ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ
ಕೋವಿಡ್ – 19 ಹರಡುವಿಕೆಯ ಕಾರಣದಿಂದಾಗಿ ಕಾರ್ಪೊರೇಟ್ ದಿವಾಳಿತನ ಪರಿಹಾರ ಪ್ರಕ್ರಿಯೆಯಲ್ಲಿ (ಸಿ ಐ ಆರ್ ಪಿ) ಪರಿಹಾರ ನೀಡಲು ಐಬಿಬಿಐ ಯು ಸಿಐಆರ್ಪಿ ನಿಯಮಗಳನ್ನು ತಿದ್ದುಪಡಿ ಮಾಡಿದೆ
Posted On:
30 MAR 2020 5:23PM by PIB Bengaluru
ಕೋವಿಡ್ – 19 ಹರಡುವಿಕೆಯ ಕಾರಣದಿಂದಾಗಿ ಕಾರ್ಪೊರೇಟ್ ದಿವಾಳಿತನ ಪರಿಹಾರ ಪ್ರಕ್ರಿಯೆಯಲ್ಲಿ (ಸಿ ಐ ಆರ್ ಪಿ) ಪರಿಹಾರ ನೀಡಲು ಐಬಿಬಿಐ ಯು ಸಿಐಆರ್ಪಿ ನಿಯಮಗಳನ್ನು ತಿದ್ದುಪಡಿ ಮಾಡಿದೆ
ಕೋವಿಡ್ – 19 ರ ಕಾರಣದಿಂದಾಗಿ ಲಾಕ್‌ಡೌನ್ ಎದುರಿಸುತ್ತಿರುವ ಈ ತೊಂದರೆಯನ್ನು ಪರಿಹರಿಸಲು, ಕೋವಿಡ್ – 19ರ ಹರಡುವಿಕೆಯ ಹಿನ್ನೆಲೆಯಲ್ಲಿ ಹಣಕಾಸು ನಷ್ಟ ಮತ್ತು ದಿವಾಳಿ ಮಂಡಳಿ (ಐಬಿಬಿಐ) ಸಿಐಆರ್ ಪಿ ನಿಯಮಗಳನ್ನು ತಿದ್ದುಪಡಿ ಮಾಡಿತು. ಕೇಂದ್ರ ಸರ್ಕಾರವು ವಿಧಿಸಿರುವ ಲಾಕ್‌ಡೌನ್ ಅವಧಿಯಲ್ಲಿ ಕಾರ್ಪೊರೇಟ್ ದಿವಾಳಿತನ ಪರಿಹಾರ ಪ್ರಕ್ರಿಯೆಗೆ ಸಂಬಂಧಿಸಿದಂತೆ, ಲಾಕ್‌ಡೌನ್ ಕಾರಣದಿಂದಾಗಿ ಪೂರ್ಣಗೊಳ್ಳಲಾಗದ ಯಾವುದೇ ಚಟುವಟಿಕೆಯನ್ನುಸಮಯಾವಕಾಶ ನೀಡಿದ ಉದ್ದೇಶಗಳಿಗಾಗಿ ಎಣಿಕೆ ಮಾಡಲಾಗುವುದಿಲ್ಲ. ಆದಾಗ್ಯೂ, ಇದು ಕೋಡ್‌ನಲ್ಲಿ ಒದಗಿಸಲಾದ ಒಟ್ಟಾರೆ ಸಮಯ-ಮಿತಿಗೆ ಒಳಪಟ್ಟಿರುತ್ತದೆ.
ಐಬಿಬಿಐ ಯು ಭಾರತೀಯ ಹಣಕಾಸು ನಷ್ಟ ಮತ್ತು ದಿವಾಳಿ ಮಂಡಳಿ (ಐಬಿಬಿಐ) ಯ (ಕಾರ್ಪೊರೇಟ್ ವ್ಯಕ್ತಿಗಳಿಗೆ ದಿವಾಳಿತನ ಪರಿಹಾರ ಪ್ರಕ್ರಿಯೆ) ನಿಯಮಗಳು, 2016 (ಸಿಐಆರ್ ಪಿ ನಿಯಮಗಳು) ಅನ್ನು ಮಾರ್ಚ್ 29, 2020 ರಂದು ತಿದ್ದುಪಡಿ ಮಾಡಿತು.
ಕೋವಿಡ್ - 19 ರ ಹರಡುವಿಕೆಯನ್ನು ಎದುರಿಸಲು ಮತ್ತು ತಡೆಗಟ್ಟುವ ಕ್ರಮವಾಗಿ ಭಾರತ ಸರ್ಕಾರವು 25 ಮಾರ್ಚ್ 2020 ರಿಂದ ಜಾರಿಗೆ ಬರುವಂತೆ ಇಪ್ಪತ್ತೊಂದು ದಿನಗಳ ಲಾಕ್‌ಡೌನ್ ಘೋಷಿಸಿದೆ. ಲಾಕ್‌ಡೌನ್ ಅವಧಿಯಲ್ಲಿ , ದಿವಾಳಿತನ ವಿಭಾಗದ ವೃತ್ತಿಪರರು ಪ್ರಕ್ರಿಯೆಯನ್ನು ಮುಂದುವರಿಸುವುದು ಕಷ್ಟ, ಸಾಲಗಾರರ ಸಮಿತಿಯ ಸದಸ್ಯರು ಸಭೆಗಳಿಗೆ ಹಾಜರಾಗುವುದು, ಮತ್ತು ನಿರೀಕ್ಷಿತ ರೆಸಲ್ಯೂಶನ್ ಅರ್ಜಿದಾರರು ರೆಸಲ್ಯೂಶನ್ ಯೋಜನೆಗಳನ್ನು ಸಿದ್ಧಪಡಿಸುವುದು ಮತ್ತು ಸಲ್ಲಿಸುವುದು ಕಷ್ಟ. ಆದ್ದರಿಂದ, ಸಿಐ ಆರ್ ಪಿ ನಿಯಮಗಳಲ್ಲಿ ನಿರ್ದಿಷ್ಟಪಡಿಸಿದ ಸಮಯದೊಳಗೆ ಕಾರ್ಪೊರೇಟ್ ದಿವಾಳಿತನ ಪರಿಹಾರ ಪ್ರಕ್ರಿಯೆಯಲ್ಲಿ ವಿವಿಧ ಚಟುವಟಿಕೆಗಳನ್ನು ಪೂರ್ಣಗೊಳಿಸುವುದು ಕಷ್ಟವಾಗಬಹುದು.
ತಿದ್ದುಪಡಿ ಮಾಡಲಾದ ನಿಯಮಗಳು 29 ಮಾರ್ಚ್ 2020 ರಿಂದ ಜಾರಿಗೆ ಬರುತ್ತವೆ. ಇವುಗಳು www.mca.gov.in ಮತ್ತು www.ibbi.gov.in ನಲ್ಲಿ ಲಭ್ಯವಿದೆ.
(Release ID: 1609551)
Visitor Counter : 244