ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಸಂಶೋಧನೆ ಮತ್ತು ಅಭಿವೃದ್ಧಿ, ಮೂಲ ಮತ್ತು ಸಹಕಾರ ಹೆಚ್ಚಳದೊಂದಿಗೆ ಕೋವಿಡ್ – 19 ಪತ್ತೆ ಹಚ್ಚಿ ತ್ವರಿತಗತಿಯ ಪರಿಹಾರವನ್ನು ಕಂಡುಕೊಳ್ಳಲು ಡಿ ಎಸ್ ಟಿ ರಾಷ್ಟ್ರಾದ್ಯಂತ ಪ್ರಯೋಗಗಳನ್ನು ಆರಂಭಿಸಿದೆ

Posted On: 27 MAR 2020 5:09PM by PIB Bengaluru

ಸಂಶೋಧನೆ ಮತ್ತು ಅಭಿವೃದ್ಧಿ, ಮೂಲ ಮತ್ತು ಸಹಕಾರ ಹೆಚ್ಚಳದೊಂದಿಗೆ ಕೋವಿಡ್ – 19 ಪತ್ತೆ ಹಚ್ಚಿ ತ್ವರಿತಗತಿಯ ಪರಿಹಾರವನ್ನು ಕಂಡುಕೊಳ್ಳಲು ಡಿ ಎಸ್ ಟಿ ರಾಷ್ಟ್ರಾದ್ಯಂತ ಪ್ರಯೋಗಗಳನ್ನು ಆರಂಭಿಸಿದೆ

ಡಿ ಎಸ್ ಟಿ ಯ ಸ್ವಾಯತ್ತ ಸಂಸ್ಥೆಯಾದ (SCTIMST), ತ್ರಿವೆಂಡ್ರಮ್, ಈಗಾಗಲೇ ಕೋವಿಡ್ – 19 ಆರೋಗ್ಯ ಸವಾಲುಗಳನ್ನು ಎದುರಿಸಲು 8 ವಿಭಿನ್ನ ಮೂಲ ಮಾದರಿಗಳ ನಿರ್ಮಾಣ ಆರಂಭ


ಕೋವಿಡ್ – 19 ಸಾಂಕ್ರಾಮಿಕ ರೋಗದಿಂದ ಉದ್ಭವಿಸಿರುವ ಸಾರ್ವಜನಿಕ ಆರೋಗ್ಯದ ಬಿಕ್ಕಟ್ಟನ್ನು ಎದುರಿಸಲು ರಾಷ್ಟ್ರೀಯ ಕರೆಗೆ ಓಗೊಟ್ಟು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಮತ್ತು ಸ್ವಾಯತ್ತ ಸಂಸ್ಥೆಗಳ ಅದರ ಜಾಲ ಹಾಗೂ ದೇಶಾದ್ಯಂತದ ವೈಜ್ಞಾನಿಕ ಸಂಸ್ಥೆಗಳಿಂದ ಕೈಗೊಳ್ಳಲಾಗುತ್ತಿರುವ ಹಲವಾರು ಚಟುವಟಿಕೆಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (DST) ಪುಷ್ಟಿ ನೀಡುತ್ತಿದೆ ಮತ್ತು ಕ್ರೊಢೀಕರಿಸುತ್ತಿದೆ.    ಕೋವಿಡ್ – 19 ಸಾಂಕ್ರಾಮಿಕ ರೋಗ ಹರಡುವಿಕೆಗೆ ಸಂಬಂಧಿಸಿದ ಸವಾಲುಗಳನ್ನು ಎದುರಿಸಲು 3 ವಿಧಾನಗಳ ಮೂಲಕ ಪರಿಹಾರ ಮತ್ತು ನೂತನ ಬಳಕೆಗಳನ್ನು ಕೈಗೊಳ್ಳಲಾಗುತ್ತಿದೆ. ಅವುಗಳೆಂದರೆ (ಎ) ವ್ಯಾಪಕ ಮ್ಯಾಪಿಂಗ್ ಪರಿಹಾರಗಳಿಗೆ ಬೇಕಾದ ಸಂಶೋಧನೆ ಮತ್ತು ಅಭಿವೃದ್ಧಿ ಸಹಕಾರ, ಸ್ಟಾರ್ಟ್ ಅಪ್ ಗಳಿಗೆ ಸೂಕ್ತ ಉತ್ಪನ್ನಗಳನ್ನು ತಯಾರಿಸಲು ಅಗತ್ಯ ಸೌಲಭ್ಯಗಳ ಬೆಂಬಲ ನೀಡುವುದು (ಬಿ) ಮಾರುಕಟ್ಟೆಯಲ್ಲಿ ಪಸರಿಸಬಹುದಾದ ಉತ್ಪನ್ನಗಳನ್ನು ಗುರುತಿಸುವುದು ಮತ್ತು ಅವುಗಳಿಗೆ ಮೂಲ ಬೆಂಬಲ ನೀಡುವುದು ಹಾಗೂ (ಸಿ) ಮಾರುಕಟ್ಟೆಯಲ್ಲಿ ಈಗಾಗಲೇ ಲಭ್ಯ ಪರಿಹಾರಗಳಿಗೆ ಗಣನೀಯ ಪ್ರಮಾಣದಲ್ಲಿ ತಮ್ಮ ಉತ್ಪಾದನಾ ಮೂಲ ಸೌಕರ್ಯ ಮತ್ತು ಸಾಮರ್ಥ್ಯ ಹೆಚ್ಚಿಸಲು ಸಹಕಾರ.
ಡಿಎಸ್‌ಟಿಯ ಸ್ವಾಯತ್ತ ಸಂಸ್ಥೆಯಾದ ವಿಜ್ಞಾನ ಮತ್ತು ಎಂಜಿನಿಯರಿಂಗ್ ಸಂಶೋಧನಾ ಮಂಡಳಿಯು ಈಗಾಗಲೇ ಕೋವಿಡ್‌ 19ಕ್ಕೆ ವಿನ್ಯಾಸಗೊಳಿಸಲಾದ ಐಆರ್‌ಎಚ್‌ಪಿಎ (ಹೆಚ್ಚಿನ ಆದ್ಯತೆಯ ಪ್ರದೇಶದಲ್ಲಿ ಸಂಶೋಧನೆಯ ತೀವ್ರತೆ)ಯಡಿಯಲ್ಲಿ ವಿಶೇಷ ಕರೆಯ ಭಾಗವಾಗಿ ಪ್ರಸ್ತಾಗಳನ್ನು ಹಾಗೂ ಹೊಸ ಆಂಟಿ-ವೈರಲ್‌ಗಳು, ಲಸಿಕೆಗಳು ಮತ್ತು ಕೈಗೆಟುಕುವ ರೋಗನಿರ್ಣಯಕ್ಕಾಗಿ ರಾಷ್ಟ್ರೀಯ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯತ್ನಗಳನ್ನು ಹೆಚ್ಚಿಸಲು ವಿಶೇಷ ಕರೆಯ ಭಾಗವಾಗಿ ಪ್ರಸ್ತಾಪಗಳನ್ನು ಆಹ್ವಾನಿಸಲು ಕರೆ ಕಳುಹಿಸಲಾಗಿದೆ. ಮಾರ್ಚ್ 31, 2020ರೊಳಗೆ ಪ್ರಸ್ತಾವ ಸಲ್ಲಿಕೆಗೆ ಗಡುವು ನೀಡಲಾಗಿದ್ದು, ಭಾರತದಾದ್ಯಂತ ವಿಜ್ಞಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಡಿಎಸ್‌ಟಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತ ಸರ್ಕಾರದ ಶಾಸನಬದ್ಧ ತಂತ್ರಜ್ಞಾನ ಅಭಿವೃದ್ಧಿ ಮಂಡಳಿ(ಟಿಡಿಬಿ)ಯು ಕೋವಿಡ್ 19 ಸೋಂಕಿತರಿಗೆ  ರಕ್ಷಣೆ ನೀಡುವ ಮತ್ತು ಉಸಿರಾಟದ ಸಮಸ್ಯೆಯನ್ನು ಪರಿಹರಿಸುವ ಪ್ರಸ್ತಾಪವನ್ನು ನೀಡಿದೆ.  2020ರ ಮಾರ್ಚ್ 30ರೊಳಗೆ ಆಹ್ವಾನಿಸಿರುವ ಈ ಪ್ರಸ್ತಾಪ ಕರೆಯು ಹೆಚ್ಚಿನ ಪ್ರತಿಕ್ರಿಯೆಯನ್ನು ಒಳಗೊಂಡಿದೆ. ರೋಗನಿರ್ಣಯ ಕಿಟ್‌ಗಳಾದ ಕೋವಿಡ್-19, ಥರ್ಮಲ್ ಸ್ಕ್ಯಾನರ್‌ಗಳು, ಎಐ ಮತ್ತು ಐಒಟಿ ಆಧಾರಿತ ನಿರ್ಧಾರ ಕೈಗೊಳ್ಳುವಿಕೆ, ಬಿಡಿಭಾಗಗಳು / ವೆಂಟಿಲೇಟರ್‌ಗಳ ತಯಾರಿಕೆ, ಮುಖಗವುಸು ತಯಾರಿಕೆ ಸೇರಿದಂತೆ 190 ಕಂಪನಿಗಳು ಈಗಾಗಲೇ ಟಿಡಿಬಿ ನೀಡುವ ಪರಿಹಾರಗಳಿಗೆ ನೋಂದಾಯಿತವಾಗಿವೆ.
ಡಿಎಸ್‌ಟಿಯ ಸ್ವಾಯತ್ತ ಸಂಸ್ಥೆಯಾದ ತಿರುವನಂತಪುರದ ಶ್ರೀ ಚಿತ್ರ ತಿರುಣಾಲ್ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ(ಎಸ್‌ಸಿಟಿಐಎಂಎಸ್‌ಟಿ)ಯು ಈಗಾಗಲೇ ಕೋವಿಡ್-19 ಸವಾಲುಗಳನ್ನು ಎದುರಿಸಲು 8 ವಿಭಿನ್ನ ಮೂಲಮಾದರಿಗಳನ್ನು ನಿರ್ಮಿಸಲು ಆರಂಭಿಸಿದೆ.  ಡಿಎಸ್‌ಟಿ ಬೆಂಬಲಿತ SCTIMST-TIMedಯಲ್ಲಿನ ಇನ್‌ಕ್ಯುಬೇಷನ್‌ ಅಡಿಯ ನವೋದ್ಯಮವು ಕೋವಿಡ್-19 ಸೋಂಕಿತರನ್ನು ಪರೀಕ್ಷಿಸಲು ಕಡಿಮೆ ವೆಚ್ಚದ AI ಡಿಜಿಟಲ್ ಎಕ್ಸ್‌ರೇ ಡಿಟೆಕ್ಟರ್ ಅನ್ನು ಅಭಿವೃದ್ಧಿಪಡಿಸುತ್ತಿದೆ.
ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಉದ್ಯಮಶೀಲತೆ ಅಭಿವೃದ್ಧಿ ಮಂಡಳಿ ಹಾಗೂ ಡಿಎಸ್‌ಟಿ ಈ ಎರಡೂ ಸಂಸ್ಥೆಗಳು ಕೋವಿಡ್-19 ರೀತಿಯ ಸೋಂಕುಗಳನ್ನು ಎದುರಿಸಲು ಈಗಾಗಲೇ ಹೊಸ ಆವಿಷ್ಕಾರಗಳನ್ನು ಮ್ಯಾಪಿಂಗ್ ಮಾಡಲು ದೇಶಾದ್ಯಂತ 150ಕ್ಕೂ ಹೆಚ್ಚು ಇನ್‌ಕ್ಯೂಬೇಷನ್‌ ಕೇಂದ್ರಗಳ ಬಲವಾದ ಜಾಲವನ್ನು ಹೊಂದಿದೆ. ರಾಷ್ಟ್ರಾದ್ಯಂತ ಡಿಎಸ್‌ಟಿ ಇನ್ಕ್ಯುಬೇಟೆಡ್ ಮೂಲಕ 165 ನವೋದ್ಯಮಗಳಿಂದ ಹೊಸ ಪರಿಹಾರಗಳನ್ನು ಹಾಗೂ ಪ್ರೋತ್ಸಾಹದಾಯಕ ಪ್ರತಿಕ್ರಿಯೆಯನ್ನು  ಸ್ವೀಕರಿಸಲಾಗಿದೆ. ಈ ಪರಿಹಾರಗಳು ರೋಗವನ್ನು ತಡೆಗಟ್ಟುವ, ರೋಗನಿರ್ಣಯ ಮಾಡುವ, ಸಹಾಯಕ ಮತ್ತು ರೋಗನಿರೋಧಕಗಳ ಮುಂದಾಳತ್ವವನ್ನು ಒಳಗೊಳ್ಳುತ್ತವೆ ಮತ್ತು ಇವು ನವೋದ್ಯಮದ ಆರಂಭಿಕ ಹಂತದಲ್ಲಿವೆ. ಕ್ಯಾರೆಂಟೈನ್ ಪ್ರದೇಶಗಳಲ್ಲಿ ವೈರಸ್‌ಗಳನ್ನು ಗಣನೀಯವಾಗಿ ಕಡಿಮೆ ಮಾಡುವ ಉದ್ದೇಶವನ್ನು ಹೊಂದಲಾಗಿದೆ. ಆದ್ದರಿಂದ ಮಹಾರಾಷ್ಟ್ರದ ವಿವಿಧ ಆಸ್ಪತ್ರೆಗಳಲ್ಲಿ ಐರಾನ್ ಅಯಾನೈಸರ್ ಯಂತ್ರಗಳ ಸ್ಥಾಪನೆಯನ್ನು ಹೆಚ್ಚಿಸಲು ಪುಣೆ ವಿಶ್ವವಿದ್ಯಾಲಯದ ಸೈನ್ಸ್‌ಟೆಕ್‌ ಪಾರ್ಕ್‌ನಲ್ಲಿ ಇನ್‌ಕ್ಯುಬೇಷನ್‌ ಅಡಿಯಲ್ಲಿ ಪುಣೆ ಮೂಲದ ನವೋದ್ಯಮಕ್ಕೆ ಡಿಎಸ್ಟಿ ಬೆಂಬಲ ನೀಡಿದೆ.
ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯಗಳು, ಶೈಕ್ಷಣಿಕ ಸಂಸ್ಥೆಗಳು, ನವೋದ್ಯಮಗಳು ಮತ್ತು ಎಂಎಸ್‌ಎಂಇಗಳಿಂದ ತಂತ್ರಜ್ಞಾನಗಳನ್ನು ಮ್ಯಾಪಿಂಗ್ ಮಾಡಲು ’ಡಿಎಸ್‌ಟಿ’ಯು “ಕೋವಿಡ್ 19 ಕಾರ್ಯಪಡೆ”ಯನ್ನು ಸ್ಥಾಪಿಸಿದೆ. ಸಾಮರ್ಥ್ಯವನ್ನು ಮ್ಯಾಪಿಂಗ್ ಮಾಡುವ ತಂಡದಲ್ಲಿ ಡಿಎಸ್‌ಟಿ, ಡಿಬಿಟಿ, ಐಸಿಎಂಆರ್, MeitY, ಸಿಎಸ್ಐಆರ್, ಎಐಎಂ, ಎಂಎಸ್ಎಂಇ, ನವೋದ್ಯಮ ಇಂಡಿಯಾ ಮತ್ತು ಎಐಸಿಟಿಇ ಪ್ರತಿನಿಧಿಗಳಿದ್ದಾರೆ. ವಿಸ್ತರಣೆಗೆ ಹತ್ತಿರವಿರುವ, ಹಣಕಾಸು ಅಥವಾ ಇತರ ಸಹಾಯದ ಅಗತ್ಯವಿರುವ ಅಥವಾ ವೇಗವಾಗಿ ವಿಸ್ತರಣೆಯಾಗುವ ಅದರ ಯೋಜಿತ ಬೇಡಿಕೆಯ ಆಧಾರದ ಮೇಲೆ ಸಂಪರ್ಕಿಸುವಂತಹ ಅತ್ಯಂತ ಭರವಸೆಯ ಆರಂಭಿಕ ಉದ್ಯಮಗಳನ್ನು ಗುರುತಿಸುವುದು ಇದರ ಉದ್ದೇಶವಾಗಿದೆ.
ಕೋವಿಡ್ 19 ಸಾಂಕ್ರಾಮಿಕ ಸೋಂಕಿನಿಂದ ಉಂಟಾಗುವ ಸವಾಲುಗಳನ್ನು ಎದುರಿಸಲು ವೈಜ್ಞಾನಿಕ ಮತ್ತು ಸಂಶೋಧನಾ ಸಂಸ್ಥೆಗಳು, ಸಂಶೋಧಕರು, ವಿಜ್ಞಾನಿಗಳು, ಇನ್‌ಕ್ಯುಬೇಟರ್‌ಗಳು, ನವೋದ್ಯಮಗಳು ಮತ್ತು ಟೆಕ್ ಕಂಪನಿಗಳನ್ನು ಒಳಗೊಂಡ ಸಹಕ್ರಿಯೆಯ ವಿಧಾನದ ಮೂಲಕ ಡಿಎಸ್‌ಟಿ ಸಜ್ಜಾಗಿದೆ.

 

*****


(Release ID: 1608734) Visitor Counter : 180