ಹಣಕಾಸು ಸಚಿವಾಲಯ
ಕೇಂದ್ರ ಬಜೆಟ್ 2020-21 ಪ್ರಮುಖಾಂಶಗಳು
Posted On:
01 FEB 2020 2:51PM by PIB Bengaluru
ಕೇಂದ್ರ ಬಜೆಟ್ 2020-21 ಪ್ರಮುಖಾಂಶಗಳು
21 ನೇ ಶತಮಾನದ ಮೂರನೇ ದಶಕದ ಪ್ರಥಮ ಕೇಂದ್ರ ಬಜೆಟ್ ಸಂಸತ್ತಿನಲ್ಲಿ ಮಂಡಿಸಿದ ಹಣಕಾಸು ಸಚಿವರಾದ ಶ್ರೀಮತಿ. ನಿರ್ಮಲಾ ಸೀತಾರಾಮನ್ ಅವರು, ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಕಾಲೀನ ಕ್ರಮಗಳ ಸಂಯೋಜನೆಯ ಮೂಲಕ ಭಾರತದ ಆರ್ಥಿಕತೆಯನ್ನು ಶಕ್ತಿಯುತಗೊಳಿಸುವ ಉದ್ದೇಶದೊಂದಿಗೆ ದೂರದೃಷ್ಟಿಯ ಸುಧಾರಣೆಗಳ ಸರಣಿಯನ್ನು ಇಂದು ಅನಾವರಣಗೊಳಿಸಿದರು.
2020-21ನೇ ಸಾಲಿನ ಕೇಂದ್ರ ಬಜೆಟ್ ನ ಪ್ರಮುಖಾಂಶಗಳು ಈ ಕೆಳಕಂಡಂತಿವೆ:
ಬಜೆಟ್ ನ ಮೂರು ಮಹತ್ವದ ಧ್ಯೇಯಗಳು
· ಮಹತ್ವಾಕಾಂಕ್ಷೆಯ ಭಾರತ - ಸಮಾಜದ ಎಲ್ಲಾ ವರ್ಗದವರಿಗೆ ಆರೋಗ್ಯ, ಶಿಕ್ಷಣ ಮತ್ತು ಉತ್ತಮ ಉದ್ಯೋಗಾವಕಾಶಗಳೊಂದಿಗೆ ಉತ್ತಮ ಗುಣಮಟ್ಟದ ಜೀವನ.
· ಎಲ್ಲರಿಗೂ ಆರ್ಥಿಕ ಅಭಿವೃದ್ಧಿ - “ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ”.
· ಸಮಾಜದ ಕಾಳಜಿ - ಮಾನವೀಯತೆ ಮತ್ತು ಸಹಾನುಭೂತಿ ಎರಡೂ ಸೇರಿದ; ಆಂತ್ಯೋದಯ ಎಂಬ ನಂಬಿಕೆಯ ಸಾಧನ.
· ಮೂರು ವಿಸ್ತೃತ ವಿಷಯಗಳು ಒಗ್ಗೂಡಿವೆ
o ಭ್ರಷ್ಟಾಚಾರ ಮುಕ್ತ, ನೀತಿ-ಚಾಲಿತ ಉತ್ತಮ ಆಡಳಿತ.
o ಸ್ವಚ್ಛ ಮತ್ತು ಸುಭದ್ರ ಆರ್ಥಿಕ ವಲಯ.
· 2020-21ನೇ ಸಾಲಿನ ಕೇಂದ್ರ ಬಜೆಟ್ ನ ಮೂರು ಧ್ಯೇಯಗಳು ಸುಗಮ ಜೀವನವನ್ನು ಪ್ರತಿಪಾದಿಸುತ್ತವೆ.
ಮಹತ್ವಾಕಾಂಕ್ಷೆಯ ಭಾರತದ ಮೂರು ಅಂಶಗಳು
· ಕೃಷಿ, ನೀರಾವರಿ ಮತ್ತು ಗ್ರಾಮೀಣಾಭಿವೃದ್ಧಿ
· ಕ್ಷೇಮ, ನೀರು ಮತ್ತು ನೈರ್ಮಲ್ಯ
· ಶಿಕ್ಷಣ ಮತ್ತು ಕೌಶಲ್ಯ.
ಕೃಷಿ, ನೀರಾವರಿ ಮತ್ತು ಗ್ರಾಮೀಣಾಭಿವೃದ್ಧಿಗೆ ಹದಿನಾರು ಕ್ರಿಯಾ ಅಂಶಗಳು
· ರೂ. 2.83 ಲಕ್ಷ ಕೋಟಿಯನ್ನು ಈ ಕೆಳಗಿನ 16 ಕ್ರಿಯಾ ಅಂಶಗಳಿಗೆ ಹಂಚಿಕೆ:
o ಕೃಷಿ, ನೀರಾವರಿ ಮತ್ತು ಪೂರಕ ಚಟುವಟಿಕೆಗಳಿಗಾಗಿ 1.60 ಲಕ್ಷ ಕೋಟಿ ರೂಪಾಯಿ
o ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಗೆ 1.23 ಲಕ್ಷ ಕೋಟಿ ರೂ.
· ಕೃಷಿ ಸಾಲ:
o 2020-21ನೇ ಸಾಲಿಗೆ 15 ಲಕ್ಷ ಕೋಟಿ ರೂಪಾಯಿಗಳ ಗುರಿ ನಿಗದಿ
o ಪ್ರಧಾನಮಂತ್ರಿ ಕಿಸಾನ್ – ಕೆಸಿಸಿ ಯೋಜನೆ ಅಡಿಯಲ್ಲಿ ಫಲಾನುಭವಿಗಳು
o ನಬಾರ್ಡ್ ಮರು ಹಣಕಾಸು ನೆರವು ಯೋಜನೆ ಮತ್ತಷ್ಟು ವಿಸ್ತರಣೆ
· 100 ಜಲ ಸಂಕಷ್ಟ ಎದುರಿಸುತ್ತಿರುವ ಜಿಲ್ಲೆಗಳಿಗೆ ಸಮಗ್ರ ಯೋಜನೆಯ ಪ್ರಸ್ತಾಪ
· ನೀಲಿ ಆರ್ಥಿಕತೆ :
o 2024-25ರ ಹೊತ್ತಿಗೆ ಒಂದು ಲಕ್ಷ ಕೋಟಿ ರೂ. ಮೀನುಗಾರಿಕೆ ರಫ್ತು ಸಾಧಿಸುವ ಗುರಿ
o 2022-23ರ ಹೊತ್ತಿಗೆ 200 ಲಕ್ಷ ಟನ್ ಮೀನು ಉತ್ಪಾದನೆ ಗುರಿ
o ಮೀನುಗಾರಿಕೆ ವಿಸ್ತರಣೆಗಳಲ್ಲಿ 3477 ಸಾಗರ ಮಿತ್ರ ಮತ್ತು 500 ಮೀನು ಕೃಷಿ ಉತ್ಪಾದಕರ ಸಂಘಟನೆಗಳಲ್ಲಿ ಯುವಕರ ತೊಡಗಿಸುಕೊಳ್ಳುವಿಕೆ.
O ಪಾಚಿ, ಸಮುದ್ರ-ಕಳೆ ಬೆಳೆಯುವುದು ಮತ್ತು ಗೂಡಲ್ಲಿ ಬೆಳೆಸುವುದನ್ನು ಉತ್ತೇಜಿಸುವುದು.
O ಸಮುದ್ರ ಮೀನುಗಾರಿಕೆ ಸಂಪನ್ಮೂಲಗಳ ಅಭಿವೃದ್ಧಿ,ನಿರ್ವಹಣೆ ಮತ್ತು ಸಂರಕ್ಷಣೆಗಾಗಿ ಚೌಕಟ್ಟು.
· ಪಿಪಿಪಿ ಮೂಲಕ ಭಾರತೀಯ ರೈಲ್ವೆಯಿಂದ ಕಿಸಾನ್ ರೈಲು :
o ಹಾಳಾಗುವಂಥ (ಹಾಲು, ಮಾಂಸ, ಮೀನು ಇತ್ಯಾದಿ)ಉತ್ಪನ್ನಗಳಿಗೆ ತಡೆರಹಿತ ರಾಷ್ಟ್ರೀಯ ಶೀಥಲೀಕರಣ ಸರಪಣಿ ನಿರ್ಮಿಸಲು
o ಎಕ್ಸ್ ಪ್ರೆಸ್ ಮತ್ತು ಸರಕು ಸಾಗಣೆ ರೈಲುಗಳಲ್ಲಿ ಶೀಥಲೀಕರಣ ವ್ಯವಸ್ಥೆಯ ಬೋಗಿಗಳು.
· ನಾಗರಿಕ ವಿಮಾನಯಾನ ಸಚಿವಾಲಯದಿಂದ ಕೃಷಿ ಉಡಾಣ್ ಗೆ ಚಾಲನೆ:
o ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಾರ್ಗಗಳನ್ನು ವ್ಯಾಪಿಸುತ್ತದೆ.
o ಈಶಾನ್ಯ ಮತ್ತು ಬುಡಕಟ್ಟು ಜಿಲ್ಲೆಗಳಲ್ಲಿನ ಕೃಷಿ ಉತ್ಪನ್ನಗಳಿಗೆ ಸುಧಾರಿತ ಮೌಲ್ಯದ ಸಾಕಾರ
o ತೋಟಗಾರಿಕೆ ಕ್ಷೇತ್ರದಲ್ಲಿ ಉತ್ತಮ ಮಾರುಕಟ್ಟೆ ಮತ್ತು ರಫ್ತಿಗಾಗಿ ಒಂದು ಉತ್ಪನ್ನ ಒಂದು ಜಿಲ್ಲೆ
o ಎಲ್ಲ ಸ್ವರೂಪದ ಗೊಬ್ಬರಗಳ ಸಮತೋಲಿತ ಬಳಕೆ -ಸಾಂಪ್ರದಾಯಿಕ ಸಾವಯವ ಮತ್ತು ನಾವಿನ್ಯ ಗೊಬ್ಬರಗಳು.
· ಸಾವಯವ, ನೈಸರ್ಗಿಕ ಮತ್ತು ಸಮಗ್ರ ಕೃಷಿಗೆ ಕ್ರಮ:
o ಜೈವಿಕ ಕೇತಿ ಪೋರ್ಟಲ್ – ಆನ್ ಲೈನ್ ರಾಷ್ಟ್ರೀಯ ಸಾವಯವ ಉತ್ಪನ್ನ ಮಾರುಕಟ್ಟೆಯ ಬಲವರ್ಧನೆ.
o ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ (2019ರ ಜುಲೈ ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ)ಯ ಸೇರ್ಪಡೆ
o ಮಳೆ ಆಶ್ರಿತ ಪ್ರದೇಶಗಳಲ್ಲಿ ಸಮಗ್ರ ಕೃಷಿ ಪದ್ಧತಿಯ ವಿಸ್ತರಣೆ
o ಬಹು ಬೆಳೆ ಪದ್ಧತಿ, ಜೇನು ಸಾಕಣೆ, ಸೌರ ಪಂಪ್ ಗಳು, ಬರಡು ಭೂಮಿಯಲ್ಲಿ ಸೌರ ವಿದ್ಯುತ್ ಉತ್ಪಾದನೆಯ ಸೇರ್ಪಡೆ ಮಾಡುವುದು.
· ಪಿಎಂ - ಕುಸುಮ್ ವಿಸ್ತರಣೆ ಮಾಡುವುದು :
o 20 ಲಕ್ಷ ರೈತರಿಗೆ ಸೌರ ಪಂಪ್ ಸೆಟ್ ಸ್ಥಾಪನೆಗೆ ಪೂರೈಕೆ.
o ಇತರ 15 ಲಕ್ಷ ರೈತರಿಗೆ ಗ್ರಿಡ್ ಸಂಪರ್ಕಿತ ಪಂಪ್ ಸೆಟ್ ಸೌರವಿದ್ಯುದ್ದೀಕರಣಕ್ಕೆ ನೆರವು.
o ರೈತರಿಗೆ ತಮ್ಮ ಬರಡು/ಪಾಳು ಭೂಮಿಯಲ್ಲಿ ಸೌರ ವಿದ್ಯುತ್ ಉತ್ಪಾದನೆ ಘಟಕ ಸ್ಥಾಪಿಸಲು ಮತ್ತು ಗ್ರಿಡ್ ಗೆ ಮಾರಾಟ ಮಾಡಲು ಯೋಜನೆ.
· ಗ್ರಾಮ ಸಂಗ್ರಹಣ ಯೋಜನೆ:
o ರೈತರಿಗೆ ಉತ್ತಮ ಹಿಡುವಳಿ ಸಾಮರ್ಥ್ಯವನ್ನು ಒದಗಿಸಲು ಮತ್ತು ಅವರ ಸಾರಿಗೆ ವೆಚ್ಚವನ್ನು ತಗ್ಗಿಸಲು ಸ್ವಸಹಾಯ ಸಂಘಗಳಿಂದ ನಡೆಸುವುದು.
o ಮಹಿಳಾ ಸ್ವಹಾಯ ಗುಂಪುಗಳು ತಮ್ಮ ಸ್ಥಾನ ಮರಳಿ ಪಡೆಯಲು ಧಾನ್ಯಲಕ್ಷ್ಮೀ ಯೋಜನೆ
· ನಬಾರ್ಡ್ ನಿಂದ ನಕ್ಷೆ ಮತ್ತು ಜಿಯೋ-ಟ್ಯಾಗ್ ಕೃಷಿ-ಗೋದಾಮುಗಳು, ಶೀಥಲೀಕರಣ ಘಟಕ, ಸರಕು ಸಾಗಣೆ ವಾಹನ ಸೌಲಭ್ಯಗಳು ಇತ್ಯಾದಿಗಳನ್ನು ಒದಗಿಸಲು
· ಗೋದಾಮು ಅಭಿವೃದ್ಧಿ ಮತ್ತು ನಿಯಂತ್ರಣ ಪ್ರಾಧಿಕಾರ (ಡಬ್ಲ್ಯುಡಿಆರ್.ಎ) ನಿಯಮಾವಳಿಗಳನುಸಾರ ಗೋದಾಮುಗಳು.:
o ಬ್ಲಾಕ್ / ತಾಲ್ಲೂಕು ಮಟ್ಟದಲ್ಲಿ ಅಂತಹ ದಕ್ಷ ಗೋದಾಮುಗಳನ್ನು ಸ್ಥಾಪಿಸಲು ಕಾರ್ಯಸಾಧ್ಯತೆಯ ಅಂತರ ನಿಧಿ.
o ಭಾರತೀಯ ಆಹಾರ ನಿಗಮ (ಎಫ್.ಸಿ.ಐ.) ಮತ್ತು ಕೇಂದ್ರೀಯ ಗೋದಾಮು ನಿಗಮ (ಸಿಡ್ಲ್ಯುಸಿ) ದಿಂದ ಇಂಥ ಗೋದಾಮುಗಳ ನಿರ್ಮಾಣ.
· ಬದಲಾವಣೆಗೆ ಅವಕಾಶವಿರುವ ಗೋದಾಮು ರಶೀದಿಗಳಿಗೆ (ಇ-ಎನ್‌ಡಬ್ಲ್ಯುಆರ್) ಹಣಕಾಸು ನೆರವನ್ನು ಇ-ನ್ಯಾಮ್‌ನೊಂದಿಗೆ ಸಂಯೋಜನೆಗೊಳಿಸುವುದು.
· ಮಾದರಿ ಕಾನೂನುಗಳನ್ನು (ಕೇಂದ್ರ ಸರ್ಕಾರ ಒದಗಿಸಿದ) ಕೈಗೊಳ್ಳುವ ರಾಜ್ಯ ಸರ್ಕಾರಗಳನ್ನು ಉತ್ತೇಜಿಸುವುದು.
· ಜಾನುವಾರು:
o 2025ರ ಹೊತ್ತಿಗೆ ಹಾಲು ಸಂಸ್ಕರಣಾ ಸಾಮರ್ಥ್ಯವನ್ನು 53.5 ದಶಲಕ್ಷ ಮೆಟ್ರಿಕ್ ಟನ್ ಗಿಳಿಂದ 108 ದಶಲಕ್ಷ ಮೆಟ್ರಿಕ್ ಟನ್ ಗೆ ದುಪ್ಪಟ್ಟು ಮಾಡುವುದು.
o ಹಾಲಿ ಇರುವ ಶೇ.30ರಿಂದ ಶೇ.70ಕ್ಕೆ ಕೃತಕ ಗರ್ಭಧಾರಣೆ ಪ್ರಮಾಣ ಹೆಚ್ಚಿಸುವುದು.
O ಮೇವು ತೋಟ ಅಭಿವೃದ್ಧಿಗಾಗಿ ಎಂ.ಎನ್.ಆರ್.ಜಿ.ಎಸ್. ಉತ್ತೇಜನ.
O ಜಾನುವಾರುಗಳಲ್ಲಿ ಕಂಡು ಬರುವ ಕಾಲು ಬಾಯಿ ರೋಗ, ಬ್ರುಸೆಲ್ಲೋಸಿಸ್, ಕುರಿ ಮತ್ತು ಮೇಕೆಗಳಲ್ಲಿ ಕಂಡು ಬರುವ ಪೆಸ್ಟೆ ಡೆಸ್ ಪೆಟಿಟ್ಸ್ ರೂಮಿನಂಟ್ಸ್ (ಪಿಪಿಆರ್)ಗಳನ್ನು 2025 ರ ವೇಳೆಗೆ ಮೂಲೋತ್ಪಾಟನೆ ಮಾಡುವುದು.
· ದೀನ್ ದಯಾಳ್ ಅಂತ್ಯೋದಯ ಯೋಜನೆ 0.5 ಕೋಟಿ ಕುಟುಂಬಗಳ ಬಡತನ ನಿವಾರಣೆಗೆ 58 ಲಕ್ಷ ಸ್ವಸಹಾಯ ಗುಂಪುಗಳೊಂದಿಗೆ ಸಜ್ಜುಗೊಳಿಸುವುದು.
ಕ್ಷೇಮ, ನೀರು ಮತ್ತು ನೈರ್ಮಲ್ಯ
· ಒಟ್ಟಾರೆಯಾಗಿ ಆರೋಗ್ಯ ಆರೈಕೆ ಕ್ಷೇತ್ರಕ್ಕೆ 69,000 ಕೋಟಿ ರೂ. ಹಂಚಿಕೆ
· ಪ್ರಧಾನಮಂತ್ರಿ ಜನ್ ಆರೋಗ್ಯ ಯೋಜನೆ (ಪಿಎಂಜೆಎವೈ)ಗೆ 6400 ಕೋಟಿ ರೂ. (69000 ಕೋಟಿ ರೂ. ಪೈಕಿ)
o ಪಿಎಂ ಜನ್ ಆರೋಗ್ಯ ಯೋಜನೆ (ಪಿಎಂಜೆಎವೈ) ಅಡಿ 20,000 ಕ್ಕೂ ಹೆಚ್ಚು ಆಸ್ಪತ್ರೆಗಳು ಈಗಾಗಲೇ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ.
o ಪಿಪಿಪಿ ಮಾದರಿಯಲ್ಲಿ ಆಸ್ಪತ್ರೆಗಳನ್ನು ಸ್ಥಾಪಿಸಲು ಕಾರ್ಯಸಾಧ್ಯತೆಯ ಅಂತರ ನಿಧಿ ಗವಾಕ್ಷಿಯನ್ನು ಪ್ರಸ್ತಾಪಿಸಲಾಗಿದೆ.
O ಆಯುಷ್ಮಾನ್ ಪಟ್ಟಿಯಲ್ಲಿ ಆಸ್ಪತ್ರೆಗಳು ಸೇರಿಲ್ಲದ ಮಹತ್ವಾಕಾಂಕ್ಷೆಯ ಜಿಲ್ಲೆಗಳನ್ನು ಪ್ರಥಮ ಹಂತದಲ್ಲಿ ಸೇರಿಸುವುದು.
O ಯಾಂತ್ರಿಕ ಕಲಿಕೆ ಮತ್ತು ಎಐ ಬಳಸಿ ಸೂಕ್ತವಾಗಿ ವಿನ್ಯಾಸಗೊಳಿಸಲಾದ ವ್ಯವಸ್ಥೆಯೊಂದಿಗೆ ಗುರಿಯಾಗಿಸಿಕೊಂಡ ರೋಗಗಳನ್ನು ತಡೆಗಟ್ಟಲು.
· 2024ರ ಹೊತ್ತಿಗೆ ಜನ್ ಔಷಧ ಕೇಂದ್ರ ಯೋಜನೆಯು 2000 ಔಷಧಗಳು ಮತ್ತು 300 ಶಸ್ತ್ರಚಿಕಿತ್ಸಾ ಸಾಧನಗಳನ್ನು ಪೂರೈಸಲಿದೆ.
· ಕ್ಷಣ ಸೋಲುತ್ತದೆ, ದೇಶ ಗೆಲ್ಲುತ್ತದೆ ಅಭಿಯಾನಕ್ಕೆ ಚಾಲನೆ 2025ರ ಹೊತ್ತಿಗೆ ಕ್ಷಯರೋಗವನ್ನು ನಿರ್ಮೂಲನೆ ಮಾಡಲು ಬದ್ಧ
· ಜಲ್ ಜೀವನ ಅಭಿಯಾನಕ್ಕೆ 3.60 ಲಕ್ಷ ಕೋಟಿ:
o 2020-21ರ ಸಾಲಿಗೆ 11,500 ಕೋಟಿ
o ಸ್ಥಳೀಯ ಜಲ ಮೂಲಗಳ ಹೆಚ್ಚಳ, ಹಾಲಿ ಜಲ ಮೂಲಗಳ ಮರುಪೂರಣ ಮತ್ತು ಮಳೆ ನೀರು ಕೊಯ್ಲು ಮತ್ತು ಕ್ಷಾರ ನಿವಾರಣೆ.
O ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ ಪ್ರಸಕ್ತ ಸಾಲಿನಲ್ಲೇ ಗುರಿ ಸಾಧನೆಗೆ ಉತ್ತೇಜನ ನೀಡುವುದು.
· 2020-21ರಲ್ಲಿ ಸ್ವಚ್ಛ ಭಾರತ ಅಭಿಯಾನಕ್ಕೆ 12,300 ಕೋಟಿ ರೂಪಾಯಿ ಹಂಚಿಕೆ:
o ಬಯಲು ಶೌಚ ಮುಕ್ತ ಸ್ವಭಾವ ಸುಸ್ಥಿರತೆಗಾಗಿ ಓಡಿಎಫ್ ಪ್ಲಸ್ ಬದ್ಧತೆ.
o ದ್ರವೀಯ ಮತ್ತು ತ್ಯಾಜ್ಯ ಜಲ ನಿರ್ವಹಣೆ
o ಘನ ತ್ಯಾಜ್ಯ ಸಂಗ್ರಹಣೆ, ಮೂಲದಲ್ಲೇ ವಿಂಗಡಣೆ ಮತ್ತು ಸಂಸ್ಕರಣೆಗೆ ಗಮನ
ಶಿಕ್ಷಣ ಮತ್ತು ಕೌಶಲ
· 2020-21ರಲ್ಲಿ ಶಿಕ್ಷಣ ಕ್ಷೇತ್ರಕ್ಕೆ 99,300 ಕೋಟಿ ರೂ. ಮತ್ತು ಕೌಶಲ ಅಭಿವೃದ್ಧಿಗೆ 3,000 ಕೋಟಿ ರೂ.
· ನೂತನ ಶಿಕ್ಷಣ ನೀತಿ ಶೀಘ್ರ ಪ್ರಕಟಣೆ
· ಪೊಲೀಸ್ ವಿಜ್ಞಾನ, ವಿಧಿ ವಿಜ್ಞಾನ ಮತ್ತು ಸೈಬರ್ ವಿಧಿ ವಿಜ್ಞಾನಕ್ಕಾಗಿ ರಾಷ್ಟ್ರೀಯ ಪೊಲೀಸ್ ವಿಶ್ವವಿದ್ಯಾಲಯ ಮತ್ತು ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಪ್ರಸ್ತಾಪ.
· ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟಿನಲ್ಲಿ ಪ್ರಥಮ -100 ಸಂಸ್ಥೆಗಳಿಂದ ಪದವಿ ಮಟ್ಟದ ಪೂರ್ಣ ಪ್ರಮಾಣದ ಆನ್‌ಲೈನ್ ಶಿಕ್ಷಣ ಕಾರ್ಯಕ್ರಮ.
· ಎಂಜಿನಿಯರಿಂಗ್ ಪದವೀಧರರಿಗೆ ನಗರ ಸ್ಥಳೀಯ ಸಂಸ್ಥೆಗಳ ಮೂಲಕ ಒಂದು ವರ್ಷದ ವರೆಗೆ ತರಬೇತಿ ಒದಗಿಸುವುದು.
· ಪಿಪಿಪಿ ಮಾದರಿಯಲ್ಲಿ ಹಾಲಿ ಇರುವ ಜಿಲ್ಲಾ ಆಸ್ಪತ್ರೆಗೆ ವೈದ್ಯಕೀಯ ಕಾಲೇಜನ್ನು ಜೋಡಣೆ ಮಾಡಲು ಬಜೆಟ್ ಉದ್ದೇಶಿಸಿದೆ.
· ಆರೋಗ್ಯ ಮತ್ತು ಕೌಶಲ ಅಭಿವೃದ್ಧಿ ಸಚಿವಾಲಯದಿಂದ ವಿಶೇಷವಾಗಿ ವಿನ್ಯಾಸ ಮಾಡಲಾದ ಕೋರ್ಸ್:
o ಬೋಧಕರು, ಶುಶ್ರೂಷಕಿಯರು, ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ವಿದೇಶದಲ್ಲಿ ಆರೈಕೆ ನೀಡುವವರ ಬೇಡಿಕೆ ಈಡೇರಿಸಲು.
O ಉದ್ಯೋಗಿಗಳ ಮತ್ತು ಉದ್ಯೋಗದಾತರ ಮಾನದಂಡಗಳ ಕೌಶಲ್ಯ ಸ್ಥಿತಿಯಲ್ಲಿ ಸಮಾನತೆಯನ್ನು ತರಲು.
o ಮಾರ್ಚ್ 2021ರ ಹೊತ್ತಿಗೆ 150 ಉನ್ನತ ಶಿಕ್ಷಣ ಸಂಸ್ಥೆಗಳು ಅರ್ಪೆಂಟಿಸ್ ಶಿಪ್ ಸಂಪರ್ಕಿತ ಪದವಿ/ಡಿಪ್ಲೋಮಾ ಕೋರ್ಸ್ ಗಳನ್ನು ಆರಂಭಿಸಲಿವೆ.
O ಶಿಕ್ಷಣ ಕ್ಷೇತ್ರಕ್ಕೆ ಬಾಹ್ಯ ವಾಣಿಜ್ಯ ಸಾಲಗಳು ಮತ್ತು ವಿದೇಶೀ ನೇರ ಬಂಡವಾಳಗಳನ್ನು ಸಕ್ರಿಯಗೊಳಿಸುವುದು.
ಭಾರತದಲ್ಲಿ ಅಧ್ಯಯನ ಮಾಡಿ ಕಾರ್ಯಕ್ರಮದ ಭಾಗವಾಗಿ ಏಷ್ಯನ ಮತ್ತು ಆಫ್ರಿಕನ ದೇಶಗಳಿಗಾಗಿ ಇಂಡ್-ಸ್ಯಾಟ್ ಪ್ರಸ್ತಾಪಿಸಲಾಗಿದೆ.
ಆರ್ಥಿಕ ಅಭಿವೃದ್ಧಿ
ಕೈಗಾರಿಕೆ, ವಾಣಿಜ್ಯ ಮತ್ತು ಹೂಡಿಕೆ
· 2020-21ರಲ್ಲಿ ಕೈಗಾರಿಕೆ ಮತ್ತು ವಾಣಿಜ್ಯದ ಉತ್ತೇಜನ ಮತ್ತು ಅಭಿವೃದ್ಧಿಗೆ 27,300 ಕೋಟಿ ರೂಪಾಯಿಗಳ ಹಂಚಿಕೆ.
· ಹೂಡಿಕೆ ಇತ್ಯರ್ಥ ಘಟಕ ಸ್ಥಾಪನೆ ಪ್ರಸ್ತಾಪ:
o ಆ ತುದಿಯಿಂದ ಈ ತುದಿಯವರೆಗೆ ಸೌಲಭ್ಯ ಮತ್ತು ಬೆಂಬಲವನ್ನು ಒದಗಿಸಲು.
O ಪೋರ್ಟಲ್ ಮೂಲಕ ಕಾರ್ಯ ನಿರ್ವಹಿಸಲು.
· ಐದು ಹೊಸ ಸಾರ್ಟ್ ನಗರಗಳ ಅಭಿವೃದ್ಧಿ ಪ್ರಸ್ತಾವನೆ
· ಮೊಬೈಲ್ ಫೋನ್ ಗಳು, ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಸೆಮಿ ಕಂಡಕ್ಟರ್ ಪ್ಯಾಕೇಜಿಂಗ್ ಗೆ ಉತ್ತೇಜನ ಪ್ರಸ್ತಾಪ.
· ರಾಷ್ಟ್ರೀಯ ತಾಂತ್ರಿಕ ಜವಳಿ ಅಭಿಯಾನದ ಸ್ಥಾಪನೆ:
o 2020-21ರಿಂದ 2023-24ರವರೆಗೆ ನಾಲ್ಕು ವರ್ಷಗಳ ಅನುಷ್ಠಾನದ ಅವಧಿಯೊಂದಿಗೆ.
O 1480 ಕೋಟಿ ರೂಪಾಯಿ ಅಂದಾಜು ಹಂಚಿಕೆ
O ಜವಳಿ ತಂತ್ರಗಾರಿಕೆಯಲ್ಲಿ ಭಾರತವನ್ನು ಜಾಗತಿಕ ನಾಯಕನ ಸ್ಥಾನದಲ್ಲಿ ನಿಲ್ಲಿಸಲು
· ಹೆಚ್ಚಿನ ರಫ್ತು ಸಾಲ ವಿತರಣೆ ಸಾಧನೆಗಾಗಿ ನಿರ್ವಿಕ್ ಎಂಬ ಹೊಸ ಯೋಜನೆ, ಇದು ಈ ಕೆಳಗಿನವುಗಳನ್ನು ಒದಗಿಸುತ್ತದೆ:
o ಹೆಚ್ಚಿನ ವಿಮಾ ಕವರೇಜ್ ವ್ಯಾಪ್ತಿ
o ಸಣ್ಣ ರಫುದಾರರಿಗೆ ಪ್ರೀಮಿಯಂ ಕಡಿತ
o ಕ್ಲೇಮ್ ಗಳ ಇತ್ಯರ್ಥಕ್ಕೆ ಸರಳೀಕೃತ ಪ್ರಕ್ರಿಯೆ
· ಸರ್ಕಾರಿ ಇ-ಮಾರುಕಟ್ಟೆ ತಾಣ (ಜಿಇಎಂ)ದ ವಹಿವಾಟನ್ನು 3 ಲಕ್ಷ ಕೋಟಿ ರೂ.ಗೆ ತೆಗೆದುಕೊಂಡು ಹೋಗುವ ಪ್ರಸ್ತಾಪ.
· ರಫ್ತು ಮಾಡಬೇಕಾದ ಉತ್ಪನ್ನಗಳ ಮೇಲಿನ ಸುಂಕ ಮತ್ತು ತೆರಿಗೆಗಳ ಪರಿಷ್ಕರಣೆ ಯೋಜನೆಗೆ ಚಾಲನೆ.
o ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿ ವಿಧಿಸಲಾದ ತೆರಿಗೆ ಮತ್ತು ಸುಂಕವನ್ನು ಡಿಜಿಟಲ್ ಮೂಲಕ ಮರುಪಾವತಿಸಲಾಗುತ್ತದೆ, ವಿನಾಯಿತಿ ಅಥವಾ ಮರುಪಾವತಿ ಮಾಡಲಾಗಿರುವುದಿಲ್ಲವೋ ಅವು.
· ಉತ್ಪಾದನೆಯಲ್ಲಿ ಶೂನ್ಯ ನ್ಯೂನತೆ ಶೂನ್ಯ ಪರಿಣಾಮ ಎಂಬ ಪ್ರಧಾನಮಂತ್ರಿಯವರ ಮುನ್ನೋಟದಂತೆ ಎಲ್ಲ ಸಚಿವಾಲಯಗಳಿಗೆ ಉತ್ಪಾದನೆಯಲ್ಲಿ ಗುಣಮಟ್ಟ ಮಾನದಂಡದ ಆದೇಶ.
ಮೂಲಸೌಕರ್ಯ
· 100 ಲಕ್ಷ ಕೋಟಿ ರೂ.ಗಳನ್ನು ಮುಂದಿನ ಐದು ವರ್ಷಗಳಲ್ಲಿ ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಲಾಗುವುದು.
· ರಾಷ್ಟ್ರೀಯ ಮೂಲಸೌಕರ್ಯ ಕೊಳವೆ ಮಾರ್ಗ:
o 2019ರ ಡಿಸೆಂಬರ್ 31ರಂದು ಆರಂಭಿಸಲಾದ 103 ಲಕ್ಷ ಕೋಟಿ ಮೌಲ್ಯದ ಯೋಜನೆ.
o ಕ್ಷೇತ್ರಗಳಾದ್ಯಂತ 6500 ಕ್ಕೂ ಹೆಚ್ಚು ಯೋಜನೆಗಳನ್ನು ಅವುಗಳ ಗಾತ್ರ ಮತ್ತು ಪ್ರಗತಿಯ ಹಂತಕ್ಕೆ ಅನುಗುಣವಾಗಿ ವರ್ಗೀಕರಿಸಬೇಕು.
· ಶೀಘ್ರದಲ್ಲೇ ರಾಷ್ಟ್ರೀಯ ಸಾಗಣೆ ನೀತಿ ಬಿಡುಗಡೆ:
o ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಪ್ರಮುಖ ನಿಯಂತ್ರಕರ ಪಾತ್ರಗಳನ್ನು ಸ್ಪಷ್ಟಪಡಿಸುವುದು.
o ಏಕ ಗವಾಕ್ಷಿಯ ಇ-ಲಾಜಿಸ್ಟಿಕ್ಸ್ ಮಾರುಕಟ್ಟೆಯ ರಚನೆ
o ಉದ್ಯೋಗ ಸೃಷ್ಟಿ, ಕೌಶಲ ಮತ್ತು ಎಂ.ಎಸ್.ಎಂ.ಇ.ಗಳನ್ನು ಸ್ಪರ್ಧಾತ್ಮಕಗೊಳಿಸಲು ಗಮನ.
· ಮೂಲಸೌಕರ್ಯ ಗಮನಹರಿಸಿದ ಕೌಶಲ ಅಭಿವೃದ್ದಿ ಅವಕಾಶಗಳಿಗೆ ಗಮನ ನೀಡಲಿರುವ ರಾಷ್ಟ್ರೀಯ ಕೌಶಲ ಅಭಿವೃದ್ಧಿ ಸಂಸ್ಥೆ.
· ಪ್ರಸ್ತಾಪಿತ ಮೂಲಸೌಕರ್ಯ ಯೋಜನೆಗಳಿಗೆ ಯೋಜನಾ ತಯಾರಿ ಸೌಲಭ್ಯ.
o ಯುವ ಎಂಜಿನಿಯರ್‌ಗಳು, ನಿರ್ವಹಣಾ ಪದವೀಧರರು ಮತ್ತು ವಿಶ್ವವಿದ್ಯಾಲಯಗಳ ಅರ್ಥಶಾಸ್ತ್ರಜ್ಞರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವುದು.
· ಸರ್ಕಾರಿ ಮೂಲ ಸೌಕರ್ಯ ನವೋದ್ಯಮಗಳಲ್ಲಿ ಯುವ ಶಕ್ತಿಯನ್ನು ತೊಡಗಿಸಿಕೊಳ್ಳುವುದು
2020-21ರಲ್ಲಿ 1.7 ಲಕ್ಷ ಕೋಟಿ ರೂ.ಗಳನ್ನು ಸಾರಿಗೆ ಮೂಲಸೌಕರ್ಯಕ್ಕೆ ಪ್ರಸ್ತಾಪಿಸಲಾಗಿದೆ.
ಹೆದ್ದಾರಿಗಳು:
· ಕೈಗೊಳ್ಳಬೇಕಾದ ಹೆದ್ದಾರಿಗಳ ತ್ವರಿತ ಅಭಿವೃದ್ಧಿ, ಅವುಗಳೆಂದರೆ:
o 2500 ಕಿ.ಮೀ ಪ್ರವೇಶ ನಿಯಂತ್ರಿತ ಹೆದ್ದಾರಿಗಳು.
o ಆರ್ಥಿಕ ಕಾರಿಡಾರ್‌ಗಳಲ್ಲಿ 9000 ಕಿ.ಮೀ. ರಸ್ತೆ
o 2000 ಕಿ.ಮೀ ಕರಾವಳಿ ಮತ್ತು ಭೂ ಬಂದರು ರಸ್ತೆಗಳು
o 2000 ಕಿ.ಮೀ. ಆಯಕಟ್ಟಿನ ಹೆದ್ದಾರಿಗಳ
· ದೆಹಲಿ -ಮುಂಬೈ ಎಕ್ಸ್ ಪ್ರೆಸ್ ಮತ್ತು ಮತ್ತೆರಡು ಪ್ಯಾಕೇಜ್ ಗಳನ್ನು 2023ರೊಳಗೆ ಪೂರ್ಣಗೊಳಿಸಲಾಗುವುದು.
· ಚೆನ್ನೈ ಬೆಂಗಳೂರು ಎಕ್ಸ್ ಪ್ರೆಸ್ ಹೆದ್ದಾರಿ ಆರಂಭಿಸಲಾಗುವುದು.
· 2024 ಕ್ಕಿಂತ ಮೊದಲು 6000 ಕಿ.ಮೀ.ಗಿಂತ ಹೆಚ್ಚು ಮಾರ್ಗದ 12 ಹೆದ್ದಾರಿ ಲಾಟ್ ಗಳನ್ನು ಹಣಗಳಿಕೆಗೆ ಪ್ರಸ್ತಾಪಿಸಲಾಗಿದೆ.
ಭಾರತೀಯ ರೈಲ್ವೆ:
- ರೈಲ್ವೆ ಒಡೆತನದ ಭೂಮಿಯಲ್ಲಿ ಹಾಗು ರೈಲ್ವೆ ಹಳಿಗಳ ಪಕ್ಕದಲ್ಲಿ ಹೆಚ್ಚಿನ ಸೌರ ವಿದ್ಯುತ್ ಸಾಮರ್ಥ್ಯದ ಘಟಕಗಳನ್ನು ಸ್ಥಾಪಿಸಲಾಗುವುದು.
- ನಾಲ್ಕು ನಿಲ್ದಾಣ ಮರು ಅಭಿವೃದ್ಧಿ ಯೋಜನೆಗಳು ಮತ್ತು ಪಿಪಿಪಿ (ಸಾರ್ವಜನಿಕ ಖಾಸಗಿ ಸಹಭಾಗಿತ್ವ) ಮೂಲಕ 150 ಪ್ರಯಾಣಿಕ ರೈಲುಗಳ ಕಾರ್ಯಾಚರಣೆ.
- ಸಾಂಪ್ರದಾಯಿಕ ಪ್ರವಾಸಿ ತಾಣಗಳನ್ನು ಸಂಪರ್ಕಿಸಲು ಹೆಚ್ಚಿನ ತೇಜಸ್ ರೈಲುಗಳು.
- ಮುಂಬೈ ಮತ್ತು ಅಹಮದಾಬಾದ್ ನಡುವಿನ ಹೈಸ್ಪೀಡ್ ರೈಲು ಸಕ್ರಿಯವಾಗಿ ಮುಂದುವರಿಯಲಿದೆ.
- ಮೆಟ್ರೊ ಮಾದರಿಯಲ್ಲಿ ದರವನ್ನು ಹೊಂದಲು 148 ಕಿ.ಮೀ ಉದ್ದದ 18600 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಉಪನಗರ ಸಾರಿಗೆ ಯೋಜನೆ. ಕೇಂದ್ರ ಸರ್ಕಾರವು ಶೇ. 20 ಷೇರುಗಳನ್ನು ಒದಗಿಸುತ್ತದೆ. ಯೋಜನೆಯ ವೆಚ್ಚದ ಶೇ. 60 ವರೆಗೆ ಬಾಹ್ಯ ಬೆಂಬಲ ನೀಡುವುದು.
- ಅನೇಕ ನಿಲ್ದಾಣಗಳಲ್ಲಿ 550 ವೈ-ಫೈ ಸೌಲಭ್ಯಗಳನ್ನು ನಿಯೋಜಿಸಲಾಗಿದೆ.
- ಶೂನ್ಯ ಮಾನವರಹಿತ ಕ್ರಾಸಿಂಗ್ಗಳು.
- 27000 ಕಿ.ಮೀ. ರೈಲು ಹಳಿ ವಿದ್ಯುದ್ದೀಕರಣ.
ಬಂದರು ಮತ್ತು ಜಲ ಮಾರ್ಗಗಳು:
- ಕನಿಷ್ಠ ಒಂದು ಪ್ರಮುಖ ಬಂದರನ್ನು ಕಾರ್ಪೊರೇಟ್ ಕರಣಗೊಳಿಸಿ, ಷೇರು ವಿನಿಮಯ ಕೇಂದ್ರಗಳ ಪಟ್ಟಿಯಲ್ಲಿ ಪರಿಗಣಿಸಬೇಕು.
- ಹೆಚ್ಚು ಪರಿಣಾಮಕಾರಿಯಾದ ಸಮುದ್ರ ಬಂದರುಗಳಿಗೆ ಅಗತ್ಯವಿರುವ ಜಾಗತಿಕ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ಆಡಳಿತದ ಚೌಕಟ್ಟು ಒದಗಿಸುವುದು.
- ಪ್ರಧಾನ ಮಂತ್ರಿ ಆರ್ಥ್ ಗಂಗಾ ಪರಿಕಲ್ಪನೆಯ ಪ್ರಕಾರ ನದಿ ತೀರದಲ್ಲಿ ಆರ್ಥಿಕ ಚಟುವಟಿಕೆಯನ್ನು ಬಲಪಡಿಸಬೇಕು.
ವಿಮಾನ ನಿಲ್ದಾಣಗಳು:
- ಉಡಾನ್ ಯೋಜನೆಯನ್ನು ಬೆಂಬಲಿಸಲು 2024ರ ವೇಳೆಗೆ ಇನ್ನೂ 100 ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುವುದು.
- ಈ ಸಮಯದಲ್ಲಿ ವಿಮಾನ ಹಾರಾಟ ಸಂಖ್ಯೆ ಪ್ರಸ್ತುತ 600 ರಿಂದ 1200 ಕ್ಕೆ ಹೆಚ್ಚಾಗುವ ನಿರೀಕ್ಷೆಯಿದೆ.
ವಿದ್ಯುಚ್ಛಕ್ತಿ:
- “ಸ್ಮಾರ್ಟ್” ಮೀಟರಿಂಗ್ಗೆ ಉತ್ತೇಜನ ನೀಡಲಾಗುವುದು.
- ಡಿಸ್ಕಾಮ್(DISCOM) ಸುಧಾರಣೆಗೆ ಕ್ರಮ.
ಶಕ್ತಿ:
- 2020-21ರಲ್ಲಿ ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ 22, 000 ಕೋಟಿ ರೂ. ಬಿಡುಗಡೆ
- ರಾಷ್ಟ್ರೀಯ ಅನಿಲ ಗ್ರಿಡ್ ಅನ್ನು ಪ್ರಸ್ತುತ 16200 ಕಿ.ಮೀ.ನಿಂದ 27000 ಕಿ.ಮೀ.ಗೆ ವಿಸ್ತರಿಸಲು ಪ್ರಸ್ತಾಪಿಸಲಾಗಿದೆ.
- ಪಾರದರ್ಶಕ ಬೆಲೆ ಆವಿಷ್ಕಾರ ಮತ್ತು ವಹಿವಾಟಿನ ಸುಲಭತೆಗೆ ಮತ್ತಷ್ಟು ಸುಧಾರಣೆಗಳು.
ಹೊಸ ಆರ್ಥಿಕತೆ
- ಹೊಸ ತಂತ್ರಜ್ಞಾನಗಳ ಲಾಭ ಪಡೆಯಲು ಕ್ರಮಗಳು:
- ದೇಶಾದ್ಯಂತ ಡಾಟಾ ಸೆಂಟರ್ ಪಾರ್ಕ್ ಗಳನ್ನು ನಿರ್ಮಿಸಲು ಖಾಸಗಿ ವಲಯಕ್ಕೆ ಅನುವು ಮಾಡಿಕೊಡುವ ನೀತಿ ಶೀಘ್ರದಲ್ಲಿ.
- ಈ ವರ್ಷ 100,000 ಗ್ರಾಮ ಪಂಚಾಯಿತಿಗಳನ್ನು ಸಂಪರ್ಕಿಸಲು ಭಾರತ್ ನೆಟ್ ಮೂಲಕ ಫೈಬರ್ ಟು ದಿ ಹೋಮ್ (ಎಫ್ಟಿಟಿಎಚ್) ಸಂಪರ್ಕಗಳು.
- 2020-21ರಲ್ಲಿ ಭಾರತ್ ನೆಟ್ ಕಾರ್ಯಕ್ರಮಕ್ಕೆ 6000 ಕೋಟಿ ರೂ.
- ನವೋದ್ಯಮಗಳ ಅನುಕೂಲತೆಗೆ ಪ್ರಸ್ತಾಪಿತ ಕ್ರಮಗಳು:
- ತಡೆರಹಿತ ಅಪ್ಲಿಕೇಶನ್ ಮತ್ತು ಐಪಿಆರ್ಗಳನ್ನು ಸೆರೆಹಿಡಿಯಲು ಅನುಕೂಲವಾಗುವಂತೆ ಡಿಜಿಟಲ್ ವೇದಿಕೆಗೆ ಉತ್ತೇಜನ.
- ಹೊಸ ಮತ್ತು ಉದಯೋನ್ಮುಖ ಪ್ರದೇಶಗಳು ಸೇರಿದಂತೆ ವಿವಿಧ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಜ್ಞಾನ ಅನುವಾದ ಕ್ಲಸ್ಟರ್ಗಳನ್ನು ಸ್ಥಾಪಿಸಲಾಗುವುದು.
- ಪರಿಕಲ್ಪನೆಯ ಪುರಾವೆ ವಿನ್ಯಾಸ, ಫ್ಯಾಬ್ರಿಕೇಶನ್ ಮತ್ತು ಊರ್ಜಿತಗೊಳಿಸುವಿಕೆ ಮತ್ತು ತಂತ್ರಜ್ಞಾನ ಕ್ಲಸ್ಟರ್ಗಳನ್ನು ಮತ್ತಷ್ಟು ಹೆಚ್ಚಿಸಲು, ಪರೀಕ್ಷಾ ಉಪಕರಣಗಳನ್ನು ಆಶ್ರಯಿಸುವುದು ಮತ್ತು ಸಣ್ಣ ಪ್ರಮಾಣದ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸುವುದು.
- ಭಾರತದ ಆನುವಂಶಿಕ ಭೂದೃಶ್ಯದ ನಕ್ಷೆ- ಸಮಗ್ರ ದತ್ತಸಂಚಯವನ್ನು ರಚಿಸಲು ಎರಡು ಹೊಸ ರಾಷ್ಟ್ರೀಯ ಮಟ್ಟದ ವಿಜ್ಞಾನ ಯೋಜನೆಗಳನ್ನು ಪ್ರಾರಂಭಿಸಲಾಗುವುದು.
- ಆರಂಭಿಕ ಹಂತದ ನವೋದ್ಯಮ (ಸ್ಟಾರ್ಟ್‌ಅಪ್) ಆದರ್ಶ ಮತ್ತು ಅಭಿವೃದ್ಧಿಯನ್ನು ಬೆಂಬಲಿಸಲು ಬೀಜ ನಿಧಿ ಸೇರಿದಂತೆ ಆರಂಭಿಕ ಜೀವನ ನಿಧಿಯನ್ನು ಪ್ರಸ್ತಾಪಿಸಲಾಗಿದೆ.
- ಕ್ವಾಂಟಮ್ ತಂತ್ರಜ್ಞಾನ ಮತ್ತು ಅಪ್ಲಿಕೇಶನ್ಗಳ ರಾಷ್ಟ್ರೀಯ ಮಿಷನ್ಗಾಗಿ ಐದು ವರ್ಷಗಳಿಗೆ 8000 ಕೋಟಿ ರೂ. ಪ್ರಸ್ತಾಪಿಸಲಾಗಿದೆ.
ಸಮಾಜದ ಕಾಳಜಿ
- ಮಹಿಳೆಯರು ಮತ್ತು ಮಕ್ಕಳು,
- ಸಮಾಜ ಕಲ್ಯಾಣ;
- ಸಂಸ್ಕೃತಿ ಮತ್ತು ಪ್ರವಾಸೋದ್ಯಮ
- 2020-21ನೇ ಹಣಕಾಸು ವರ್ಷದಲ್ಲಿ ಪ್ರಸ್ತಾಪಿಸಲಾದ ಪೌಷ್ಠಿಕಾಂಶ ಸಂಬಂಧಿತ ಕಾರ್ಯಕ್ರಮಗಳಿಗೆ 35,600 ಕೋಟಿ ರೂ. ಪ್ರಸ್ತಾವನೆ.
- ನಿರ್ದಿಷ್ಟ ಮಹಿಳಾ ಕಾರ್ಯಕ್ರಮಗಳಿಗೆ 28, 600 ಕೋಟಿ ರೂ. ಪ್ರಸ್ತಾವನೆ.
- ತಾಯ್ತನಕ್ಕೆ ಪ್ರವೇಶಿಸುವ ಹೆಣ್ಣು ಮಕ್ಕಳ ವಯಸ್ಸಿನ ಬಗ್ಗೆ ಆರು ತಿಂಗಳ ಅವಧಿಯಲ್ಲಿ ಶಿಫಾರಸುಗಳನ್ನು ಪ್ರಸ್ತುತಪಡಿಸಲು ಕಾರ್ಯಪಡೆ ನೇಮಿಸಲು ಪ್ರಸ್ತಾವನೆ.
- ಒಳಚರಂಡಿ ವ್ಯವಸ್ಥೆ ಮತ್ತು ಸೆಪ್ಟಿಕ್ ಟ್ಯಾಂಕ್ಗಳ ಸ್ವಚ್ಛತೆಗೆ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯವು ಮಾನವ ರಹಿತ ಧುನಿಕ ತಂತ್ರಜ್ಞಾನಗಳಿಗೆ ಹಣಕಾಸಿನ ನೆರವು ಒದಗಿಸುವುದು.
- 2020-21ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಇತರ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ 85,000 ಕೋಟಿ ರೂ. ಪ್ರಸ್ತಾವನೆ.
- ಸಾಲಿನಲ್ಲಿ ಪರಿಶಿಷ್ಟ ಪಂಗಡದ ಮತ್ತಷ್ಟು ಅಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿ 53, 700 ಕೋಟಿ ರೂ. ಪ್ರಸ್ತಾವನೆ.
- 2020-21ನೇ ಸಾಲಿನಲ್ಲಿ ಹಿರಿಯ ನಾಗರಿಕರು ಮತ್ತು ದಿವ್ಯಾಂಗರಿಗೆ 9,500 ಕೋಟಿ ರೂ. ಪ್ರಸ್ತಾವನೆ.
ಸಂಸ್ಕೃತಿ ಮತ್ತು ಪ್ರವಾಸೋದ್ಯಮ
- 2020-21ನೇ ಸಾಲಿನಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ 2500 ಕೋಟಿ ರೂ.
- 2020-21ನೇ ಸಾಲಿನಲ್ಲಿ ಸಂಸ್ಕೃತಿ ಸಚಿವಾಲಯಕ್ಕೆ ರೂ .3150 ಕೋಟಿ ಪ್ರಸ್ತಾಪಿಸಲಾಗಿದೆ.
- ಸಂಸ್ಕೃತಿ ಸಚಿವಾಲಯದಡಿಯ ಭಾರತೀಯ ಪರಂಪರೆ ಮತ್ತು ಸಂರಕ್ಷಣಾ ಸಂಸ್ಥೆಗೆ ಸ್ವಾಯತ್ತ ವಿಶ್ವವಿದ್ಯಾಲಯ ಮಾನ್ಯತೆಗೆ ಪ್ರಸ್ತಾವನೆ.
- 5 ಪುರಾತತ್ತ್ವ ತಾಣಗಳನ್ನು ಆನ್-ಸೈಟ್ ವಸ್ತು ಸಂಗ್ರಹಾಲಯಗಳೊಂದಿಗೆ ಸಾಂಪ್ರದಾಯಿಕ ತಾಣಗಳಾಗಿ ಅಭಿವೃದ್ಧಿಪಡಿಸುವಿಕೆ:
- ರಾಖಿಘರಿ (ಹರಿಯಾಣ)
- ಹಸ್ತಿನಾಪುರ (ಉತ್ತರ ಪ್ರದೇಶ)
- ಶಿವಸಾಗರ್ (ಅಸ್ಸಾಂ)
- ಧೋಲವಿರಾ (ಗುಜರಾತ್)
- ಆದಿಚನ್ನಲ್ಲೂರ್ (ತಮಿಳುನಾಡು)
- 2020 ರ ಜನವರಿಯಲ್ಲಿ ಪ್ರಧಾನಿ ಘೋಷಿಸಿದ ಕೋಲ್ಕತ್ತಾದ ಭಾರತೀಯ ವಸ್ತುಸಂಗ್ರಹಾಲಯದ ಮರು ಸಂರಕ್ಷಣೆ.
- ಕೋಲ್ಕತ್ತಾದ ಐತಿಹಾಸಿಕ ಓಲ್ಡ್ ಮಿಂಟ್ ಕಟ್ಟಡದಲ್ಲಿ ನಾಣ್ಯಶಾಸ್ತ್ರ ಮತ್ತು ವ್ಯಾಪಾರ ವಸ್ತುಸಂಗ್ರಹಾಲಯ ಸ್ಥಾಪನೆ.
- ದೇಶಾದ್ಯಂತ ಇನ್ನೂ 4 ವಸ್ತುಸಂಗ್ರಹಾಲಯಗಳನ್ನು ನವೀಕರಣ ಮತ್ತು ಮರು ಸಂರಕ್ಷಣೆ.
- ರಾಂಚಿ (ಜಾರ್ಖಂಡ್)ಯಲ್ಲಿ ಬುಡಕಟ್ಟು ವಸ್ತುಸಂಗ್ರಹಾಲಯ ಸ್ಥಾಪನೆ.
- ಹಡಗು ಸಚಿವಾಲಯ ಅಹಮದಾಬಾದ್ ಬಳಿಯ ಲೋಥಾಲ್- ಹರಪ್ಪ ಯುಗದ ಕಡಲ ತಾಣದಲ್ಲಿ ಸಾಗರ ವಸ್ತುಸಂಗ್ರಹಾಲಯ ಸ್ಥಾಪನೆ.
- ರಾಜ್ಯ ಸರ್ಕಾರಗಳು ಗುರುತಿಸಲ್ಪಟ್ಟ ಕೆಲವು ತಾಣಗಳ ಅಭಿವೃದ್ಧಿಗೆ ಮಾರ್ಗಸೂಚಿ ಮತ್ತು 2021 ರಲ್ಲಿ ಹಣಕಾಸು ಯೋಜನೆಗಳನ್ನು ರೂಪಿಸಲಿದೆ, ಇದಕ್ಕೆ 2020-21ರಲ್ಲಿ ರಾಜ್ಯಗಳಿಗೆ ನಿರ್ದಿಷ್ಟ ಅನುದಾನ ಲಭ್ಯವಾಗಲಿದೆ.
ಪರಿಸರ ಮತ್ತು ಹವಾಮಾನ ಬದಲಾವಣೆ
- 2020-21ನೇ ಸಾಲಿನಲ್ಲಿ 4400 ಕೋಟಿ ರೂ. ನಿಗದಿ.
- ಪೂರ್ವ ನಿಗದಿತ ಮಾನದಂಡಗಳಿಗಿಂತ ಹೆಚ್ಚು ಇಂಗಾಲದ ಹೊರಸೂಸುವಿಕೆಯೊಂದಿಗೆ ಚಾಲನೆಯಲ್ಲಿರುವ ಹಳೆಯ ಉಷ್ಣ ವಿದ್ಯುತ್ ಸ್ಥಾವರಗಳನ್ನು ಮುಚ್ಚಲು ಪ್ರಸ್ತಾವನೆ.
- ಒಂದು ದಶಲಕ್ಷಕ್ಕಿಂತ ಹೆಚ್ಚಿನ ನಗರಗಳಲ್ಲಿ ಸ್ವಚ್ಛ ಗಾಳಿಯನ್ನು ಖಾತರಿಪಡಿಸುವ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸುವ ರಾಜ್ಯಗಳನ್ನು ಪ್ರೋತ್ಸಾಹಿಸಲಾಗುವುದು.
- ಪ್ರಧಾನಮಂತ್ರಿಗಳು ದೆಹಲಿಯಲ್ಲಿ ಸೆಕ್ರೆಟರಿಯಟ್‌ನೊಂದಿಗೆ ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ ಒಕ್ಕೂಟ(ಸಿಡಿಆರ್ಐ) ಪ್ರಾರಂಭಿಸಿದರು. ಅಂತಾರಾಷ್ಟ್ರೀಯ ಸೌರ ಒಕ್ಕೂಟದ ನಂತರದ ಎರಡನೇ ಅಂತಾರಾಷ್ಟ್ರೀಯ ಉಪಕ್ರಮ ಇದಾಗಿದೆ.
ಆಡಳಿತ
- ಸ್ವಚ್ಛ, ಭ್ರಷ್ಟಾಚಾರ ಮುಕ್ತ, ನೀತಿ ಚಾಲಿತ, ಉತ್ತಮ ಉದ್ದೇಶ ಮತ್ತು ವಿಶ್ವಾಸರ್ಹತೆ.
- ತೆರಿಗೆದಾರರ ಸನ್ನದನ್ನು ಶಾಸನದಲ್ಲಿ ಪ್ರತಿಪಾದಿಸಲಾಗುವುದು. ಇದರಿಂದ ತೆರಿಗೆ ಆಡಳಿತದಲ್ಲಿ ನ್ಯಾಯ ಮತ್ತು ದಕ್ಷತೆ ಮೂಡುತ್ತದೆ.
- ಕಂಪನಿಗಳ ಕಾಯ್ದೆಗಳ ತಿದ್ದುಪಡಿ- ಅಪರಾಧ ಕೃತ್ಯಗಳಿಗೆ ಹೊಣೆಗಾರಿಕೆ.
- ಅಂತಹ ನಿಬಂಧನೆಗಳನ್ನು ಹೊಂದಿರುವ ಇತರ ಕಾನೂನುಗಳ ಪರಿಶೀಲನೆ ನಂತರ ಸರಿಪಡಿಸುವಿಕೆ.
- ಸರ್ಕಾರಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ನಾನ್ - ಗೆಜೆಟೆಡ್ ಹುದ್ದೆಗಳ ನೇಮಕಾತಿಯಲ್ಲಿ ಪ್ರಮುಖ ಸುಧಾರಣೆಗಳು:
- ನೇಮಕಾತಿಗಾಗಿ ಕಂಪ್ಯೂಟರ್ ಆಧಾರಿತ ಆನ್ಲೈನ್ ಸಾಮಾನ್ಯ ಅರ್ಹತಾ ಪರೀಕ್ಷೆಯನ್ನು ನಡೆಸಲು ಸ್ವತಂತ್ರ, ವೃತ್ತಿಪರ ಮತ್ತು ನುರಿತ ರಾಷ್ಟ್ರೀಯ ನೇಮಕಾತಿ ಸಂಸ್ಥೆ (ಎನ್ಆರ್ಎ) ಸ್ಥಾಪನೆ.
- ಪ್ರತಿ ಜಿಲ್ಲೆಯಲ್ಲೂ ವಿಶೇಷವಾಗಿ ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಒಂದು ಪರೀಕ್ಷಾ ಕೇಂದ್ರ ಸ್ಥಾಪನೆ.
· ಉತ್ತಮ ಪ್ರತಿಭೆಗಳು ಮತ್ತು ವೃತ್ತಿಪರ ತಜ್ಞರನ್ನು ಸೆಳೆಯಲು ವಿವಿಧ ನ್ಯಾಯಮಂಡಳಿಗಳು ಮತ್ತು ವಿಶೇಷ ಸಂಸ್ಥೆಗಳಿಗೆ ನೇರ ನೇಮಕಾತಿ ಸೇರಿದಂತೆ, ನೇಮಕಾತಿಗಾಗಿ ದೃಢವಾದ ಕಾರ್ಯವಿಧಾನ.
· ಗುತ್ತಿಗೆ ಕಾಯ್ದೆಯ ಬಲಪಡಿಸುವಿಕೆ.
· ಅಧಿಕೃತ ಅಂಕಿ-ಅಂಶಗಳ ಕುರಿತು ಹೊಸ ರಾಷ್ಟ್ರೀಯ ನೀತಿ:
o ಕೃತಕ ಬುದ್ಧಿಮತ್ತೆ (AI) ಸೇರಿದಂತೆ ಇತ್ತೀಚಿನ ತಂತ್ರಜ್ಞಾನ ಬಳಕೆ ಉತ್ತೇಜನ.
- ಆಧುನೀಕರಿಸಿದ ದತ್ತಾಂಶ ಸಂಗ್ರಹಣೆ, ಸಮಗ್ರ ಮಾಹಿತಿ ಪೋರ್ಟಲ್ ಮತ್ತು ಮಾಹಿತಿಯ ಸಮಯೋಚಿತ ಮಾರ್ಗಸೂಚಿ.
· 2022ರಲ್ಲಿ ಭಾರತ ಆತಿಥ್ಯ ವಹಿಸಲಿರುವ ಜಿ 20 ಅಧ್ಯಕ್ಷತೆ ಸಿದ್ಧತೆಗಳನ್ನು ಪ್ರಾರಂಭಿಸಲು 100 ಕೋಟಿ ರೂ. ಮೀಸಲು
· ಈಶಾನ್ಯ ಪ್ರದೇಶದ ಅಭಿವೃದ್ಧಿ:
- ಸರ್ಕಾರದಿಂದ ಆನ್ಲೈನ್ ಪೋರ್ಟಲ್ ನಿಧಿ ಬಳಕೆ.
- ಬಹುಪಕ್ಷೀಯ ಮತ್ತು ದ್ವಿಪಕ್ಷೀಯ ಧನಸಹಾಯ ಸಂಸ್ಥೆಗಳ ಆರ್ಥಿಕ ಸಹಾಯಕ್ಕೆ ಹೆಚ್ಚಿನ ಅವಕಾಶ.
· ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಕೇಂದ್ರ ಪ್ರದೇಶಗಳ ಅಭಿವೃದ್ಧಿ:
- 2020-21ರ ಹಣಕಾಸು ವರ್ಷಕ್ಕೆ 30,757 ಕೋಟಿ ರೂ. ಮೀಸಲು
- ಲಡಾಖ್ ಕೇಂದ್ರಾಡಳಿತ ಪ್ರದೇಶಕ್ಕೆ ರೂ. 5,958 ರೂ. ಮೀಸಲು
ಹಣಕಾಸು ವಲಯ
· ಪಿಎಸ್‌ಬಿಗಳಲ್ಲಿ (ಸಾರ್ವಜನಿಕ ವಲಯದ ಬ್ಯಾಕ್) ಸಾಧಿಸಿದ ಸುಧಾರಣೆಗಳು:
o 10 ಬ್ಯಾಂಕುಗಳನ್ನು 4 ಬ್ಯಾಂಕುಗಳನ್ನಾಗಿ ಕ್ರೋಡೀಕರಿಸಲ್ಪಡಲಾಯಿತು.
o 3,50,000 ಕೋಟಿ ರೂಪಾಯಿ ಬಂಡವಾಳ ಕೂಡಿಕೆ
· ಪಿಎಸ್ ಬಿಗಳಲ್ಲಿ ಪಾರದರ್ಶಕತೆ ಮತ್ತು ಹೆಚ್ಚಿನ ವೃತ್ತಿಪರತೆಯನ್ನು ತರಲು ಆಡಳಿತ ಸುಧಾರಣೆ.
· ಹೆಚ್ಚುವರಿ ಬಂಡವಾಳವನ್ನು ಸಂಗ್ರಹಿಸಲು ಬಂಡವಾಳ ಮಾರುಕಟ್ಟೆಯ ಬಳಿ ಸಾಗಲು ಕೆಲವು ಪಿಎಸ್ಬಿಗಳಿಗೆ ಪ್ರೋತ್ಸಾಹ
· ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಜಿಸಿ) ಠೇವಣಿ ವಿಮಾ ವ್ಯಾಪ್ತಿಯನ್ನು ಪ್ರತಿ ಠೇವಣಿದಾರರಿಗೆ 1 ಲಕ್ಷ ರೂಪಾಯಿಗಳಿಂದ 5 ಲಕ್ಷ ರೂಪಾಯಿಗಳಿಗೆ ಏರಿಸಲು ಅನುಮತಿ.
· ನಿಗದಿತ ವಾಣಿಜ್ಯ ಬ್ಯಾಂಕಿನ ಹಣಕಾಸಿನ ಪರಿಸ್ಥಿತಿಯನ್ನು ಪ್ರಬಲವಾದ ಕಾರ್ಯವಿಧಾನದ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತಿದೆ ಇದರಿಂದ ಠೇವಣಿದಾರರ ಹಣವನ್ನು ಸುರಕ್ಷಿತವಾಗಿರಿಸುತ್ತದೆ.
· ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮೂಲಕ ಸಹಕಾರಿ ಬ್ಯಾಂಕುಗಳನ್ನು ಈ ಕೆಳಗಿನವುಗಳಿಗಾಗಿ ಬಲಪಡಿಸುವುದು:
o ವೃತ್ತಿಪರತೆಯನ್ನು ಹೆಚ್ಚಿಸುವುದು.
o ಬಂಡವಾಳಕ್ಕೆ ಅವಕಾಶವನ್ನು ಒದಗಿಸುವುದು.
o ಆರ್ ಬಿ ಐ ಮೂಲಕ ಉತ್ತಮ ಬ್ಯಾಂಕ್ ಚಟುವಿಟಿಕೆಗಳಿಗಾಗಿ ಆಡಳಿತ ಮತ್ತು ಮೇಲ್ವಿಚಾರಣೆಯನ್ನು ಸುಧಾರಿಸುವುದು.
· ಸಾಲ ಮರುಪಡೆಯುವಿಕೆಗೆ ಎನ್ಬಿಎಫ್ಸಿ ಅರ್ಹತಾ ಮಿತಿಯನ್ನು ಕಡಿಮೆ ಮಾಡಲಾಗಿದೆ:
o ಆಸ್ತಿಯ ಗಾತ್ರ – ರೂಪಾಯಿ 500 ಕೋಟಿಯಿಂದ 100 ಕೋಟಿ
o ಸಾಲದ ಗಾತ್ರ - 1 ಕೋಟಿಯಿಂದ 50 ಲಕ್ಷ ರೂಪಾಯಿಗಳು.
· ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಖಾಸಗಿ ಬಂಡವಾಳ:
o ಸರ್ಕಾರವು ಐಡಿಬಿಐ ಬ್ಯಾಂಕಿನಲ್ಲಿರುವ ತನ್ನ ಬ್ಯಾಲೆನ್ಸ್ ಹೋಲ್ಡಿಂಗ್ ಅನ್ನು ಖಾಸಗಿ, ಚಿಲ್ಲರೆ ಮತ್ತು ಸಾಂಸ್ಥಿಕ ಹೂಡಿಕೆದಾರರಿಗೆ ಸ್ಟಾಕ್ ಎಕ್ಸ್ಚೇಂಜ್ ಮೂಲಕ ಮಾರಾಟ ಮಾಡಲಿದೆ.
· ಉದ್ಯೋಗಗಳಲ್ಲಿ ಸುಲಭ ಚಲನಶೀಲತೆ:
o ಯುನಿವರ್ಸಲ್ ಪಿಂಚಣಿ ವ್ಯಾಪ್ತಿಯಲ್ಲಿ ಸ್ವಯಂ-ದಾಖಲಾತಿ.
o ಸಂಗ್ರಹವಾದ ಮೂಲಧನವನ್ನು ರಕ್ಷಿಸಲು ಅಂತರ-ವ್ಯವಹಾರಗಳ ಯಾಂತ್ರಿಕ ವ್ಯವಸ್ಥೆ.
· ಪಿಂಚಣಿ ನಿಧಿ ನಿಯಂತ್ರಣ ಅಭಿವೃದ್ಧಿ ಪ್ರಾಧಿಕಾರದ ಕಾಯ್ದೆ 2011 ಅನ್ನು ತಿದ್ದುಪಡಿ ಮಾಡಬೇಕಾಗಿರುವುದು:
o ಪಿಎಫ್ಆರ್ಡಿಎಐ ನಿಯಂತ್ರಿಸುವ ಪಾತ್ರವನ್ನು ಬಲಪಡಿಸುವುದು.
o ಪಿಎಫ್ಆರ್ಡಿಎಐ ನಿಂದ ಸರ್ಕಾರಿ ನೌಕರರಿಗೆ ಎನ್ ಪಿಎಸ್ ಟ್ರಸ್ಟ್ ಅನ್ನು ಬೇರ್ಪಡಿಸಲು ಅನುಕೂಲ ಮಾಡುವುದು.
o ಸರ್ಕಾರವನ್ನು ಹೊರತುಪಡಿಸಿ ಇತರ ಉದ್ಯೋಗಿಗಳಿಂದ ಪಿಂಚಣಿ ಟ್ರಸ್ಟ್ ಸ್ಥಾಪನೆಯನ್ನು ಸಕ್ರಿಯಗೊಳಿಸುವುದು.
· ಫ್ಯಾಕ್ಟರಿಂಗ್ ನಿಯಂತ್ರಣ ಕಾಯ್ದೆ 2011 ಅನ್ನು ಈ ಕೆಳಗಿನಂತೆ ತಿದ್ದುಪಡಿ ಮಾಡಲಾಗುತ್ತದೆ:
o ಟಿಆರ್ಇಡಿಎಸ್ ಮೂಲಕ ಎಂಎಸ್ಎಂಇಗಳಿಗೆ ಇನ್ವಾಯ್ಸ್ ಹಣಕಾಸನ್ನು ವಿಸ್ತರಿಸಲು ಎನ್ಬಿಎಫ್ಸಿಗಳನ್ನು ಸಕ್ರಿಯಗೊಳಿಸುವುದು.
o ಬ್ಯಾಂಕುಗಳಿಂದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್ಎಂಇ) ಗಳ ಉದ್ಯಮಿಗಳಿಗೆ ಅಧೀನ ಸಾಲವನ್ನು ಒದಗಿಸುವ ಹೊಸ ಯೋಜನೆ
o ಖ್ವಾಸಿ -ಇಕ್ವಿಟಿ ಎಂದು ಪರಿಗಣಿಸಲಾಗುತ್ತದೆ.
o ಮಧ್ಯಮ ಮತ್ತು ಸಣ್ಣ ಉದ್ಯಮಿಗಳಿಗೆ ಕ್ರೆಡಿಟ್ ಗ್ಯಾರಂಟಿ ಟ್ರಸ್ಟ್ (ಸಿಜಿಟಿಎಂಎಸ್ಇ) ಮೂಲಕ ಸಂಪೂರ್ಣ ಖಾತರಿ ನೀಡಲಾಗುವುದು.
o ಸಿಜಿಟಿಎಂಎಸ್ಇಯ ಮೂಲಧನವನ್ನು ಸರ್ಕಾರವು ಹೆಚ್ಚಿಸುತ್ತದೆ.
· ಆರ್ಬಿಐನಿಂದ ಎಂಎಸ್ಎಂಇ ಸಾಲ ಪುನರ್ರಚನೆಗಾಗಿ ವ್ಯವಸ್ಥೆ (ಗವಾಕ್ಷಿ)ಯನ್ನು ಮಾರ್ಚ್ 31, 2021 ರವರೆಗೆ ಒಂದು ವರ್ಷ ವಿಸ್ತರಿಸಲಾಗುವುದು.
o ಈಗಾಗಲೇ ಐದು ಲಕ್ಷಕ್ಕೂ ಹೆಚ್ಚು ಎಂಎಸ್ಎಂಇಗಳಿಗೆ ಅನುಕೂಲವಾಗಿದೆ.
· ಎಂಎಸ್ಎಂಇಗಳಿಗಾಗಿ ಆ್ಯಪ್ ಆಧಾರಿತ ಇನ್ವಾಯ್ಸ್ ಹಣಕಾಸು ಸಾಲ ಉತ್ಪನ್ನವನ್ನು ಪ್ರಾರಂಭಿಸಲಾಗುವುದು.
o ವಿಳಂಬವಾದ ಪಾವತಿಗಳು ಮತ್ತು ಪರಿಣಾಮಕಾರಿ ಹಣದ ಹರಿವಿನ ಹೊಂದಾಣಿಕೆಯ ಸಮಸ್ಯೆಯನ್ನು ತಡೆಗಟ್ಟಲು.
· ಎಂಎಸ್ಎಂಇಗಳ ರಫ್ತುಗಳ ಬಗ್ಗೆ ಪ್ರಚಾರ:
o ಆಯ್ದ ವಲಯಗಳಾದ ಔಷಧಗಳು, ವಾಹನ ಘಟಕಗಳು ಮತ್ತು ಇತರವುಗಳಿಗೆ.
o ಎಸ್ಐಡಿಬಿಐ ಜೊತೆಗೆ ಎಕ್ಸಿಮ್ ಬ್ಯಾಂಕ್ ನಿಂದ 1000 ಕೋಟಿ ರೂಪಾಯಿಗಳ ಬಂಡವಾಳ
o ತಂತ್ರಜ್ಞಾನ ನವೀಕರಣಗಳು, ಆರ್ & ಡಿ, ವ್ಯವಹಾರ ತಂತ್ರ ಇತ್ಯಾದಿಗಳಿಗೆ ಮಾರ್ಗದರ್ಶನ
ಹಣಕಾಸು ಮಾರುಕಟ್ಟೆ
· ಬಾಂಡ್ ಮಾರುಕಟ್ಟೆಯ ವಿಸ್ತರಣೆ.
o ಅನಿವಾಸಿ ಹೂಡಿಕೆದಾರರಿಗಾಗಿ ಕೆಲವು ನಿರ್ದಿಷ್ಟ ವರ್ಗದ ಸರ್ಕಾರಿ ಬಂಡವಾಳ ಪತ್ರಗಳನ್ನು ಸಂಪೂರ್ಣವಾಗಿ ತೆರೆಯಲಾಗುವುದು.
o ಕಾರ್ಪೊರೇಟ್ ಬಾಂಡ್ಗಳಲ್ಲಿನ ಎಫ್ಪಿಐ ಮಿತಿಯು ಅದರ ಬಾಕಿ ಇರುವ 9% ರಿಂದ 15% ಕ್ಕೆ ಏರಿದೆ.
· ಹಣಕಾಸಿನ ಒಪ್ಪಂದಗಳನ್ನು ಒಟ್ಟುಮಾಡುವ ವ್ಯವಸ್ಥೆಯನ್ನು ರೂಪಿಸಲು ಹೊಸ ಶಾಸನವನ್ನು ರೂಪಿಸಬೇಕು.
o ಕ್ರೆಡಿಟ್ ಡೀಫಾಲ್ಟ್ ವ್ಯಾಪ್ತಿ ವಿಸ್ತರಿಸಲು ಅವಕಾಶ
· ಸಾಲ ಆಧಾರಿತ ವಿನಿಮಯ ವ್ಯಾಪಾರ ವಹಿವಾಟು ನಿಧಿ ಮುಖ್ಯವಾಗಿ ಸರ್ಕಾರಿ ಭದ್ರತೆಗಳನ್ನು ಒಳಗೊಂಡಿರುವ ಹೊಸ ಸಾಲ-ಇಟಿಎಫ್ ವಿಸ್ತಾರಗೊಂಡಿದೆ.
o ಚಿಲ್ಲರೆ ಹೂಡಿಕೆದಾರರು, ಪಿಂಚಣಿ ನಿಧಿಗಳು ಮತ್ತು ದೀರ್ಘಾವಧಿಯ ಹೂಡಿಕೆದಾರರಿಗೆ ಆಕರ್ಷಕ ದಾರಿಯನ್ನು ತೋರುವುದು.
· ಎನ್ಬಿಎಫ್ಸಿಗಳಿಗೆ ಭಾಗಶಃ ಸಾಲ ಖಾತರಿ ಯೋಜನೆ ಕೇಂದ್ರೀಯ ಬಜೆಟ್ 2019-20ರ ನಂತರ ಅವರ ದ್ರವ್ಯತೆ ನಿರ್ಬಂಧಗಳನ್ನು ಪರಿಹರಿಸಲು ರೂಪಿಸಿತು.
o ಇದನ್ನು ಮತ್ತಷ್ಟು ಹೆಚ್ಚಿಸಲು ಹೊಸ ಕಾರ್ಯವಿಧಾನವನ್ನು ರೂಪಿಸಬೇಕು.
o ಬಂಡವಾಳ ಪತ್ರಗಳಿಗೆ ಸರ್ಕಾರದ ಬೆಂಬಲವನ್ನು ಪ್ರಾರಂಭಿಸಿತು.
ಮೂಲಸೌಕರ್ಯಗಳ ಹಣಕಾಸು
· ಈ ಹಿಂದೆ ಘೋಷಿಸಿದ ರೂ .103 ಲಕ್ಷ ಕೋಟಿ ರಾಷ್ಟ್ರೀಯ ಮೂಲಸೌಕರ್ಯ ಪೈಪ್ಲೈನ್ (ಕೊಳವೆ ) ಯೋಜನೆಗಳು.
• ಐಐಎಫ್ಸಿಎಲ್ ಮತ್ತು ಎನ್ಐಐಎಫ್ನ ಅಂಗಸಂಸ್ಥೆಯಾದ ಇನ್ಫ್ರಾಸ್ಟ್ರಕ್ಚರ್ ಫೈನಾನ್ಸ್ ಕಂಪನಿಗಳಿಗೆ ಈಕ್ವಿಟಿ ಬೆಂಬಲಕ್ಕಾಗಿ 22,000 ಕೋಟಿ ರೂಪಾಯಿ ಪೂರೈಕೆ.
· ಐಎಫ್ಎಸ್ಸಿ, ಜಿಐಏಫ್ ಟಿ (ಗುಜರಾತ್ ಇಂಟರ್ ನ್ಯಾಷನಲ್ ಫೈನಾನ್ಸ್ ಟೆಕ್ ) ಸಿಟಿ: ಅಂತರರಾಷ್ಟ್ರೀಯ ಹಣಕಾಸು ಕೇಂದ್ರವಾಗಲು ಮತ್ತು ಉನ್ನತ ಮಟ್ಟದ ದತ್ತಾಂಶ ಸಂಸ್ಕರಣೆಯ ಕೇಂದ್ರವಾಗಲು ಸಂಪೂರ್ಣ ಸಾಮರ್ಥ್ಯ ಹೊಂದಿದೆ:
o ನಿಯಂತ್ರಕದ ಅನುಮೋದನೆಯೊಂದಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಭಾಗವಹಿಸುವವರು ವ್ಯಾಪಾರಕ್ಕಾಗಿ ಹೆಚ್ಚುವರಿ ಆಯ್ಕೆಯಾಗಿ ಇಂಟರ್ನ್ಯಾಷನಲ್ ಬುಲಿಯನ್ ಎಕ್ಸ್ಚೇಂಜ್ ಗಳನ್ನು (ಅಂತರಾಷ್ಟ್ರೀಯ ಚಿನ್ನ ಬೆಳ್ಳಿ ವಿನಿಮಯ ಕೇಂದ್ರ) ಸ್ಥಾಪಿಸಲಾಗುವುದು.
ಬಂಡವಾಳ ಹಿಂತೆಗೆತ
· ಎಲ್ಐಸಿಯಲ್ಲಿ ತನ್ನ ಹಿಡುವಳಿಯ ಒಂದು ಭಾಗವನ್ನು ಇನಿಶಿಯಲ್ ಪಬ್ಲಿಕ್ ಆಫರ್ (ಐಪಿಒ) ಮೂಲಕ ಸರ್ಕಾರ ಮಾರಾಟ ಮಾಡಲಿದೆ .
ಹಣಕಾಸು ನಿರ್ವಹಣೆ
· ಹದಿನೈದನೇ ಹಣಕಾಸು ಆಯೋಗ (ಎಫ್ಸಿ):
o ಹದಿನೈದನೇ ಹಣಕಾಸು ಆಯೋಗವು 2020-21ರ ಹಣಕಾಸು ವರ್ಷದ ತನ್ನ ಮೊದಲ ವರದಿಯನ್ನು ನೀಡಿದೆ
o ಶಿಫಾರಸುಗಳನ್ನು ಗಣನೀಯ ಪ್ರಮಾಣದಲ್ಲಿ ಸ್ವೀಕರಿಸಲಾಗಿದೆ
o 2021-22 ರಿಂದ ಪ್ರಾರಂಭವಾಗುವ ಐದು ವರ್ಷಗಳ ಇದರ ಅಂತಿಮ ವರದಿಯನ್ನು ವರ್ಷದ ಉತ್ತರಾರ್ಧದಲ್ಲಿ ಸಲ್ಲಿಸಲಾಗುವುದು.
· ಜಿ ಎಸ್ ಟಿ ಪರಿಹಾರ ನಿಧಿ:
o 2016-17 ಮತ್ತು 2017-18ರ ವರ್ಷಗಳ ಸಂಗ್ರಹದಿಂದ ಬಾಕಿ ಇರುವ ಹಣವನ್ನು ಎರಡು ಕಂತುಗಳಲ್ಲಿ ನಿಧಿಗೆ ವರ್ಗಾಯಿಸಲಾಗುವುದು.
o ಇನ್ನುಮುಂದೆ, ಜಿಎಸ್ಟಿ ಪರಿಹಾರ ಸೆಸ್ ಮೂಲಕ ಆದ ಸಂಗ್ರಹಣೆಯು ನಿಧಿಗೆ ವರ್ಗಾವಣೆಯಾಗುವುದಕ್ಕೆ ಮಾತ್ರ ಸೀಮಿತ.
· ಕೇಂದ್ರೀಯ ಪ್ರಾಯೋಜಿತ ಯೋಜನೆಗಳು ಮತ್ತು ಕೇಂದ್ರ ವಲಯ ಯೋಜನೆಗಳ ಕೂಲಂಕುಷ ಪರಿಶೀಲನೆ:
o ಭವಿಷ್ಯದ ಉದಯೋನ್ಮುಖ ಸಾಮಾಜಿಕ ಮತ್ತು ಆರ್ಥಿಕ ಅಗತ್ಯತೆಗಳೊಂದಿಗೆ ಅವುಗಳನ್ನು ಜೋಡಿಸುವುದು
o ವಿರಳವಾದ ಸಾರ್ವಜನಿಕ ಸಂಪನ್ಮೂಲಗಳನ್ನು ತಕ್ಕಮಟ್ಟಿಗೆ ಖರ್ಚು ಮಾಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು
· ಯೋಜಿತ ಹಣಕಾಸಿನ ಸಂಖ್ಯೆಗಳ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯ ಕುರಿತು ಇತ್ತೀಚಿನ ಚರ್ಚೆಯಲ್ಲಿ, ಅಳವಡಿಸಿಕೊಂಡ ಕಾರ್ಯವಿಧಾನವು ಎಫ್ಆರ್ಬಿಎಂ ಕಾಯ್ದೆಗೆ ಅನುಸಾರವಾಗಿದೆ ಎಂದು ಭರವಸೆ ನೀಡಲಾಗಿದೆ.
· 2019 2019-20ನೇ ಸಾಲಿಗೆ:
o ಪರಿಷ್ಕೃತ ವೆಚ್ಚದ ಅಂದಾಜು: ರೂ. 26.99 ಲಕ್ಷ ಕೋಟಿ
o ಆದಾಯದ ಪರಿಷ್ಕೃತ ಅಂದಾಜು: ರೂ. 19.32 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ.
· 2020-21ರ ವರ್ಷಕ್ಕೆ:
o ಜಿಡಿಪಿಯ ನಾಮಮಾತ್ರದ ಬೆಳವಣಿಗೆಯನ್ನು 10% ಎಂದು ಅಂದಾಜಿಸಲಾಗಿದೆ.
o ಆದಾಯಗಳು : ರೂ .22.46 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ
o ಖರ್ಚು: ರೂ .30.42 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ
· ಹೂಡಿಕೆಗಳನ್ನು ಹೆಚ್ಚಿಸಲು ಇತ್ತೀಚೆಗೆ ಕೈಗೊಂಡ ಗಮನಾರ್ಹ ತೆರಿಗೆ ಸುಧಾರಣೆಗಳು. ಆದರೂ ನಿರೀಕ್ಷಿತ ತೆರಿಗೆ ಸಂಗ್ರಹವು ಸಮಯ ತೆಗೆದುಕೊಳ್ಳುವ ನಿರೀಕ್ಷೆಯಿದೆ.
· 2019-20ರ ಪರಿಷ್ಕೃತ ಅಂದಾಜಿನಲ್ಲಿ 3.8% ಮತ್ತು 2020-21ರ ಬಜೆಟ್ ಅಂದಾಜಿನಲ್ಲಿ 3.5% ನಷ್ಟು ಹಣಕಾಸಿನ ಕೊರತೆಯು ಇರಬಹುದೆಂದು ಅಂದಾಜು ಮಾಡಲಾಗಿದೆ. ಇ ದು ಎರಡು ಅಂಶಗಳನ್ನು ಒಳಗೊಂಡಿದೆ;
o 2019-20ನೇ ಸಾಲಿಗೆ 3.3% ಮತ್ತು 2020-21ರ ಬಜೆಟ್ ಅಂದಾಜು %.
o ಎಫ್ಆರ್ಬಿಎಂ ಕಾಯ್ದೆಯ ಸೆಕ್ಷನ್ 4 (3) ಗೆ ಅನುಗುಣವಾಗಿ 0.5% ನಷ್ಟು ವಿಚಲನ, ಆರ್ಇ 2019- 20 ಮತ್ತು ಬಿಇ 2020-21. (ಎಫ್ಆರ್ಬಿಎಂ ಕಾಯ್ದೆಯ ಸೆಕ್ಷನ್ 4 (2) ಅನಿರೀಕ್ಷಿತ ಹಣಕಾಸಿನ ಪರಿಣಾಮಗಳೊಂದಿಗೆ ಆರ್ಥಿಕತೆಯಲ್ಲಿ ರಚನಾತ್ಮಕ ಸುಧಾರಣೆಗಳ ಕಾರಣದಿಂದಾಗಿ ಅಂದಾಜು ಹಣಕಾಸಿನ ಕೊರತೆಯಿಂದ ವಿಚಲನಕ್ಕೆ ಪ್ರಚೋದಕ ಕಾರ್ಯವಿಧಾನವನ್ನು ಒದಗಿಸುತ್ತದೆ.)
o ಸಾರ್ವಜನಿಕ ನಿಧಿಯಿಂದ ಹೂಡಿಕೆಯ ಅಗತ್ಯಗಳಿಗೆ ಧಕ್ಕೆಯಾಗದಂತೆ ಹಣಕಾಸಿನ ಬಲವರ್ಧನೆಗೆ ಬದ್ಧವಾಗಿರುವ ರಿಟರ್ನ್ ಪಥವನ್ನು ಮಧ್ಯಮ ಅವಧಿಯ ಹಣಕಾಸಿನ ನೀತಿ ಮತ್ತು ಕಾರ್ಯತಂತ್ರ ಹೇಳಿಕೆಯಲ್ಲಿ ತಿಳಿಸಲಾಗಿದೆ.
o ಮಾರುಕಟ್ಟೆ ಸಾಲಗಳು: ನಿವ್ವಳ ಮಾರುಕಟ್ಟೆ ಸಾಲಗಳು: 2019-20ರಲ್ಲಿ ರೂ .4.99 ಲಕ್ಷ ಕೋಟಿ ಮತ್ತು 2020-21ರಲ್ಲಿ ರೂ .5.36 ಲಕ್ಷ ಕೋಟಿ.
· 20 2020-21ರ ಆರ್ಥಿಕ ವರ್ಷಕ್ಕೆ ಎರವಲು ಪಡೆದ ಒಂದು ಉತ್ತಮ ಭಾಗವು ಬಂಡವಾಳ ವೆಚ್ಚದ ಕಡೆಗೆ 21% ಕ್ಕಿಂತ ಹೆಚ್ಚಾಗಿದೆ.
ನೇರ ತೆರಿಗೆ
ನೇರ ತೆರಿಗೆ ಪ್ರಸ್ತಾಪಗಳು - ಬೆಳವಣಿಗೆಯನ್ನು ಉತ್ತೇಜಿಸಲು, ತೆರಿಗೆ ರಚನೆಯನ್ನು ಸರಳೀಕರಿಸಲು, ಅನುಸರಣೆಗೆ ಸುಲಭವಾಗಿಸಲು ಮತ್ತು ದಾವೆಗಳನ್ನು ಕಡಿಮೆ ಮಾಡಲು.
· ವೈಯಕ್ತಿಕ ಆದಾಯ ತೆರಿಗೆ:
o ಮಧ್ಯಮ ವರ್ಗದ ತೆರಿಗೆದಾರರಿಗೆ ಗಮನಾರ್ಹ ಪರಿಹಾರ.
o ಹೊಸ ಮತ್ತು ಸರಳೀಕೃತ ವೈಯಕ್ತಿಕ ಆದಾಯ ತೆರಿಗೆ ನಿಯಮವನ್ನು ಪ್ರಸ್ತಾಪಿಸಲಾಗಿದೆ:
ತೆರಿಗೆಯ
ಆದಾಯದ ಮಟ್ಟ (ರೂ)
|
ಈಗಿರುವ
ತೆರಿಗೆ ದರಗಳು
|
ಹೊಸ
ತೆರಿಗೆ ದರಗಳು
|
0-2.5 ಲಕ್ಷ
|
ವಿನಾಯಿತಿ
|
ವಿನಾಯಿತಿ
|
2.5-5 ಲಕ್ಷ
|
5%
|
5%
|
5-7.5 ಲಕ್ಷ
|
20%
|
10%
|
7.5-10 ಲಕ್ಷ
|
20%
|
15%
|
10-12.5 ಲಕ್ಷ
|
30%
|
20%
|
12.5-15 ಲಕ್ಷ
|
30%
|
25%
|
Above 15 ಲಕ್ಷ
|
30%
|
30%
|
o ಹೊಸ ಸರಳೀಕೃತ ವ್ಯವಸ್ಥೆಯಲ್ಲಿ ಅಸ್ತಿತ್ವದಲ್ಲಿರುವ 70 ವಿನಾಯಿತಿಗಳು ಮತ್ತು ಕಡಿತಗಳನ್ನು (100 ಕ್ಕಿಂತ ಹೆಚ್ಚು) ತೆಗೆದುಹಾಕಬೇಕು.
o ಮುಂಬರುವ ವರ್ಷಗಳಲ್ಲಿ ಉಳಿದಿರುವ ವಿನಾಯಿತಿಗಳು ಮತ್ತು ಕಡಿತಗಳನ್ನು ಪರಿಶೀಲಿಸಬೇಕು ಮತ್ತು ತರ್ಕಬದ್ಧಗೊಳಿಸಬೇಕು.
o ಹೊಸ ತೆರಿಗೆ ವ್ಯವಸ್ಥೆಯು ಐಚ್ಚಿಕವಾಗಿರಬೇಕು - ಒಬ್ಬ ವ್ಯಕ್ತಿಯು ಹಳೆಯ ವ್ಯವಸ್ಥೆಯ ಪ್ರಕಾರ ತೆರಿಗೆ ಪಾವತಿಸುವುದನ್ನು ಮುಂದುವರಿಸಬಹುದು ಮತ್ತು ಕಡಿತ ಮತ್ತು ವಿನಾಯಿತಿಗಳನ್ನು ಪಡೆಯಬಹುದು.
o ಆದಾಯ ತೆರಿಗೆ ರಿಟರ್ನ್ ಅನ್ನು ಮೊದಲೇ ಭರ್ತಿ ಮಾಡುವ ಕ್ರಮಗಳನ್ನು ಪ್ರಾರಂಭಿಸಲಾಗಿದೆ, ಇದರಿಂದಾಗಿ ಹೊಸ ವ್ಯವಸ್ಥೆಯನ್ನು ಆರಿಸಿಕೊಳ್ಳುವ ವ್ಯಕ್ತಿಯು ಮೊದಲೇ ಭರ್ತಿ ಮಾಡಲ್ಪಟ್ಟ ಆದಾಯ ತೆರಿಗೆ ರಿಟರ್ನ್ಸ್ ಪಡೆಯುತ್ತಾನೆ ಮತ್ತು ಆದಾಯ ತೆರಿಗೆ ಪಾವತಿಸಲು ತಜ್ಞರಿಂದ ಯಾವುದೇ ಸಹಾಯದ ಅಗತ್ಯವಿರುವುದಿಲ್ಲ.
o ಹೊಸ ವ್ಯವಸ್ಥೆಯು ವರ್ಷಕ್ಕೆ 40,000 ಕೋಟಿ ರೂ. ಹಿಂದಿನ ಅಂದಾಜು ಆದಾಯವನ್ನು ಒಳಗೊಂಡಿರುತ್ತದೆ
ಕಾರ್ಪೊರೇಟ್ ತೆರಿಗೆ:
o ಹೊಸ ವಿದ್ಯುತ್ ಉತ್ಪಾದನಾ ಕಂಪನಿಗಳಿಗೆ 15% ತೆರಿಗೆ ದರವನ್ನು ವಿಸ್ತರಿಸಲಾಗಿದೆ.
o ಭಾರತೀಯ ಕಾರ್ಪೊರೇಟ್ ತೆರಿಗೆ ದರಗಳು ಈಗ ವಿಶ್ವದಲ್ಲಿಯೇ ಅತ್ಯಂತ ಕಡಿಮೆ ದರದಲ್ಲಿವೆ.
· ಲಾಭಾಂಶ ವಿತರಣಾ ತೆರಿಗೆ (ಡಿವಿಡೆಂಡ್ ಡಿಸ್ಟ್ರಿಬ್ಯೂಷನ್ ಟ್ಯಾಕ್ಸ್ - ಡಿಡಿಟಿ):
o ಭಾರತವನ್ನು ಹೆಚ್ಚು ಆಕರ್ಷಕ ಹೂಡಿಕೆಯ ತಾಣವನ್ನಾಗಿ ಮಾಡಲು ಡಿಡಿಟಿ ತೆಗೆದುಹಾಕಲಾಗಿದೆ.
o ಕಂಪನಿಯು ತನ್ನ ಅಂಗಸಂಸ್ಥೆಯಿಂದ ಹಿಡಿದಿಟ್ಟುಕೊಂಡ ಲಾಭಾಂಶಕ್ಕೆ ಕಡಿತವನ್ನು ಅನುಮತಿಸಲಾಗುವುದು.
o ರೂ. 25,000 ಕೋಟಿ ಅಂದಾಜು ವಾರ್ಷಿಕ ಆದಾಯವನ್ನು ಮನ್ನಿಸಲಾಗಿದೆ.
ನವೋದ್ಯಮಗಳು - (ಸ್ಟಾರ್ಟ್ ಅಪ್ಗಳು) :
o 100 ಕೋಟಿ ರೂಪಾಯಿ ವಹಿವಾಟಿನವರೆಗೆ ಇರುವ ನವೋದ್ಯಮಗಳಿಗೆ, 10 ವರ್ಷಗಳಲ್ಲಿ ಸತತ 3 ಹಣಕಾಸಿನ ವರ್ಷಗಳಲ್ಲಿ 100% ವರೆಗೆ ಕಡಿತದ ರಿಯಾಯಿತಿ .
o ಇಎಸ್ಒಪಿಗಳ ಮೇಲಿನ ತೆರಿಗೆ ಪಾವತಿಯನ್ನು ಮುಂದೂಡಲಾಗಿದೆ.
· ಎಂಎಸ್ಎಂಇಗಳು ಕಡಿಮೆ ನಗದು ಆರ್ಥಿಕತೆಯನ್ನು ಉತ್ತೇಜಿಸುತ್ತವೆ:
o ಲೆಕ್ಕಪರಿಶೋಧನೆಯ ವಹಿವಾಟು ಮಿತಿ ರೂ. 5 ಕೋಟಿ ರೂ. 5% ಕ್ಕಿಂತ ಕಡಿಮೆ ವ್ಯವಹಾರ ವಹಿವಾಟನ್ನು ನಗದು ರೂಪದಲ್ಲಿ ನಡೆಸುವ ವ್ಯವಹಾರಗಳಿಗೆ 1 ಕೋಟಿ ರೂ.
· ಸಹಕಾರ ಸಂಸ್ಥೆಗಳು:
o ಸಹಕಾರಿ ಮತ್ತು ಕಾರ್ಪೊರೇಟ್ ವಲಯದ ನಡುವೆ ಸಮಾನತೆ ತರಲಾಗಿದೆ.
o ಸಹಕಾರಿ ಸಂಘಗಳಿಗೆ 22% + 10% ಹೆಚ್ಚುವರಿ ಶುಲ್ಕ ಮತ್ತು 4% ಸೆಸ್ ಗೆ ಯಾವುದೇ ವಿನಾಯಿತಿ / ಕಡಿತಗಳಿಲ್ಲದೆ ತೆರಿಗೆ ವಿಧಿಸುವ ಆಯ್ಕೆ.
o ಕಂಪೆನಿಗಳನ್ನು ಕನಿಷ್ಠ ಪರ್ಯಾಯ ತೆರಿಗೆಯಿಂದ (ಎಂಎಟಿ) ವಿನಾಯಿತಿ ಪಡೆದಂತೆಯೇ ಸಹಕಾರಿ ಸಂಘಗಳನ್ನು ಪರ್ಯಾಯ ಕನಿಷ್ಠ ತೆರಿಗೆಯಿಂದ (ಎಎಂಟಿ) ವಿನಾಯಿತಿ ನೀಡಲಾಗಿದೆ.
· ವಿದೇಶಿ ಹೂಡಿಕೆಗಳಿಗೆ ತೆರಿಗೆ ರಿಯಾಯಿತಿ:
o 2024 ರ ಮಾರ್ಚ್ 31 ರ ಮೊದಲು ಮೂಲಸೌಕರ್ಯ ಮತ್ತು ಆದ್ಯತೆಯ ಕ್ಷೇತ್ರಗಳಲ್ಲಿ ಮಾಡಿದ ಹೂಡಿಕೆಯ ಮೇಲಿನ ಬಡ್ಡಿ, ಲಾಭಾಂಶ ಮತ್ತು ಬಂಡವಾಳ ಲಾಭಗಳಿಗೆ 100% ತೆರಿಗೆ ವಿನಾಯಿತಿ, ವಿದೇಶಿ ಸರ್ಕಾರಗಳ ಸಾರ್ವಭೌಮ ಸಂಪತ್ತು ನಿಧಿಯಿಂದ ಕನಿಷ್ಠ 3 ವರ್ಷಗಳ ಲಾಕ್-ಇನ್ ಅವಧಿಯೊಂದಿಗೆ.
· ಕೈಗೆಟ್ಟುಕುವ ವಸತಿ:
o ಕೈಗೆಟುಕುವ ಬೆಲೆಯ ಮನೆಗಾಗಿ ತೆಗೆದುಕೊಂಡ ಸಾಲಗಳಿಗೆ ಪಾವತಿಸುವ ಬಡ್ಡಿಗೆ ಹೆಚ್ಚುವರಿ ರೂ 1.5 ಲಕ್ಷ ರೂಪಾಯಿಗಳ ಕಡಿತವನ್ನು ಮಾರ್ಚ್ 31, 2021ರವರೆಗೆ ವಿಸ್ತರಿಸಲಾಗಿದೆ.
o ಡೆವಲಪರ್ಗಳು ಗಳಿಸಿದ ಲಾಭದ ಮೇಲೆ ತೆರಿಗೆ ರಜೆ ಪಡೆಯಲು ಕೈಗೆಟುಕುವ ವಸತಿ ಯೋಜನೆಗಳ ಅನುಮೋದನೆಯ ದಿನಾಂಕವನ್ನು 2021 ಮಾರ್ಚ್ 31 ರವರೆಗೆ ವಿಸ್ತರಿಸಲಾಗಿದೆ.
ತೆರಿಗೆ ಸೌಲಭ್ಯ ಕ್ರಮಗಳು
- ಆಧಾರ್ ಮೂಲಕ ಆನ್‌ಲೈನ್‌ನಲ್ಲಿ ತ್ವರಿತ ಪ್ಯಾನ್ ಹಂಚಿಕೆ.
- ನೇರ ತೆರಿಗೆಗಳಲ್ಲಿನ ದಾವೆಗಳನ್ನು ಕಡಿಮೆ ಮಾಡಲು ಜೂನ್ 30, 2020 ರ ಗಡುವಿನೊಂದಿಗೆ ‘ವಿವಾದ್ ಸೆ ವಿಶ್ವಾಸ್’ ಯೋಜನೆ:
- ಮಾರ್ಚ್ 31, 2020 ರವರೆಗೆ ಪಾವತಿಗಾಗಿ ಪಾವತಿಸಬೇಕಾದ ಸಮಸ್ಯೆ ಭರಿತ / ವಿವಾದಿತ ತೆರಿಗೆಗಳಿಗೆ ಮಾತ್ರ ಬಡ್ಡಿ ಮತ್ತು ದಂಡ ಮನ್ನಾ.
- ಮಾರ್ಚ್ 31, 2020 ರ ನಂತರ ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕು.
- ಯಾವುದೇ ಹಂತದಲ್ಲಿ ಮೇಲ್ಮನವಿಗಳು ಬಾಕಿ ಇದ್ದಲ್ಲಿ ತೆರಿಗೆದಾರರಿಗೆ ಪ್ರಯೋಜನ.
- ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ವ್ಯಕ್ತಿಗತ ಮೇಲ್ಮನವಿಗಳನ್ನು ಸಕ್ರಿಯಗೊಳಿಸಲಾಗುವುದು.
- ದತ್ತಿ ಸಂಸ್ಥೆಗಳಿಗೆ:
- ನೀಡಿದ ದೇಣಿಗೆಗಳ ಮಾಹಿತಿಯ ಮೂಲಕ ಪೂರ್ವ ಭರ್ತಿ ವ್ಯವಸ್ಥೆ.
- ನೋಂದಣಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ವಿದ್ಯುನ್ಮಾನಗೊಳಿಸಲಾಗುವುದು.
- ಹೊಸ ಮತ್ತು ಅಸ್ತಿತ್ವದಲ್ಲಿರುವ ದತ್ತಿ ಸಂಸ್ಥೆಗಳಿಗೆ ವಿಶಿಷ್ಟ ನೋಂದಣಿ ಸಂಖ್ಯೆ (ಯು.ಆರ್.ಎನ್) ನೀಡಲಾಗುವುದು.
- ಹೊಸ ಚಾರಿಟಿ ಸಂಸ್ಥೆಗಳಿಗೆ ತಾತ್ಕಾಲಿಕ ನೋಂದಣಿಯನ್ನು ಮೂರು ವರ್ಷಗಳವರೆಗೆ ಅನುಮತಿ ನೀಡಲಾಗುವುದು.
- ತೆರಿಗೆದಾರರ ಚಾರ್ಟರ್ ಗಳು ಸಿ.ಬಿ.ಡಿ.ಟಿ. ಯಲ್ಲಿ.
- ವಿಲೀನಗೊಂಡ ಬ್ಯಾಂಕುಗಳ ನಷ್ಟಗಳು:
- ಆದಾಯ ತೆರಿಗೆ ಕಾಯ್ದೆಗೆ ಪ್ರಸ್ತಾಪಿಸಲಾದ ತಿದ್ದುಪಡಿಗಳು ಘಟಕಗಳು ಭರಿಸಿಕೊಳ್ಳದ ನಷ್ಟಗಳಿಂದ ಮತ್ತು ಸಂಯೋಜಿಸುವ ಘಟಕಗಳ ಸವಕಳಿಯಿಂದ ಲಾಭ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ವ್ಯವಸ್ಥೆ.
ಪರೋಕ್ಷ ತೆರಿಗೆ
- ಗ್ರಾಹಕರಿಗೆ ನಗದು ಬಹುಮಾನದ ಮೂಲಕ ರಶೀತಿ ( ಬಿಲ್) ಪಡೆಯಲು ಉತ್ತೇಜನ.
- ಶೂನ್ಯ ರಿಟರ್ನ್‌ಗಾಗಿ ಎಸ್.ಎಂ.ಎಸ್ ಆಧಾರಿತ ಫೈಲಿಂಗ್ ಮತ್ತು ಸುಧಾರಿತ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಹರಿವಿನಂತಹ ವೈಶಿಷ್ಟ್ಯಗಳೊಂದಿಗೆ ಸರಳೀಕೃತ ರಿಟರ್ನ್ 2020 ರ ಏಪ್ರಿಲ್ 1 ರಿಂದ ಪ್ರಾಯೋಗಿಕ ಯೋಜನೆ ಜಾರಿ.
- ಗ್ರಾಹಕ ರಶೀತಿಗೆ ( ಬಿಲ್) ಪ್ರಸ್ತಾಪಿಸಲಾದ ಜಿ.ಎಸ್.ಟಿ ನಿಯತಾಂಕಗಳನ್ನು ಗುರುತಿಸುವ ಡೈನಾಮಿಕ್ ಕ್ಯೂ.ಆರ್-ಕೋಡ್.
- ನಿರ್ಣಾಯಕ ಮಾಹಿತಿಯನ್ನು ಕೇಂದ್ರೀಕೃತ ವ್ಯವಸ್ಥೆಯಲ್ಲಿ ಗುರುತಿಸಲುಲು ಎಲೆಕ್ಟ್ರಾನಿಕ್ ಸರಕುಪಟ್ಟಿ ಹಂತ ಹಂತವಾಗಿ ಜಾರಿ.
- ನಕಲಿ ಅಥವಾ ಅಸ್ತಿತ್ವದಲ್ಲಿಲ್ಲದ ಘಟಕಗಳ ಪತ್ತೆಗೆ ತೆರಿಗೆದಾರರ ಆಧಾರ್ ಆಧಾರಿತ ಪರಿಶೀಲನೆ.
- ತೆರಿಗೆ ವಂಚನೆ ಪರಿಹಾರಕ್ಕೆ ಜಿ ಎಸ್ ಟಿ ದರ ರಚನೆ.
- ಕಸ್ಟಮ್ಸ್ ಸುಂಕವನ್ನು ಪಾದರಕ್ಷೆಗಳ ಮೇಲೆ 25% ರಿಂದ 35% ಮತ್ತು ಪೀಠೋಪಕರಣ ಸರಕುಗಳ ಮೇಲೆ 25% ರಿಂದ 20% ಕ್ಕೆ ಏರಿಸಲಾಗಿದೆ.
- ಸುದ್ದಿ ಮುದ್ರಣ ಕಾಗದ ಮತ್ತು ಕಡಿಮೆ ತೂಕದ ಲೇಪಿತ ಕಾಗದದ ಆಮದಿನ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು 10% ರಿಂದ 5% ಗೆ ಇಳಿಸಲಾಗಿದೆ.
- ಎಲೆಕ್ಟ್ರಿಕ್ ವಾಹನಗಳು ಮತ್ತು ಮೊಬೈಲ್‌ಗಳ ಬಿಡಿ ಭಾಗಗಳ ಕಸ್ಟಮ್ಸ್ ಸುಂಕ ದರವನ್ನು ಪರಿಷ್ಕರಿಸಲಾಗಿದೆ.
- ಬಿಸಿಡಿ ಯಿಂದ ವಿನಾಯಿತಿ ಪಡೆದವುಗಳನ್ನು ಹೊರತುಪಡಿಸಿ, ವೈದ್ಯಕೀಯ ಸಾಧನಗಳ ಆಮದಿನ ಮೇಲೆ 5% ಆರೋಗ್ಯ ತೆರಿಗೆ (ಸೆಸ್) ವಿಧಿಸಲಾಗುವುದು.
- ಫ್ಯೂಸ್, ರಾಸಾಯನಿಕಗಳು ಮತ್ತು ಪ್ಲಾಸ್ಟಿಕ್‌ಗಳಂತಹ ಕಚ್ಚಾ ವಸ್ತುಗಳ ಮೇಲಿನ ಕಸ್ಟಮ್ಸ್ ಸುಂಕ ಕಡಿಮೆ.
- ವಾಹನ ಬಿಡಿ ಭಾಗಗಳು, ರಾಸಾಯನಿಕಗಳು ಮುಂತಾದ ಕೆಲವು ದೇಶೀಯ ಸರಕುಗಳ ಮೇಲೂ ಹೆಚ್ಚಿನ ಕಸ್ಟಮ್ಸ್ ಸುಂಕ.
- ಎಫ್ಟಿಎಗಳ(FTA) ಅಡಿಯಲ್ಲಿ ಆಮದಿನ ಪರಿಶೀಲನೆಯನ್ನು ಸಕ್ರಿಯಗೊಳಿಸಲು ಕಸ್ಟಮ್ಸ್ ಕಾಯ್ದೆ ತಿದ್ದುಪಡಿ.
- ಕೆಲವು ಸೂಕ್ಷ್ಮ ವಸ್ತುಗಳ ಮೂಲ ನಿಯಮಗಳ ಪರಿಶೀಲನೆಗೆ ನಿಯಮಗಳು.
- ಆಮದುಗಳಲ್ಲಿನ ಏರಿಕೆಯು ವ್ಯವಸ್ಥಿತ ರೀತಿಯಲ್ಲಿ ನಿಯಂತ್ರಿಸಲು ಸಾಧ್ಯವಾಗುವಂತೆ ಸುರಕ್ಷತಾ ಕರ್ತವ್ಯಗಳಿಗೆ ಸಂಬಂಧಿಸಿದ ನಿಬಂಧನೆಗಳ ಬಲವರ್ಧನೆ.
- ಸರಕುಗಳ ಡಂಪಿಂಗ್ ಮತ್ತು ಸಬ್ಸಿಡಿ ಸರಕುಗಳ ಆಮದನ್ನು ಬಲಪಡಿಸುವ ನಿಬಂಧನೆಗಳನ್ನು ಪರಿಶೀಲಿಸುವ ನಿಬಂಧನೆಗಳು.
- ಕಸ್ಟಮ್ಸ್ ಸುಂಕ ವಿನಾಯಿತಿ ಪರಿಶೀಲನೆಗೆ ಸಲಹೆಗಳು.
- ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಮೇಲೆ ಅಬಕಾರಿ ಸುಂಕ ಹೆಚ್ಚಳ, ಬೀಡಿಗಳ ಸುಂಕ ದರದಲ್ಲಿ ಯಾವುದೇ ಬದಲಾವಣೆಯಿಲ್ಲ.
- ಜವಳಿ ಕ್ಷೇತ್ರಕ್ಕೆ ಅನುಕೂಲವಾಗುವಂತೆ ಪಿ.ಟಿ.ಎ (PTA) ಮೇಲಿನ ಆಂಟಿ-ಡಂಪಿಂಗ್ ಸುಂಕವನ್ನು ರದ್ದುಪಡಿಸಲಾಗಿದೆ.
ಅಭೂತಪೂರ್ವ ಮೈಲಿಗಲ್ಲುಗಳು ಹಾಗು ಭಾರತೀಯ ಆರ್ಥಿಕತೆಯ ಸಾಧನೆಗಳು
- ಭಾರತ ಈಗ ವಿಶ್ವದ ಐದನೇ ಅತಿದೊಡ್ಡ ಆರ್ಥಿಕ ರಾಷ್ಟ್ರ.
- 2014-19ರ ಅವಧಿಯಲ್ಲಿ 7.4% ನಷ್ಟು ಸರಾಸರಿ ಬೆಳವಣಿಗೆಯಾಗಿದೆ, ಹಣದುಬ್ಬರವು ಸರಾಸರಿ 4.5% ರಷ್ಟು.
- 2006-16ರಲ್ಲಿ 271 ಮಿಲಿಯನ್ ಜನರು ಬಡತನದಿಂದ ಹೊರಬಂದಿದ್ದಾರೆ.
- ಭಾರತದ ವಿದೇಶಿ ನೇರ ಹೂಡಿಕೆ, ಯು.ಎಸ್.ಡಾಲರ್ ($) 2009-14ರಲ್ಲಿ 190 ಶತಕೋಟಿಯಿದ್ದು 2014-19ರಲ್ಲಿ ಯು.ಎಸ್.ಡಾಲರ್ ($) 284 ಶತಕೋಟಿಗೆ ಏರಿದೆ.
- ಕೇಂದ್ರ ಸರ್ಕಾರದ ಸಾಲವನ್ನು ಜಿ.ಡಿ.ಪಿಯ (ಮಾರ್ಚ್ 2019) 52.2% (ಮಾರ್ಚ್ 2014) ರಿಂದ 48.7% ಕ್ಕೆ ಇಳಿಸಲಾಗಿದೆ.
- ಎರಡು ಬೆಳವಣಿಗೆಗಳು:
- ತಂತ್ರಜ್ಞಾನಗಳ ಬೆಳವಣಿಗೆ (ಅನಾಲಿಟಿಕ್ಸ್, ಮೆಷಿನ್ ಲರ್ನಿಂಗ್, ರೊಬೊಟಿಕ್ಸ್, ಬಯೋ ಇನ್ಫಾರ್ಮ್ಯಾಟಿಕ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್).
- ಭಾರತದಲ್ಲಿ 15-65 ವರ್ಷ ವಯಸ್ಕರು ಅತಿ ಹೆಚ್ಚಿದ್ದಾರೆ.
- ಜಿ.ಎಸ್.ಟಿ. ವ್ಯವಸ್ಥೆಯಲ್ಲಿನ ಅನೇಕ ಅಡೆತಡೆಗಳ ನಿರ್ಮೂಲನೆ.
ಭವಿಷ್ಯದಲ್ಲಿ ಭಾರತ ವಿಶಿಷ್ಟ ಜಾಗತಿಕ ನಾಯಕತ್ವಕ್ಕೆ ಡಿಜಿಟಲ್ ಕ್ರಾಂತಿ
- ಡಿಜಿಟಲ್ ಆಡಳಿತದ ಮೂಲಕ ತಡೆರಹಿತ ಸೇವೆಗಳು.
- ರಾಷ್ಟ್ರೀಯ ಮೂಲಸೌಕರ್ಯ ಕೊಳವೆ ಮಾರ್ಗ ಮೂಲಕ ದೈಹಿಕ ಜೀವನದ ಗುಣಮಟ್ಟದ ಸುಧಾರಣೆ.
- ವಿಪತ್ತು ಸ್ಥಿತಿಸ್ಥಾಪಕತ್ವದ ಮೂಲಕ ಅಪಾಯವನ್ನು ತಗ್ಗಿಸುವುದು.
- ಪಿಂಚಣಿ ಮತ್ತು ವಿಮಾ ಯೋಜನೆ ಮೂಲಕ ಸಾಮಾಜಿಕ ಭದ್ರತೆ.
***
(Release ID: 1601605)
Visitor Counter : 2452