ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ

ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ NSTI ಗಳನ್ನು ಕೋವಿಡ್ – 19 ಕ್ವಾರಂಟೈನ್ ಕೇಂದ್ರಗಳನ್ನಾಗಿ ಬಳಕೆ

Posted On: 29 MAR 2020 6:40PM by PIB Bengaluru

ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ NSTI ಗಳನ್ನು ಕೋವಿಡ್ – 19 ಕ್ವಾರಂಟೈನ್ ಕೇಂದ್ರಗಳನ್ನಾಗಿ ಬಳಕೆ

 

ಓ ಎಂ ಸೇವಾ ನಿಧಿಗಾಗಿ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ಸಿಬ್ಬಂದಿ ತಮ್ಮ ಒಂದು ದಿನದ ಸಂಬಳವನ್ನು ನೀಡುತ್ತಿದೆ. 

ನೊವಲ್ ಕರೋನಾ ವೈರಸ್ (ಕೋವಿಡ್ – 19) ಹರಡುವಿಕೆ ವಿರುದ್ಧ ಹೋರಾಡಲು ಸರ್ಕಾರ ಸಿದ್ಧತೆ ನಡೆಸುತ್ತಿರುವ ಸಿದ್ಧತೆಯ ಭಾಗವಾಗಿ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ(MSDE) ದೇಶದಲ್ಲಿರುವ ತಮ್ಮ ಎಲ್ಲ ರಾಷ್ಟ್ರೀಯ ಕೌಶಲ್ಯ ತರಬೇತಿ ಶಿಕ್ಷಣ ಸಂಸ್ಥೆ (NSTIs) ಮತ್ತು ವಿದ್ಯಾರ್ಥಿ ನಿಲಯಗಳನ್ನು ಕ್ವಾರಂಟೈನ್ ಕೇಂದ್ರ ಅಥವಾ ಪ್ರತ್ಯೇಕ ವ್ಯವಸ್ಥೆಯಾಗಿ ಪರಿವರ್ತಿಸಲು ನಿರ್ಧರಿಸಿದೆ. ಸಾಂಕ್ರಾಮಿಕ ರೋಗ ಹತೋಟಿಗಾಗಿ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಉತ್ತೇಜಿಸಲು ರಾಷ್ಟ್ರಾದ್ಯಂತ 3 ವಾರಗಳ ಲಾಕ್ ಡೌನ್ ಮೂಲಕ ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಸಿದ್ಧತೆಗೆ ಕೈಜೋಡಿಸಲು ಸಚಿವಾಲಯ ಈ ನಿರ್ಧಾರ ಕೈಗೊಂಡಿದೆ.      

ಕೌಶಲ್ಯ ಭಾರತ ಯೋಜನೆಯಡಿ  ಹಲವಾರು ಕಾರ್ಯಕ್ರಮಗಳ ಮೂಲಕ ಆರೋಗ್ಯ ರಕ್ಷಣೆ ಕೌಶಲ್ಯಗಳಲ್ಲಿ ತರಬೇತಿ ಪಡೆದ ಸುಮಾರು ಒಂದು ಲಕ್ಷ ಜನರ ಪಟ್ಟಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ MSDE ಒದಗಿಸಿದೆ. ಹೊಸದಾಗಿ ಸ್ಥಾಪಿಸಲಾಗುತ್ತಿರುವ ಕ್ವಾರಂಟೈನ್/ಪ್ರತ್ಯೇಕವಾಗಿರಿಸುವುದು/ಆಸ್ಪತ್ರೆಗಳಲ್ಲಿ ಸೋಂಕಿತ ಜನರಿಂದ ವೈರಾಣು ಹರಡುವಿಕೆ  ಮತ್ತು ಚಿಕಿತ್ಸೆ ಹಾಗೂ ಅವರ ಸೇವೆಗಳನ್ನು ಒದಗಿಸುವ ಪ್ರಯತ್ನಕ್ಕೆ  ವಿವಿಧ ಕಾರ್ಯ ನಿರ್ವಹಣೆಯಲ್ಲಿ ತರಬೇತಿ ಪಡೆದ ಈ ಅಭ್ಯರ್ಥಿಗಳು ಉತ್ತೇಜನ ನೀಡಲಿದ್ದಾರೆ. 

ಇದರ ಜೊತೆಗೆ MoHFW ನೊಂದಿಗೆ 2000 ಆರೋಗ್ಯ ರಕ್ಷಣಾ ತರಬೇತುದಾರರು ಮತ್ತು 500 ಆರೋಗ್ಯ ಸೇವಾ ಕಾರ್ಯಕರ್ತರ ಹೆಚ್ಚುವರಿ ಪಟ್ಟಿಯನ್ನು ಹಂಚಿಕೊಳ್ಳಲಾಗಿದೆ.    

ಇದಲ್ಲದೇ ಸಾಂಕ್ರಾಮಿಕ ಕರೋನಾ ವೈರಸ್ ವಿರುದ್ಧ ಹೋರಾಡುವ ಸರ್ಕಾರಿ ಪ್ರಯತ್ನಗಳಿಗೆ ಕೈ ಜೋಡಿಸಲು ಸಚಿವಾಲಯ ಸಿಬ್ಬಂದಿ PM CARES (ಪ್ರಧಾನ ಮಂತ್ರಿ ಸೇವಾ) ನಿಧಿಗೆ ಕನಿಷ್ಠ ಒಂದು ದಿನದ ಸಂಬಳವನ್ನು ದೇಣಿಗೆ ನೀಡಲು ನಿರ್ಧರಿಸಿದೆ.  

NSTI ಗಳು ಆರೋಗ್ಯ ಕೇಂದ್ರಗಳು ಮತ್ತು ಆಸ್ಪತ್ರೆಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಒದಗಿಸುವ ಮೂಲಕ ಈ ವೈರಸ್ ನಿಂದ ಪೀಡಿತರಿಗೆ ಚಿಕಿತ್ಸೆ ನೀಡಲು ಜಿಲ್ಲಾ ಮತ್ತು ರಾಜ್ಯ ಆಡಳಿತಗಳಿಗೆ ಸಹಾಯ ಮಾಡಲಿದೆ ಎಂದು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಡಾ ಮಹೇಂದ್ರನಾಥ್ ಪಾಂಡೆ ಅವರು ಹೇಳಿದರು. “ಕರೋನಾ ವೈರಸ್ ಹರಡುವಿಕೆಯಿಂದ ಸೃಷ್ಟಿಯಾದ ಜಾಗತಿಕ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕೌಶಲ್ಯಾಭಿವೃದ್ಧಿ ಸಚಿವಾಲಯ ಕೇಂದ್ರ ಸರ್ಕಾರಕ್ಕೆ ಸಾಧ್ಯವಾದ ಎಲ್ಲ ಬಗೆಯ ನೆರವು ಒದಗಿಸಲಿದೆ. ಸೌಲಭ್ಯಗಳ ಅವಶ್ಯಕತೆಯಿದ್ದಾಗಲೆಲ್ಲ ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ಸಂಪೂರ್ಣ ಸಹಕರಿಸಿ ಎಂದು NSTI ನ ಎಲ್ಲ ಪ್ರಾದೇಶಿಕ ನಿರ್ದೇಶಕರಿಗೆ ನಾವು ಮನವಿ ಮಾಡಿಕೊಂಡಿದ್ದೇವೆ. ಇದರ ಜೊತೆಗೆ ಐಟಿಐ ಗಳ ಆವರಣಗಳನ್ನು ಕೂಡಾ ರಾಜ್ಯ ಸರ್ಕಾರಗಳು ಉಪಯೋಗಿಸಬಹುದಾಗಿದೆ.”        

 ತರಬೇತಿ ಮಹಾ ನಿರ್ದೇಶಕರ ಅಡಿಯಲ್ಲಿ ನಡೆಸಲಾಗುತ್ತಿರುವ NSTI ಗಳು ವಿಶೇಷ ಕೌಶಲ್ಯಗಳ ತರಬೇತಿ ನೀಡುವ ದೇಶದ ಪ್ರಮುಖ ತರಬೇತಿ ಕೇಂದ್ರಗಳು ಮತ್ತು ವಿದ್ಯಾರ್ಥಿ ನಿಲಯಗಳನ್ನು ಹೊಂದಿರುವ ಪ್ರಧಾನ ಸಂಸ್ಥೆಗಳಾಗಿವೆ. ಕೋವಿಡ್ – 19 ರ ವಿರುದ್ಧದ ಸಮರದಲ್ಲಿ ಮತ್ತು ತುರ್ತು ಪರಿಸ್ಥಿತಿ ನೆರವಿಗಾಗಿ ಕಾರ್ಯನಿರ್ವಹಿಸುವ ಸುಮಾರು 1 ಲಕ್ಷ ಅಬ್ಯರ್ಥಿಗಳು ಕೆಳಕಂಡ ವಿವಿಧ ಕೌಶಲ್ಯಗಳಲ್ಲಿ ತರಬೇತಿ ಪಡೆದಿರುತ್ತಾರೆ  :

ಪಿಎಂಕೆವಿವಾಯ್ಆರೋಗ್ಯ ತರಬೇತಿ ಪಡೆದವರು : 92,040 

ತುರ್ತು ವೈದ್ಯಕೀಯ ತಂತ್ರಜ್ಞರು( ಮೂಲ) : 989

ವಿಕಿರಣ ಶಾಸ್ತ್ರ : 373

ಗೃಹ ಚಿಕಿತ್ಸಾ ನೆರವು : 1644

ಕ್ಷ – ಕಿರಣ ತಂತ್ರಜ್ಞರು : 299

ಸಾಮಾನ್ಯ ಸೇವಾ ಸಹಾಯಕರು : 10,172

ಮುಂಚೂಣಿ ಆರೋಗ್ಯ ಕಾರ್ಯಕರ್ತರು : 530 

ಫ್ಲೆಬೊಟೊಮಿ ತಂತ್ರಜ್ಞರು: 334

ಕೌಶಲ್ಯಗಳಿಗೆ ಉದ್ಯೋಗ ಸಾಮರ್ಥ್ಯ ಹೆಚ್ಚಿಸಲು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ಗಮನಹರಿಸುತ್ತಿದೆ. ಇದರ ಸ್ಥಾಪನೆಯಾದಾಗಿನಿಂದಲೂ ನೀತಿ ನಿರೂಪಣೆ, ಚೌಕಟ್ಟು  ಮತ್ತು ಮಾನದಂಡಗಳನ್ನು ವಿದ್ಯುಕ್ತಗೊಳಿಸಲು; ಹೊಸ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಆರಂಭಿಸಲು; ಪ್ರಸ್ತುತ ಅಸ್ತಿತ್ವದಲ್ಲಿರುವ ಸಂಸ್ಥೆಗಳನ್ನು ನವೀಕರಿಸಲು ಮತ್ತು ಹೊಸ ಮೂಲಭೂತ ಸೌಕರ್ಯಗಳ ಸೃಷ್ಟಿಗೆ; ರಾಜ್ಯಗಳೊಂದಿಗೆ ಸಹಭಾಗಿತ್ವವಹಿಸಲು; ಕೈಗಾರಿಕೆಗಳೊಂದಿಗೆ ತೊಡಗಿಸಿಕೊಳ್ಳಲು ಮತ್ತು ಕೌಶಲ್ಯಕ್ಕೆ ಸಾಮಾಜಿಕ ಸ್ವೀಕಾರ್ಯತೆಯನ್ನು ಸೃಷ್ಟಿಸಲು MSDE ಗಮನಾರ್ಹ ಉಪಕ್ರಮಗಳು ಮತ್ತು ಸುಧಾರಣೆಗಳನ್ನು ಕೈಗೊಂಡಿದೆ. ಅಸ್ತಿತ್ವದಲ್ಲಿರುವ ಉದ್ಯೋಗಗಳಿಗೆ ಮಾತ್ರವಲ್ಲದೆ ಹೊಸದಾಗಿ ಸೃಷ್ಟಿಸಬೇಕಾದ ಉದ್ಯೋಗಗಳಿಗೂ ಹೊಸ ಕೌಶಲ್ಯ ಮತ್ತು ನಾವೀನ್ಯತೆಯ ಸೃಷ್ಟಿಗೆ ಕೌಶಲ್ಯಯುತ ಅಬ್ಯರ್ಥಿಗಳನ್ನು ಬೇಡಿಕೆ ತಕ್ಕಂತೆ ಒದಗಿಸುವ ಗುರಿಯನ್ನು ಸಚಿವಾಲಯ ಹೊಂದಿದೆ. ಇಲ್ಲಿವರೆಗೆ 3 ಕೋಟಿಗಿಂತ ಹೆಚ್ಚು ಜನರು ಕೌಶಲ್ಯ ಭಾರತ ಅಡಿಯಲ್ಲಿ ತರಬೇತಿ ಪಡೆದಿದ್ದಾರೆ. ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ (ಪಿಎಂಕೆವಿವಾಯ್) 2016-20 ರ ಫ್ಲ್ಯಾಗ್ ಶಿಪ್ ಕಾರ್ಯಕ್ರಮದಡಿಯಲ್ಲಿ ಇಲ್ಲಿವರೆಗೆ ಸಚಿವಾಲಯವು 73 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ತರಬೇತಿ ನೀಡಿದೆ.     

 

******



(Release ID: 1609205) Visitor Counter : 204