ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ವರ್ಷಾಂತ್ಯದ ಪರಾಮರ್ಶೆ 2019

Posted On: 23 DEC 2019 4:04PM by PIB Bengaluru

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ವರ್ಷಾಂತ್ಯದ ಪರಾಮರ್ಶೆ 2019

 

ಉತ್ತಮ ಪೌಷ್ಟಿಕ ಫಲಶ್ರುತಿಗಾಗಿ ಭಾರತೀಯ ಪೋಷಣ್ ಕೃಷಿ ಕೋಶದ ಆರಂಭ

2019ರ ಸೆಪ್ಟೆಂಬರ್ ನಲ್ಲಿ ಪೋಷಣ್ ಮಾಸದ ಸಂದರ್ಭದಲ್ಲಿ 85 ದಶಲಕ್ಷ ಫಲಾನುಭವಿಗಳನ್ನು ತಲುಪಲಾಗಿದೆ

ತ್ವರಿತ ನ್ಯಾಯದಾನಕ್ಕಾಗಿ ಪೋಕ್ಸೋ ಕಾಯ್ದೆ ತಿದ್ದುಪಡಿ


 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಮಕ್ಕಳ ಅಭಿವೃದ್ಧಿಆರೈಕೆ ಮತ್ತು ರಕ್ಷಣೆಯನ್ನು ಖಾತ್ರಿಪಡಿಸುವ ಸಲುವಾಗಿ ಕಠಿಣ ನೀತಿಗಳು ಮತ್ತು ಕಾರ್ಯಕ್ರಮಗಳ ಮೂಲಕ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮಕ್ಕಳಿಗೆ ಅವರ ಪೂರ್ಣ ಸಾಮರ್ಥ್ಯಕ್ಕೆ ಬೆಳೆಯಲು ಮತ್ತು ಅಭಿವೃದ್ಧಿಹೊಂದಲು ಅನುವು ಮಾಡಿಕೊಡಲು ಕಲಿಕೆಪೋಷಣೆಸಾಂಸ್ಥಿಕ ಮತ್ತು ಶಾಸಕಾಂಗ ಬೆಂಬಲವನ್ನು ಪಡೆಯಲು ವಿವಿಧ ಕ್ರಮಗಳನ್ನು ಕೈಗೊಂಡಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಭಾರತೀಯ ಪೋಷಣ್ ಕೃಷಿ ಕೋಶ ಆರಂಭಿಸಿದೆ.

ನವದೆಹಲಿಯಲ್ಲಿ 2019ರ ನವೆಂಬರ್ 18ರಂದು ಭಾರತೀಯ ಪೋಷಣ್ ಕೃಷಿ ಕೋಶ (ಬಿಪಿಕೆಕೆ)ದ ಉದ್ಘಾಟನೆಯನ್ನು ಬಿಲ್ ಮತ್ತು ಮಿಲಿಂದಾ ಗೇಟ್ಸ್ ಪ್ರತಿಷ್ಠಾನದ  ಸಹ ಅಧ್ಯಕ್ಷ ಬಿಲ್ ಗೇಟ್ಸ್ ಅವರೊಂದಿಗೆ, ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ (ಡಬ್ಲ್ಯುಸಿಡಿ) ಮತ್ತು ಜವಳಿ ಖಾತೆ ಸಚಿವೆ ಸ್ಮೃತಿ ಜುಬಿನ್ ಇರಾನಿ ನೆರವೇರಿಸಿದರು.  ಬಿಪಿಕೆಕೆ ಭಾರತದಲ್ಲಿ ಉತ್ತಮ ಪೌಷ್ಟಿಕ ಫಲಶ್ರುತಿಗಾಗಿ ಭಾರತದ 128 ಕೃಷಿ ಹವಾಮಾನ ವಲಯಗಳ ವೈವಿಧ್ಯಮಯ ಬೆಳೆಗಳ ಖಜಾನೆಯಾಗಿದೆ.

ಡಬ್ಲ್ಯುಸಿಡಿ ಸಚಿವಾಲಯದ ಆದೇಶದ ಮೇರೆಗೆ ಸಾರ್ವಜನಿಕ ಆರೋಗ್ಯ ಕುರಿತ ಹಾರ್ವರ್ಡ್ ಚಾನ್ ಸ್ಕೂಲ್ ತನ್ನ ಭಾರತ ಸಂಶೋಧನಾ ಕೇಂದ್ರ ಮತ್ತು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಮೂಲಕ ಭರವಸೆಯ ಪ್ರಾದೇಶಿಕ ಆಹಾರ ಪದ್ಧತಿಗಳು ಮತ್ತು ಅವುಗಳ ಸುತ್ತಲಿನ ಸಂದೇಶಗಳ ಮೌಲ್ಯಮಾಪನ ಮತ್ತು ದಾಖಲೀಕರಣ ಮಾಡುತ್ತದೆ ಮತ್ತು ಪ್ರಾದೇಶಿಕ ಕೃಷಿ-ಆಹಾರದ ವ್ಯವಸ್ಥೆಯ ಬಗ್ಗೆ ಆಹಾರ ನಕ್ಷೆಯನ್ನು ಅಭಿವೃದ್ಧಿಪಡಿಸುತ್ತದೆ. ಎರಡೂ ಪ್ರಯತ್ನಗಳು ಸಮಾಜದ ವಿಭಿನ್ನ ವಲಯಗಳನ್ನು ಸಜ್ಜುಗೊಳಿಸುವ ಗುರಿಯನ್ನು ಹೊಂದಿವೆ.

ಡಬ್ಲ್ಯುಸಿಡಿ ಸಚಿವಾಲಯ ಮತ್ತು ಬಿಲ್ ಮತ್ತು ಮಿಲಿಂದಾ ಗೇಟ್ಸ್ ಪ್ರತಿಷ್ಠಾನದೊಂದಿಗೆ ಸಮಾಲೋಚನೆ ನಡೆಸಿ, ಯೋಜನಾ ತಂಡವು ಭಾರತದ ಭೌಗೋಳಿಕಸಾಮಾಜಿಕಆರ್ಥಿಕಸಾಂಸ್ಕೃತಿಕ ಮತ್ತು ರಚನಾತ್ಮಕ ವೈವಿಧ್ಯತೆಗಳನ್ನು ಪ್ರತಿನಿಧಿಸುವ ಸುಮಾರು 12 ಉನ್ನತ ಕೇಂದ್ರಿತ ರಾಜ್ಯಗಳನ್ನು ಆಯ್ಕೆ ಮಾಡುತ್ತದೆ. ಪ್ರತಿ ರಾಜ್ಯದಲ್ಲಿ ಅಥವಾ ರಾಜ್ಯಗಳ ಗುಂಪಿನಲ್ಲಿ ತಂಡ ಸ್ಥಳೀಯ ಪಾಲುದಾರ ಸಂಘಟನೆಯನ್ನು ಗುರುತಿಸುತ್ತದೆ, ಅದಕ್ಕೆ ಸಾಮಾಜಿಕ ಮತ್ತು ಸ್ವಭಾವ ಬದಲಾವಣೆ ಸಂವಹನ (ಎಸ್.ಬಿ.ಸಿ.ಸಿ.)ಕ್ಕೆ ಸಂಬಂಧಿಸಿದ ಸೂಕ್ತ ಕಾರ್ಯಾನುಭವವಿರಬೇಕು ಮತ್ತು ಪೌಷ್ಟಿಕತೆಗಾಗಿ ಆಹಾರದ ನಕ್ಷೆಯನ್ನು ಅಭಿವೃದ್ಧಿ ಪಡಿಸಬೇಕು.

2019ರ ಸೆಪ್ಟೆಂಬರ್ ಅನ್ನು ಪೋಷಣ್ ಮಾಸವಾಗಿ ಆಚರಣೆ

ಪೋಷಣ್ ಮಾಸವನ್ನು ಈ ವರ್ಷ ಸೆಪ್ಟೆಂಬರ್ ನಲ್ಲಿ ಆಚರಿಸಲಾಯಿತು ಮತ್ತು ಒಂದು ತಿಂಗಳಲ್ಲಿ 36 ದಶಲಕ್ಷ ಪೋಷಣ್ ಸಂಬಂಧಿತ ಚಟುವಟಿಕೆಗಳನ್ನು ದೇಶದಾದ್ಯಂತ ನಡೆಸಲಾಯಿತು.

ಪೋಷಣ ಮಾಸದ ವೇಳೆ 1.3 ದಶಲಕ್ಷ ಅಂಗನವಾಡಿ ಕಾರ್ಯಕರ್ತರು 1.2 ದಶಲಕ್ಷ ಅಂಗನವಾಡಿ ಸಹಾಯಕರು ಮತ್ತು ರಾಜ್ಯ ಏಜೆನ್ಸಿಗಳು 85 ದಶಲಕ್ಷ ಫಲಾನುಭವಿಗಳನ್ನು ತಲುಪಿಸಿದ್ದಾರೆ.

ಪೋಷಣ್ ಅಭಿಯಾನದ ಅಡಿಯಲ್ಲಿ ಹಣ ಹಂಚಿಕೆ ಕಳೆದ ಮೂರು ವರ್ಷಗಳಲ್ಲಿ  2017-18ರಲ್ಲಿದ್ದ 950.00 ಕೋಟಿ ರೂಪಾಯಿಯಿಂದ 2018-19ರಲ್ಲಿ 3061.30 ಕೋಟಿ ರೂಪಾಯಿಗೆ ಮತ್ತು 2019-20ರಲ್ಲಿ 3400.00 ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ.

ಪೋಷಣ್ ಅಭಿಯಾನದ ಅಡಿಯಲ್ಲಿ ಪೌಷ್ಟಿಕ ಆಹಾರ ಪೂರೈಸಲು ಅವಕಾಶವಿಲ್ಲ. ಅಂಗನವಾಡಿ ಸೇವಾ ಯೋಜನೆಯಲ್ಲ ಪೂರಕ ಪೌಷ್ಟಿಕತೆ ಪೂರೈಕೆ ಒಂದು ಭಾಗವಾಗಿದೆ. ಪೋಷಣ್ ಅಭಿಯಾನ ವಿವಿಧ ಪೌಷ್ಟಿಕ ಸಂಬಂಧಿತ ಯೋಜನೆಗಳು/ವಿವಿಧ ಸಚಿವಾಲಯಗಳ ಇದೇ ಮಾದರಿಯ ಮಧ್ಯಸ್ಥಿಕೆಗಳ ಒಗ್ಗೂಡಿಸುವಿಕೆ ಖಚಿತಪಡಿಸುತ್ತದೆ.

ಪೋಷಣ್ ಅಭಿಯಾನದ ಅಡಿಯಲ್ಲಿ 2017-18, 2018-19 ಮತ್ತು ಪ್ರಸಕ್ತ ವರ್ಷ ಬಿಡುಗಡೆಯಾಗಿರುವ ಹಣದ ರಾಜ್ಯವಾರು ವಿವರ ಈ ಕೆಳಕಂಡಂತಿದೆ:

 

 

 

 

ಮೊತ್ತ ರೂ. ಲಕ್ಷಗಳಲ್ಲಿ

ಕ್ರ.ಸಂ.

ರಾಜ್ಯ/ಯುಟಿ

2017 – 18 ವಿತ್ತ ವರ್ಷದಲ್ಲಿ ಬಿಡುಗಡೆಯಾದ್ದು

2018-19 ವಿತ್ತ ವರ್ಷದಲ್ಲಿ ಬಿಡುಗಡೆಯಾದ್ದು

2019-20 ವಿತ್ತ ವರ್ಷದಲ್ಲಿ ಬಿಡುಗಡೆಯಾದ್ದು

1

ಆಂಧ್ರಪ್ರದೇಶ

1284.63

8604.68

5582.52

2

ಬಿಹಾರ

6724.06

15001.67

10000

3

ಛತ್ತೀಸಗಢ

965.45

9629.51

0

4

ದೆಹಲಿ

945.95

2206.88

0

5

ಗೋವಾ

238.07

197.78

0

6

ಗುಜರಾತ್

3036.66

11228.04

7531

7

ಹರಿಯಾಣ

400.97

5992.46

0

8

ಹಿಮಾಚಲ ಪ್ರದೇಶ

1557.26

4153.15

2480

9

ಜಮ್ಮು ಮತ್ತು ಕಾಶ್ಮೀರ

388.59

8343.52

0

10

ಜಾರ್ಖಂಡ್

1555.35

5110.45

0

11

ಕರ್ನಾಟಕ

3351.05

9870.89

0

12

ಕೇರಳ

1273.37

6491.91

0

13

ಮಧ್ಯಪ್ರದೇಶ

3441.49

15894.17

17883

14

ಮಹಾರಾಷ್ಟ್ರ

2572.31

20989.28

33061.47

15

ಒಡಿಶಾ

4600.46

10571.65

0

16

ಪುದುಚೇರಿ

39.24

393.7

497

17

ಪಂಜಾಬ್

819.51

6090.33

0

18

ರಾಜಾಸ್ಥಾನ

2045.73

9680.99

0

19

ತಮಿಳುನಾಡು

1340.51

12210.93

0

20

ತೆಲಂಗಾಣ

1736.94

8595.7

7003

21

ಉತ್ತರ ಪ್ರದೇಶ

8440.6

29582.87

0

22

ಉತ್ತರಖಂಡ್

1866.25

4301.57

3696

23

ಪಶ್ಚಿಮ ಬಂಗಾಳ

5545.27

19294.11

0

24

ಅರುಣಾಚಲ ಪ್ರದೇಶ

52.93

2663.35

0

25

ಅಸ್ಸಾಂ

2298.27

15492.36

14171

26

ಮಣಿಪುರ

340.46

3865.37

0

27

ಮೇಘಾಲಯ

462.98

1713.27

1706.8

28

ಮಿಜೋರಾಂ

119.38

957.65

902

29

ನಾಗಾಲ್ಯಾಂಡ್

163.74

1251.97

1445.17

30

ಸಿಕ್ಕಿಂ

98.59

328.47

544

31

ತ್ರಿಪುರ

277.91

3695.72

0

32

ಅಂಡಮಾನ್ ಮತ್ತು ನಿಕೋಬಾರ್

100.22

416.89

307.62

33

ಚಂಡೀಗಢ

158.88

306.82

526.97

34

ದಾದ್ರಾ ಮತ್ತು ನಗರ್ ಹವೇಲಿ

108.83

129.32

431.16

35

ಡಮನ್ ಮತ್ತು ಡಿಯು

42.06

197.66

446.98

36

ಲಡಾಖ್

-

-

-

37

ಲಕ್ಷದ್ವೀಪ

60

138.9

126.75

 

ಒಟ್ಟು

58453.97

255593.98

108342.44

 

ಪೋಷಣ್ ಅಭಿಯಾನದ ಡ್ಯಾಷ್ ಬೋರ್ಡ್ ಮತ್ತು ತಂತ್ರಾಂಶ

ಪೋಷಣ್ ಅಭಿಯಾನ  ಅಂಗನವಾಡಿನ ಮುಂಚೂಣಿಯ ಕಾರ್ಯಕರ್ತರು ಮತ್ತು ಮಹಿಳಾ ಮೇಲ್ವಿಚಾರಕರಿಗೆ ಸ್ಮಾರ್ಟ್ ಫೋನ್ ಒದಗಿಸುವ ಮೂಲಕ ಸಬಲೀಕರಿಸುತ್ತದೆ. ಐಸಿಡಿಎಸ್  ಕಾಮನ್ ಅಪ್ಲಿಕೇಷನ್ ತಂತ್ರಾಂಶವನ್ನು ಪೋಷಣ್ ಅಭಿಯಾನದ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಇದು ದತ್ತಾಂಶ ಪಡೆಯಲು ಅವಕಾಶ ನೀಡುತ್ತದೆ, ನಿಯೋಜಿತ ಸೇವೆಗಳ ಪೂರೈಕೆಯ ಖಾತ್ರಿ ಮತ್ತು ಅಗತ್ಯವಿರುವೆಡೆ ಮಧ್ಯಸ್ಥಿತಿಕೆ ಉತ್ತೇಜಿಸುತ್ತದೆ.

ಈ ದತ್ತಾಂಶ/ ಮಾಹಿತಿಯನ್ನು ನಂತರ ವೆಬ್ ಆಧಾರಿತ ಐಸಿಡಿಎಸ್-ಸಿಎಎಸ್ ಡ್ಯಾಶ್‌ಬೋರ್ಡ್‌ನಲ್ಲಿ ನೈಜ ಸಮಯದ ಆಧಾರದ ಮೇಲೆಮೇಲ್ವಿಚಾರಣೆಗಾಗಿಬ್ಲಾಕ್ಜಿಲ್ಲಾರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಮೇಲ್ವಿಚಾರಣಾ ಸಿಬ್ಬಂದಿಗಾಗಿಅವರ ಕಡೆಯಿಂದ ನಿರ್ಧಾರ ತೆಗೆದುಕೊಳ್ಳಲು ಲಭ್ಯವಾಗುತ್ತದೆ. ಡ್ಯಾಷ್ ಬೋರ್ಡ್ ದತ್ತಾಂಶವನ್ನು ಪ್ರದರ್ಶಿಸುತ್ತದೆ ಮತ್ತು ಸೇವಾ ವಿತರಣೆಯನ್ನು ಸುಧಾರಿಸಲು ಮಾಹಿತಿಯನ್ನು ವ್ಯಾಖ್ಯಾನಿಸಿ ಮತ್ತು ಬಳಸಲು ಆಡಳಿತಾತ್ಮಕ ಅಧಿಕಾರಿಗಳಿಗೆ ವಿವಿಧ ಕಾರ್ಯಕ್ರಮಗಳ ವರದಿ ಒದಗಿಸುತ್ತದೆ. 31.10.2019ರವರೆಗೆ ಒಟ್ಟು 5.10 ಲಕ್ಷ ಸಂಖ್ಯೆಯ ಅಂಗನವಾಡಿ ಕಾರ್ಯಕರ್ತರಿಗೆ ತರಬೇತಿ ನೀಡಲಾಗಿದ್ದು, 26 ರಾಜ್ಯಗಳು/ಯುಟಿಗಳು ಐಸಿಡಿಎಸ್ –ಸಿಎಎಸ್ ಅಪ್ಲಿಕೇಷನ್ ಬಳಸುತ್ತಿವೆ. ವಿವರ ಈ ಕೆಳಕಂಡಂತಿದೆ:

(31.10.2019ರಲ್ಲಿದ್ದಂತೆ)

 

ಕ್ರ.ಸಂ.

ರಾಜ್ಯ/ಯುಟಿಗಳು

ಐಸಿಡಿಎಸ್ –ಸಿಎಎಸ್ ಅಪ್ಲಿಕೇಷನ್ ಆರಂಭಿಸಿರುವ ಅಂಗನವಾಡಿ ಕೇಂದ್ರಗಳು

1

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು 

713

2

ಆಂಧ್ರಪ್ರದೇಶ 

55582

3

ಅಸ್ಸಾಂ

681

4

ಬಿಹಾರ

49168

5

ಚಂಡೀಗಢ

450

6

ಛತ್ತೀಸ್ ಗಢ

10473

7

ದಾದ್ರಾ ಮತ್ತು ನಗರ್ ಹವೇಲಿ 

303

8

ಡಮನ್ ಮತ್ತು ಡಿಯು 

102

9

ದೆಹಲಿ

4118

10

ಗೋವಾ

770

11

ಗುಜರಾತ್

52801

12

ಹಿಮಾಚಲ ಪ್ರದೇಶ 

18860

13

ಜಾರ್ಖಂಡ್

11090

14

ಕೇರಳ

8614

15

ಮಧ್ಯಪ್ರದೇಶ 

27810

16

ಮಹಾರಾಷ್ಟ್ರ

109586

17

ಮೇಘಾಲಯ

5776

18

ಮಿಜೋರಾಂ

2244

19

ನಾಗಾಲ್ಯಾಂಡ್

3595

20

ಪುದುಚೇರಿ

848

21

ರಾಜಾಸ್ಥಾನ

20559

22

ಸಿಕ್ಕಿಂ

821

23

ತಮಿಳುನಾಡು 

54397

24

ತೆಲಂಗಾಣ

11157

25

ಉತ್ತರ ಪ್ರದೇಶ 

51759

26

ಉತ್ತರಾಖಂಡ್

8140

 

ಒಟ್ಟು

5,10,417

 

2017-18ರಿಂದ ಪ್ರಾರಂಭವಾಗುವ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ನಿಗದಿಯ ಗುರಿಯಡಿಯಲ್ಲಿ ಮಕ್ಕಳ (0-6 ವರ್ಷಗಳು) ಮತ್ತು ಗರ್ಭಿಣಿ ಮಹಿಳೆಯರ ಮತ್ತು ಹಾಲುಣಿಸುವ ತಾಯಂದಿರ (ಪಿಡಬ್ಲ್ಯೂ ಮತ್ತು ಎಲ್ಎಂ) ಪೌಷ್ಟಿಕಾಂಶದ ಸ್ಥಿತಿಯನ್ನು ನಿಗದಿತ ಕಾಲಮಿತಿ ಮಾದರಿಯಲ್ಲಿ ಸುಧಾರಿಸುವುದು ಪೋಷಣ್ ಅಭಿಯಾನದ ಗುರಿಯಾಗಿದೆ:

 

ಕ್ರ.ಸಂ

ಉದ್ದೇಶ

ಗುರಿ

1.

ಮಕ್ಕಳ ಬೆಳವಣಿಗೆ ಕುಂಠಿತಗೊಳ್ಳುವುದನ್ನು ತಡೆಯಿರಿ ಮತ್ತು ತಗ್ಗಿಸಿ (0- 6 ವರ್ಷಗಳು)

ಶೇ. 6ರಷ್ಟು @ 2% ವಾರ್ಷಿಕ.

2.

ಮಕ್ಕಳಲ್ಲಿ (0-6 ವರ್ಷಗಳು) ಕಡಿಮೆ ಪೌಷ್ಟಿಕತೆಯನ್ನು (ಕಡಿಮೆ ತೂಕ) ತಡೆಯಿರಿ ಮತ್ತು ತಗ್ಗಿಸಿ

ಶೇ 6ರಷ್ಟು @ ಶೇ.2ವಾರ್ಷಿಕ.

3.

ಚಿಕ್ಕ ಮಕ್ಕಳಲ್ಲಿ ರಕ್ತಹೀನತೆಯ ಇರುವಿಕೆಯನ್ನು ತಗ್ಗಿಸಿ (6-59 ತಿಂಗಳುಗಳು)

ಶೇ. 9ರಷ್ಟು @ ಶೇ.ವಾರ್ಷಿಕ

4.

15-49 ವರ್ಷ ವಯಸ್ಸಿನ ಮಹಿಳೆಯರು ಮತ್ತು ಹದಿಹರೆಯದ ಹುಡುಗಿಯರಲ್ಲಿ ರಕ್ತಹೀನತೆಯ ಇರುವಿಕೆಯನ್ನು ತಗ್ಗಿಸಿ.

ಶೇ. 9ರಷ್ಟು @ ಶೇ.ವಾರ್ಷಿಕ.

5.

ಕಡಿಮೆ ತೂಕದ ಮಕ್ಕಳ ಜನನ ತಗ್ಗಿಸಿ (ಎಲ್.ಬಿ.ಡಬ್ಲ್ಯು)

ಶೇ. 6ರಷ್ಟು @ ಶೇ.ವಾರ್ಷಿಕ.

 

ಮೇಲಿನ ಗುರಿಗಳನ್ನು ಸಾಧಿಸಲುಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಎಲ್ಲಾ ಪೌಷ್ಟಿಕಾಂಶ ಸಂಬಂಧಿತ ಯೋಜನೆಗಳನ್ನು ಉದ್ದೇಶಿತ ಜನಸಂಖ್ಯೆಯ ಮೇಲೆ ಒಗ್ಗೂಡಿಸುವುದನ್ನು ಪೋಶಣ್ ಅಭಿಯಾನ ಖಚಿತಪಡಿಸುತ್ತದೆ. ಇದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಂಗನವಾಡಿ ಸೇವೆಗಳುಪ್ರಧಾನ ಮಂತ್ರಿ ಮಾತೃ ವಂದನ ಯೋಜನೆಹದಿಹರೆಯದ ಬಾಲಕಿಯರ ಯೋಜನೆಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜನನಿ ಸುರಕ್ಷಾ ಯೋಜನೆ (ಜೆಎಸ್‌ವೈ)ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ) ; ಜಲಶಕ್ತಿ ಸಚಿವಾಲಯದ ಸ್ವಚ್ಛ ಭಾರತ್ ಅಭಿಯಾನಗ್ರಾಹಕ ವ್ಯವಹಾರಗಳುಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್)ಗ್ರಾಮೀಣಾಭಿವೃದ್ಧಿ ಸಚಿವಾಲಯದ (ಎಂಒಆರ್‌ಡಿ) ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಜಿಎನ್‌ಆರ್‌ಇಜಿಎಸ್) ; ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಪಂಚಾಯತಿ ರಾಜ್ ಸಚಿವಾಲಯಬುಡಕಟ್ಟು ವ್ಯವಹಾರಗಳ ಸಚಿವಾಲಯ ಮತ್ತು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಗಳ ಇತರ ಕಾರ್ಯಕ್ರಮದ ಮಧ್ಯಸ್ಥಿಕೆಗಳನ್ನು ಒಗ್ಗೂಡಿಸುತ್ತದೆ. ಈ ನಿಟ್ಟಿನಲ್ಲಿ ಒಗ್ಗೂಡಿಸುವ ಕ್ರಿಯಾ ಯೋಜನೆ ಮಾರ್ಗಸೂಚಿಗಳನ್ನು ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಮತ್ತು ಈ ನಿಟ್ಟಿನ ಸಚಿವಾಲಯಗಳಿಗೆ ನೀಡಲಾಗಿದೆ.

ಪೋಷಣ ಅಭಿಯಾನದ ಮೂರು ವರ್ಷಗಳ ಅವಧಿಯ ಅನುಮೋದಿತ ಬಜೆಟ್ ರೂ.9046 ಕೋಟಿ. 2019-20ರಲ್ಲಿ 3400 ಕೋಟಿ ರೂಪಾಯಿಗಳ ಹಣವನ್ನು ಪೋಷಣ ಅಭಿಯಾನಕ್ಕೆ ಹಂಚಿಕೆ ಮಾಡಲಾಗಿದೆ.

ಪೋಷಣ್ ಗೀತೆ

ಭಾರತದ ಉಪ ರಾಷ್ಟ್ರಪತಿ, ಎಂ. ವೆಂಕಯ್ಯ ನಾಯ್ಡು ಅವರು ಪೋಷಣ್ ಗೀತೆಯನ್ನು 2019ರ ಡಿಸೆಂಬರ್ 3ರಂದು ಉದ್ಘಾಟಿಸಿದರು.  ಪೋಷಣ್ ಗೀತೆಯ ಉದ್ದೇಶ ಅಪೌಷ್ಟಿಕತೆಯ ವಿರುದ್ಧದ ಹೋರಾಟದ ಚಳವಳಿಯಲ್ಲಿ ಸೇರುವಂತೆ ಜನರನ್ನು ಪ್ರೇರೇಪಿಸುವುದಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಉಪ ರಾಷ್ಟ್ರಪತಿ ಅವರು ಪೋಷಣ್ ಗೀತೆಯ ಗೀತ ರಚನೆಕಾರರು ಮತ್ತು ಸಂಗೀತ ಸಂಯೋಜಕ ಮತ್ತು ಗಾಯಕ ಪ್ರಸೂನ್ ಜೋಶಿ ಮತ್ತು ಶಂಕರ್ ಮಹಾದೇವನ್ ಅವರಿಗೆ ಅಭಿನಂದನೆ ಸಲ್ಲಿಸಿದರು ಮತ್ತು ಈ ಗೀತೆಯ ಮೂಲಕ ಪೌಷ್ಟಿಕತೆಯ ಸಂದೇಶ ದೇಶದ ಮೂಲೆ ಮೂಲೆಯನ್ನೂ ತಲುಪುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಪೌಷ್ಟಿಕತೆಯ ಸಂದೇಶವನ್ನು ಭಾರತದ ಎಲ್ಲ ಜನರಿಗೆ ತಲುಪಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ನಾವಿನ್ಯಪೂರ್ಣ ಸಾಧನಗಳನ್ನು ಬಳಸಿಕೊಂಡು ಮಾಡುತ್ತಿರುವ ಪ್ರಯತ್ನವನ್ನು ಶ್ಲಾಘಿಸಿದರು. ಸಾಧ್ಯವಾದಷ್ಟು ಹಲವು ಪ್ರಾದೇಶಿಕ ಭಾಷೆಗಳಲ್ಲಿ ಈ ಗೀತೆಯನ್ನು ಹಾಡಿದರೆ ಇದು ಜನರ ಗೀತೆಯಾಗುತ್ತದೆ ಎಂದು ಉಪ ರಾಷ್ಟ್ರಪತಿಯವರು ತಿಳಿಸಿದರು. ಎಲ್ಲಾ ಶಾಸಕರುಆಡಳಿತಗಾರರುನಾಗರಿಕ ಸಮಾಜ ಕಾರ್ಯಕರ್ತರು ಮತ್ತು ನಾಗರಿಕರು ದೇಶದ ಎಲ್ಲ ಮಕ್ಕಳು ಸಾಧ್ಯವಾದಷ್ಟು ಉತ್ತಮವಾದ ಬಾಲ್ಯವನ್ನು ಪಡೆಯುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ತಿಳಿಸಿದರು. 1.3 ದಶಲಕ್ಷ ಅಂಗನವಾಡಿ ಕಾರ್ಯಕರ್ತರು ಪೌಷ್ಟಿಕತೆಯ ಯೋಧರಾಗಿದ್ದು ಅಪೌಷ್ಟಿಕತೆಯ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ತಿಳಿಸಿದರು. ಈ ಹಾಡು ಒಂದು ಗೀತೆಯಾಗಿ ಭಾರತವನ್ನು 2022ರ ಹೊತ್ತಿಗೆ ಅಪೌಷ್ಟಿಕತೆ ಮುಕ್ತವಾಗಿ ಪರಿವರ್ತಿಸುವಲ್ಲಿ ಪೌಷ್ಟಿಕತೆಯ ಕ್ರಾಂತಿಗೆ ನಾಂದಿ ಹಾಡಲಿ ಎಂದರು.

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ)

ಪೋಕ್ಸೋ ಕಾಯಿದೆ 2012ರ ಸೆಕ್ಷನ್ 28 ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯಗಳ ಸ್ಥಾಪನೆಗೆ ಅವಕಾಶ ನೀಡುತ್ತದೆ. ಪೋಕ್ಸೋ ಕಾಯಿದೆಯ ಸೆಕ್ಷನ್ 35 ವಿಶೇಷ ನ್ಯಾಯಾಲಯವು ಪ್ರಕರಣದಲ್ಲಿ ಅಪರಾಧದ ಸಾಂಜ್ಞೆಯತೆಯನ್ನು ತೆಗೆದುಕೊಂಡ 30 ದಿನಗಳ ಒಳಗಾಗಿ ಮಗುವಿನ ಸಾಕ್ಷ್ಯವನ್ನು ದಾಖಲಿಸಲು ಅವಕಾಶ ಒದಗಿಸುತ್ತದೆ, ಮತ್ತು ವಿಳಂಬವೇನಾದರೂ ಇದ್ದಲ್ಲಿ ಅದಕ್ಕೆ ಕಾರಣವನ್ನೂ ವಿಶೇಷ ನ್ಯಾಯಲಯ ದಾಖಲಿಸುತ್ತದೆ. ಅಲ್ಲದೆ ಸೆಕ್ಷನ್ 35 ವಿಶೇಷ ನ್ಯಾಯಾಲಯ ವಿಚಾರಣೆಯನ್ನು ಅಪರಾಧದ ಸಾಂಜ್ಞೆಯತೆಯನ್ನು ಪರಿಗಣಿಸಿದ ದಿನದಿಂದ ಸಾಧ್ಯವಾದಷ್ಟೂ ಒಂದು ವರ್ಷದ ಒಳಗಾಗಿ ಪೂರ್ಣಗೊಳಿಸುವಂತೆ ಸೂಚಿಸುತ್ತದೆ.

ಶೀಘ್ರ ನ್ಯಾಯದಾನದ ಖಾತ್ರಿಗಾಗಿ ಭಾರತ ಸರ್ಕಾರ ಈ ಕೆಳಕಂಡ ಕ್ರಮಗಳನ್ನು ಕೈಗೊಂಡಿದೆ:

ಅಪರಾಧ ಕಾನೂನು (ತಿದ್ದುಪಡಿ) ಕಾಯ್ದೆ 2018 ರ ಅನುಸಾರವಾಗಿ, ಕೇಂದ್ರ ಪ್ರಾಯೋಜಿತ ಯೋಜನೆಯಂತೆ ಕಾಲಮಿತಿಯೊಳಗೆ ಅತ್ಯಾಚಾರ ಮತ್ತು ಪೋಕ್ಸೋ ಕಾಯಿದೆ 2012ಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ಪ್ರಕರಣಗಳ ಶೀಘ್ರ ಇತ್ಯರ್ಥ ಮತ್ತು ವಿಲೇವಾರಿಗಾಗಿ ದೇಶಾದ್ಯಂತ ಒಟ್ಟು 1023 ತ್ವರಿತ  ವಿಶೇಷ ನ್ಯಾಯಾಲಯಗಳನ್ನು (ಎಫ್‌ಟಿಎಸ್‌ಸಿ) ಸ್ಥಾಪಿಸಲು ಸರ್ಕಾರ ಯೋಜನೆಯನ್ನು ಆಖೈರುಗೊಳಿಸಿದೆ. ಈ ಯೋಜನೆ ಒಂದು ವರ್ಷದ್ದಾಗಿದ್ದು, 2019-2020 ಮತ್ತು 2020-21 ಎರಡು ವರ್ಷಗಳಲ್ಲಿ ವಿಸ್ತರಿಸಿದೆ.

ಅಪರಾಧ ಕಾನೂನು (ತಿದ್ದುಪಡಿ)ಕಾಯಿದೆ 2013ನ್ನು ಲೈಂಗಿಕ ಅಪರಾಧಗಳನ್ನು ಪರಿಣಾಮಕಾರಿ ತಡೆಗಟ್ಟುವ ಸಲುವಾಗಿ ರೂಪಿಸಲಾಗಿದೆ. ಅಪರಾಧ ಕಾನೂನು (ತಿದ್ದುಪಡಿ) ಕಾಯಿದೆ 2018ನ್ನು 12 ವರ್ಷದೊಳಗಿನ ಬಾಲಕಿಯರ ಮೇಲೆ ಅತ್ಯಾಚಾರ ಮಾಡುವವರಿಗೆ ಮರಣದಂಡನೆ ಸೇರಿದಂತೆ ಕಠಿಣ ಶಿಕ್ಷೆ ನೀಡಲು ವ್ಯಾಖ್ಯಾನಿಸಿ  ಜಾರಿ ಮಾಡಲಾಗಿದೆ.  ತಲಾ 2 ತಿಂಗಳೊಳಗೆ ತನಿಖೆ ಮತ್ತು ವಿಚಾರಣೆಗಳನ್ನು ಪೂರ್ಣಗೊಳಿಸಲು ಈ ಕಾಯಿದೆಯು ಆದೇಶಿಸುತ್ತದೆ.

ದೇಶಾದ್ಯಂತ ಲೈಂಗಿಕ ಅಪರಾಧಿಗಳನ್ನು ಪತ್ತೆ ಮಾಡಲು ಮತ್ತು ತನಿಖೆಗೆ ಅವಕಾಶ ಕಲ್ಪಿಸಲು ಕಾನೂನು ಜಾರಿ ಸಂಸ್ಥೆಯಿಂದ ಲೈಂಗಿಕ ಅಪರಾಧಿಗಳ ರಾಷ್ಟ್ರೀಯ ದತ್ತಾಂಶವನ್ನು 2018ರ ಸೆಪ್ಟೆಂಬರ್ ನಲ್ಲಿ ಆರಂಭಿಸಲಾಗಿದೆ.

ಅಪರಾಧ ಕಾನೂನು (ತಿದ್ದುಪಡಿ) ಕಾಯ್ದೆ2018 ರ ರೀತ್ಯ ಲೈಂಗಿಕ ದೌರ್ಜನ್ಯ ಪ್ರಕರಣಗಳ ಬಗ್ಗೆ ಕಾಲಮಿತಿಯೊಳಗೆ ತನಿಖೆಯ ಮೇಲ್ವಿಚಾರಣೆ ಮಾಡಲು ಮತ್ತು ಪತ್ತೆಹಚ್ಚಲು 19.02.2019 ರಂದು ಲೈಂಗಿಕ ಅಪರಾಧಗಳಿಗಾಗಿ ತನಿಖಾ ಶೋಧ ವ್ಯವಸ್ಥೆ” ಎಂಬ ಆನ್‌ಲೈನ್ ವಿಶ್ಲೇಷಣಾತ್ಮಕ ಸಾಧನವನ್ನು ಪ್ರಾರಂಭಿಸಲಾಗಿದೆ.

ತನಿಖೆಯಲ್ಲಿ ಸುಧಾರಣೆ ತರುವಾಗ ಸಲುವಾಗಿ, ಕೇಂದ್ರೀಯ ಡಿಎನ್ಎ ವಿಶ್ಲೇಷಣಾ ಘಟಕಗಳು ಮತ್ತು ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯಗಳನ್ನು ಬಲಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ ಚಂಡೀಗಢದಲ್ಲಿನ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಅತ್ಯಾಧುನಿಕ ಡಿಎನ್ಎ ವಿಶ್ಲೇಷಣಾ ಘಟಕ ಸ್ಥಾಪಿಸುವುದೂ ಸೇರಿದೆ.

ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ವಿಧಿವಿಜ್ಞಾನ ಸಾಕ್ಷ್ಯಗಳನ್ನು ಸಂಗ್ರಹಿಸಲು ಮತ್ತು ಲೈಂಗಿಕ ದೌರ್ಜನ್ಯ ಸಾಕ್ಷ್ಯ ಸಂಗ್ರಹಣಾ ಕಿಟ್ ನಲ್ಲಿ ಪ್ರಮಾಣಿತ ಸಂಯೋಜನೆಗಾಗಿ ಮಾರ್ಗಸೂಚಿಗಳನ್ನು ತಿಳಿಸಲಾಗಿದೆ. ಒಟ್ಟು 6023 ಅಧಿಕಾರಿಗಳಿಗೆ ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಶಾಖೆ  (ಬಿಪಿಆರ್ ಮತ್ತು ಡಿ) ಮತ್ತು ಲೋಕ ನಾಯಕ ಜಯಪ್ರಕಾಶ್ ನಾರಾಯಣ್ ರಾಷ್ಟ್ರೀಯ ಅಪರಾಧಶಾಸ್ತ್ರ ಮತ್ತು ವಿಧಿ ವಿಜ್ಞಾನ ಸಂಸ್ಥೆಯಲ್ಲಿ ತರಬೇತಿ ನೀಡಲಾಗಿದೆ. ಬಿಪಿಆರ್ ಮತ್ತು ಡಿ 3,120 ಲೈಂಗಿಕ ದೌರ್ಜನ್ಯ ಸಾಕ್ಷ್ಯ ಸಂಗ್ರಹಣಾ ಕಿಟ್ ಗಳನ್ನು ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳ ಆಡಳಿತಕ್ಕೆ ತರಬೇತಿಯ ಭಾಗವಾಗಿ ವಿತರಿಸಿದೆ.

ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧ ತಡೆಯಲು ಸೈಬರ್ ಅಪರಾಧ ತಡೆ ಹೆಸರಿನ ಯೋಜನೆಯನ್ನು (ಸಿಸಿಪಿಡಬ್ಲ್ಯುಸಿ) ಅನುಮೋದಿಸಲಾಗಿದ್ದು, ಇದರಡಿ ಮಕ್ಕಳ ಅಶ್ಲೀಲ ಚಿತ್ರಗಳು/ಮಕ್ಕಳ ಲೈಂಗಿಕ ನಿಂದನೆಯ ಸಾಮಗ್ರಿ, ಅತ್ಯಾಚಾರ/ಸಾಮೂಹಿಕ ಅತ್ಯಾಚಾರದ ಕಲ್ಪನೆಗಳು ಅಥವಾ ಲೈಂಗಿಕವಾಗಿ ಶೋಷಣೆ ಮಾಡಲುವ ಸ್ಪಷ್ಟ ವಿಚಾರಗಳ ಕುರಿತಂತೆ ವರದಿ ಮಾಡಲು  ಸಾರ್ವಜನಿಕರಿಗೆ ಅನುಕೂಲವಾಗುವಂತೆ  ಒಂದು ಆನ್ ಲೈನ್ ಸೈಬರ್ ಅಪರಾಧ ವರದಿ ಪೋರ್ಟಲ್ (www.cybercrime.gov.inಅನ್ನು 2018ರ ಸೆಪ್ಟೆಂಬರ್ 20ರಂದು ಆರಂಭಿಸಲಾಗಿದೆ.

ಮಹಿಳಾ ಸಬಲೀಕರಣ ಮತ್ತು ರಕ್ಷಣೆ

ಹಿಂಸೆ ಮತ್ತು ತಾರತಮ್ಯ ಮುಕ್ತ ವಾತಾವರಣದಲ್ಲಿ ಘನತೆಯಿಂದ ಬದುಕುವ ಮತ್ತು ಅಭಿವೃದ್ಧಿಯಲ್ಲಿ ಸಮಾನ ಪಾಲುದಾರರಾಗಿ ಕೊಡುಗೆ ನೀಡುವ ಮಹಿಳೆಯರ ಸಬಲೀಕರಣಮತ್ತುಸುರಕ್ಷಿತ ಮತ್ತು ರಕ್ಷಣಾತ್ಮಕ ವಾತಾವರಣದಲ್ಲಿ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಸಂಪೂರ್ಣ ಅವಕಾಶಗಳನ್ನು ಹೊಂದಿರುವ ಮಕ್ಕಳ ಉತ್ತಮ ಪೋಷಣೆ.

ಪರ್ಯಾಯ ನೀತಿಗಳು ಮತ್ತು ಕಾರ್ಯಕ್ರಮ ಮೂಲಕ ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣ ಉತ್ತೇಜಿಸಲು, ಲಿಂಗ ಕಾಳಜಿಯನ್ನು ಮುಖ್ಯವಾಹಿನಿಗೆ ತರಲುಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅವರ ಮಾನವ ಹಕ್ಕುಗಳನ್ನು ಅರಿತುಕೊಳ್ಳಲು ಮತ್ತು ಅವರ ಪೂರ್ಣ ಸಾಮರ್ಥ್ಯಕ್ಕೆ ಅಭಿವೃದ್ಧಿ ಹೊಂದಲು ಸಾಂಸ್ಥಿಕ ಮತ್ತು ಶಾಸಕಾಂಗ ಬೆಂಬಲವನ್ನು ಒದಗಿಸುವುದು.

ದೇಶದಾದ್ಯಂತ ರಾಜ್ಯಗಳಲ್ಲಿನ ಎಎಚ್.ಟಿ.ಯುಗಳು ಮತ್ತು ಡಬ್ಲ್ಯುಎಚ್ ಡಿಗಳ ಬಲವರ್ಧನೆ

ಮಾನವ ಕಳ್ಳಸಾಗಣೆಯ ಸಂತ್ರಸ್ತ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಸುರಕ್ಷತೆ ಮತ್ತು ಭದ್ರತೆಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಅಧ್ಯಕ್ಷತೆಯ ನಿರ್ಭಯ ಚೌಕಟ್ಟಿನಡಿ ಅಧಿಕಾಯುಕ್ತ ಸಮಿತಿ (ಇಸಿ)ಯು ಮಾನವ ಕಳ್ಳಸಾಗಣೆ ನಿಗ್ರಹ ಘಟಕಗಳನ್ನು (ಎಎಚ್.ಟಿ.ಯು.ಗಳು) 100 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಲು ಶಿಫಾರಸು ಮಾಡಿದೆ.

ಗೃಹ ವ್ಯವಹಾರಗಳ ಸಚಿವಾಲಯದ ಪ್ರಸ್ತಾವನೆಯ ಪ್ರಕಾರ ಈ ಎಎಚ್‌ಟಿಯುಗಳ ಸ್ಥಾಪನೆಗೆ ಶೇ.100ರಷ್ಟು ವೆಚ್ಚವನ್ನು ನಿರ್ಭಯಾ ನಿಧಿಯಡಿ ಕೇಂದ್ರ ಸರ್ಕಾರವು ಭರಿಸಲು ಶಿಫಾರಸು ಮಾಡಿದೆ. ಈ ಎಎಚ್‌ಟಿಯುಗಳ ಮೂಲಕ ಮಾನಸಿಕ-ಸಾಮಾಜಿಕ ಸಮಾಲೋಚನೆ ಮತ್ತು ಕಾನೂನು ಸಮಾಲೋಚನೆ ಮತ್ತು ನೆರವು ಫಲಾನುಭವಿಗಳಿಗೆ ಲಭ್ಯವಾಗುವಂತೆ ಇಸಿ ಸೂಚಿಸಿದೆ.

ಇಸಿ ನಿರ್ಭಯಾ ನಿಧಿಯಡಿ ಕೇಂದ್ರದಿಂದ ಶೇ.100ರ ಆರ್ಥಿಕ ನೆರವಿನಿಂದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಠಾಣೆಗಳಲ್ಲಿ ಮಹಿಳಾ ನೆರವಿನ ಕಟ್ಟೆ (ಡಬ್ಲ್ಯುಎಚ್.ಡಿ.ಗಳು)ಗಳನ್ನು 100 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಲು ಸಹ ಶಿಫಾರಸು ಮಾಡಿದೆ. ಡಬ್ಲ್ಯುಎಚ್.ಡಿ. ಮಹಿಳೆಯರ ಕುಂದುಕೊರತೆಗಳನ್ನು ಪೊಲೀಸ್ ವ್ಯವಸ್ಥೆ ಮತ್ತು  ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧದ ಮೇಲೆ ಕೇಂದ್ರೀಕರಿಸುವ  ಪೊಲೀಸರ ಸುಧಾರಿತ ಸಮುದಾಯ ಸಂವಹನಕ್ಕಾಗಿ ವೇಗವರ್ಧಕಗಳ ಮೂಲಕ ನಿವಾರಿಸುವ ಲಿಂಗ ಸಂವೇದನೆಯ ಕಟ್ಟೆಗಳಾಗಿವೆ. ಈ ಕಟ್ಟೆಗಳು ತೊಂದರೆಗೀಡಾದ ಮಹಿಳೆಯರು ಮತ್ತು ಬಾಲಕಿಯರು ಯಾವುದೇ ಹಿಂಜರಿಕೆ ಮತ್ತು ಭಯವಿಲ್ಲದೆ ಪೊಲೀಸ್ ಠಾಣೆಗಳನ್ನು ಸಂಪರ್ಕಿಸಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು ಸಹಾಯ ಮಾಡುತ್ತವೆ.

ಈ ಡಬ್ಲ್ಯುಎಚ್.ಡಿ.ಗಳಲ್ಲಿ ಸಾಧ್ಯವಾದಷ್ಟು ಹೆಡ್ ಕಾನ್ಸ್ ಟೆಬಲ್ ಗಿಂತ ಕಡಿಮೆ ಇಲ್ಲದ ಶ್ರೇಣಿಯ ಮಹಿಳಾ ಪೊಲೀಸ್ ಅಧಿಕಾರಿಗಳೇ ಮುಖ್ಯಸ್ಥರಾಗಿರಬೇಕು ಎಂದು ಇಸಿ ಸಲಹೆ ಮಾಡಿದೆ, ಮತ್ತು ಮೇಲಾಗಿ ಮಹಿಳಾ ಅಧಿಕಾರಿ ಜೆಎಸ್.ಐ ಅಥವಾ ಎಎಸ್.ಐ. ದರ್ಜೆಗಿಂತ ಕೆಳಗಿರಬಾರದು ಎಂದು ಹೇಳಿದೆ. ಮಿಗಿಲಾಗಿ ಡಬ್ಲ್ಯು ಎಚ್.ಡಿಯಲ್ಲಿ ಕರ್ತವ್ಯ ನಿರ್ವಹಿಸುವ ಅಥವಾ ಅದರೊಂದಿಗೆ ಸಂಪರ್ಕ ಹೊಂದಿರುವ ಮಹಿಳಾ ಮತ್ತು ಪುರುಷ ಅಧಿಕಾರಿಗಳಿಗೆ ತರಬೇತಿ, ಸಂವೇದಾನಾತ್ಮಕತೆ, ಪ್ರೇರಣೆ ನೀಡುವ ಕಾರ್ಯವನ್ನೂ ಕೈಗೆತ್ತಿಕೊಳ್ಳಲು ತಿಳಿಸಿದೆ.

ಪ್ರಸ್ತುತ ಡಬ್ಲ್ಯು ಎಚ್.ಡಿ.ಗಳನ್ನು 10 ಸಾವಿರ ಪೊಲೀಸ್ ಠಾಣೆಗೆ ಅನುಮೋದಿಸಲಾಗಿದೆ. ಆದಾಗ್ಯೂ, ದೇಶದಲ್ಲಿರುವ ಎಲ್ಲ ಪೊಲೀಸ್ ಠಾಣೆಗಳಿಗೂ ಈಸೌಲಭ್ಯವನ್ನು ಹಂತಹಂತವಾಗಿ ಅಥವಾ ನಿಗದಿತ ಸಮಯದಲ್ಲಿ ವಿಸ್ತರಿಸುವಂತೆ ಇಸಿ ಸಲಹೆ ಮಾಡಿದೆ.

ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ

ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ ಒಂದು ಕೋಟಿ ಫಲಾನುಭವಿಗಳನ್ನು ತಲುಪಿದೆ.

ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ (ಪಿಎಂಎಂವಿವೈ) ಗರ್ಭಿಣಿ ಮಹಿಳೆಯರು ಮತ್ತು ಹಾಲುಣಿಸುವ ತಾಯಂದಿರಿಗಾಗಿ ರೂಪಿಸಿದ ಸರ್ಕಾರದ ಒಂದು ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಒಂದು ಕೋಟಿ ಫಲಾನುಭವಿಗಳನ್ನು ದಾಟುವ ಮೂಲಕ ಗಣನೀಯ ಸಾಧನೆ ಮಾಡಿದೆ.  ಈ ಯೋಜನೆಯಡಿ ಫಲಾನುಭವಿಗಳಿಗೆ ವಿತರಿಸಲಾದ ಮೊತ್ತ 4 ಸಾವಿರ ಕೋಟಿ ರೂಪಾಯಿ ದಾಟಿದೆ.

ಪಿಎಂಎಂವಿವೈ ಒಂದು ನೇರ ಸವಲತ್ತು ವರ್ಗಾವಣೆ (ಡಿಬಿಟಿ) ಯೋಜನೆಯಾಗಿದ್ದು, ಇದರಡಿ, ನಗದು ಸೌಲಭ್ಯವನ್ನು ಗರ್ಭಿಣಿ ಮಹಿಳೆಯರಿಗೆ ಅವರ ಹೆಚ್ಚಿನ ಪೌಷ್ಟಿಕ ಅಗತ್ಯ ಪೂರೈಸಿಕೊಳ್ಳಲು  ಮತ್ತು ವೇತನ ನಷ್ಟವನ್ನು ಭಾಗಶಃ ಸರಿದೂಗಿಸಲು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಈ ಯೋಜನೆಯು 1.1.2017ರಿಂದ ಅನ್ವಯವಾಗುವಂತೆ ಜಾರಿಗೆ ಬಂದಿದೆ. ಈ ಯೋಜನೆಯಡಿ ಗರ್ಭಿಣಿ ಮಹಿಳೆಯರು ಮತ್ತು ಹಾಲುಣಿಸುವ ತಾಯಂದಿರು (ಪಿಡಬ್ಲ್ಯು ಮತ್ತು ಎಲ್.ಎಂ.) ತಮ್ಮ ಷರತ್ತುಗಳನ್ನು ಪೂರೈಸಿಕೊಳ್ಳಲುಅಂದರೆ. ಗರ್ಭಧಾರಣೆಯ ಆರಂಭಿಕ ನೋಂದಣಿಪ್ರಸವ ಪೂರ್ವ ತಪಾಸಣೆ ಮತ್ತು ಮಗುವಿನ ಜನನದ ನೋಂದಣಿ ಮತ್ತು ಕುಟುಂಬದ ಮೊದಲ ಜೀವಂತ ಮಗುವಿಗೆ ಲಸಿಕೆಯ ಮೊದಲ ಚಕ್ರವನ್ನು ಪೂರ್ಣಗೊಳಿಸುವುದು ಇತ್ಯಾದಿಗಾಗಿ 5 ಸಾವಿರ ರೂಪಾಯಿ ನಗದು ಪ್ರಯೋಜನವನ್ನು ಮೂರು ಕಂತುಗಳಲ್ಲಿ ಪಡೆದುಕೊಳ್ಳುತ್ತಾರೆ. ಅರ್ಹ ಫಲಾನುಭವಿಗಳು ಜನನಿ ಸುರಕ್ಷಾ ಯೋಜನೆ (ಜೆಎಸ್.ವೈ.) ಅಡಿಯಲ್ಲಿ ನಗದು ಪ್ರೋತ್ಸಾಹಕವನ್ನೂ ಪಡೆಯುತ್ತಾರೆ. ಅಂದರೆ, ಸರಾಸರಿ ಒಬ್ಬ ಮಹಿಳೆ 6 ಸಾವಿರ ರೂಪಾಯಿ ಪಡೆಯುತ್ತಾರೆ.

ಒನ್ ಸ್ಟಾಪ್ ಸೆಂಟರ್ (ಓಎಸ್.ಸಿ.) ಯೋಜನೆ

ಇಂದಿರಾಗಾಂಧಿ ಮಾತೃತ್ವ ಸಹಯೋಗ ಯೋಜನೆ (ಐಜಿಎಂಎಸ್.ವೈ.)ಯನ್ನು 2017ರ ಮಾರ್ಚ್ 31ರಂದು ನಿಲ್ಲಿಸಲಾಗಿದೆ. ಒನ್ ಸ್ಟಾಪ್ ಸೆಂಟರ್ (ಓ.ಎಸ್.ಸಿ.) ಯೋಜನೆಯು  ಪೊಲೀಸ್ ಸೌಲಭ್ಯವೈದ್ಯಕೀಯ ನೆರವುಮಾನಸಿಕ-ಸಾಮಾಜಿಕ ಸಮಾಲೋಚನೆಕಾನೂನು ಸಮಾಲೋಚನೆ ಮತ್ತು ಹಿಂಸಾ ಪೀಡಿತ ಮಹಿಳೆಯರಿಗೆ ತಾತ್ಕಾಲಿಕ ಆಶ್ರಯ ಸೇರಿದಂತೆ ಹಲವಾರು ಸೇವೆಗಳನ್ನು ಸಮಗ್ರ ಸ್ವರೂಪದಲ್ಲಿ ಒಂದೇ ಸೂರಿನಡಿ ಒದಗಿಸುತ್ತದೆ. ಈವರೆಗೆ 728 ಓಎಸ್.ಸಿಗಳನ್ನು ಮಂಜೂರು ಮಾಡಲಾಗಿದ್ದು, 595 ಓಎಸ್.ಸಿ.ಗಳು ಕಾರ್ಯಾರಂಭ ಮಾಡಿವೆ. ಅನುಮೋದಿತ ಓಎಸ್.ಸಿ.ಗಳು ವಿವರ, ಕಾರ್ಯಾಚರಣೆಯಲ್ಲಿರುವ ಓ.ಎಸ್.ಸಿ.ಗಳು ಮತ್ತು ಓ.ಎಸ್.ಸಿ.ಗಳಿಗೆ ಬಿಡುಗಡೆ ಮಾಡಲಾದ ಹಣದ ವಿವರ ಈ ಕೆಳಕಂಡಂತಿದೆ:

 

ಕ್ರ.ಸಂ

ರಾಜ್ಯ/ಯುಟಿ

ಅನುಮೋದನೆಯಾದ ಓಎಸ್.ಸಿ.ಗಳ ಸಂಖ್ಯೆ

ಕಾರ್ಯಾಚರಣೆಯಲ್ಲಿನ ಓಎಸ್ಸಿಗಳ ಸಂಖ್ಯೆ

ವರ್ಷವಾರು ಹಣ ಬಿಡುಗಡೆ (ರೂ.ಗಳಲ್ಲಿ)

2016-17

2017-18

2018-19

1

ಅಂಡಮಾನ್ ನಿಕೋಬಾರ್ ದ್ವೀಪಗಳು

3

3

0

31,20,663

36,87,641

2

ಆಂಧ್ರಪ್ರದೇಶ

14

13

2,68,97,400

3,30,13,744

3,90,63,148

3

ಅರುಣಾಚಲ ಪ್ರದೇಶ

25

13

28,41,450

53,19,517

7,82,02,084

4

ಅಸ್ಸಾಂ

33

31

75,65,800

0

7,86,95,087

5

ಬಿಹಾರ

38

38

1,98,90,150

0

3,08,32,455

6

ಚಂಡೀಗಢ

1

1

0

0

9,30,799

7

ಛತ್ತೀಸಗಢ

27

27

7,34,27,815

1,67,04,440

6,62,44,372

8

ದಾದ್ರಾ ಮತ್ತು ನಗರ್ ಹವೇಲಿ

1

1

0

43,41,482

50,000

9

ಡಮನ್ ಮತ್ತು ಡಿಯು

2

1

0

0

0

10

ದೆಹಲಿ

11

0

0

0

0

11

ಗೋವಾ

2

1

19,41,450

10,84,917

4,92,000

12

ಗುಜರಾತ್

33

27

38,82,900

1,27,15,269

5,62,69,778

13

ಹರಿಯಾಣ

22

18

1,16,48,700

38,30,247

4,79,60,546

14

ಹಿಮಾಚಲ ಪ್ರದೇಶ

12

12

0

15,00,450

1,01,18,850

15

ಜಮ್ಮು ಮತ್ತು ಕಾಶ್ಮೀ

22

8

95,65,800

87,52,272

1,50,20,425

16

ಜಾರ್ಖಂಡ್

24

24

56,82,900

18,47,152

7,04,36,941

17

ಕರ್ನಾಟಕ

30

30

85,24,350

62,73,675

5,94,44,419

18

ಕೇರಳ

14

5

1,13,65,800

11,80,007

2,83,31,849

19

ಲಕ್ಷದ್ವೀಪ

1

0

0

0

0

20

ಮಧ್ಯಪ್ರದೇಶ

51

51

7,73,47,650

1,31,27,264

11,23,91,390

21

ಮಹಾರಾಷ್ಟ್ರ

37

36

2,13,55,950

4,37,69,662

3,89,29,425

22

ಮಣಿಪುರ

16

1

0

0

3,57,22,445

23

ಮೇಘಾಲಯ

11

11

28,41,450

7,75,391

1,86,39,947

24

ಮಿಜೋರಾಂ

8

8

0

61,40,951

2,72,64,535

25

ನಾಗಾಲ್ಯಾಂಡ್

11

11

55,41,679

80,41,940

4,54,87,024

26

ಒಡಿಶಾ

30

30

15,00,450

1,20,32,854

7,74,59,998

27

ಪುದುಚೇರಿ

4

1

0

19,41,450

47,66,836

28

ಪಂಜಾಬ್

22

22

97,07,250

3,35,87,668

5,26,33,488

29

ರಾಜಾಸ್ಥಾನ

33

21

3,41,23,174

28,95,721

3,08,60,275

30

ಸಿಕ್ಕಿಂ

4

1

0

30,71,148

39,23,225

31

ತಮಿಳುನಾಡು

34

32

0

38,82,900

11,39,95,447

32

ತೆಲಂಗಾಣ

33

25

1,55,31,600

3,01,72,230

5,89,48,915

33

ತ್ರಿಪುರ

8

4

0

0

2,69,01,349

34

ಉತ್ತರ ಪ್ರದೇಶ

75

75

4,54,63,200

2,66,22,936

22,28,30,497

35

ಉತ್ತರಖಂಡ

13

13

58,24,350

1,38,86,307

2,72,25,409

36

ಪಶ್ಚಿಮ ಬಂಗಾಳ

23

0

0

0

0

 

ಒಟ್ಟು

728

595

40,24,71,268

29,96,32,257

1,48,37,60,599

 

ಮಹಿಳೆಯರನ್ನು ಶೋಷಣೆಯಿಂದ ಪಾರುಮಾಡುವ ಅಗತ್ಯವನ್ನು ಮನಗಂಡು ಮತ್ತು ಅವರ ಉಳಿವಿಗೆ ಮತ್ತು ಪುನರ್ವಸತಿಗೆ ಬೆಂಬಲ ನೀಡಲು 1969 ರಲ್ಲಿ ಅಂದಿನ ಸಮಾಜ ಕಲ್ಯಾಣ ಇಲಾಖೆಯು ಮಹಿಳೆಯರು ಮತ್ತು ಬಾಲಕಿಯರ ಅಲ್ಪ ಕಾಲೀನ ವಸತಿ ಗೃಹ ಯೋಜನೆಯನ್ನು ಸಾಮಾಜಿಕ ರಕ್ಷಣಾ ಕಾರ್ಯವಿಧಾನವಾಗಿ ಪರಿಚಯಿಸಿತು.

ಕೌಟುಂಬಿಕ ಅಪಶ್ರುತಿಅಪರಾಧಹಿಂಸೆಮಾನಸಿಕ ಒತ್ತಡಸಾಮಾಜಿಕ ಬಹಿಷ್ಕಾರ ಅಥವಾ ಮನೆಯಿಂದ ಬಲವಂತವಾಗಿ ವೇಶ್ಯಾವಾಟಿಕೆಗೆ ದೂಡಲಾಗುತ್ತಿರುವ ಮತ್ತು ನೈತಿಕ ಅಪಾಯದಲ್ಲಿರುವ ಮಹಿಳೆಯರಿಗೆ ಮತ್ತು ಬಾಲಕಿಯರಿಗೆ ತಾತ್ಕಾಲಿಕ ವಸತಿನಿರ್ವಹಣೆ ಮತ್ತು ಪುನರ್ವಸತಿ ಸೇವೆಗಳನ್ನು ಒದಗಿಸಲು ಈ ಯೋಜನೆ ಉದ್ದೇಶಿಸಿದೆ. ಇದೇ ಸ್ವರೂಪದ ಉದ್ದೇಶ ಹೊಂದಿರುವ ಮತ್ತೊಂದು ಸ್ವಧಾರ್ ಹೆಸರಿನ ಯೋಜನೆಯನ್ನೂ ಕಷ್ಟದ ಪರಿಸ್ಥಿತಿಯಲ್ಲಿರುವ ಮಹಿಳೆಯರಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 2001-02ರ ಸಾಲಿನಲ್ಲಿ ಆರಂಭಿಸಿದೆ. ಆಶ್ರಯಆಹಾರವಸ್ತ್ರಸಮಾಲೋಚನೆತರಬೇತಿ, ವೈದ್ಯಕೀಯ ಮತ್ತು ಕಾನೂನು ನೆರವುಗಳ ಮೂಲಕ ಈ ಯೋಜನೆಯು ಕಷ್ಟಕರ ಸಂದರ್ಭಗಳಲ್ಲಿ ಮಹಿಳೆಯರಿಗೆ ಪುನರ್ವಸತಿ ಕಲ್ಪಿಸುವ ಗುರಿಯನ್ನು ಹೊಂದಿದೆ. ನವದೆಹಲಿಯ ಮಾರುಕಟ್ಟೆ ಸಂಶೋಧನೆ ಮತ್ತು ಸಾಮಾಜಿಕ ಅಭಿವೃದ್ಧಿ ಕೇಂದ್ರವು 2007 ರಲ್ಲಿ ಎರಡೂ ಯೋಜನೆಗಳ ಕಾರ್ಯಕ್ಷಮತೆಯನ್ನು ನಿರ್ಣಯಿಸಲು ಮೌಲ್ಯಮಾಪನ ನಡೆಸಿತು. ಮೌಲ್ಯ ಮಾಪನದ ವರದಿಯಲ್ಲಿ  ಸಮಾಲೋಚನೆ ಮತ್ತು ಪುನರ್ವಸತಿ ಸಂಬಂಧಿಸಿದ ಯೋಜನೆಗಳ ಪರಿಣಾಮಕಾರಿತ್ವ ಮತ್ತು ಧನಾತ್ಮಕ ಪರಿಣಾಮಗಳ ಬಗ್ಗೆ ಉಲ್ಲೇಖಿಸುವಾಗ, ಎರಡೂ ಯೋಜನೆಗಳಲ್ಲಿ ಸಂಕ್ಷಿಪ್ತ ಪರಿಚಯ ಮತ್ತು ಪ್ರವರ್ಗಪ್ರವೇಶ ಪ್ರಕ್ರಿಯೆಸಮಾಲೋಚನೆಸೇವೆಯ ಗುಣಮಟ್ಟವೃತ್ತಿಪರ ತರಬೇತಿಪುನರ್ವಸತಿ ಮತ್ತು ಅನುಸರಣಾ ಕಾರ್ಯವಿಧಾನ ಬಹುತೇಕ ಒಂದಕ್ಕೊಂದು ಹೋಲುತ್ತದೆ ಎಂಬುದನ್ನು ಪ್ರಚುರಪಡಿಸಿತು. ಹೀಗಾಗಿ, ಅದು ಕಡಿಮೆ ಆಡಳಿತಾತ್ಮಕ ಹೊರೆ ಮತ್ತು ಪ್ರಕ್ರಿಯೆಗಳೊಂದಿಗೆ ಉತ್ತಮ ಕಾರ್ಯಕ್ಷಮತೆಗಾಗಿ ಮತ್ತು ಫಲಶ್ರುತಿಗಾಗಿ ಈ ಎರಡೂ ಯೋಜನೆಗಳನ್ನು ವಿಲೀನ ಮಾಡಲು ಶಿಫಾರಸು ಮಾಡಿತು.  ಒಟ್ಟಾರೆ 307 ಅಲ್ಪಕಾಲೀನ ವಸತಿ ಗೃಹಗಳು ಮತ್ತು 311 ಸ್ವಧಾರ್ ಗೃಹಗಳು 2013-1ರ ಸಾಲಿನಲ್ಲಿ ಕಾರ್ಯನಿರ್ವಹಿಸುತ್ತಿದ್ದವು.

ಓಎಸ್.ಸಿ.ಗಳಿಗೆ ಮಾರ್ಗಸೂಚಿ ಮತ್ತು ಎಸ್.ಓ.ಪಿ.ಯನ್ನು ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಮತ್ತು ಜಿಲ್ಲೆಗಳಿಗೆ ಒನ್ ಸ್ಟಾಪ್ ಸೆಂಟರ್ ಯೋಜನೆಗಳ ಸಮರ್ಥ ಅನುಷ್ಠಾನಕ್ಕಾಗಿ ವಿತರಿಸಲಾಯಿತು. ಸ್ಟಾಪ್ ಸೆಂಟರ್ ಯೋಜನೆಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರಗಳು/ಯು.ಟಿ ಆಡಳಿತಗಳು ನಿರ್ಭಯ ನಿಧಿ ಅಡಿಯಲ್ಲಿ ಕಾಲ ಕಾಲಕ್ಕೆ ನಡೆಸುತ್ತಿವೆ.

ನಿರ್ಭಯ ನಿಧಿ

ದೇಶದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಉಪಕ್ರಮಗಳ ಅನುಷ್ಠಾನಕ್ಕಾಗಿ ಭಾರತ ಸರ್ಕಾರ ನಿರ್ಭಯಾ ನಿಧಿ ಎಂಬ ಸಮರ್ಪಿತವಾದ ನಿಧಿಯನ್ನು ಸ್ಥಾಪಿಸಿದೆ. ನಿರ್ಭಯ ನಿಧಿ ಅಡಿಯಲ್ಲಿ ಪ್ರಸ್ತಾವಿತ ಯೋಜನೆಗಳು ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಯ ಕಾಳಜಿಯ ಬಗ್ಗೆ ನೇರ ಪರಿಣಾಮ ಬೀರುವಂತಹಅಸ್ತಿತ್ವದಲ್ಲಿರುವ ಮೂಲಸೌಕರ್ಯಗಳ ಗರಿಷ್ಠ ಬಳಕೆತಂತ್ರಜ್ಞಾನದ ನವೀನ್ಯಪೂರ್ಣ ಬಳಕೆ, ಪುನರಾವರ್ತನೆಯಲ್ಲದ ಅಸ್ತಿತ್ವದಲ್ಲಿರುವ ಸರ್ಕಾರಿ ಯೋಜನೆಗಳು / ಕಾರ್ಯಕ್ರಮಗಳುಕಾಲ ಕಾಲಕ್ಕೆ ಮಧ್ಯಪ್ರವೇಶಕ್ಕೆ ಅವಕಾಶ ಮುಂತಾದ ವೈಶಿಷ್ಟ್ಯಗಳಂಥ ಲಕ್ಷಣಗಳನ್ನು ಹೊಂದಿರಬೇಕು. ಸಾಧ್ಯವಾದಷ್ಟು. ಮಹಿಳೆಯರ ಗುರುತು ಮತ್ತು ಮಾಹಿತಿಯ ಕಟ್ಟುನಿಟ್ಟಾದ ಗೌಪ್ಯತೆ ಮತ್ತು ಗೌಪ್ಯತೆ ಮತ್ತು ವ್ಯಾಖ್ಯಾನಿಸಲಾದ ಮೇಲ್ವಿಚಾರಣಾ ಕಾರ್ಯವಿಧಾನ ಇರಬೇಕು.

ಕೇಂದ್ರ ಸಚಿವಾಲಯಗಳು/ಇಲಾಖೆಗಳು, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು, ಸ್ವಾಯತ್ತ ಮತ್ತು ಇತರ ಸರ್ಕಾರಿ ಕಾಯಗಳು ನಿಗದಿತ ಪ್ರಕ್ರಿಯೆಯಂತೆ ತಮ್ಮ ಪ್ರಸ್ತಾವನೆಗಳನ್ನು ಮಂಡಿಸಬಹುದು. ಹಣಕಾಸು ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಯಂತೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ಭಯ ನಿಧಿಯಡಿ ಸ್ವೀಕರಿಸಲಾದ ಯೋಜನೆಗಳು/ಪ್ರಸ್ತಾವನೆಗಳ ಬಗ್ಗೆ ಮೌಲ್ಯಮಾಪನ ಮಾಡುವ ನೋಡಲ್ ಪ್ರಾಧಿಕಾರವಾಗಿರುತ್ತದೆ. ನಿರ್ಭಯಾ ನಿಧಿಯಡಿ ಪ್ರಸ್ತಾಪಿತ  ವಿವಿಧ ಯೋಜನೆಗಳು/ ಪ್ರಾಜೆಕ್ಟ್ ಗಳ ಮೌಲ್ಯಮಾಪನಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳ ಅಧ್ಯಕ್ಷತೆಯ ಅಧಿಕಾರಿಗಳ ಅಧಿಕಾರಯುತ ಸಮಿತಿ (ಇಸಿ)ಯನ್ನು ಸ್ಥಾಪಿಸಲಾಗಿದೆ.

ನಿರ್ಭಯ ನಿಧಿಯ ಪೈಕಿ ವಿವಿಧ ಸಚಿವಾಲಯ/ಇಲಾಖೆಗಳು ಜಾರಿ ಮಾಡಿರುವ ಯೋಜನೆಗಳಿಗೆ ಮಂಜೂರಾಗಿರುವ/ಹಂಚಿಕೆಯಾಗಿರುವ ಮತ್ತು ಬಳಕೆಯಾಗಿರುವ ಮೊತ್ತಕ್ಕೆ ಸಂಬಂಧಿಸಿದಂತೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶವಾರು ವಿವರ ಈ ಕೆಳಕಂಡಂತಿದೆ:

ಗೃಹ ವ್ಯವಹಾರಗಳ ಸಚಿವಾಲಯ

ನಿರ್ಭಯಾ ನಿಧಿಯಡಿ ಹಣ ನೀಡಲಾದ ಯೋಜನೆಗಳಿಗೆ ಒಟ್ಟಾರೆ ಮಂಜೂರಾದ/ಹಂಚಿಕೆಯಾದ ಮತ್ತು ಬಳಕೆಯಾದ  ರಾಜ್ಯ/ಕೇಂದ್ರಾಡಳಿತ ಪ್ರದೇಶವಾರು ವಿವರ

(ಲಕ್ಷ ರೂ.ಗಳಲ್ಲಿ)

 

ಕ್ರ.ಸಂ.

ರಾಜ್ಯ/ಕೇಂದ್ರಾಡಳಿತ ಪ್ರದೇಶ

ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಮಂಜೂರಾದ/ಹಂಚಿಕಯಾದ ಒಟ್ಟು ಹಣ

ಸ್ವೀಕೃತ ಬಳಕೆಯ ಪ್ರಮಾಣ ಪತ್ರ *

1

ಆಂಧ್ರಪ್ರದೇಶ

2085.00

814.01

2

ಅರುಣಾಚಲ ಪ್ರದೇಶ

768.86

224.03

3

ಅಸ್ಸಾಂ

2072.63

305.06

4

ಬಿಹಾರ

2258.60

702.00

5

ಛತ್ತೀಸಗಢ

1687.41

745.31

6

ಗೋವಾ

776.59

221.00

7

ಗುಜರಾತ್

7004.31

118.50

8

ಹರಿಯಾಣ

1671.87

606.00

9

ಹಿಮಾಚಲ ಪ್ರದೇಶ

1147.37

291.54

10

ಜಮ್ಮು ಮತ್ತು ಕಾಶ್ಮೀರ

1256.02

324.53

11

ಜಾರ್ಖಂಡ್

1569.81

405.33

12

ಕರ್ನಾಟಕ

19172.09

1362.00

13

ಕೇರಳ

1971.77

472.00

14

ಮಧ್ಯಪ್ರದೇಶ

4316.96

639.50

15

ಮಹಾರಾಷ್ಟ್ರ

14940.06

0

16

ಮಣಿಪುರ

878.78

0

17

ಮೇಘಾಲಯ

675.39

0

18

ಮಿಜೋರಾಂ

883.57

543.68

19

ನಾಗಾಲ್ಯಾಂಡ್

689.55

357.84

20

ಒಡಿಶಾ

2270.53

58.00

21

ಪಂಜಾಬ್

2047.08

300.00

22

ರಾಜಾಸ್ಥಾನ್

3373.2

1011.00

23

ಸಿಕ್ಕಿಂ

613.33

0

24

ತೆಲಂಗಾಣ

10351.88

419.00

25

ತಮಿಳುನಾಡು

19068.36

600.00

26

ತ್ರಿಪುರ

766.59

0

27

ಉತ್ತರ ಪ್ರದೇಶ

11939.85

393.00

28

ಉತ್ತರಖಂಡ್

953.27

679.41

29

ಪಶ್ಚಿಮ ಬಂಗಾಳ

7570.80

392.73

30

ಅಂಡಮಾನ್ ನಿಕೋಬಾರ್ ದ್ವೀಪಗಳು

653.08

147.05

31

ಚಂಡೀಗಢ

746.02

260.83

32

ದಾದರ್ ಮತ್ತು ನಗರ್ ಹವೇಲಿ

420.00

158.00

33

ಡಮನ್ ಮತ್ತು ಡಿಯೂ

420.00

0

34

ದೆಹಲಿ (ಯುಟಿ)

39090.12

1941.57

35

ಲಕ್ಷದ್ವೀಪ

614.71

76.93

36

ಪುದುಚೇರಿ

496.16

128.55

 

* ಆಯಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸಂತ್ರಸ್ತರ ಪರಿಹಾರ ಯೋಜನೆಗಳಿಗೆ ಬೆಂಬಲ ನೀಡಲು ಮತ್ತು ಪೂರಕವಾಗಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಒಂದು ಬಾರಿಯ ಅನುದಾನವಾಗಿ ಸಿವಿಸಿಎಫ್ ಅನ್ನು ಬಿಡುಗಡೆ ಮಾಡಲಾಗಿದೆ ಮತ್ತು ರಾಜ್ಯಗಳು / ಯುಟಿಗಳಿಗೆ ತಮ್ಮ ಬಳಿಯಿರುವ ಬಜೆಟ್ ಹೊರತಾದ ಸಂಪನ್ಮೂಲವನ್ನು ಬಳಸಿಕೊಂಡ ನಂತರ ಈ ನಿಧಿಯಿಂದ ಖರ್ಚಿಗೆ ಅನುಮತಿಸಲಾಗುತ್ತದೆ.

ಸುರಕ್ಷಿತ ನಗರ ಯೋಜನೆಗಳಿಗೆ ಸಂಬಂಧಿಸಿದಂತೆ ಬಳಕೆಯ ಪ್ರಮಾಣಪತ್ರ ಮತ್ತು ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯವನ್ನು ಬಲಪಡಿಸುವುದು ಬಾಕಿ ಇರುವುದಿಲ್ಲ.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

ರಾಜ್ಯ / ಕೇಂದ್ರಾಡಳಿತ ಪ್ರದೇಶವಾರು ನಿರ್ಭಯಾ ಅನುದಾನಿತ ಯೋಜನೆಗಳಿಗೆ ಮಂಜೂರು / ಹಂಚಿಕೆಯಾದ ಮತ್ತು ಬಳಕೆಯಾದ ಒಟ್ಟು ನಿಧಿಗಳ ವಿವರಗಳು.

(ಲಕ್ಷ ರೂ.ಗಳಲ್ಲಿ)

 

ಕ್ರ.ಸಂ

ರಾಜ್ಯ/ಕೇಂದ್ರಾಡಳಿತ ಪ್ರದೇಶ

ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆಯಾದ ಹಣ

ಬಳಕೆ

 
 

1

ಆಂಧ್ರಪ್ರದೇಶ

5864.00

0.00

 

2

ಉತ್ತರ ಪ್ರದೇಶ

4020.00

3110.00

 

3

ಕರ್ನಾಟಕ

3364.00

220.00

 

 

ನ್ಯಾಯ ಇಲಾಖೆ

ರಾಜ್ಯ / ಕೇಂದ್ರಾಡಳಿತ ಪ್ರದೇಶವಾರು ನಿರ್ಭಯಾ ಅನುದಾನಿತ ಯೋಜನೆಗಳಿಗೆ ಮಂಜೂರು / ಹಂಚಿಕೆಯಾದ ಮತ್ತು ಬಳಕೆಯಾದ ಒಟ್ಟು ನಿಧಿಗಳ ವಿವರಗಳು.

(ಲಕ್ಷ ರೂ.ಗಳಲ್ಲಿ)

 

ಕ್ರ.ಸಂ

ರಾಜ್ಯ/ಕೇಂದ್ರಾಡಳಿತ ಪ್ರದೇಶ

ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆಯಾದ ಹಣ

ಬಳಕೆಯಾದ ಹಣ

  1.  

ಜಾರ್ಖಂಡ್

495.00

0.00

  1.  

ಕರ್ನಾಟಕ

697.50

0.00

  1.  

ಕೇರಳ

630.00

0.00

  1.  

ಮಧ್ಯಪ್ರದೇಶ

1507.50

0.00

  1.  

ಮಹಾರಾಷ್ಟ್ರ

3105.00

0.00

  1.  

ಮಣಿಪುರ

67.50

0.00

  1.  

ನಾಗಾಲ್ಯಾಂಡ್

33.75

0.00

  1.  

ಒಡಿಶಾ

540.00

0.00

  1.  

ರಾಜಾಸ್ಥಾನ

585.00

0.00

  1.  

ತ್ರಿಪುರ

101.25

0.00

  1.  

ಉತ್ತರಾಖಂಡ

135.00

0.00

 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

1.           ಮಹಿಳಾ ಪೊಲೀಸ್ ಸ್ವಇಚ್ಛಾ ಯೋಜನೆ – ಈ ಯೋಜನೆಯಡಿ 12 ರಾಜ್ಯಗಳ ಪ್ರಸ್ತಾವದ ಮೇಲೆ, ಸಲ್ಲಿಕೆ ಮಾಡಿ ಅನುಮೋದಿಸಲಾಗಿದೆ. ಈ 12 ರಾಜ್ಯಗಳಿಗೆ ಬಿಡುಗಡೆ ಮಾಡಲಾದ ಮತ್ತು ಬಳಕೆಯಾದ ನಿಧಿಯ ವಿವರ ಈ ಕೆಳಕಂಡಂತಿದೆ:

(ಲಕ್ಷ ರೂ.ಗಳಲ್ಲಿ)

 

ಕ್ರ.ಸಂ

ರಾಜ್ಯ

ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆಯಾದ ಹಣ

ಬಳಕೆಯಾದ ಮೊತ್ತ

1

ಅಂಡಮಾನ್ ಮತ್ತು ನಿಕೋಬಾರ್

0.00

0.00

2

ಆಂಧ್ರಪ್ರದೇಶ

521.39

75.82

3

ಛತ್ತೀಸಗಢ

715.55

152.78

4

ಗುಜರಾತ್

76.20

41.65

5

ಹರಿಯಾಣ

77.52

88.45

6

ಜಾರ್ಖಂಡ್

2.64

0.00

7

ಕರ್ನಾಟಕ

56.13

0.00

8

ಮಧ್ಯಪ್ರದೇಶ

30.18

0.00

9

ಮಿಜೋರಾಂ

35.85

0.00

10

ನಾಗಾಲ್ಯಾಂಡ್

9.40

0.00

11

ತ್ರಿಪುರ

30.16

0.00

12

ಉತ್ತರಾಖಂಡ

68.82

0.00

 

2.  ಒನ್ ಸ್ಟಾಪ್ ಸೆಂಟರ್ ಯೋಜನೆ (ಓ ಎಸ್.ಸಿ.)

(ಲಕ್ಷ ರೂ.ಗಳಲ್ಲಿ)

 

ಕ್ರ.ಸಂ

ರಾಜ್ಯ

ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆಯಾದ ಹಣ

ಬಳಕೆಯಾದ ಮೊತ್ತ

1

ಅಂಡಮಾನ್ ನಿಕೋಬಾರ್ ದ್ವೀಪಗಳು

96.28

38.95

2

ಆಂಧ್ರಪ್ರದೇಶ

1167.98

430.47

3

ಅರುಣಾಚಲ ಪ್ರದೇಶ

981.85

94.37

4

ಅಸ್ಸಾಂ

1408.23

122.79

5

ಬಿಹಾರ

1187.90

0.00

6

ಚಂಡೀಗಢ

37.50

6.99

7

ಛತ್ತೀಸಗಢ

2017.19

928.67

8

ದಾದ್ರ ಮತ್ತು ನಗರ್ ಹವೇಲಿ

87.33

35.22

9

ಡಮನ್ ಮತ್ತು ಡಿಯೂ

89.18

8.08

10

ದೆಹಲಿ

201.18

0.00

11

ಗೋವಾ

96.07

12.11

12

ಗುಜರಾತ್

1246.51

56.89

13

ಹರಿಯಾಣ

1011.31

189.09

14

ಹಿಮಾಚಲ ಪ್ರದೇಶ

310.96

15.00

15

ಜಮ್ಮು ಮತ್ತು ಕಾಶ್ಮೀರ

402.29

48.69

16

ಜಾರ್ಖಂಡ್

1078.85

48.43

17

ಕರ್ನಾಟಕ

1205.41

0.00

18

ಕೇರಳ

468.86

41.00

19

ಲಕ್ಷದ್ವೀಪ

0.00

0.00

20

ಮಧ್ಯಪ್ರದೇಶ

2797.60

590.73

21

ಮಹಾರಾಷ್ಟ್ರ

1446.54

19.41

22

ಮಣಿಪುರ

590.45

12.89

23

ಮೇಘಾಲಯ

436.93

58.17

24

ಮಿಜೋರಾಂ

416.75

64.63

25

ನಾಗಾಲ್ಯಾಂಡ್

693.28

211.73

26

ಒಡಿಶಾ

1038.82

54.46

27

ಪುದುಚೇರಿ

104.08

0.00

28

ಪಂಜಾಬ್

1185.37

65.62

29

ರಾಜಾಸ್ಥಾನ

1078.37

171.86

30

ಸಿಕ್ಕಿಂ

132.06

38.90

31

ತಮಿಳುನಾಡು

1672.64

45.88

32

ತೆಲಂಗಾಣ

1396.91

138.07

33

ತ್ರಿಪುರ

374.91

44.66

34

ಉತ್ತರ ಪ್ರದೇಶ

4088.39

540.02

35

ಉತ್ತರಖಂಡ

566.69

164.31

36

ಪಶ್ಚಿಮ ಬಂಗಾಳ

0.00

0.00

 

3.  ಮಹಿಳಾ ಸಹಾಯವಾಣಿ ಯೋಜನೆಯ ಬಳಕೆ

(ಲಕ್ಷ ರೂ.ಗಳಲ್ಲಿ)

 

ಕ್ರ.ಸಂ

ರಾಜ್ಯ

ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆ ಮಾಡಲಾದ ಹಣ

ಬಳಕೆಯಾದ ಮೊತ್ತ

1

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

102.03

0.13

2

ಆಂಧ್ರಪ್ರದೇಶ

146.26

106.50

3

ಅರುಣಾಚಲ ಪ್ರದೇಶ

224.64

167.84

4

ಅಸ್ಸಾಂ

112.63

78.55

5

ಬಿಹಾರ

202.21

133.36

6

ಚಂಡೀಗಢ

199.16

132.80

7

ಛತ್ತೀಸಗಢ

272.57

204.41

8

ದಾದ್ರಾ ಮತ್ತು ನಗರ ಹವೇಲಿ

0.00

0.00

9

ಡಮನ್ ಮತ್ತು ಡಿಯೂ

85.16

20.64

10

ದೆಹಲಿ

49.78

0.00

11

ಗೋವಾ

27.90

0.00

12

ಗುಜರಾತ್

377.40

241.50

13

ಹರಿಯಾಣ

51.58

7.11

14

ಹಿಮಾಚಲ ಪ್ರದೇಶ

49.70

0.00

15

ಜಮ್ಮು ಮತ್ತು ಕಾಶ್ಮೀರ

119.49

51.33

16

ಜಾರ್ಖಂಡ್

34.54

0.23

17

ಕರ್ನಾಟಕ

62.70

0.00

18

ಕೇರಳ

174.96

106.79

19

ಲಕ್ಷದ್ವೀಪ

0.00

0.00

20

ಮಧ್ಯಪ್ರದೇಶ

62.70

0.00

21

ಮಹಾರಾಷ್ಟ್ರ

62.70

0.00

22

ಮಣಿಪುರ

49.70

49.70

23

ಮೇಘಾಲಯ

116.48

49.70

24

ಮಿಜೋರಾಂ

255.56

187.40

25

ನಾಗಾಲ್ಯಾಂಡ್

257.39

189.23

26

ಒಡಿಶಾ

191.76

140.64

27

ಪುದುಚೇರಿ

51.08

0.00

28

ಪಂಜಾಬ್

90.13

28.86

29

ರಾಜಾಸ್ಥಾನ

109.20

0.00

30

ಸಿಕ್ಕಿಂ

115.14

47.25

31

ತಮಿಳುನಾಡು

155.70

62.70

32

ತೆಲಂಗಾಣ

157.25

123.17

33

ತ್ರಿಪುರ

49.70

0.00

34

ಉತ್ತರ ಪ್ರದೇಶ

237.86

146.66

35

ಉತ್ತರಖಂಡ

207.90

139.74

36

ಪಶ್ಚಿಮ ಬಂಗಾಳ

62.70

0.00

 

4.  ಇತರ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಯೋಜನೆಗಳು

(ಲಕ್ಷ ರೂ.ಗಳಲ್ಲಿ)

 

ಕ್ರ.ಸಂ.

ರಾಜ್ಯ/ಕೇಂದ್ರಾಡಳಿತ ಪ್ರದೇಶ

ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆ ಮಾಡಲಾದ ನಿಧಿ

ಬಳಕೆ

 
 

1

ಮಧ್ಯಪ್ರದೇಶ

104.70

0.00

 

2

ನಾಗಾಲ್ಯಾಂಡ್

255.60

0.00

 

3

ರಾಜಾಸ್ಥಾನ

470.97

108.89

 

4

ಉತ್ತರಖಂಡ

32.40

0.00

 

 

22.10.2019 ರಂದು ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಧಿಕಾರಯುತ ಸಮಿತಿಯು ನಿರ್ಭಯಾ ನಿಧಿಯಡಿಯಲ್ಲಿ ಗೃಹ ಸಚಿವಾಲಯದ ಯೋಜನೆಯನ್ನು ರಾಜ್ಯ / ಕೇಂದ್ರಾಡಳಿತ ಪ್ರದೇಶಗಳಲ್ಲಿನ ಪೊಲೀಸ್ ಠಾಣೆಗಳಲ್ಲಿ 100 ಕೋಟಿ ರೂಪಾಯಿ ವೆಚ್ಚದಲ್ಲಿ ಮಹಿಳಾ ನೆರವು ಕಟ್ಟೆಗಳನ್ನು ಸ್ಥಾಪಿಸಲು / ಬಲಪಡಿಸುವ ಯೋಜನೆಯ ಮೌಲ್ಯಮಾಪನ ಮಾಡಿತು.

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳವಾರು ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಸೈಬರ್ ಅಪರಾಧ ತಡೆ (ಸಿಸಿಪಿಡಬ್ಲ್ಯುಸಿ) ಯೋಜನೆಯ ವಿವರ ಈ ಕೆಳಕಂಡಂತಿದೆ:

ಸಿಸಿಪಿಡಬ್ಲ್ಯುಸಿ ಯೋಜನೆಗೆ ಸಂಬಂಧಿಸಿದಂತೆ ನಿಧಿ ಬಳಸಿಕೊಂಡ ರಾಜ್ಯಗಳು

 (ಲಕ್ಷ ರೂ.ಗಳಲ್ಲಿ)

 

ಕ್ರ.ಸಂ

ರಾಜ್ಯ/ಕೇಂದ್ರಾಡಳಿತ ಪ್ರದೇಶ

ಬಳಕೆಯಾದ ನಿಧಿ

1

ಹರಿಯಾಣ

231.00

2

ಹಿಮಾಚಲ ಪ್ರದೇಶ

147.00

3

ಕರ್ನಾಟಕ

282.00

4

ಕೇರಳ

135.00

5

ಮಧ್ಯಪ್ರದೇಶ

156.00

6

ಮಿಜೋರಾಂ

111.00

7

ನಾಗಾಲ್ಯಾಂಡ್

148.00

8

ಒಡಿಶಾ

58.00

9

ತೆಲಂಗಾಣ

394.00

10

ಉತ್ತರಪ್ರದೇಶ

393.00

11

ಉತ್ತರಾಖಂಡ್

147.00

 

ಲೈಂಗಿಕ ಕಿರುಕುಳ ಎಲೆಕ್ಟ್ರಾನಿಕ್ –ಬಾಕ್ಸ್ (ಎಸ್.ಎಚ್. ಇ- ಬಾಕ್ಸ್)

ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಕಾರ್ಯ ಸ್ಥಳದಲ್ಲಿ ಸರ್ಕಾರಿ ಮತ್ತು ಖಾಸಗಿ ಉದ್ಯೋಗಿಗಳಿಂದ ಆಗುವ ಲೈಂಗಿಕ ಕಿರುಕುಳಿಗೆ ಸಂಬಂಧಿಸಿದಂತೆ ಮಹಿಳೆಯರು ದೂರು ದಾಖಲಿಸಿಲು  ಲೈಂಗಿಕ ಕಿರುಕುಳ ಎಲೆಕ್ಟ್ರಾನಿಕ್ – ಬಾಕ್ಸ್ (ಎಸ್.ಎಚ್.ಇ –ಬಾಕ್ಸ್ ) ಶೀರ್ಷಿಕೆಯ ಒಂದು ಆನ್ ಲೈನ್ ದೂರು ನಿರ್ವಹಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಎಸ್.ಎಚ್.ಇ. – ಬಾಕ್ಸ್ ಪೋರ್ಟಲ್ ಗೆ ಒಮ್ಮೆ ದೂರು ದಾಖಲಾದರೆ, ಅದು ಈ ವಿಚಾರಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವ ವ್ಯಾಪ್ತಿ ಹೊಂದಿರುವ  ಸಂಬಂಧಿತ ಪ್ರಾಧಿಕಾರಕ್ಕೆ ನೇರವಾಗಿ ರವಾನೆಯಾಗುತ್ತದೆ.

ಒಟ್ಟಾರೆ 203  ಪ್ರಕರಣಗಳನ್ನು ಈವರೆಗೆ ವಿಲೇವಾರಿ ಮಾಡಲಾಗಿದ್ದು, ಇದರಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಖಾಸಗಿ ವಲಯದ ಪ್ರಕರಣಗಳೂ ಸೇರಿವೆ.

ಎಸ್.ಎಚ್.ಇ ಬಾಕ್ಸ್ ಪೋರ್ಟಲ್ ಅನ್ನು ಕಾರ್ಯ ಸ್ಥಳದಲ್ಲಿ ಮಹಿಳೆಯರಿಗೆ ಆಗುವ ಲೈಂಗಿಕ ಕಿರುಕುಳದ ಬಗ್ಗೆ ದೂರು ದಾಖಲಿಸಲು ಅವಕಾಶ ಕಲ್ಪಿಸುವ ಉದ್ದೇಶದೊಂದಿಗೆ ರೂಪಿಸಲಾಗಿದೆ.

ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ 2017ರಿಂದ ಖಾಸಗಿ/ಸಾರ್ವಜನಿಕ ಕಾಯಗಳಿಂದ ಎಸ್.ಎಚ್.ಇ. – ಬಾಕ್ಸ್ ಮೂಲಕ ಸ್ವೀಕರಿಸಲಾಗಿರುವ ಲೈಂಗಿಕ ಕಿರುಕುಳ ದೂರುಗಳ ಸಂಖ್ಯೆಯ ವಿವರ ಕೆಳಕಂಡಂತಿದೆ:

 

ಕ್ರ.ಸಂ

ರಾಜ್ಯ

ಒಟ್ಟು ದೂರುಗಳು

1

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

0

2

ಆಂಧ್ರಪ್ರದೇಶ

18

3

ಅರುಣಾಚಲ ಪ್ರದೇಶ

2

4

ಅಸ್ಸಾಂ

3

5

ಬಿಹಾರ

20

6

ಚಂಡೀಗಢ

2

7

ಛತ್ತೀಸಗಢ

7

8

ದಾದ್ರಾ ಮತ್ತು ನಗರ್ ಹವೇಲಿ

0

9

ಡಮನ್ ಮತ್ತು ಡಿಯು

0

10

ದೆಹಲಿ

50

11

ಗೋವಾ

0

12

ಗುಜರಾತ್

21

13

ಹರಿಯಾಣ

29

14

ಹಿಮಾಚಲ ಪ್ರದೇಶ

3

15

ಜಮ್ಮು ಮತ್ತು ಕಾಶ್ಮೀರ

5

16

ಜಾರ್ಖಂಡ್

2

17

ಕರ್ನಾಟಕ

34

18

ಕೇರಳ

11

19

ಲಕ್ಷದ್ವೀಪ

0

20

ಮಧ್ಯಪ್ರದೇಶ

30

21

ಮಹಾರಾಷ್ಟ್ರ

82

22

ಮಣಿಪುರ

0

23

ಮೇಘಾಲಯ

1

24

ಮಿಜೋರಾಂ

0

25

ನಾಗಾಲ್ಯಾಂಡ್

0

26

ಒಡಿಶಾ

5

27

ಪುದುಚೇರಿ

3

28

ಪಂಜಾಬ್

9

29

ರಾಜಾಸ್ಥಾನ

23

30

ಸಿಕ್ಕಿಂ

0

31

ತಮಿಳುನಾಡು

48

32

ತೆಲಂಗಾಣ

20

33

ತ್ರಿಪುರ

1

34

ಉತ್ತರ ಪ್ರದೇಶ

65

35

ಉತ್ತರಾಖಂಡ

6

36

ಪಶ್ಚಿಮ ಬಂಗಾಳ

13

ಒಟ್ಟು

513

 

***



(Release ID: 1597978) Visitor Counter : 372