ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ

ಕಂಪೆನಿಗಳ (ಎರಡನೆ ತಿದ್ದುಪಡಿ) ವಿಧೇಯಕ, 2019: ಸಂಪುಟದ ಅಂಗೀಕಾರ

Posted On: 04 MAR 2020 4:10PM by PIB Bengaluru

ಕಂಪೆನಿಗಳ (ಎರಡನೆ ತಿದ್ದುಪಡಿ) ವಿಧೇಯಕ, 2019: ಸಂಪುಟದ ಅಂಗೀಕಾರ

 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಕಂಪೆನಿಗಳ ಕಾಯ್ದೆ ,2013 ನ್ನು ತಿದ್ದುಪಡಿ ಮಾಡುವ ಕಂಪೆನಿಗಳ  (ಎರಡನೆ ತಿದ್ದುಪಡಿ) ವಿಧೇಯಕ, 2019 ಕ್ಕೆ ಅಂಗೀಕಾರ ನೀಡಿತು.

ಈ ವಿಧೇಯಕವು ಸಾಲ ಮರುಪಾವತಿ ಮಾಡದಿರುವ ಆದರೆ ಆ ಬಗ್ಗೆ ವಸ್ತುನಿಷ್ಟವಾಗಿ ನಿರ್ಧರಿಸಲ್ಪಡುವ  ಪ್ರಕರಣಗಳಲ್ಲಿ ಸಾಲ ಮರುಪಾವತಿ ಮಾಡದಿರುವುದನ್ನು ಅಪರಾಧ ಎಂದು ಪರಿಗಣಿಸುವ ಅಂಶವನ್ನು ತೆಗೆದುಹಾಕುತ್ತದೆ ಮತ್ತು ಅದರಲ್ಲಿ ವಂಚನೆಯ ಅಂಶವಿಲ್ಲದಿದ್ದರೆ ಹಾಗು ವ್ಯಾಪಕವಾದ ಸಾರ್ವಜನಿಕ ಹಿತಾಸಕ್ತಿ ಇಲ್ಲದಿದ್ದರೆ ಅದನ್ನು ಅಪರಾಧದ ವ್ಯಾಪ್ತಿಯಿಂದ ಹೊರಗಿಡುತ್ತದೆ. ಇದು ಮುಂದೆ ದೇಶದ ಅಪರಾಧ ನ್ಯಾಯ ವ್ಯವಸ್ಥೆಯನ್ನು ದಟ್ಟಣೆಯಿಂದ ಒತ್ತಡದಿಂದ ಮುಕ್ತಗೊಳಿಸುತ್ತದೆ. ಈ ವಿಧೇಯಕವು ಕಾನೂನಿಗೆ ಬದ್ದವಾಗಿರುವ ಕಾರ್ಪೊರೇಟ್ ಸಂಸ್ಥೆಗಳಿಗೆ ಸುಲಲಿತ ಬದುಕಿನ ಅವಕಾಶವನ್ನು ಒದಗಿಸುತ್ತದೆ.

ಈ ಮೊದಲು ಕಂಪೆನಿಗಳ (ತಿದ್ದುಪಡಿ) ಕಾಯ್ದೆ, 2015, ಕಾಯ್ದೆಯ  ಕೆಲವು ಪ್ರಸ್ತಾವನೆಗಳನ್ನು ಕಾಯ್ದೆ ಅನುಷ್ಟಾನದಲ್ಲಿ ಎದುರಾಗುವ ಸಮಸ್ಯೆಗಳನ್ನು ನಿವಾರಿಸುವುದಕ್ಕಾಗಿ ತಿದ್ದುಪಡಿ ಮಾಡಲಾಗಿತ್ತು.

***



(Release ID: 1605180) Visitor Counter : 65


Read this release in: English , Urdu , Hindi , Telugu