ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಕೋವಿಡ್-19 ಲಾಕ್ ಡೌನ್ ಸಂದರ್ಭದಲ್ಲಿ ಮೂಲ ಅಂಚೆ ಸೌಲಭ್ಯ ಮತ್ತು ಹಣಕಾಸು ಸೇವೆಗಳನ್ನು ಒದಗಿಸಲಿರುವ ಅಂಚೆ ಕಚೇರಿಗಳು

प्रविष्टि तिथि: 27 MAR 2020 5:45PM by PIB Bengaluru

ಕೋವಿಡ್-19 ಲಾಕ್ ಡೌನ್ ಸಂದರ್ಭದಲ್ಲಿ ಮೂಲ ಅಂಚೆ ಸೌಲಭ್ಯ ಮತ್ತು ಹಣಕಾಸು ಸೇವೆಗಳನ್ನು ಒದಗಿಸಲಿರುವ ಅಂಚೆ ಕಚೇರಿಗಳು


ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟಲು ಲಾಕ್ ಡೌನ್ ಮಾಡಿರುವ ಸಂದರ್ಭದಲ್ಲಿ, ಅಂಚೆ ಕಚೇರಿಗಳು ಮೂಲ ಅಂಚೆ ಸೌಲಭ್ಯ ಮತ್ತು ಹಣಕಾಸು ಸೇವೆಗಳನ್ನು ಒದಗಿಸುತ್ತಿವೆ. ಅಂಚೆ ಜಾಲದ ಮೂಲಕ ಅವಶ್ಯಕ ವಸ್ತುಗಳ ವಿಲೇವಾರಿಗೆ ಆದ್ಯತೆಯನ್ನು ನೀಡಲಾಗುತ್ತಿದೆ. ಭಾರತೀಯ ಅಂಚೆ ಪಾವತಿಗಳ ಬ್ಯಾಂಕ್ ಮತ್ತು ಅಂಚೆ ಕಚೇರಿಯ ಜಮಾ ಖಾತೆಯಲ್ಲಿ ನಗದು ಜಮಾ ಮಾಡುವುದು ಮತ್ತು ಪಡೆದು ಕೊಳ್ಳುವ ಸೇವೆಯೂ ಲಭ್ಯವಿದೆ. ಯಾವುದೇ ಬ್ಯಾಂಕ್ ಗಳಲ್ಲಿ ಹೊಂದಿದ ಖಾತೆಗಳಿಂದ ಹಣವನ್ನು ಎ ಟಿ ಎಂ ಹಾಗೂ ಎ ಇ ಪಿ ಎಸ್ (ಆಧಾರ್ ಚಾಲಿತ ಪಾವತಿ ವ್ಯವಸ್ಥೆ) ಸೌಲಭ್ಯದ ಮೂಲಕ ಪಡೆಯುವ ಸೇವೆಯು  ಅಂಚೆ ಕಚೇರಿಗಳಲ್ಲಿ ಲಭ್ಯವಿದೆ.
ತನ್ನ ಸಿಬ್ಬಂದಿಯನ್ನು ರಕ್ಷಿಸಲು ಮತ್ತು ನಾಗರಿಕರಿಗೆ ಅವಶ್ಯಕ ಸೇವೆಗಳನ್ನು ಖಾತ್ರಿಪಡಿಸಲು, ತಮ್ಮ ಸೇವಾ ಸರಪಳಿಯುದ್ದಕ್ಕೂ ಸುರಕ್ಷತಾ ಕ್ರಮಗಳನ್ನು ಅಂಚೆ ಇಲಾಖೆ ಅಳವಡಿಸಿಕೊಂಡಿದೆ. 
 

****


(रिलीज़ आईडी: 1608632) आगंतुक पटल : 183
इस विज्ञप्ति को इन भाषाओं में पढ़ें: हिन्दी , English , Marathi , Bengali , Gujarati , Odia , Telugu , Malayalam