ಕೃಷಿ ಸಚಿವಾಲಯ
PM CARES ನಿಧಿಗೆ ಎನ್.ಸಿ.ಡಿ.ಸಿ. ಮತ್ತು ಇಂಡಿಯನ್ ಪೊಟ್ಯಾಶ್ ಲಿಮಿಟೆಡ್ ಗಳ ದೇಣಿಗೆಯಾಗಿ 11 ಕೋಟಿ ರೂಪಾಯಿಗಳ ಚೆಕ್ ನೀಡಿದ ಕೇಂದ್ರ ಕೃಷಿ ಸಚಿವ ಶ್ರೀ ತೋಮರ್
Posted On:
01 APR 2020 8:59PM by PIB Bengaluru
PM CARES ನಿಧಿಗೆ ಎನ್.ಸಿ.ಡಿ.ಸಿ. ಮತ್ತು ಇಂಡಿಯನ್ ಪೊಟ್ಯಾಶ್ ಲಿಮಿಟೆಡ್ ಗಳ ದೇಣಿಗೆಯಾಗಿ 11 ಕೋಟಿ ರೂಪಾಯಿಗಳ ಚೆಕ್ ನೀಡಿದ ಕೇಂದ್ರ ಕೃಷಿ ಸಚಿವ ಶ್ರೀ ತೋಮರ್
ಕೋವಿಡ್-19: ಕೃಷಿ ಸಚಿವಾಲಯದ ಅಡಿಯಲ್ಲಿ ಕಾರ್ಯಾಚರಿಸುತ್ತಿರುವ ಸಂಸ್ಥೆಗಳಿಂದ ನಿರಂತರ ಸಹಾಯ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮನವಿಯ ಮೇರೆಗೆ ರಾಷ್ಟ್ರೀಯ ಸಹಕಾರಿ ಅಭಿವೃದ್ದಿ ನಿಗಮ (ಎನ್.ಸಿ.ಡಿ.ಸಿ.) ಮತ್ತು ಇಂಡಿಯನ್ ಪೊಟ್ಯಾಶ್ ಲಿಮಿಟೆಡ್ ಗಳು ಜಂಟಿಯಾಗಿ 11 ಕೋಟಿ ರೂಪಾಯಿಗಳನ್ನು ಕೋವಿಡ್ -19 ಬೆದರಿಕೆ ನಿಭಾವಣೆಗಾಗಿ ಪಿ.ಎಂ. –ಕೇರ್ಸ್ ನಿಧಿಗೆ ದೇಣಿಗೆಯಾಗಿ ನೀಡಿವೆ. ಎನ್.ಸಿ.ಡಿ.ಸಿ. ಆಡಳಿತ ನಿರ್ದೇಶಕ ಶ್ರೀ ಸಂದೀಪ ಕುಮಾರ ನಾಯಕ್ ಅವರು 11 ಕೋಟಿ ರೂಪಾಯಿಗಳ ಚೆಕ್ ಅನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ , ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್ ಅವರಿಗೆ ಇಂದು ಸಲ್ಲಿಸಿದರು.
ಎನ್.ಸಿ.ಡಿ.ಸಿ. ಯು ಗ್ರಾಮಸ್ಥರಿಗೆ ಸಹಕಾರಿ ಸಂಸ್ಥೆಗಳ ಮೂಲಕ ಹಣಕಾಸು ಸಹಾಯ ಮಾಡುತ್ತಿದೆ. ಕಳೆದ ಹಣಕಾಸು ವರ್ಷದಲ್ಲಿ ಅದು ರೈತರಿಗೆ ಮತ್ತು ಗ್ರಾಮೀಣ ಜನತೆಗೆ 30,000 ಕೋ. ರೂ. ಗಳವರೆಗೆ ಸಾಲವನ್ನು ವಿತರಿಸಿದೆ.
ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಕಾರ್ಯಾಚರಿಸುತ್ತಿರುವ ಕಂಪೆನಿಗಳು ಮತ್ತು ಸಂಸ್ಥೆಗಳು ಪಿ.ಎಂ. ಕೇರ್ಸ್ ನಿಧಿಗಾಗಿ ಶ್ರೀ ತೋಮರ್ ಅವರಿಗೆ ಕೋಟ್ಯಾಂತರ ರೂಪಾಯಿಗಳ ದೇಣಿಗೆ ನೀಡುತ್ತಿವೆ.
ಸಚಿವರು ತಮ್ಮ ಎಂ.ಪಿ.ಲ್ಯಾಡ್ಸ್ ನಿಧಿಯಿಂದ 1 ಕೋಟಿ ರೂಪಾಯಿಗಳನ್ನು ಮತ್ತು ತಮ್ಮ ಒಂದು ತಿಂಗಳ ವೇತನವನ್ನು ದೇಣಿಗೆಯಾಗಿ ನೀಡಿದ್ದಾರೆ ಮಾತ್ರವಲ್ಲದೆ ತಮ್ಮ ಕ್ಷೇತ್ರವಾದ ಮೊರೆನಾ-ಶೆವೋಪುರದಲ್ಲಿ ಈ ಸಂಬಂಧಿ ಕೆಲಸಗಳಿಗಾಗಿ 50 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ.
(Release ID: 1610173)
Visitor Counter : 144