ರೈಲ್ವೇ ಸಚಿವಾಲಯ
ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಸಂಪೂರ್ಣ ಲಾಕ್‌ಡೌನ್ ಸಮಯದಲ್ಲಿ ಅಗತ್ಯ ವಸ್ತುಗಳನ್ನು ಸಣ್ಣ ಪಾರ್ಸೆಲ್ ಗಳಲ್ಲಿ ಸಾಗಿಸಲು ಭಾರತೀಯ ರೈಲ್ವೆ ವಿಶೇಷ ಪಾರ್ಸೆಲ್ ರೈಲುಗಳು
Posted On:
29 MAR 2020 5:20PM by PIB Bengaluru
ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಸಂಪೂರ್ಣ ಲಾಕ್‌ಡೌನ್ ಸಮಯದಲ್ಲಿ ಅಗತ್ಯ ವಸ್ತುಗಳನ್ನು ಸಣ್ಣ ಪಾರ್ಸೆಲ್ ಗಳಲ್ಲಿ ಸಾಗಿಸಲು ಭಾರತೀಯ ರೈಲ್ವೆ ವಿಶೇಷ ಪಾರ್ಸೆಲ್ ರೈಲುಗಳು
ಪಾರ್ಸೆಲ್ ರೈಲುಗಳು ಇ ಕಾಮರ್ಸ್ ಕಂಪನಿಗಳಿಗೆ ಹೆಚ್ಚಿಗೆ ಉಪಯೋಗವಾಗುವ ನಿರೀಕ್ಷೆಯಿದೆ
ಪಾರ್ಸೆಲ್ ರೈಲುಗಳು ಔಷಧಿಗಳು, ವೈದ್ಯಕೀಯ ಉಪಕರಣಗಳು, ಮುಖಗವಸುಗಳು, ಆಹಾರ ವಸ್ತುಗಳು ಇತ್ಯಾದಿಗಳ ಸಾಗಾಣಿಕೆಗಾಗಿ ರಾಷ್ಟ್ರದಾದ್ಯಂತ ಸಾಮೂಹಿಕ ತ್ವರಿತ ಸಾಗಣೆಗೆ ಬಹಳ ಉಪಯುಕ್ತವಾಗಿವೆ
22.03.2020 ರಿಂದ ರೈಲ್ವೆ ನಡೆಸುತ್ತಿರುವ ಒಟ್ಟು 8 ಪಾರ್ಸೆಲ್ ವಿಶೇಷ ರೈಲುಗಳು; ಇವುಗಳ ಜೊತೆಗೆ, ಪಾರ್ಸೆಲ್ ವಿಶೇಷ ರೈಲುಗಳ ಚಾಲನೆಯನ್ನು 20 ಮಾರ್ಗಗಳಲ್ಲಿ ಮತ್ತಷ್ಟು ಯೋಜಿಸಲಾಗಿದೆ
ಕೋವಿಡ್-19ರ ಹಿನ್ನೆಲೆಯಲ್ಲಿ ಸರಕುಗಳು ಮತ್ತು ಅಗತ್ಯ ವಸ್ತುಗಳ ನಿರಂತರ ಮತ್ತು ತಡೆರಹಿತ ಪೂರೈಕೆಯ ಸರಪಳಿಯನ್ನು ಖಚಿತಪಡಿಸಿಕೊಳ್ಳಲು, ಭಾರತೀಯ ರೈಲ್ವೆಯು ತನ್ನ ನಾಗರಿಕರ ಅಗತ್ಯತೆಗಳನ್ನು ಪೂರೈಸಲು ಅಗತ್ಯವಾದ ಸರಕುಗಳು ಮತ್ತು ಇತರ ಸರಕುಗಳನ್ನು ರಾಷ್ಟ್ರವ್ಯಾಪಿ ಸಾಗಿಸಲು ಪಾರ್ಸೆಲ್ ರೈಲುಗಳ ಅಡೆತಡೆಯಿಲ್ಲದ ಸೇವೆಗಳನ್ನು ನೀಡುತ್ತಿದೆ. .
ಕೋವಿಡ್ 19ರ ಹಿನ್ನೆಲೆಯಲ್ಲಿ ಲಾಕ್‌ಡೌನ್ ಸಮಯದಲ್ಲಿ ಅಗತ್ಯ ಸಾಮಗ್ರಿಗಳಾದ ವೈದ್ಯಕೀಯ ಸರಬರಾಜು, ವೈದ್ಯಕೀಯ ಉಪಕರಣಗಳು, ಆಹಾರ ಇತ್ಯಾದಿಗಳನ್ನು ಸಣ್ಣ ಪಾರ್ಸೆಲ್ ಗಾತ್ರಗಳಲ್ಲಿ ಸಾಗಿಸುವುದು ಬಹಳ ಮುಖ್ಯವಾಗಿದೆ. ಈ ಮಹತ್ವದ ಅಗತ್ಯವನ್ನು ಪೂರೈಸುವ ಸಲುವಾಗಿ, ಭಾರತೀಯ ರೈಲ್ವೆಯು ಅಗತ್ಯವಿರುವ ಇ-ಕಾಮರ್ಸ್ ಘಟಕಗಳಿಗೆ ಮತ್ತು ರಾಜ್ಯ ಸರ್ಕಾರಗಳು ಸೇರಿದಂತೆ ಇತರ ಗ್ರಾಹಕರಿಗೆ ದೇಶಾದ್ಯಂತ ತ್ವರಿತ ಸಾಮೂಹಿಕ ಸಾರಿಗೆಗಾಗಿ ರೈಲ್ವೆ ಪಾರ್ಸೆಲ್ ವ್ಯಾನ್‌ಗಳನ್ನು ಲಭ್ಯಗೊಳಿಸಿದೆ. ಲಾಕ್ ಡೌನ್ ಅವಧಿಯಲ್ಲಿ ದೇಶದಲ್ಲಿ ಸರಕು ಮತ್ತು ಸರಕುಗಳ ಸಾಗಾಣಿಕೆಗೆ ಇರುವ ನಿರ್ಬಂಧಗಳನ್ನು ಗೃಹ ವ್ಯವಹಾರ ಸಚಿವಾಲಯವು ಈಗಾಗಲೇ ತೆಗೆದುಹಾಕಿದೆ ಎನ್ನುವುದನ್ನು ಗಮನಿಸಬಹುದು. ಪಾರ್ಸೆಲ್ ರೈಲುಗಳ ಸೇವೆಯು ಮತ್ತು ತ್ವರಿತ ಸಾಗಣೆಕೆಯು ಸರಕುಗಳ ಪೂರೈಕೆಯ ಸರಪಳಿಗಳ ದಕ್ಷತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ವಿಶೇಷ ಪಾರ್ಸೆಲ್ ರೈಲುಗಳನ್ನು ಓಡಿಸುವ ನಿರ್ಧಾರವು ಸಣ್ಣ ಪ್ರಮಾಣದಲ್ಲಿ ಮತ್ತು ಅಗತ್ಯ ವಸ್ತುಗಳಾದಂತಹ ಡೈರಿ ಉತ್ಪನ್ನಗಳು, ವೈದ್ಯಕೀಯ ಉಪಕರಣಗಳು ಮತ್ತು ಔಷಧಿಗಳು, ದಿನಸಿ, ಖಾದ್ಯ ತೈಲ ಮತ್ತು ಇತರ ಅಗತ್ಯ ವಸ್ತುಗಳು ಇತ್ಯಾದಿಗಳ ಸಾಗಾಣಿಕೆಗೆ ಸಹಾಯ ಮಾಡುತ್ತದೆ.
ಭಾರತೀಯ ರೈಲ್ವೆಯು ಈಗಾಗಲೇ ಸರಕು ಸಾಗಣೆ ರೈಲುಗಳ ಮೂಲಕ ದೇಶದ ವಿವಿಧ ಭಾಗಗಳಿಗೆ ಅಗತ್ಯ ವಸ್ತುಗಳನ್ನು ಸಾಗಿಸುತ್ತಿದೆ. ರೈಲ್ವೆಯ ಈ ಸರಕು ಸಾಗಣೆ ಕಾರ್ಯಾಚರಣೆಗಳು ಆಹಾರ ಧಾನ್ಯಗಳು, ಖಾದ್ಯ ತೈಲ, ಉಪ್ಪು, ಸಕ್ಕರೆ, ಕಲ್ಲಿದ್ದಲು, ಸಿಮೆಂಟ್, ಹಾಲು, ತರಕಾರಿಗಳು ಮತ್ತು ಹಣ್ಣುಗಳು ಮುಂತಾದ ಅಗತ್ಯ ವಸ್ತುಗಳ ಬೃಹತ್ ಸಾರಿಗೆಯ ಅಗತ್ಯಗಳನ್ನು ಪೂರೈಸುತ್ತಿದ್ದರೆ, ತುಲನಾತ್ಮಕವಾಗಿ ಸಣ್ಣ ಪ್ರಮಾಣದಲ್ಲಿ ತಲುಪಿಸಬೇಕಾದ ವಿವಿಧ ವಸ್ತುಗಳೂ ಇವೆ . ವಿಮಾನಗಳ ನಂತರ ರೈಲುಗಳು ಸರಕುಗಳಿಗೆ ಅಂತರ ರಾಜ್ಯ ಸಾರಿಗೆಯ ವೇಗದ ವಿಧಾನವಾಗಿದೆ.
ಭಾರತೀಯ ರೈಲ್ವೆಯ ವಿವಿಧ ವಲಯಗಳು ಈ ಪಾರ್ಸೆಲ್ ರೈಲುಗಳನ್ನು ಓಡಿಸಲು ತಮ್ಮದೇ ಆದ ಯೋಜನೆಗಳನ್ನು ರೂಪಿಸುತ್ತಿವೆ. ಜಾಹೀರಾತುಗಳು ಸೇರಿದಂತೆ ವಿವಿಧ ಸಂವಹನ ವಿಧಾನಗಳ ಮೂಲಕ ರೈಲ್ವೆಯು ನಿರೀಕ್ಷಿತ ಗ್ರಾಹಕರನ್ನು ತಲುಪುತ್ತಿದೆ.
ಕೆಲವು ವಲಯಗಳು ನಡೆಸುತ್ತಿರುವ ಪಾರ್ಸೆಲ್ ವಿಶೇಷ ರೈಲುಗಳ ವಿವರಗಳು ಹೀಗಿವೆ:
22.03.2020 ರಿಂದ ರೈಲ್ವೆ ನಡೆಸುತ್ತಿರುವ ಒಟ್ಟು 8 ಪಾರ್ಸೆಲ್ ವಿಶೇಷ ರೈಲುಗಳು. ಇದಲ್ಲದೆ, ಪಾರ್ಸೆಲ್ ವಿಶೇಷಗಳ ಚಾಲನೆಯನ್ನು 20 ಮಾರ್ಗಗಳಲ್ಲಿ ಮತ್ತಷ್ಟು ಯೋಜಿಸಲಾಗಿದೆ.
ಉತ್ತರ ರೈಲ್ವೆ ಪಾರ್ಸೆಲ್ ವಿಶೇಷ ರೈಲುಗಳು ಈ ಕೆಳಗಿನ ಮಾರ್ಗಗಳಲ್ಲಿ ಚಲಿಸುತ್ತವೆ:
1. ನವದೆಹಲಿ - ಗುವಾಹಟಿ
2. ನವದೆಹಲಿ - ಮುಂಬೈ ಸೆಂಟ್ರಲ್
3. ನವದೆಹಲಿ - ಕಲ್ಯಾಣ್
4. ನವದೆಹಲಿ - ಹೌರಾ
5. ಚಂಡೀಗಢ್ - - ಜೈಪುರ
6. ಮೊಗಾ - ಚಂಗ್ಸರಿ ಪಾರ್ಸೆಲ್
ದಕ್ಷಿಣ ರೈಲ್ವೆ ಪಾರ್ಸೆಲ್ ವಿಶೇಷ ರೈಲುಗಳು ಈ ಕೆಳಗಿನ ಮಾರ್ಗಗಳಲ್ಲಿ ಚಲಿಸುತ್ತವೆ:
1. ಕೊಯಂಬತ್ತೂರು - ಪಟೇಲ್ ನಗರ (ದೆಹಲಿ ಪ್ರದೇಶ) - ಕೊಯಮತ್ತೂರು
2. ಕೊಯಂಬತ್ತೂರು - ರಾಜ್‌ಕೋಟ್- ಕೊಯಂಬತ್ತೂರು
3. ಕೊಯಂಬತ್ತೂರು - ಜೈಪುರ- ಕೊಯಂಬತ್ತೂರು
4. ಸೇಲಂ - ಬಟಿಂಡಾ
ಕೇಂದ್ರ ರೈಲ್ವೆ ಪಾರ್ಸೆಲ್ ವಿಶೇಷ ರೈಲುಗಳು ಈ ಕೆಳಗಿನ ಮಾರ್ಗಗಳಲ್ಲಿ ಚಲಿಸುತ್ತವೆ:
1. ಕಲ್ಯಾಣ್ - ನವದೆಹಲಿ
2. ನಾಸಿಕ್ - ನವದೆಹಲಿ
3. ಕಲ್ಯಾಣ್ - ಸಂತ್ರಘಾಚಿ
4. ಕಲ್ಯಾಣ್ - ಗುವಾಹಟಿ.
ಆಗ್ನೇಯ ರೈಲ್ವೆ ಪಾರ್ಸೆಲ್ ವಿಶೇಷ ರೈಲುಗಳು ಈ ಕೆಳಗಿನ ಮಾರ್ಗಗಳಲ್ಲಿ ಚಲಿಸುತ್ತವೆ:
1. ಸಂಕ್ರೈಲ್ ಗೂಡ್ಸ್ ಟರ್ಮಿನಲ್ ಯಾರ್ಡ್ (ಎಸ್‌ಜಿಟಿವೈ) / ಶಾಲಿಮಾರ್ (ಎಸ್‌ಎಚ್‌ಎಂ) ಕಲ್ಯಾಣ್ (ಕೆವೈಎನ್) ಗೆ
2. ಸಂಕ್ರೈಲ್ ಗೂಡ್ಸ್ ಟರ್ಮಿನಲ್ ಯಾರ್ಡ್ (ಎಸ್‌ಜಿಟಿವೈ) / ಶಾಲಿಮಾರ್ (ಎಸ್‌ಎಚ್‌ಎಂ) ನ್ಯೂ ಗುವಾಹಟಿ ಗೂಡ್ಸ್ ಶೆಡ್ (ಎನ್‌ಜಿಸಿ) ಗೆ
3. ಸಂಕ್ರೈಲ್ ಗೂಡ್ಸ್ ಟರ್ಮಿನಲ್ ಯಾರ್ಡ್ (ಎಸ್‌ಜಿಟಿವೈ) / ಶಾಲಿಮಾರ್ (ಎಸ್‌ಎಚ್‌ಎಂ) ಬೆಂಗಳೂರಿಗೆ (ಎಸ್‌ಬಿಸಿ)
ಆಗ್ನೇಯ ಮಧ್ಯ ರೈಲ್ವೆ ಪಾರ್ಸೆಲ್ ವಿಶೇಷ ರೈಲುಗಳು ಈ ಕೆಳಗಿನ ಮಾರ್ಗಗಳಲ್ಲಿ ಚಲಿಸುತ್ತವೆ:
ಅಗತ್ಯವನ್ನು ಅವಲಂಬಿಸಿ ಪಾರ್ಸೆಲ್ ರೈಲುಗಳು ಪಾಯಿಂಟ್ ಟು ಪಾಯಿಂಟ್ ಚಲಿಸುತ್ತವೆ ಮತ್ತು ಮುಂಬೈ ಮತ್ತು ಕೋಲ್ಕತ್ತಾದಿಂದ ಎಸ್‌ಇಸಿಆರ್ ಮಾರ್ಗದ ಮೂಲಕ ಚಲಿಸಲು ಯೋಜಿಸಲಾದ ಪಾರ್ಸೆಲ್ ರೈಲುಗಳಲ್ಲಿ ಸಣ್ಣ ಜಾಗವನ್ನು ಸಹ ಒದಗಿಸಬಹುದು.
ಕೈಗಾರಿಕೋದ್ಯಮಗಳು , ಕಂಪನಿಗಳು, ಯಾವುದೇ ಆಸಕ್ತ ಗುಂಪುಗಳು, ಸಂಸ್ಥೆಗಳು, ವ್ಯಕ್ತಿಗಳು ಈ ಸೇವೆಗಳನ್ನು ಪಡೆಯಬಹುದು. ಆಸಕ್ತರು ನೋಂದಣಿಗಾಗಿ ರೈಲ್ವೆ ಪಾರ್ಸೆಲ್ ಕಚೇರಿಗಳು ಮತ್ತು ವಿಭಾಗಗಳನ್ನು ಸಂಪರ್ಕಿಸಬಹುದು. ಮೇಲೆ ತಿಳಿಸಿರುವುದನ್ನು ಹೊರತುಪಡಿಸಿ, ಬೇರೆ ಯಾವುದೇ ಮೂಲ - ಗಮ್ಯಸ್ಥಾನ ಸ್ಥಳಗಳ ಬಗ್ಗೆಯೂ ಸಹ ವಿಚಾರಣೆ ಮತ್ತು ನೋಂದಣಿಯನ್ನು ಸ್ವಾಗತಿಸಲಾಗುತ್ತದೆ. ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ ಮತ್ತು ಪಾರ್ಸೆಲ್ / ಸರಕು ಶುಲ್ಕದ ಪಾವತಿಯಂತೆ ಸೇವೆಗಳನ್ನು ನಡೆಸಲಾಗುತ್ತದೆ.
#IndiaFightsCorona
(Release ID: 1609170)
Visitor Counter : 180