ಸಂಪುಟ
ರಾಷ್ಟ್ರೀಯ ಆಯುಷ್ ಅಭಿಯಾನದಲ್ಲಿ ಆಯುಷ್ಮಾನ್ ಭಾರತದ ಆಯುಷ್ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಘಟಕವನ್ನು ಸೇರ್ಪಡೆ ಮಾಡಲು ಸಂಪುಟದ ಅನುಮೋದನೆ
Posted On:
21 MAR 2020 4:14PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಆಯುಷ್ಮಾನ್ ಭಾರತದ ಆಯುಷ್ ಆರೋಗ್ಯ ಮತ್ತು ಕ್ಷೇತ್ರ ಕೇಂದ್ರ (ಆಯುಷ್ ಎಚ್.ಡಬ್ಲ್ಯು.ಸಿ) ಘಟಕಗಳನ್ನು ರಾಷ್ಟ್ರೀಯ ಆಯುಷ್ ಅಭಿಯಾನ (ಎನ್.ಎ.ಎಂ.)ನಲ್ಲಿ ಸೇರಿಸಲು ತನ್ನ ಅನುಮೋದನೆ ನೀಡಿದೆ.
2019-20ರಿಂದ 2023-24ರವರೆಗಿನ ಆರ್ಥಿಕ ವರ್ಷದಲ್ಲಿ 5 ವರ್ಷಗಳ ಕಾಲ ಆಯುಷ್ ಎಚ್.ಡಬ್ಲ್ಯು.ಸಿಗಳ ಕಾರ್ಯಾಚರಣೆಗಾಗಿ ಈ ಪ್ರಸ್ತಾವವು 3399.35 ಕೋಟಿ ರೂಪಾಯಿಗಳ . (ಕೇಂದ್ರದ ಪಾಲು 2209.58 ಕೋಟಿ ರೂ. ಮತ್ತು ರಾಜ್ಯದ ಪಾಲು1189.77 ಕೋಟಿ ರೂ.) ವೆಚ್ಚವನ್ನು ಒಳಗೊಂಡಿರುತ್ತದೆ.
ಎನ್.ಎ.ಎಂ. ಅಡಿಯ ಆಯುಷ್ ಎಚ್.ಡಬ್ಲ್ಯು.ಸಿ.ಘಟಕಗಳ ಕಾರ್ಯಾಚರಣೆಯು ಈ ಕೆಳಕಂಡ ಉದ್ದೇಶಗಳನ್ನು ಸಾಧಿಸಬೇಕಾಗಿರುತ್ತದೆ:
ಎ. ಅಸ್ತಿತ್ವದಲ್ಲಿರುವ ಸಾರ್ವಜನಿಕ ಆರೋಗ್ಯ ಆರೈಕೆ ವ್ಯವಸ್ಥೆಯೊಂದಿಗೆ ರೋಗ ತಡೆಗಟ್ಟುವ ಉತ್ತೇಜಕ, ರೋಗ ನಿರೋಧಕ, ಪುನರ್ವಸತಿ ಮತ್ತು ಉಪಶಾಮಕ ಆರೋಗ್ಯ ಆರೈಕೆಯನ್ನು ಗಮನದಲ್ಲಿಟ್ಟುಕೊಂಡು ಏಕೀಕರಿಸುವ ಮೂಲಕ ಆಯುಷ್ ತತ್ವಗಳು ಮತ್ತು ಪದ್ಧತಿಗಳ ಆಧಾರದ ಮೇಲೆ ಸಮಗ್ರ ಸ್ವಾಸ್ಥ್ಯ ಮಾದರಿಯನ್ನು ಸ್ಥಾಪಿಸಲು.
ಬಿ. ಅಗತ್ಯಇರುವ ಸಾರ್ವಜನಿಕರಿಗೆ ಆಯುಷ್ ಸೇವೆ ಲಭ್ಯವಾಗುವಂತೆ ಮಾಹಿತಿಪೂರ್ಣ ಆಯ್ಕೆ ಒದಗಿಸಲು.
ಸಿ. ಆಯುಷ್ ಸೇವೆಗಳಲ್ಲಿ ಜೀವನ ಪದ್ಧತಿಯ ಕುರಿತಂತೆ, ಯೋಗ, ಆಹಾರ, ಔಷಧಿಯ ಸಸ್ಯಗಳು ಮತ್ತು ಆಯುಷ್ ವ್ಯವಸ್ಥೆಯ ಶಕ್ತಿಗೆ ಅನುಗುಣವಾಗಿ ಆಯ್ದ ಪರಿಸ್ಥಿತಿಗಳಿಗೆ ಔಷಧಿಗಳನ್ನು ಒದಗಿಸುವ ಕುರಿತಂತೆ ಸಾಮುದಾಯಿಕ ಜಾಗೃತಿಯೂ ಸೇರಿದೆ.
ಆಯುಷ್ ಸಚಿವಾಲಯವು, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಇತರ ಸಚಿವಾಲಯಗಳೊಂದಿಗೆ ಸಮಾಲೋಚನೆ ನಡೆಸಿ, ದೇಶಾದ್ಯಂತದ 12,500 ಆಯುಷ್ ಆರೋಗ್ಯ ಮತ್ತು ಕ್ಷೇತ್ರ ಕೇಂದ್ರಗಳಲ್ಲಿ ಈ ಕೆಳಗಿನ ಎರಡು ಮಾದರಿಗಳ ಕಾರ್ಯಾಚರಣೆಗಾಗಿ ಪ್ರಸ್ತಾವಿಸಿದೆ.:
ಹಾಲಿ ಇರುವ ಆಯುಷ್ ಚಿಕಿತ್ಸಾಲಯಗಳನ್ನು ಮೇಲ್ದರ್ಜೆಗೇರಿಸುವುದು (ಅಂದಾಜು 10,000)
ಹಾಲಿ ಇರುವ ಉಪ ಆರೋಗ್ಯ ಕೇಂದ್ರ (ಎಸ್.ಎಚ್.ಸಿ.ಗಳು)ಗಳ ಮೇಲ್ದರ್ಜೀಕರಣ (ಅಂದಾಜು 2,500)
ಪ್ರಯೋಜನಗಳು:
ಕೈಗೆಟುಕುವ ದರದ ಚಿಕಿತ್ಸೆಗಾಗಿ ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಸಾಧಿಸಲು ವರ್ಧಿತ ಲಭಿಸಿದೆ.
ದ್ವಿತೀಯ ಮತ್ತು ತೃತೀಯ ಹಂತದ ಆರೋಗ್ಯ ಸೌಲಭ್ಯಗಳ ಮೇಲಿನ ಹೊರೆ ತಗ್ಗಿದೆ.
"ಸ್ವಯಂ-ಆರೈಕೆ" ಮಾದರಿಯಿಂದಾಗಿ ವೆಚ್ಚದ ಹೊರೆ ತಗ್ಗಿದೆ.
ನಿರ್ದಿಷ್ಟ ಪ್ರದೇಶಗಳಲ್ಲಿ ಸಮಗ್ರ ಕ್ಷೇಮ ಮಾದರಿ ಮೌಲ್ಯೀಕರಿಸಬೇಕೆಂಬ ನೀತಿ ಆಯೋಗದ ಕಡ್ಡಾಯ ಆದೇಶದಂತೆ ಎಸ್.ಡಿಜಿ 3 ಅನುಷ್ಠಾನದಲ್ಲಿ ಆಯುಷ್ ನ ಏಕೀಕರಣ.
ಹಿನ್ನೆಲೆ:
ಸಮಗ್ರ ಆರೋಗ್ಯ ಆರೈಕೆಯ ಬಹುತ್ವದ ವ್ಯವಸ್ಥೆಯೊಳಗೆ ಆಯುಷ್ ಪದ್ಧತಿಗಳಾದ (ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ, ಸಾವ್ಸ್-ರಿಗ್ಪಾ ಮತ್ತು ಹೋಮಿಯೋಪಥಿ) ಸಾಮರ್ಥ್ಯವನ್ನು ಮುಖ್ಯವಾಹಿನಿಗೆ ತರುವುದನ್ನು ರಾಷ್ಟ್ರೀಯ ಆರೋಗ್ಯ ನೀತಿ 2017 ಪ್ರತಿಪಾದಿಸಿದೆ.
ಭಾರತ ಸರ್ಕಾರವು ಸಮಗ್ರ ಪ್ರಾಥಮಿಕ ಆರೋಗ್ಯ ಆರೈಕೆ ಒದಗಿಸಲು 2018ರ ಫೆಬ್ರವರಿಯಲ್ಲಿ ಹಾಲಿ ಇರುವ ಉಪ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಪರಿವರ್ತಿಸಿ 1.5 ಲಕ್ಷ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ರೂಪಿಸುವ ಬಗ್ಗೆ ನಿರ್ಧರಿಸಿತ್ತು.
ಆಯುಷ್ ಸಚಿವಾಲಯವು ಒಟ್ಟಾರೆ ಉಪ ಆರೋಗ್ಯ ಕೇಂದ್ರಗಳ ಪೈಕಿ ಶೇ.10ರಷ್ಟು ಅಂದರೆ ಆಯುಷ್ಮಾನ್ ಭಾರತದಡಿ 12,500 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಾಗಿ ಕಾರ್ಯಚರಣೆ ಮಾಡಲೂ ನಿರ್ಧರಿಸಿದೆ.
ಕಾಯಿಲೆಗಳ ಮತ್ತು ಅದಕ್ಕೆ ಆಗುವ ವೆಚ್ಚದ ಹೊರೆ ತಗ್ಗಿಸಲು ಹಾಗೂ ಅಗತ್ಯ ಇರುವ ಸಾರ್ವಜನಿಕರಿಗೆ ಮಾಹಿತಿಯ ಆಯ್ಕೆ ಒದಗಿಸುವ ಸಲುವಾಗಿ ಸ್ವಯಂ ಆರೈಕೆಗಾಗಿ ಸಮುದಾಯವನ್ನು ಸಬಲೀಕರಿಸಲು ಆಯುಷ್ ನೀತಿ ಮತ್ತು ಪದ್ಧತಿಗಳ ಆಧಾರದಲ್ಲಿ ಸಮಗ್ರ ಕ್ಷೇತ್ರ ಮಾದರಿಗಳನ್ನು ಸ್ಥಾಪಿಸುವುದು ಇದರ ದೃಷ್ಟಿಕೋನವಾಗಿದೆ.
(Release ID: 1607699)
Visitor Counter : 171