ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಕೋವಿಡ್-19 ಕುರಿತು ಜಾಗೃತಿ ಮೂಡಿಸಲು ಟಿಐಎಫ್ಆರ್ ನಿಂದ ಉಪಕ್ರಮ

Posted On: 01 APR 2020 11:36AM by PIB Bengaluru

ಕೋವಿಡ್-19 ಕುರಿತು ಜಾಗೃತಿ ಮೂಡಿಸಲು ಟಿಐಎಫ್ಆರ್ ನಿಂದ ಉಪಕ್ರಮ
 
ಹರಿದಾಡುತ್ತಿರುವ ನಾನಾ ಮಿಥ್ಯೆಗಳನ್ನು ಅಳಿಸಲು ಮತ್ತು ಮಾಹಿತಿಯನ್ನು ಪಸರಿಸಲು ಸಹಾಯ ಮಾಡುವ ಉದ್ದೇಶ


ನೀಡುತ್ತಿರುವ ಮಾಹಿತಿ ಅತ್ಯಂತ ಸುಲಭವಾಗಿ ಅರ್ಥಮಾಡಿಕೊಳ್ಳಬಹುದು ಮತ್ತು ಅದು ಪ್ರಾದೇಶಿಕ ಭಾಷೆಯಲ್ಲಿರುವುದರಿಂದ ಹೆಚ್ಚಿನ ಜನರನ್ನು ತಲುಪುತ್ತದೆ
ಚೀನಾದ ವೂಹಾನ್ ನಲ್ಲಿ ಹುಟ್ಟಿದ ಕೋವಿಡ್-19 ಸೋಂಕು ಇದೀಗ ಇಡೀ ವಿಶ್ವವನ್ನು ವ್ಯಾಪಿಸಿದೆ.  ವಿಶ್ವ ಆರೋಗ್ಯ ಸಂಸ್ಥೆ ಅದನ್ನು ಸಾಂಕ್ರಾಮಿಕವೆಂದು ಘೋಷಿಸಿದ ನಂತರ ಇತ್ತೀಚಿನ ವರದಿಯ ಪ್ರಕಾರ ಅದು ಜಗತ್ತಿನ ಸುಮಾರು 204 ರಾಷ್ಟ್ರಗಳಲ್ಲಿ ಹರಡಿದೆ. ಈ ಸಾಂಕ್ರಾಮಿಕ ರೋಗದೊಂದಿಗೆ ಕಾಯಿಲೆ ಬಗ್ಗೆ ಜನರಲ್ಲಿ ಕಳಂಕ, ಮೂಢನಂಬಿಕೆ ಮತ್ತು ಭಯ ಹುಟ್ಟಿಕೊಂಡಿದೆ. ಅತ್ಯಂತ ಪ್ರಮುಖ ಸವಾಲಿನ ಹಾಗೂ ಕೈಗೊಳ್ಳಬೇಕಾದ ಕಠಿಣ ಕ್ರಮಗಳೆಂದರೆ ಐಸೋಲೇಶನ್, ಕ್ವಾರಂಟೈನ್ ಮತ್ತು ಲಾಕ್ ಡೌನ್. ನಾವೇಕೆ ದೈಹಿಕ ಅಂತರವನ್ನು ಕಾಯ್ದುಕೊಳ್ಳಬೇಕು ? ಸಾಂಕ್ರಾಮಿಕದ ಬಗ್ಗೆ ಮಿಥ್ಯೆಗಳನ್ನು ಅಥವಾ ವದಂತಿಗಳನ್ನು ಹೋಗಲಾಡಿಸಿ ಮೂಲತಃ ವೈಜ್ಞಾನಿಕ ರೀತಿಯಲ್ಲಿ ಅರ್ಥೈಸಿಕೊಂಡು ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ(ಟಿಐಎಫ್ಆರ್) ಒಂದು ಪ್ಯಾಕೇಜ್ ನೊಂದಿಗೆ ಸಂವಹನ ಸಾಮಗ್ರಿಗಳನ್ನು ಹೊರತಂದಿದೆ. ಸಂಶೋಧನೆಗಳಿಂದ ಬಹು ಭಾಷಾ ಸಂಪನ್ಮೂಲ(ಯೂಟ್ಯೂಬ್ ವಿಡಿಯೋ)ಗಳನ್ನು ಸಿದ್ಧಪಡಿಸಲಾಗಿದ್ದು, ಕೋವಿಡ್-19 ಸೋಂಕು ಎದುರಿಸಲು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹೇಗೆ ಸಹಕಾರಿಯಾಗುತ್ತದೆ ಎಂಬುದನ್ನು ವಿವರಿಸಲಾಗಿದೆ. ಈ ಸಂಪನ್ಮೂಲಗಳನ್ನು ವಾಷಿಂಗ್ಟನ್ ಪೋಸ್ಟ್ ನಲ್ಲಿ ಹ್ಯಾರಿ ಸ್ಟಿವನ್ಸ್ ಪ್ರಕಟಿಸಿರುವ ಮೂಲ ಕಪಟವನ್ನು ಬಯಲು ಮಾಡುವುದನ್ನು ಆಧರಿಸಿದೆ.
“ನಾವು 9 ಭಾಷೆಗಳಲ್ಲಿ ಇಂಗ್ಲಿಷ್, ಹಿಂದಿ, ಬೆಂಗಾಲಿ, ಕೊಂಕಣಿ, ಮರಾಠಿ, ಮಲಯಾಳಂ, ಒರಿಯಾ, ತಮಿಳು ಮತ್ತು ತೆಲುಗು ಭಾಷೆಗಳ ಮೂಲಕ ಬೋಧನಾ, ಕುಟುಂಬಗಳು ಮತ್ತು ವಿದ್ಯಾರ್ಥಿಗಳಿಗೆ ಸ್ವಯಂಪ್ರೇರಿತವಾಗಿ ಪ್ರಯತ್ನಗಳ ಮೂಲಕ ತಿಳಿಸಿ ಕೊಡುತ್ತಿದ್ದೇವೆ” ಎಂದು ಟಿಐಎಫ್ಆರ್ ನ ವಿಜ್ಞಾನಿ ಪ್ರೊಫೆಸರ್ ಅರ್ನಬ್ ಭಟ್ಟಾಚಾರ್ಯ ತಿಳಿಸಿದ್ದಾರೆ. ಸದ್ಯದಲ್ಲೇ ಸಂಪನ್ಮೂಲ ಸಾಮಗ್ರಿಗಳನ್ನು ಗುಜರಾತಿ, ಪಂಜಾಬಿ ಹರಿಯಾಣ್ವಿ ಮತ್ತು ಅಸ್ಸಾಮಿ ಭಾಷೆಗಳಲ್ಲೂ ಬಿಡುಗಡೆ ಮಾಡಲಾಗುವುದು.
ಇದರ ಉದ್ದೇಶ ನಮ್ಮ ನಡುವಿನ ಹಲವು ಮಿಥ್ಯೆಗಳನ್ನು ದೂರ ಮಾಡುವುದು ಮತ್ತು ಮಾಹಿತಿಯನ್ನು ಪಸರಿಸಲು ಸಹಾಯ ಮಾಡುವುದು. ಮಾಹಿತಿಯನ್ನು ಸುಲಭ ರೀತಿಯಲ್ಲಿ ಅರ್ಥಮಾಡಿಕೊಳ್ಳುವಂತೆ ನೀಡಲಾಗುವುದು ಮತ್ತು ಅದನ್ನು ಪ್ರಾದೇಶಿಕ ಭಾಷೆಗಳಲ್ಲಿ ನೀಡುತ್ತಿರುವುದರಿಂದ ಅದು ಹೆಚ್ಚಿನ ಕೇಳುಗರನ್ನು ತಲುಪಲು ಸಾಧ್ಯವಾಗುತ್ತದೆ. “ಈ ರೋಗ ವಿದೇಶದಲ್ಲಿ ಕಾಣಿಸಿಕೊಂಡಿದೆ, ಆದರೆ ನಾವು ಸ್ಥಳೀಯ ಅಗತ್ಯತೆಗಳಿಗೆ ಅನುಗುಣವಾಗಿ ನಮ್ಮ ಜನಸಂಖ್ಯೆಗೆ ಅದರ ಬಗ್ಗೆ ವಿವರಣೆ ನೀಡಬೇಕಾಗುತ್ತದೆ. ಅದಕ್ಕಾಗಿ ಪ್ರಾದೇಶಿಕ ಪಠ್ಯ ಅತಿಮುಖ್ಯ. ಆದ್ದರಿಂದ ಈ ಸಾಮಗ್ರಿಗಳ ಬಳಕೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಅತ್ಯಂತ ಪರಿಣಾಮಕಾರಿಯಾಗಲಿದೆ ಎಂಬ ಭರವಸೆ ನಮಗಿದೆ” ಎಂದು ಡಾ. ಭಟ್ಟಾಚಾರ್ಯ ಹೇಳಿದರು.
ಮುಂದಿನ ಹಂತದಲ್ಲಿ ನಮ್ಮ ತಂಡ ಮನೆಯಲ್ಲೇ ಸಿಗುವಂತಹ ವಸ್ತುಗಳನ್ನು ಆರಿಸಿಕೊಂಡು ಮಾಸ್ಕ್ ಗಳನ್ನು ತಯಾರಿಸುವ ಪ್ರಯತ್ನ ನಡೆಸಲಿದೆ. ಆ ಕುರಿತ ಪೋಸ್ಟರ್ ಗಳು ಮತ್ತು ವಿಡಿಯೋಗಳನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದು. ಟಿಐಎಫ್ಆರ್ ನ ಈ ಸಾರ್ವಜನಿಕ ಸಂಪರ್ಕ ಅಭಿಯಾನ ‘ಚಾಯ್ ಅಂಡ್ ವೈ’ ? ಎಂಬ ಶೀರ್ಷಿಕೆಯಡಿ ಇರಲಿದ್ದು, ಆ ವೇದಿಕೆಯಲ್ಲಿ ವಿಜ್ಞಾನಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಜನರೊಂದಿಗೆ ಸಂವಾದ ನಡೆಸುತ್ತಾ, ತಪ್ಪು ಮಾಹಿತಿ ಅಥವಾ ಮಿಥ್ಯೆಗಳನ್ನು ಹೋಗಲಾಡಿಸಿ, ಸೋಂಕಿನ ಹಿಂದಿರುವ ವಿಜ್ಞಾನವನ್ನು ವಿವರಿಸಲಿದ್ದಾರೆ.
 
*****


(Release ID: 1609952) Visitor Counter : 205