ್ನು ನಡೆಸುವಲ್ಲಿನ ಇತರ ತೊಂದರೆಗಳು ಇತ್ಯಾದಿಗಳ ಬಗ್ಗೆ  ಕಳವಳ ವ್ಯಕ್ತಪಡಿಸಿದರು.



(Release ID: 1610859) Visitor Counter : 177