ಪ್ರಧಾನ ಮಂತ್ರಿಯವರ ಕಛೇರಿ

ಐದು ಯುವ ವಿಜ್ಞಾನಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ.ಆರ್.ಡಿ.ಓ) ಪ್ರಯೋಗಾಲಯಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ

Posted On: 02 JAN 2020 7:20PM by PIB Bengaluru

ಐದು ಯುವ ವಿಜ್ಞಾನಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ.ಆರ್.ಡಿ.ಪ್ರಯೋಗಾಲಯಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ.ಆರ್.ಡಿ.ಓ)ಯ ಯುವ ವಿಜ್ಞಾನಿಗಳ 5 ಪ್ರಯೋಗಾಲಯಗಳನ್ನು ದೇಶಕ್ಕೆ ಸಮರ್ಪಿಸಿದರು.

ಡಿ.ಆರ್.ಡಿ.ಓ. ಯುವ ವಿಜ್ಞಾನಿಗಳ ಪ್ರಯೋಗಾಲಯ (ಡಿವೈಎಸ್.ಎಲ್.ಗಳು) ಬೆಂಗಳೂರು, ಮುಂಬೈ, ಚೆನ್ನೈ, ಕೋಲ್ಕತ್ತಾ ಮತ್ತು ಹೈದ್ರಾಬಾದ್ ನಗರಗಳಲ್ಲಿದ್ದು, ಪ್ರತಿಯೊಂದು ಪ್ರಯೋಗಾಲಯವೂ ಭವಿಷ್ಯದ ರಕ್ಷಣಾ ವ್ಯವಸ್ಥೆಯ ಅಭಿವೃದ್ಧಿಗಾಗಿ ಅಂದರೆ ಕೃತಕ ಬುದ್ಧಿಮತ್ತೆ, ಕ್ವಾಂಟಮ್ ತಂತ್ರಜ್ಞಾನ, ಜ್ಞಾನ ಗ್ರಹಣ ತಂತ್ರಜ್ಞಾನಗಳುಅಸಮ್ಮಿತ ತಂತ್ರಜ್ಞಾನಗಳು ಮತ್ತು ಸ್ಮಾರ್ಟ್ ವಸ್ತುಗಳ ಅಭಿವೃದ್ಧಿಗಾಗಿ ಮಹತ್ವದ ಪ್ರಮುಖ ಮುಂದುವರಿದ ತಂತ್ರಜ್ಞಾನದ ಮೇಲೆ ಕಾರ್ಯನಿರ್ವಹಿಸುತ್ತವೆ.

2014ರ ಆಗಸ್ಟ್ ನಲ್ಲಿ ನಡೆದ ಡಿ.ಆರ್.ಡಿ.ಓ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನಮಂತ್ರಿಯವರಿಂದ ಇಂಥ ಪ್ರಯೋಗಾಲಯಗಳನ್ನು ಆರಂಭಿಸುವ ಕುರಿತ ಪ್ರೇರಣೆ ದೊರಕಿತ್ತು. ಅಂದು ಶ್ರೀ ನರೇಂದ್ರ ಮೋದಿ ಅವರು ಡಿಆರ್.ಡಿ.ಓ.ಗೆ ಯುವಜನರನ್ನು ಸಬಲೀಕರಿಸಲು, ಅವರಿಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ಮತ್ತು ಸಂಶೋಧನಾ ಅವಕಾಶಗಳ ಸವಾಲು ನೀಡುವಂತೆ ಸೂಚಿಸಿದ್ದರು.

ಸಮಾರಂಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಈ ಪ್ರಯೋಗಾಲಯಗಳು ದೇಶದಲ್ಲಿ ಹೊರಹೊಮ್ಮುತ್ತಿರುವ ತಂತ್ರಜ್ಞಾನಗಳ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಸ್ವರೂಪವನ್ನು ರೂಪಿಸುವಲ್ಲಿ ನೆರವಾಗುತ್ತವೆ ಎಂದರು.

ಹೊಸ ದಶಕಕ್ಕೆ ನಿರ್ದಿಷ್ಟವಾದ ಮಾರ್ಗಸೂಚಿಯನ್ನು ರೂಪಿಸುವಂತೆ, ವಿಜ್ಞಾನಿಗಳಿಗೆ ಕರೆ ನೀಡಿದ ಪ್ರಧಾನಮಂತ್ರಿಗಳು, ಅಲ್ಲಿ ಭಾರತದ ವಿವಿಧ ಕ್ಷೇತ್ರಗಳಲ್ಲಿ ವೈಜ್ಞಾನಿಕ ಸಂಸೋಧನೆಗೆ ವೇಗ ಮತ್ತು ದಿಕ್ಕು ತೋರಿಸಲು ಡಿ.ಆರ್.ಡಿ.ಓ. ಸಾಧ್ಯವಾಗುವಂತಿರಬೇಕು ಎಂದರು.

ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಭಾರತದ ಕ್ಷಿಪಣಿ ಕಾರ್ಯಕ್ರಮ ವಿಶ್ವದಲ್ಲಿನ ಅತ್ಯುತ್ತಮ ಕಾರ್ಯಕ್ರಮಗಳಲ್ಲಿ ಒಂದಾಗಿದೆ ಎಂದರು. ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮ ಮತ್ತು ವಾಯು ರಕ್ಷಣೆ ವ್ಯವಸ್ಥೆಯನ್ನು ಅವರು ಶ್ಲಾಘಿಸಿದರು.

ಭಾರತವು ವೈಜ್ಞಾನಿಕ ಸಂಶೋಧನೆಯ ಕ್ಷೇತ್ರದಲ್ಲಿ ಎಂದಿಗೂ ಹಿಂದೆ ಬೀಳಬಾರದು ಎಂದು ಪ್ರಧಾನಮಂತ್ರಿಯವರು ಹೇಳಿದರು.  ರಾಷ್ಟ್ರೀಯ ಭದ್ರತೆಗಾಗಿ ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ನಾವೀನ್ಯತೆಗಳಲ್ಲಿ ಸಮಯವನ್ನು ಹೂಡಿಕೆ ಮಾಡಲು, ವೈಜ್ಞಾನಿಕ ಸಮುದಾಯದೊಂದಿಗೆ ಹೆಚ್ಚುವರಿ ಮೈಲಿಗಳಲ್ಲಿ ಸಾಗಲು ಸರ್ಕಾರವು ಸಿದ್ಧವಾಗಿದೆ ಎಂದು ಅವರು ಹೇಳಿದರು.

ಡಿ.ಆರ್.ಡಿ.ಓ.ದ ನಾವಿನ್ಯತೆಗಳು ಮೇಕ್ ಇನ್ ಇಂಡಿಯಾದಂಥ ಕಾರ್ಯಕ್ರಮಗಳನ್ನು ಬಲಪಡಿಸುವಲ್ಲಿ ಮತ್ತು ದೇಶದಲ್ಲಿ ಚಲನಶೀಲ ರಕ್ಷಣಾ ವಲಯದ ಉತ್ತೇಜನದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ  ಎಂದು ಪ್ರಧಾನಮಂತ್ರಿಯವರು ಹೇಳಿದರು.

ಐದು ಡಿ.ಆರ್.ಡಿ.ಓ. ಯುವ ವಿಜ್ಞಾನಿಗಳ ಪ್ರಯೋಗಾಲಯ ಸ್ಥಾಪನೆಯು ಭವಿಷ್ಯದ ತಂತ್ರಜ್ಞಾನಗಳ ಸಂಶೋಧನೆ ಮತ್ತು ಅಭಿವೃದ್ಧಿಗೆ ನಾಂದಿ ಹಾಡುತ್ತದೆ ಎಂದರು. ಇದು ಭವಿಷ್ಯದ ರಕ್ಷಣಾ ತಂತ್ರಜ್ಞಾನದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿರುವ ಗುರಿಯತ್ತ ಡಿ.ಆರ್.ಡಿ.ಓ.ನ ದೊಡ್ಡ ದಾಪುಗಾಲಾಗಿದೆ ಎಂದರು.

ಸಂಶೋಧನಾ ಕ್ಷೇತ್ರದಲ್ಲಿ ತ್ವರಿತವಾಗಿ ಹೊರಹೊಮ್ಮುತ್ತಿರುವ, ಕೃತಕ ಬುದ್ಧಿಮತ್ತೆ ಕುರಿತಂತೆ ಬೆಂಗಳೂರಿನಲ್ಲಿ ಸಂಶೋಧನೆ ಕೈಗೊಳ್ಳಲಾಗುವುದು ಎಂದರು. ಕ್ವಾಂಟಮ್ ತಂತ್ರಜ್ಞಾನದ ಎಲ್ಲ ಪ್ರಮುಖ ಕ್ಷೇತ್ರಗಳಲ್ಲಿ ಐಐಟಿ ಮುಂಬೈನಲ್ಲಿ ನೆಲೆಯಾಗಲಿದೆ. ಜ್ಞಾನ ಗ್ರಹಣ ತಂತ್ರಜ್ಞಾನ ಭವಿಷ್ಯ ಐಐಟಿ ಚೆನ್ನೈನಲ್ಲಿದ್ದು, ಪ್ರಯೋಗಾಲಯ ಈ ಕ್ಷೇತ್ರದಲ್ಲಿ ಸಂಶೋಧನೆ ನಡೆಸಲಿದೆ. ಹೊಸ ಮತ್ತು ಭವಿಷ್ಯದ ಕ್ಷೇತ್ರದಲ್ಲಿ ಅಸಮ್ಮಿತ ತಂತ್ರಜ್ಞಾನವು ಯುದ್ಧಗಳನ್ನು ಎದುರಿಸುವ ಮಾರ್ಗವನ್ನೇ ಬದಲಾಯಿಸುತ್ತವೆ, ಇದು ಕೋಲ್ಕತ್ತಾದ ಜಾದವ್ ಪುರ ವಿಶ್ವವಿದ್ಯಾಲಯ ಆವರಣದಲ್ಲಿ ನೆಲೆಸಲಿದೆ. ಪ್ರಮುಖ ಕ್ಷೇತ್ರವಾದ ಸ್ಮಾರ್ಟ್ ಮೆಟೀರಿಯಲ್ ಮತ್ತು ಅದರ ಆನ್ವಯಿಕಗಳ ಸಂಶೋಧನೆ ಹೈದ್ರಾಬಾದ್ ನಲ್ಲಿರಲಿದೆ.

***


(Release ID: 1598341) Visitor Counter : 249