ಕೃಷಿ ಸಚಿವಾಲಯ

ಹೊಸ ವೈಶಿಷ್ಟ್ಯಗಳನ್ನೊಳಗೊಂಡ ಇ-ನ್ಯಾಮ್ ವೇದಿಕೆ ಬಿಡುಗಡೆ ಮಾಡಿದ ಕೇಂದ್ರ ಕೃಷಿ ಸಚಿವರು

Posted On: 02 APR 2020 7:36PM by PIB Bengaluru

ಹೊಸ ವೈಶಿಷ್ಟ್ಯಗಳನ್ನೊಳಗೊಂಡ ಇ-ನ್ಯಾಮ್ ವೇದಿಕೆ ಬಿಡುಗಡೆ ಮಾಡಿದ ಕೇಂದ್ರ ಕೃಷಿ ಸಚಿವರು

 ಕೋವಿಡ್-19 ವಿರುದ್ಧ ನಮ್ಮ ಹೋರಾಟದಲ್ಲಿ ಇ-ನ್ಯಾಮ್ ನ ಹೊಸ ವೈಶಿಷ್ಟ್ಯಗಳು ಅತ್ಯಂತ ಮಹತ್ವದ ಹೆಜ್ಜೆಗಳಾಗಲಿವೆ: ಶ್ರೀ ತೋಮರ್

 

 ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರು ಇಂದು ಹೊಸ ಫೀಚರ್ಸ್ ಗಳುಳ್ಳ ರಾಷ್ಟ್ರೀಯ ಕೃಷಿ ಮಾರುಕಟ್ಟೆ(ಇ-ನ್ಯಾಮ್) ವೇದಿಕೆಯನ್ನು ಬಿಡುಗಡೆಗೊಳಿಸಿದರು. ಇದು ಕೋವಿಡ್-19 ವಿರುದ್ಧದ ಹೋರಾಟಕ್ಕೆ ಮಂಡಿಗಳಲ್ಲಿ ಜನದಟ್ಟಣೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಗಂಭೀರ ಕ್ರಮವಾಗಿದ್ದು, ಹೊಸ ಅಂಶಗಳಿಂದಾಗಿ ರೈತರು ತಾವು ಕಟಾವು ಮಾಡಿರುವ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ದೈಹಿಕವಾಗಿ ಸಗಟು ಮಾರಾಟ ಮಂಡಿಗಳಿಗೆ ಬರುವ ಅಗತ್ಯತೆಯನ್ನು ತಪ್ಪಿಸುತ್ತದೆ. ಈ ಸಾಫ್ಟ್ ವೇರ್ ಮಾದರಿಗಳನ್ನು ಹೀಗೆ ಕರೆಯಲಾಗಿದೆ. (i) ಇ-ನ್ಯಾಮ್ ಸಾಫ್ಟ್ ವೇರ್ ನಲ್ಲಿ ಗೋದಾಮು ಆಧರಿಸಿದ ವ್ಯಾಪಾರ ಮಾದರಿಯಿಂದ ವ್ಯಾಪಾರಕ್ಕೆ ಪೂರಕವಾಗಿ ಗೋದಾಮುಗಳನ್ನು ಆಧರಿಸಿದ ಇಎನ್ ಬಡ್ಲ್ಯೂಆರ್ ಪದ್ಧತಿ. (ii) ಇ-ನ್ಯಾಮ್ ನಲ್ಲಿ ಎಫ್ ಪಿಒ ವ್ಯಾಪಾರ ಪದ್ಧತಿ ಇದರಲ್ಲಿ ಎಫ್ ಪಿ ಒಗಳು ಎಪಿಎಂಸಿ ಮಾರುಕಟ್ಟೆಗಳಿಗೆ ತಮ್ಮ ಉತ್ಪನ್ನಗಳನ್ನು ತರದೆ, ತಮ್ಮ ಸಂಗ್ರಹಣಾ ಕೇಂದ್ರದಿಂದಲೇ ವ್ಯಾಪಾರವನ್ನು ಮಾಡಬಹುದು. ಇದಲ್ಲದೆ ಅಂತರ-ಮಂಡಿ ಮತ್ತು ಅಂತರ-ರಾಜ್ಯ ವ್ಯಾಪಾರವನ್ನು ಉತ್ತೇಜಿಸುವ ಸಲುವಾಗಿ ಈ ಹಂತದಲ್ಲಿ ಪರಿಷ್ಕೃತ ಮಾದರಿಯ ಸಾರಿಗೆ ಮಾದರಿ ಪದ್ಧತಿಯನ್ನೂ ಸಹ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಸಾರಿಗೆ, ಸಾಗಾಣೆ ವೇದಿಕೆಯಲ್ಲಿ ಅಗ್ರಿಗೇಟರ್ ಗಳು ಸಾಗಿಸುವ ಉತ್ಪನ್ನಗಳ ಸಾಗಾಣೆಯ ಮೇಲೆ ಬಳಕೆದಾರರು ನಿಗಾ ಇಡಬಹುದಾಗಿದೆ.

ಈ ವೇಳೆ ಮಾತನಾಡಿದ ಶ್ರೀ ನರೇಂದ್ರ ಸಿಂಗ್ ತೋಮರ್ ಅವರು, 2016ರ ಏಪ್ರಿಲ್ 14ರಂದು ಇ-ನ್ಯಾಮ್ ಅನ್ನು ಆರಂಭಿಸಲಾಯಿತು. ಅದರಡಿ ದೇಶಾದ್ಯಂತ ಎಲ್ಲಾ ರಾಜ್ಯಗಳ ಎಪಿಎಂಸಿಗಳಿಗೆ ವಿದ್ಯುನ್ಮಾನ ವ್ಯಾಪಾರ ಪೋರ್ಟಲ್ ಲಿಂಕ್ ಮಾಡಲಾಗುವುದು ಎಂದು ಪುನರುಚ್ಚರಿಸಿದರು. ಈಗಾಗಲೇ 16 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ 585 ಮಂಡಿಗಳನ್ನು ಇ-ನ್ಯಾಮ್ ಪೋರ್ಟಲ್ ನಲ್ಲಿ ಸಂಯೋಜಿಸಲಾಗಿದೆ. ಇ-ನ್ಯಾಮ್ ಅನ್ನು ಸದ್ಯದಲ್ಲೇ ಉಳಿದ ಹೆಚ್ಚುವರಿ 415 ಮಂಡಿಗಳಿಗೆ ವಿಸ್ತರಣೆ ಮಾಡಲಾಗುವುದು, ಇದರೊಂದಿಗೆ ಒಟ್ಟು 1,000    ಮಂಡಿಗಳು ಇ-ನ್ಯಾಮ್ ವ್ಯಾಪ್ತಿಗೆ ಒಳಪಡಲಿವೆ ಎಂದರು. ಇ-ನ್ಯಾಮ್ ಸಂಪರ್ಕ ರಹಿತ ರಿಮೋಟ್ ಬಿಡ್ಡಿಂಗ್ ಮತ್ತು ಮೊಬೈಲ್ ಆಧಾರಿತ ಎನಿಟೈಮ್ ಪೇಮೆಂಟ್ ಮೂಲಕ ವ್ಯಾಪಾರದಾರರಿಗೆ ನೆರವಾಗುತ್ತಿದ್ದು, ವರ್ತಕರು ಅದಕ್ಕಾಗಿ ಮಂಡಿಗಳಿಗೆ ಅಥವಾ ಬ್ಯಾಂಕ್ ಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ. ಇದರಿಂದ ಕೋವಿಡ್-19 ವಿರುದ್ಧ ಹೋರಾಡಲು ಎಪಿಎಂಸಿಗಳಲ್ಲಿ ಸುರಕ್ಷತೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನೆರವಾಗುತ್ತದೆ. ಇಂದು ಬಿಡುಗಡೆ ಮಾಡಲಾದ ಹೊಸ ಅಂಶಗಳುಳ್ಳ ಇ-ನ್ಯಾಮ್, ಕೋವಿಡ್-19 ವಿರುದ್ಧ ನಮ್ಮ ಹೋರಾಟದಲ್ಲಿ ಮಹತ್ವದ ಹೆಜ್ಜೆಯಾಗಲಿದೆ. ಇದು ರೈತರು ತಮ್ಮ ತೋಟದ ಬಾಗಿಲಿನಲ್ಲೇ ಉತ್ತಮ ಬೆಲೆಗೆ ತಮ್ಮ ಉತ್ಪನ್ನಗಳನ್ನು ಪರಿಣಾಮಕಾರಿಯಾಗಿ ಮಾರಾಟ ಮಾಡಲು ಸಹಕಾರಿಯಾಗಲಿದೆ.

ಧಾನ್ಯಗಳು, ಹಣ್ಣು ಮತ್ತು ತರಕಾರಿ ಪೂರೈಕೆ ನಿರ್ವಹಣೆಯಲ್ಲಿ ಮಂಡಿಗಳು ಅತ್ಯಂತ ಮಹತ್ವದ ಪಾತ್ರವಹಿಸಲಿವೆ ಎಂದು ಸಚಿವರು ಹೇಳಿದರು. ಕೋವಿಡ್-19 ಸಮಯದಲ್ಲಿ ಮಂಡಿಗಳಲ್ಲಿನ ಜನದಟ್ಟಣೆ ತಪ್ಪಿಸುವಲ್ಲಿ ಇ-ನ್ಯಾಮ್ ಮಹತ್ವದ ಪಾತ್ರವಹಿಸುತ್ತಿದೆ ಮತ್ತು ಅದೇ ವೇಳೆ ರೈತರಿಗೂ ಸಹಕಾರಿಯಾಗಿದೆ. ಈ ಉದ್ದೇಶಕ್ಕಾಗಿ ಇ-ನ್ಯಾಮ್ ಅನ್ನು ಇನ್ನಷ್ಟು ಪರಿಣಾಮಕಾರಿಗೊಳಿಸಲು ಈ ಕೆಳಗಿನ ಮೂರು ಪದ್ಧತಿಗಳನ್ನು ಬಿಡುಗಡೆಗೊಳಿಸಲಾಗಿದೆ.

ರಾಷ್ಟ್ರೀಯ ಕೃಷಿ ಮಾರುಕಟ್ಟೆ ಸಾಫ್ಟ್ ವೇರ್ ನಲ್ಲಿ ಸಂಧಾನ(ವ್ಯವಹಾರ) ಮಾಡಬಹುದಾದ ಗೋದಾಮು ಸ್ವೀಕೃತಿ(ಇ-ಎನ್ ಡಬ್ಲ್ಯೂಆರ್ ಎಸ್)ಪದ್ಧತಿ.

ಗೋದಾಮು(ಡಬ್ಲ್ಯೂಡಿಆರ್ ಎ ಅಡಿ ನೋಂದಾಯಿತ) ವ್ಯಾಪಾರ ಮಾದರಿ, ಇದರಡಿ ಪಾವತಿ ಅಂಶವನ್ನು ಇಂದು ಬಿಡುಗಡೆಗೊಳಿಸಲಾಗಿದ್ದು, ರೈತರು ಡಬ್ಲ್ಯೂಡಿಆರ್ ಎ ಅಡಿ ನೋಂದಾಯಿಸಿಕೊಂಡಿರುವ ಮತ್ತು ರಾಜ್ಯಗಳು ಮಾರುಕಟ್ಟೆ ಎಂದು ಘೋಷಿಸಿರುವ ಗೋದಾಮುಗಳಿಂದಲೇ ಸಣ್ಣ ಹಾಗೂ ಮಧ್ಯಮ ವರ್ಗದ ರೈತರು ತಮ್ಮ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡಬಹುದು.

ರೈತರು ತಮ್ಮ ಉತ್ಪನ್ನವನ್ನು ಡಬ್ಲ್ಯೂಡಿಆರ್ ಎ ಇಂದ ಮಾನ್ಯತೆ ಪಡೆದಿರುವ ಗೋದಾಮುಗಳಲ್ಲಿ ದಾಸ್ತಾನು ಮಾಡಬಹುದು. ಈಗಾಗಲೇ ತೆಲಂಗಾಣ ರಾಜ್ಯ(14 ಗೋದಾಮುಗಳು) ಮತ್ತು ಆಂಧ್ರಪ್ರದೇಶ(23 ಗೋದಾಮು)ಗಳನ್ನು ಸ್ವಾಯತ್ತ ಮಾರುಕಟ್ಟೆ ಎಂದು ಆಯಾ ರಾಜ್ಯಗಳು ನಿಯೋಜಿಸಿವೆ.

ಇ-ನ್ಯಾಮ್ ಜೊತೆ ಇಎನ್ ಡಬ್ಲ್ಯೂಆರ್ ಎಸ್ ಜೊತೆ ಸಂಯೋಜಿಸಿದಾಗ ಸಿಗುವ ಪ್ರಯೋಜನಗಳು.

ಠೇವಣಿದಾರರಿಗೆ ತಮ್ಮ ಸಾರಿಗೆ ವೆಚ್ಚ ಉಳಿತಾಯವಾಗುತ್ತದೆ ಮತ್ತು ಅವರಿಗೆ ಉತ್ತಮ ಆದಾಯ ದೊರಕಲಿದೆ.

ರೈತರು ತಮ್ಮ ಉತ್ಪನ್ನಗಳನ್ನು ದೇಶಾದ್ಯಂತ ಉತ್ತಮ ಬೆಲೆಗೆ ಮಾರಾಟ ಮಾಡಬಹುದಾಗಿದೆ ಮತ್ತು ಅದೇ ವೇಳೆ ಅವರು ಮಂಡಿಗಳಲ್ಲಿನ ತೊಂದರೆಗಳಿಂದ ದೂರವಾಗಬಹುದಾಗಿದೆ.

ರೈತರು ತಮ್ಮ ಉತ್ಪನ್ನವನ್ನು ಡಬ್ಲ್ಯೂಡಿಆರ್ ಎ ಮಾನ್ಯತೆ ಪಡೆದಿರುವ ಗೋದಾಮುಗಳಲ್ಲಿ ಸಂಗ್ರಹಿಸಿಡಬಹುದು ಮತ್ತು ಅಗತ್ಯಬಿದ್ದರೆ ಅದನ್ನು ಅಡವಿಟ್ಟು ಸಾಲದ ಪ್ರಯೋಜನವನ್ನೂ ಸಹ ಪಡೆಯಬಹುದು.

ಸ್ಥಳ ಮತ್ತು ಸಮಯವನ್ನು ಬಳಕೆ ಮಾಡಿಕೊಂಡು ಬೇಡಿಕೆ ಮತ್ತು ಪೂರೈಕೆ ನಡುವೆ ಹೊಂದಾಣಿಕೆ ಮಾಡಿಕೊಂಡು ದರ ಸ್ಥಿರೀಕರಣವನ್ನು ಕಾಯ್ದುಕೊಳ್ಳಬಹುದು.

ಎಫ್ ಪಿ ಒ ವ್ಯಾಪಾರ ಪದ್ಧತಿ

ಇಂದು ಬಿಡುಗಡೆ ಮಾಡಲಾದ ಎಫ್ ಪಿ ಒ ವ್ಯಾಪಾರ ಪದ್ಧತಿಯಲ್ಲಿ ಎಫ್ ಪಿ ಒಗಳು ತಮ್ಮ ಜಾಗಗಳಿಂದಲೇ/ಸಂಗ್ರಹಣಾ ಕೇಂದ್ರದಿಂದಲೇ ಉತ್ಪನ್ನಗಲನ್ನು ಬಿಡ್ಡಿಂಗ್ ಗೆ ಅಪ್ ಲೋಡ್ ಮಾಡಬಹುದು. ಅವರು ಉತ್ಪನ್ನಗಳ ಚಿತ್ರ(ಫೋಟೋ) ಮತ್ತು ಗುಣಮಟ್ಟ ಮಾನದಂಡಗಳನ್ನು ಅಪ್ ಲೋಡ್ ಮಾಡಿ, ದೂರದಲ್ಲಿನ ಬಿಡ್ಡರ್ ಗೆ ಅವರ ಬಳಿ ಇರುವ ಉತ್ಪನ್ನದ ದೃಶ್ಯವನ್ನು ಕಟ್ಟಿಕೊಡಲು  ಸಹಾಯಕವಾಗುತ್ತದೆ. ಎಫ್ ಪಿ ಒಗಳಿಗೆ ತಮ್ಮ ಉತ್ಪನ್ನಗಳನ್ನು ತಮ್ಮ ಜಾಗದಿಂದಲೇ ಅಥವಾ ಬಿಡ್ಡಿಂಗ್ ನಂತರ ಮಂಡಿ ಆವರಣಕ್ಕೆ ತಂದು ಅದನ್ನು ವಿತರಿಸುವ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಇದರಿಂದ ಮಂಡಿಗಳಲ್ಲಿ ದಟ್ಟಣೆ ಕಡಿಮೆಯಾಗುವುದಲ್ಲದೆ, ಎಫ್ ಪಿ ಒಗಳ ಸಾಗಾಣೆ ವೆಚ್ಚವೂ ತಗ್ಗಲಿದೆ.  

ಎಫ್ ಪಿ ಒಗಳು ತಮ್ಮ ಜಾಗದಿಂದ ಉತ್ಪನ್ನಗಳ ಚಿತ್ರ ಹಾಗೂ ವರದಿಗಳನ್ನು ಅಪ್ ಲೋಡ್ ಮಾಡುವ ಸೌಕರ್ಯವಿದೆ, ಇದರಿಂದ ಬಿಡ್ಡಿಂಗ್ ಗೂ ಮುನ್ನ ವರ್ತಕರು ಅದನ್ನು ಚಿತ್ರದಲ್ಲಿ ನೋಡಿ ವೀಕ್ಷಿಸಬಹುದಾಗಿದೆ.

ಅನುಕೂಲಗಳು:

ಇದರಿಂದ ಕೇವಲ ಮಂಡಿಗಳಲ್ಲಿ ಜನದಟ್ಟಣೆ ಕಡಿಮೆಯಾಗುವುದು ಮಾತ್ರವಲ್ಲದೆ ಎಫ್ ಪಿ ಒಗಳು ಮಂಡಿಗಳಲ್ಲಿ ಯಾವುದೇ ತೊಂದರೆ ಇಲ್ಲದೆ ವಹಿವಾಟು ನಡೆಸಲು ಸಹಾಯಕವಾಗುತ್ತದೆ.

ಅಲ್ಲದೆ ಎಫ್ ಪಿ ಒಗಳಿಗೆ ತಮ್ಮ ಸಾಗಾಣೆ ವೆಚ್ಚ(ಸಾರಿಗೆ) ತಗ್ಗುವುದಲ್ಲದೆ, ಅವರು ತಮ್ಮ ಚೌಕಾಶಿ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

ಎಫ್ ಪಿ ಒಗಳು ಸುಲಭವಾಗಿ ವ್ಯಾಪಾರ ವಹಿವಾಟು ನಡೆಸುವಂತೆ ಸಾಧ್ಯವಾಗಲು ಆನ್ ಲೈನ್ ಪಾವತಿ ಸೌಕರ್ಯವನ್ನು ಬಳಸಿಕೊಳ್ಳಬಹುದು.

ಸಾರಿಗೆ  ಪದ್ಧತಿ ಬಿಡುಗಡೆ

ಪ್ರಸ್ತುತ ಇ-ನ್ಯಾಮ್ ನಲ್ಲಿ ವ್ಯಾಪಾರಸ್ಥರಿಗೆ ಸರಕು ಸಾಗಾಣೆದಾರರ ವೈಯಕ್ತಿಕ ದತ್ತಾಂಶ ಲಭ್ಯವಿದೆ. ಆದರೆ ವರ್ತಕರಿಗೆ ಅಗತ್ಯವಿರುವ ಸಾರಿಗೆ ಒದಗಿಸಲು ದೊಡ್ಡ ಸಾರಿಗೆ ಅಗ್ರಿಗೇಟರ್ ಗಳ ಜೊತೆ ಲಿಂಕ್ ಮಾಡಲಾಗಿದ್ದು, ಇದರಿಂದ ಬಳಕೆದಾರರಿಗೆ ಆಯ್ಕೆಯ ಹೆಚ್ಚಿನ ಅವಕಾಶಗಳು ಸಿಗುತ್ತವೆ. ವ್ಯಾಪಾರದಾರರು ಲಿಂಕ್ ಬಳಸಿ, ಸಾರಿಗೆ ಸೇವೆ ಒದಗಿಸುವವರ ವೆಬ್ ಸೈಟ್ ಮೂಲಕ ಸಂಪರ್ಕಿಸಬಹುದು ಮತ್ತು ಆಯ್ದ ಹಾಗೂ ಸೂಕ್ತ ಸೇವಾದಾರರನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಎಲ್ಲ ಸೇರ್ಪಡೆಗಳೊಂದಿಗೆ 3,75,000 ಅಧಿಕ ಟ್ರಕ್ ಗಳನ್ನು ಬೃಹತ್ ಸಾರಿಗೆ ಸೇವಾದಾರರ ವಿವರಗಳನ್ನು ಸಾಗಾಣೆ ಉದ್ದೇಶಕ್ಕಾಗಿ ಸೇರಿಸಲಾಗಿದೆ.

ಅನುಕೂಲಗಳು

ಇದರಿಂದಾಗಿ ಕೃಷಿ ಉತ್ಪನ್ನಗಳ ಸಾಗಾಣೆಗೆ ನಿರಂತರ ಸಹಾಯವಾಗಲಿದೆ.

ಇದು ಇ-ನ್ಯಾಮ್ ಅಡಿಯಲ್ಲಿ ಅಂತರ ರಾಜ್ಯ ವ್ಯಾಪಾರ ಉತ್ತೇಜನಕ್ಕೆ ಹಾಗೂ ದೂರದ ಖರೀದಿದಾರರಿಗೆ ಆನ್ ಲೈನ್ ಸಾರಿಗೆ ಸೌಕರ್ಯಗಳನ್ನು ಒದಗಿಸಲು ನೆರವಾಗಲಿದೆ.

ಶ್ರೀ ತೋಮರ್ ಅವರು, ಈ ಕಾರ್ಯಕ್ರಮಗಳು ರೈತರು, ಮಂಡಗಳಿಗೆ ಭೇಟಿ ನೀಡದೆಯೇ ತಮ್ಮ ತೋಟದ ಬಾಗಿಲಲ್ಲಿಯೇ ತಮ್ಮ ಕೃಷಿ ಉತ್ಪನ್ನಗಳನ್ನು ಸ್ಪರ್ಧಾತ್ಮಕ ದರದಲ್ಲಿ ಮಾರಾಟ ಮಾಡಲು ಸಹಕಾರಿಯಾಗಲಿದೆ ಎಂದು ಹೇಳಿದರು. ಅಲ್ಲದೆ ಮಂಡಿಗಳಲ್ಲಿ ನೈರ್ಮಲ್ಯ ಕಾಯ್ದುಕೊಳ್ಳಲು ಹೆಚ್ಚಿನ ಒತ್ತು ನೀಡಬೇಕಾಗಿದೆ ಮತ್ತು ರೈತರ ಹಾಗೂ ಇನ್ನಿತರ ಸಂಬಂಧಿಸಿದವರ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಗಮನಹರಿಸಬೇಕಾಗಿದೆ ಎಂದು ಹೇಳಿದ್ದಾರೆ. ಬೃಹತ್ ಪ್ರಮಾಣದ ಖರೀದಿದಾರರು/ಸಂಸ್ಕರಣಾದಾರರಿಗೆ ನೇರವಾಗಿ ಖರೀದಿ ಮಾಡುವುದನ್ನು ರಾಜ್ಯಗಳು ಉತ್ತೇಜಿಸಲು ಕ್ರಮ ಕೈಗೊಳ್ಳಲಾಗಿದೆ. ದೊಡ್ಡ ಸಗಟು ಮಾರಾಟದಾರರು ಮಂಡಿಗಳಿಗೆ ಹೋಗದೇ ಇರುವುದರಿಂದ ಅಲ್ಲಿ ಜನದಟ್ಟಣೆ ಆಗುವುದಿಲ್ಲ.

 

*******



(Release ID: 1610542) Visitor Counter : 208