ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ

ವರ್ಷಾಂತ್ಯದ ಪರಾಮರ್ಶೆ- 2019 ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ 65,312 ಹೊಸ ಅತಿ ಸಣ್ಣ ಉದ್ಯಮಗಳ ಸ್ಥಾಪನೆ ಮತ್ತು 5,22,496 ಉದ್ಯೋಗಾವಕಾಶಗಳ ಸೃಷ್ಟಿ

Posted On: 24 DEC 2019 12:06PM by PIB Bengaluru

ವರ್ಷಾಂತ್ಯದ ಪರಾಮರ್ಶೆ- 2019

ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ

65,312 ಹೊಸ ಅತಿ ಸಣ್ಣ ಉದ್ಯಮಗಳ ಸ್ಥಾಪನೆ ಮತ್ತು 5,22,496 ಉದ್ಯೋಗಾವಕಾಶಗಳ ಸೃಷ್ಟಿ

 

2024 ವೇಳೆಗೆ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಜಿಡಿಪಿಯೊಂದಿಗೆ ಭಾರತೀಯ ಆರ್ಥಿಕತೆಯು ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿ ಹೊರಹೊಮ್ಮುವ ಸಾಧ್ಯತೆಯಿದೆ. ಎಂಎಸ್ಎಂಇ ವಲಯದಿಂದ ಕನಿಷ್ಠ ಎರಡು ಟ್ರಿಲಿಯನ್ ಡಾಲರ್ ಮೌಲ್ಯದ ಕೊಡುಗೆ ಬರುವಂತೆ ನೋಡಿಕೊಳ್ಳುವುದು ನಮ್ಮ ದೃಷ್ಟಿಯಾಗಿದೆ. ಇದನ್ನು ಸಾಧಿಸಲು, ಎಂಎಸ್ಎಂಇಗಳ ಸಬಲೀಕರಣಕ್ಕಾಗಿ ತಂತ್ರಜ್ಞಾನ ಪ್ರಗತಿ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ಎಂಎಸ್ಎಂಇ ಈ ವರ್ಷದಲ್ಲಿ ಹಲವು ಕ್ರಮಗಳನ್ನು ತೆಗೆದುಕೊಂಡಿದೆ.

 

ಪ್ರಧಾನ ಮಂತ್ರಿಗಳ ಉದ್ಯೋಗ ಸೃಷ್ಟಿ ಕಾರ್ಯಕ್ರಮ (PMEGP):

ಪ್ರಧಾನ ಮಂತ್ರಿಗಳ ಉದ್ಯೋಗ ಸೃಷ್ಟಿ ಕಾರ್ಯಕ್ರಮದ (ಪಿಎಂಇಜಿಪಿ) ಅಡಿಯಲ್ಲಿ 65,312 ಹೊಸ ಅತಿ ಸಣ್ಣ ಉದ್ಯಮಗಳನ್ನು ಸ್ಥಾಪಿಸಲಾಗಿದ್ದು, 5,22,496 ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗಿದೆ ಮತ್ತು 1929.83 ಕೋಟಿ ರೂ.ಗಳ ಸಹಾಯಧನವನ್ನುಬಳಸಿಕೊಳ್ಳಲಾಗಿದೆ.

ಪಿಎಂಇಜಿಪಿಯು 2008-09 ರಿಂದ ಎಂಎಸ್ಎಂಇ ಸಚಿವಾಲಯವು ಜಾರಿಗೆ ತರುತ್ತಿರುವ ಪ್ರಮುಖ ಸಾಲಾಧಾರಿತ ಸಹಾಯಧನ ಕಾರ್ಯಕ್ರಮವಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ನಿರುದ್ಯೋಗಿ ಯುವಕರಿಗೆ ಸಹಾಯ ಮಾಡುವ ಮೂಲಕ ಕೃಷಿಯೇತರ ವಲಯದಲ್ಲಿ ಅತಿ ಸಣ್ಣ ಉದ್ಯಮಗಳನ್ನು ಸ್ಥಾಪಿಸುವ ಮೂಲಕ ಸ್ವಯಂ-ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶವನ್ನು ಯೋಜನೆ ಹೊಂದಿದೆ.

 

ಕ್ಲಸ್ಟರ್ ಅಭಿವೃದ್ಧಿ ಕಾರ್ಯಕ್ರಮ:

ಅತಿ ಸಣ್ಣ ಉದ್ಯಮಗಳ - ಕ್ಲಸ್ಟರ್ ಅಭಿವೃದ್ಧಿ ಕಾರ್ಯಕ್ರಮ (ಎಂಎಸ್-ಸಿಡಿಪಿ):

i)          17 ಸಾಮಾನ್ಯ ಸೌಲಭ್ಯ ಕೇಂದ್ರಗಳು ಮತ್ತು 14 ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಆರಂಭಿಸಲಾಗಿದೆ.

ii)         24 ಸಾಮಾನ್ಯ ಸೌಲಭ್ಯ ಕೇಂದ್ರಗಳು ಮತ್ತು 25 ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

 

SFURTI ಕ್ಲಸ್ಟರ್ಗಳು:

ಮೊದಲೇ ಅನುಮೋದಿಸಲಾಗಿದ್ದ 51 SFURTI (ಸಾಂಪ್ರದಾಯಿಕ ಕೈಗಾರಿಕೆಗಳ ಪುನರುತ್ಪಾದನೆಗಾಗಿ ನಿಧಿಯ ಯೋಜನೆ) ಕ್ಲಸ್ಟರ್ಗಳು ಪೂರ್ಣಗೊಂಡಿವೆ ಮತ್ತು ಅವು ಕಾರ್ಯಾರಂಭ ಮಾಡಿವೆ. ಇದಲ್ಲದೆ, 2019 ಜನವರಿ 01 ರಂದು ಇಲ್ಲಿಯವರೆಗೆ ಯೋಜನಾ ಸಂಚಾಲನಾ ಸಮಿತಿಯಿಂದ  SFURTI ಕ್ಲಸ್ಟರ್ಗಳ 78 ಪ್ರಸ್ತಾಪಗಳನ್ನು ಅನುಮೋದಿಸಲಾಗಿದೆ. ಇದರಿಂದ ಸುಮಾರು 48,608 ಕುಶಲಕರ್ಮಿಗಳು / ಕಾರ್ಮಿಕರು ಪ್ರಯೋಜನ ಪಡೆದುಕೊಂಡಿದ್ದಾರೆ.

ಸೌರ ಚರಕ ಕ್ಲಸ್ಟರ್ಗಳು:

ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅವರು 2018 ಜೂನ್ 27 ರಂದು ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಸೌರ ಚರಕ ಮಿಷನ್ ಗೆ ಚಾಲನೆ ನೀಡಿದರು.

ಪ್ರಸಕ್ತ 2019-20 ಹಣಕಾಸು ವರ್ಷದಲ್ಲಿ ಸೌರ ಚರಕ ಕ್ಲಸ್ಟರ್ಗಳ 11 ವಿವರವಾದ ಯೋಜನಾ ವರದಿಗಳನ್ನು (ಡಿಪಿಆರ್) ಯೋಜನಾ ಚಾಲನಾ ಸಮಿತಿಯು ಅನುಮೋದಿಸಿದೆ.

ಕ್ರೆಡಿಟ್ ಲಿಂಕ್ ಕ್ಯಾಪಿಟಲ್ ಸಬ್ಸಿಡಿಗೆ  ಮರು-ಚಾಲನೆ:

ಕ್ರೆಡಿಟ್ ಲಿಂಕ್ಡ್ ಕ್ಯಾಪಿಟಲ್ ಸಬ್ಸಿಡಿ-ಟೆಕ್ನಾಲಜಿ ಅಪ್ಗ್ರೇಡೇಶನ್ ಸ್ಕೀಮ್ (ಸಿಎಲ್ಸಿಎಸ್-ಟಿಯುಎಸ್) ಅಡಿಯಲ್ಲಿ ಕ್ರೆಡಿಟ್ ಲಿಂಕ್ಡ್ ಕ್ಯಾಪಿಟಲ್ ಸಬ್ಸಿಡಿ ಘಟಕವನ್ನು ಮುಂದುವರಿಸಲು ಫೆಬ್ರವರಿ 2019 ರಲ್ಲಿ ಸರ್ಕಾರ ಅನುಮೋದಿನೆ ನೀಡಿದೆ. ಸಿಎಲ್ಸಿಎಸ್-ಟಿಯು ಯೋಜನೆಯ ಕ್ರೆಡಿಟ್ ಲಿಂಕ್ಡ್ ಕ್ಯಾಪಿಟಲ್ ಸಬ್ಸಿಡಿ ಘಟಕಕ್ಕೆ ಕೇಂದ್ರ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ ಶ್ರೀ ನಿತಿನ್ ಗಡ್ಕರಿಯವರು 5.9.2019ರಂದು ಡಿಸಿ (ಎಂಎಸ್ಎಂಇ) ಮತ್ತು ನೋಡಲ್ ಬ್ಯಾಂಕುಗಳ ನಡುವಿನ ಒಪ್ಪಂದಗಳಿಗೆ ಸಹಿ ಹಾಕುವ ಮೂಲಕ ಚಾಲನೆ ನೀಡಿದರು. 2019-20ನೇ ಹಣಕಾಸು ವರ್ಷದಲ್ಲಿ 338.01 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.

ಅತಿ ಸಣ್ಣ ಮತ್ತು ಸಣ್ಣ ಉದ್ಯಮಗಳಿಗೆ ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್ (ಸಿಜಿಟಿಎಂಎಸ್ಇ):

ಸಿಜಿಟಿಎಂಎಸ್ ಅಡಿಯಲ್ಲಿ 5,46,127 ಸಾಲ ಸೌಲಭ್ಯಗಳನ್ನು ರೂ. 33,381 ಕೋಟಿ ರೂ.ಗಳ ಗ್ಯಾರಂಟಿಯೊಂದಿಗೆ ಮಂಜೂರು ಮಾಡಲಾಗಿದೆ.

ಟೆಕ್ನಾಲಜಿ ಸೆಂಟರ್ ಸಿಸ್ಟಮ್ಸ್ ಪ್ರೋಗ್ರಾಂ (ಟಿಸಿಎಸ್‌ಪಿ):

200 ಮಿಲಿಯನ್ ಡಾಲರ್ ವಿಶ್ವ ಬ್ಯಾಂಕ್ ಸಾಲ ನೆರವು ಸೇರಿದಂತೆ ಅಂದಾಜು 2200 ಕೋಟಿ ರೂ.ಗಳ ವೆಚ್ಚದಲ್ಲಿ 15 ಹೊಸ ಟೂಲ್ ರೂಮ್ಸ್ ಮತ್ತು ತಂತ್ರಜ್ಞಾನ ಅಭಿವೃದ್ಧಿ ಕೇಂದ್ರಗಳನ್ನು (ಟಿಸಿಗಳು) ಸ್ಥಾಪಿಸಲು ಮತ್ತು ದೇಶಾದ್ಯಂತ ಅಸ್ತಿತ್ವದಲ್ಲಿರುವ 18 ಟಿಸಿಗಳನ್ನು ನವೀಕರಿಸಲು ಎಂಎಸ್‌ಎಂಇ ಸಚಿವಾಲಯವು ಟೆಕ್ನಾಲಜಿ ಸೆಂಟರ್ ಸಿಸ್ಟಮ್ಸ್ ಪ್ರೋಗ್ರಾಂ (ಟಿಸಿಎಸ್‌ಪಿ) ಯನ್ನು ಅನುಷ್ಠಾನಗೊಳಿಸಿದೆ. ಭಿವಾಡಿ, ಭೋಪಾಲ್, ಪುಡ್ಡಿ ಮತ್ತು ತೀನ್ಸುಕಿಯಾದ ನಾಲ್ಕು ತಂತ್ರಜ್ಞಾನ ಕೇಂದ್ರಗಳು ಕಾರ್ಯಾರಂಭಕ್ಕೆ ಸಿದ್ಧವಾಗಿವೆ.

ಸಚಿವಾಲಯದ ತಂತ್ರಜ್ಞಾನ ಕೇಂದ್ರಗಳು ಮತ್ತು ಇತರ ತರಬೇತಿ ಸಂಸ್ಥೆಗಳ ಮೂಲಕ ನುರಿತ ಯುವಕರ ಸಂಖ್ಯೆ 3,59,361 ಆಗಿದೆ.

 

ಜಿಇಎಂ- ಸರ್ಕಾರಿ ಇ-ಮಾರುಕಟ್ಟೆ ಸ್ಥಳ:

  • ಜಿಇಎಂನಲ್ಲಿ 62,085 ಅತಿ ಸಣ್ಣ ಮತ್ತು ಸಣ್ಣ ಉದ್ಯಮಗಳ (ಎಂಎಸ್‌ಇ) ನೋಂದಣಿ
  • ಜಿಇಎಂ ಪೋರ್ಟಲ್‌ನಲ್ಲಿನ ಆದೇಶಗಳ ಮೌಲ್ಯದ ಶೇ.50.74 ಎಂಎಸ್‌ಇಗಳಿಂದ ಬಂದಿದೆ.
  • ಅತಿ ಸಣ್ಣ ಮತ್ತು ಸಣ್ಣ ಉದ್ಯಮಗಳಿಂದ (ಎಂಎಸ್‌ಇ) ಕೇಂದ್ರೀಯ ಸಾರ್ವಜನಿಕ ವಲಯದ (ಸಿಪಿಎಸ್‌ಯು) ಉದ್ಯಮಗಳು ಮಾಡುವ ಖರೀದಿಯು ಶೇ.20ರ ಬದಲಿಗೆ ಶೇ.25 ರಷ್ಟು ಇರಬೇಕೆಂದು ಸರ್ಕಾರ ಕಡ್ಡಾಯಗೊಳಿಸಿದೆ.
  •  71,199 ಎಂಎಸ್‌ಇಗಳಿಂದ 20,139.91 ಕೋಟಿ ರೂ. ಮೌಲ್ಯದ ಸರಕು ಮತ್ತು ಸೇವೆಗಳ ಖರೀದಿ ಮಾಡಲಾಗಿದೆ. ಸಿಪಿಎಸ್‌ಇಗಳ ಒಟ್ಟು ಖರೀದಿಯಲ್ಲಿ ಎಂಎಸ್‌ಇಗಳಿಂದ ಖರೀದಿಯು ಶೇ.28.49 ರಷ್ಟಿದೆ.

ಡಿಜಿಟಲ್ ಎಂಎಸ್‌ಎಂಇ: ಎಂಎಸ್‌ಎಂಇಗಳನ್ನು ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ತರಲು ಮತ್ತು ಅವರಿಗೆ ಡಿಜಿಟಲ್ ಗುರುತನ್ನು ಒದಗಿಸಲು ಸಾಮಾನ್ಯ ಸೇವಾ ಕೇಂದ್ರಗಳು (ಸಿಎಸ್‌ಸಿ), ವಾಣಿಜ್ಯೋದ್ಯಮ ಅಭಿವೃದ್ಧಿ ಸಂಸ್ಥೆ (ಇಡಿಐಐ) ಯಂತಹ ಸಂಸ್ಥೆಗಳು ಸಿದ್ಧವಾಗಿವೆ. ಎಂಎಸ್‌ಎಂಇ ಮಧ್ಯಸ್ಥಗಾರರಿಗಾಗಿ ಮತ್ತು ಎಲ್ಲಾ ಎಂಎಸ್‌ಎಂಇ ಸೇವಾ ಪೂರೈಕೆದಾರರನ್ನು ಒಂದೇ ವೇದಿಕೆಯಲ್ಲಿ ಕರೆತರಲು ದೇಶಾದ್ಯಂತ ಜಾಗೃತಿ ಕಾರ್ಯಕ್ರಮಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ.

ಲೀನ್ ಮ್ಯಾನುಫ್ಯಾಕ್ಚರಿಂಗ್: ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ (ಕ್ಯೂಸಿಐ) ಮತ್ತು ರಾಷ್ಟ್ರೀಯ ಉತ್ಪಾದಕತೆ ಮಂಡಳಿ (ಎನ್‌ಪಿಸಿ) ಮೂಲಕ ದೇಶಾದ್ಯಂತ 267 ಕ್ಲಸ್ಟರ್ ಆಫ್ ಎಂಎಸ್‌ಎಂಇಗಳಲ್ಲಿ ಯೋಜನೆ ಜಾರಿಯಲ್ಲಿದೆ. ಈ ಯೋಜನೆಯನ್ನು ಹೆಚ್ಚಿನ ಎಂಎಸ್‌ಎಂಇ ಕ್ಲಸ್ಟರ್‌ಗಳಿಗೆ ತಲುಪಿಸಲು ರಾಜ್ಯ ಸರ್ಕಾರಗಳು, ಕೈಗಾರಿಕಾ ಸಂಘಗಳನ್ನು ಸಹ ಇದರಲ್ಲಿ ಸೇರಿಸಿಕೊಳ್ಳಲಾಗಿದೆ.

ಇನ್ಕುಬೇಷನ್: 200 ಕ್ಕೂ ಹೆಚ್ಚು ತಾಂತ್ರಿಕ ಸಂಸ್ಥೆಗಳು, ಕೈಗಾರಿಕಾ ಸಂಘಗಳು, ಸಾಮಾಜಿಕ ಉದ್ಯಮಗಳಿಗೆ ಇನ್ಕುಬೇಷನ್ ಕೇಂದ್ರಗಳನ್ನು ಆರಂಭಿಸಲು ಅನುಮೋದನೆ ನೀಡಲಾಗಿದೆ. ಯೋಜನೆಯ ಪ್ರಸ್ತಾಪಗಳನ್ನು ಬೆಂಬಲಿಸಲು ವ್ಯಾಪಾರ ಪ್ರಸ್ತಾಪಗಳನ್ನು ಹೊಂದಿರುವ ನವೀನ ಆಲೋಚನೆಗಳನ್ನು ಅವರಿಂದ ಆಹ್ವಾನಿಸಲಾಗುತ್ತಿದೆ. ಯೋಜನೆಯಡಿ ಸ್ಟಾರ್ಟ್ ಅಪ್ ಗಳನ್ನು ಆರಂಭಿಸಲು ಪ್ರಾರಂಭಿಸಲು 1 ಕೋಟಿ ರೂ.ವರೆಗೆ ಮೂಲ ಬಂಡವಾಳ ಒದಗಿಸಲಾಗುವುದು.

ವಿನ್ಯಾಸ ಕ್ಲಿನಿಕ್: ಗ್ರಾಮೀಣ ಮತ್ತು ಕಲೆ ಆಧಾರಿತ ಉದ್ಯಮಗಳು ಸೇರಿದಂತೆ ಎಂಎಸ್‌ಎಂಇ ಉದ್ಯಮಿಗಳಿಗೆ ವಿನ್ಯಾಸ ಬೆಂಬಲವನ್ನು ನೀಡುವಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್‌ಆರ್‌ಡಿ), ಕೈಗಾರಿಕಾ ಸಂಘಗಳು, ಸಾಮಾಜಿಕ ಉದ್ಯಮಗಳು, ಸ್ವಸಹಾಯ ಗುಂಪುಗಳ ಅಡಿಯಲ್ಲಿ ವಿವಿಧ ತಾಂತ್ರಿಕ ಸಂಸ್ಥೆಗಳಿಗೆ ವಿನ್ಯಾಸ ಯೋಜನೆ ತೆರೆಯಲಾಗಿದೆ. ಈಗಾಗಲೇ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ (ಎನ್‌ಐಡಿ) ನಿಂದ ಕಾರ್ಯನಿರ್ವಹಿಸುತ್ತಿರುವ ನಾಲ್ಕು ವಿನ್ಯಾಸ ಕೇಂದ್ರಗಳ ಜೊತೆಗೆ ಹೆಚ್ಚುವರಿಯಾಗಿ 80 ಹೊಸ ವಿನ್ಯಾಸ ಕೇಂದ್ರಗಳನ್ನು ವಿವಿಧ ಸ್ಥಳಗಳಲ್ಲಿ ತೆರೆಯಲಾಗಿದೆ. ಎಲ್ಲಾ ಎಂಎಸ್‌ಎಂಇಗಳು ಮತ್ತು ವಿದ್ಯಾರ್ಥಿಗಳು ತಮ್ಮ ವಿನ್ಯಾಸ ಯೋಜನೆಗಳನ್ನು ಯೋಜನೆಯಡಿ ಧನಸಹಾಯಕ್ಕಾಗಿ ಸಲ್ಲಿಸುವಂತೆ ಕೋರಲಾಗುತ್ತಿದೆ.

ಜೀರೋ ಡಿಫೆಕ್ಟ್ ಜೀರೋ ಎಫೆಕ್ಟ್ (ಜೆಡ್) ಪ್ರಮಾಣೀಕರಣ ಯೋಜನೆಯಲ್ಲಿ ಎಂಎಸ್‌ಎಂಇಗಳಿಗೆ ಹಣಕಾಸಿನ ನೆರವು: ಯೋಜನೆಯು ಆರಂಭವಾದಾಗಿನಿಂದ 23070 ಎಂಎಸ್‌ಎಂಇಗಳನ್ನು ಜೆಡ್ ಯೋಜನೆಯಡಿ ನೋಂದಾಯಿಸಲಾಗಿದೆ. ಒಂದು ದಶಲಕ್ಷಕ್ಕೂ ಹೆಚ್ಚು ಎಂಎಸ್‌ಎಂಇಗಳನ್ನು ZED ನಲ್ಲಿ ಸೇರಿಸಲು ಅದರ ನಿಯತಾಂಕಗಳನ್ನು ಸರಳೀಕರಿಸಲಾಗುತ್ತಿದೆ. ಈ ಯೋಜನೆಗೆ ವ್ಯಾಪಕ ಲಭ್ಯತೆಗಾಗಿ ಎಲ್ಲಾ ಕೈಗಾರಿಕಾ ಸಂಘಗಳು ಮತ್ತು ತಾಂತ್ರಿಕ ಸಂಸ್ಥೆಗಳನ್ನು ಇದರಲ್ಲಿ ಸೇರಿಸಿಕೊಳ್ಳಲಾಗಿದೆ.

ಬೌದ್ಧಿಕ ಆಸ್ತಿ ಹಕ್ಕು (ಐಪಿಆರ್) ಯೋಜನೆಯ ಬಗ್ಗೆ ಜಾಗೃತಿ ಮೂಡಿಸುವುದು: ಎಂಎಸ್‌ಎಂಇಗಳಿಗೆ ಅರ್ಜಿ ಸಲ್ಲಿಸಲು ಮತ್ತು ತಮ್ಮ ಟ್ರೇಡ್‌ಮಾರ್ಕ್‌ಗಳು ಮತ್ತು ಪೇಟೆಂಟ್‌ಗಳನ್ನು ನೋಂದಾಯಿಸಲು ಸಹಾಯ ಮಾಡಲು ಒಬ್ಬ ಐಪಿ ವಕೀಲರನ್ನು ಹೊಂದಲು ದೇಶದ ವಿವಿಧ ಭಾಗಗಳಲ್ಲಿ 60 ಕ್ಕೂ ಹೆಚ್ಚು ಹೊಸ ಐಪಿ ಫೆಸಿಲಿಟೇಶನ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಜಿಐಗಳ ನೋಂದಣಿಗೆ ಅರ್ಜಿ ಸಲ್ಲಿಸಲು ಎಫ್‌ಪಿಒಗಳು ನೆರವು ಪಡೆಯುತ್ತವೆ. ಎಂಎಸ್‌ಎಂಇಗಳಲ್ಲಿ ಐಪಿ ಹಕ್ಕುಗಳಿಗಾಗಿ ಹೆಚ್ಚು ಹೆಚ್ಚು ಜಾಗೃತಿ ಮೂಡಿಸಲಾಗುತ್ತಿದೆ.

ಖರೀದಿ ಮತ್ತು ಮಾರುಕಟ್ಟೆ ಬೆಂಬಲ: ದೇಶದ ಎಲ್ಲಾ 731 ಜಿಲ್ಲೆಗಳಿಗೆ ಜಿಲ್ಲಾ ಉದ್ಯಮ ಸಮಾಗಮಗಳನ್ನು ಯೋಜಿಸಿ ಅನುಮೋದನೆ ನೀಡಲಾಗಿದೆ. ರಾಜ್ಯ ಸರ್ಕಾರಗಳು / ಕೈಗಾರಿಕಾ ಸಂಘಗಳು / ಸಾಮಾಜಿಕ ಉದ್ಯಮಗಳ ಮೂಲಕ ದೇಶಾದ್ಯಂತ ವ್ಯಾಪಾರ ಮೇಳಗಳು / ಪ್ರದರ್ಶನಗಳು / ಜಾಗೃತಿ ಕಾರ್ಯಕ್ರಮಗಳು / ಸೆಮಿನಾರ್‌ಗಳನ್ನು ಆಯೋಜಿಸಲು ಪಿಎಂಎಸ್ ಅಡಿಯಲ್ಲಿ 350 ಕ್ಕೂ ಹೆಚ್ಚು ಕಾರ್ಯಕ್ರಮಗಳಿಗೆ 80 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ.

ಉದ್ಯಮಶೀಲತೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ (ಇಎಸ್‌ಡಿಪಿ):  ರಾಜ್ಯ ಸರ್ಕಾರಗಳು / ಕೈಗಾರಿಕಾ ಸಂಘಗಳು / ಸಾಮಾಜಿಕ ಉದ್ಯಮಗಳು / ಸರ್ಕಾರಿ ಸಂಸ್ಥೆಗಳ ಮೂಲಕ ದೇಶಾದ್ಯಂತ ವಿವಿಧ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸಲು ಇಎಸ್‌ಡಿಪಿ ಅಡಿಯಲ್ಲಿ 135 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ. ಈ ವರ್ಷದಲ್ಲಿ ಒಟ್ಟು 3000 ಕಾರ್ಯಕ್ರಮಗಳನ್ನು ನಡೆಸಲಾಗಿದೆ ಅಥವಾ ಮಂಜೂರು ಮಾಡಲಾಗಿದೆ.

ಯು.ಕೆ. ಸಿನ್ಹಾ ಸಮಿತಿಯ ಶಿಫಾರಸುಗಳು:

ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಕುರಿತು ಶ್ರೀ ಯು.ಕೆ. ಸಿನ್ಹಾ ನೇತೃತ್ವದ ಆರ್‌ಬಿಐ ತಜ್ಞರ ಸಮಿತಿ 37 ಪ್ರಮುಖ ಶಿಫಾರಸುಗಳನ್ನು ಮಾಡಿದೆ. ಸಂಬಂಧಪಟ್ಟ ಸಚಿವಾಲಯಗಳು / ಇಲಾಖೆಗಳು / ಸಂಸ್ಥೆಗಳು / ರಾಜ್ಯಗಳು ತಮಗೆ ಸಂಬಂಧಿಸಿದ ಕ್ರಿಯಾತ್ಮಕ ಅಂಶಗಳ ಬಗ್ಗೆ ಮುಂದಿನ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ. ಸಮಿತಿಯ ಶಿಫಾರಸುಗಳ ಅನುಷ್ಠಾನ ಸ್ಥಿತಿಯನ್ನು ಪರಿಶೀಲಿಸಲು, 31.10.2019 ರಂದು ಸಂಪುಟ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಕಾರ್ಯದರ್ಶಿಗಳ ಸಮಿತಿಯ (ಸಿಒಎಸ್) ಸಭೆ ನಡೆಯಿತು.

ಎಸ್‌ಎಂಇಗಳು ಮತ್ತು ಅಂತರರಾಷ್ಟ್ರೀಯ ಸಹಕಾರ:

  • ಎರಡನೇ ಅಂತರರಾಷ್ಟ್ರೀಯ ಎಸ್‌ಎಂಇ ಸಮಾವೇಶವನ್ನು ಎಂಎಸ್‌ಎಂಇ ಸಚಿವಾಲಯವು ವಿದೇಶಾಂಗ ಸಚಿವಾಲಯದ ಆರ್ಥಿಕ ರಾಜತಾಂತ್ರಿಕತೆ ಮತ್ತು ರಾಜ್ಯಗಳ ವಿಭಾಗ ಮತ್ತು ಭಾರತ ಎಸ್‌ಎಂಇ ಫೋರಂ ಸಹಯೋಗದೊಂದಿಗೆ ಜೂನ್ 27- 29 ರಂದು ಆಯೋಜಿಸಿತ್ತು. ಭಾರತದಿಂದ 1385 ಮತ್ತು 44 ದೇಶಗಳ 175 ಉದ್ಯಮಿಗಳು ಭಾಗವಹಿಸಿದ್ದರು. ಯುರೋಪಿಯನ್, ಆಫ್ರಿಕನ್ ಮತ್ತು ಲ್ಯಾಟಿನ್ ಅಮೇರಿಕನ್ ದೇಶಗಳು ಸೇರಿದಂತೆ ಆಯಾ ವಾಣಿಜ್ಯ ವಿಭಾಗಗಳು ಸೇರಿದಂತೆ 16 ದೇಶಗಳ ರಾಯಭಾರಿಗಳು ಸಮಾವೇಶದಲ್ಲಿ ವ್ಯಾಪಾರ ಅವಕಾಶಗಳನ್ನು ಪ್ರಸ್ತುತಪಡಿಸಿದರು.

ಪೂರ್ವ-ವ್ಯವಸ್ಥೆ ಮಾಡಲಾದ 198 ಬಿ 2 ಬಿ ಸಭೆಗಳನ್ನು ನಡೆಸಲಾಯಿತು, ಭವಿಷ್ಯದಲ್ಲಿನ ಸಹಯೋಗಕ್ಕಾಗಿ 42 ಇಚ್ಛಾ ಪತ್ರಗಳನ್ನು ಸಲ್ಲಿಸಲಾಯಿತು. 729 ಬಿ 2 ಬಿ ಟ್ರೇಡ್ ಕನೆಕ್ಟ್ ಫಾರ್ಮ್‌ಗಳನ್ನು ಭಾರತೀಯ ಉದ್ಯಮಿಗಳು ಸಲ್ಲಿಸಿದರು. ಅಂತರರಾಷ್ಟ್ರೀಯ ಬಿ 2 ಬಿ ಹೊಂದಾಣಿಕೆಗಾಗಿ ಒಟ್ಟು 3015 ವಿನಂತಿಗಳನ್ನು ಸ್ವೀಕರಿಸಲಾಗಿದ್ದು, ಇದಕ್ಕಾಗಿ ಅಂತರರಾಷ್ಟ್ರೀಯ ಎಸ್‌ಎಂಇ ಗೇಟ್‌ವೇ ಯೋಜಿಸಲಾಗಿದೆ. ಪುದುಚೇರಿಯಲ್ಲಿ 10 ಮಿಲಿಯನ್ ಡಾಲರ್ ಜಂಟಿ ಹೂಡಿಕೆಯೊಂದಿಗೆ ಸ್ಥಾವರವನ್ನು ಸ್ಥಾಪಿಸಲು ಮತ್ತು ತಂತ್ರಜ್ಞಾನ ವರ್ಗಾವಣೆಗಾಗಿ ಸ್ಪ್ಯಾನಿಷ್ ಕಂಪನಿ ಎಂಸಿಯು ಕೋಟಿಂಗ್ಸ್ ಮತ್ತು ಭಾರತೀಯ ಕಂಪನಿ ಹೈಟೆಕ್ ಎಂಜಿನಿಯರ್ಸ್ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.

  • ಎಂಎಸ್‌ಎಂಇ ಸಚಿವಾಲಯವು ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಎಂಎಸ್‌ಎಂಇಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಮತ್ತು ಸುಸ್ಥಿರ ಮತ್ತು ಮಹತ್ವದ ಜಾಗತಿಕ ಸಹಭಾಗಿತ್ವವನ್ನು ನಿರ್ಮಿಸುವ ಮೂಲಕ ಅವುಗಳ ಬೆಳವಣಿಗೆಯನ್ನು ಉತ್ತೇಜಿಸುವ ಉದ್ದೇಶದಿಂದ.ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಸಹಭಾಗಿತ್ವದಲ್ಲಿ ನವದೆಹಲಿಯಲ್ಲಿ 16 ನೇ ಆವೃತ್ತಿಯ ಜಾಗತಿಕ ಎಸ್‌ಎಂಇ ಉದ್ಯಮ ಶೃಂಗಸಭೆ 2019 ಅನ್ನು ಸೆಪ್ಟೆಂಬರ್ 24-25 ರಂದು ನವದೆಹಲಿಯಲ್ಲಿ ಆಯೋಜಿಸಿತ್ತು.

 

ಖಾದಿಯನ್ನು ಜನಪ್ರಿಯಗೊಳಿಸುವುದು ಮತ್ತು ಗ್ರಾಮೋದ್ಯೋಗಗಳನ್ನು ಸಶಕ್ತಗೊಳಿಸುವುದು:

  • ಖಾದಿಗೆ ಪ್ರತ್ಯೇಕ ಎಚ್‌ಎಸ್ ಕೋಡ್, ರಫ್ತಿಗೆ ಉತ್ತೇಜನ: ಖಾದಿ ತನ್ನ ಉತ್ಪನ್ನಗಳನ್ನು ರಫ್ತು ಮಾಡಲು ವರ್ಗೀಕರಿಸಲು ನವೆಂಬರ್ 4 ರಂದು ಕೇಂದ್ರ ಸರ್ಕಾರವು ಹೊರಡಿಸಿದ ಅನನ್ಯವಾದ ಎಚ್‌ಎಸ್ ಕೋಡ್ ಅನ್ನು ಪಡೆದುಕೊಂಡಿದೆ. ಜವಳಿ ಉತ್ಪನ್ನಗಳ ಸಾಮಾನ್ಯ ಲೀಗ್‌ನಿಂದ ಪ್ರತ್ಯೇಕವಾಗಿ ವರ್ಗೀಕರಿಸಲ್ಪಟ್ಟ ಖಾದಿಯನ್ನು ರಫ್ತು ಮಾಡಲು ಬಹುನಿರೀಕ್ಷಿತವಾಗಿದ್ದ ಕ್ರಮದಲ್ಲಿ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಭಾರತದ ಈ ಅನನ್ಯವಾದ ಬಟ್ಟೆಗೆ ಪ್ರತ್ಯೇಕ ಎಚ್‌ಎಸ್ ಕೋಡ್ ಅನ್ನು ನಿಗದಿಪಡಿಸಿದೆ.

ಸರ್ಕಾರದ ಈ ನಿರ್ಧಾರವು ಖಾದಿ ರಫ್ತು ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ತೆರೆಯಲಿದೆ. ಈ ಮೊದಲು ಖಾದಿಯು ವಿಶೇಷ ಎಚ್‌ಎಸ್ ಕೋಡ್ ಹೊಂದಿರಲಿಲ್ಲ. ಪರಿಣಾಮವಾಗಿ, ಈ ಅನನ್ಯ ಬಟ್ಟೆಯ ರಫ್ತಿಗೆ ಸಂಬಂಧಿಸಿದ ಎಲ್ಲಾ ದತ್ತಾಂಶಗಳು ಜವಳಿ ಇಲಾಖೆಯ ಅಡಿಯಲ್ಲಿ ಸಾಮಾನ್ಯ ಬಟ್ಟೆಯಾಗಿ ಬರುತ್ತಿದ್ದವು. ಈಗ ಸಚಿವಾಲಯವು ರಫ್ತಿನ ಅಂಕಿಅಂಶಗಳ ಮೇಲೆ ನಿರಂತರವಾಗಿ ಕಣ್ಣಿಡಲು ಸಾಧ್ಯವಾಗುತ್ತದೆ ಮತ್ತು ರಫ್ತು ಕಾರ್ಯತಂತ್ರಗಳನ್ನು ಯೋಜಿಸಲು ಸಹಾಯ ಮಾಡುತ್ತದೆ.

  • ಗೇಲ್ ಮತ್ತು ಪಿಎಫ್‌ಸಿಯಿಂದ 6 ಕೋಟಿ ರೂ ಆದೇಶ ಪಡೆದ ಕೆವಿಐಸಿ: ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ಖಾದಿ ಉಡುಗೊರೆ ಕೂಪನ್‌ಗಳ ರೂಪದಲ್ಲಿ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಗೇಲ್) ನಿಂದ 5.88 ಕೋ.ರೂ. ಮತ್ತು ನವದೆಹಲಿಯ ಪವರ್ ಫೈನಾನ್ಸ್ ಕಾರ್ಪೊರೇಶನ್‌ನಿಂದ (ಪಿಎಫ್‌ಸಿ) 75.00 ಲಕ್ಷ ರೂ.ಗಳ ಆದೇಶ ಪಡೆದಿದೆ. ಕೆವಿಐಸಿಯ ಎಲ್ಲಾ ವಿಭಾಗೀಯ ಮಾರಾಟ ಮಳಿಗೆಗಳಿಂದ ವರ್ಷಪೂರ್ತಿ ನೌಕರರು ಈ ಉಡುಗೊರೆ ಕೂಪನ್‌ಗಳನ್ನು ಪುನಃ ಪಡೆದುಕೊಳ್ಳಬಹುದು. ಈ ಕ್ರಮದಿಂದಾಗಿ ನಿಶ್ಚಿತವಾಗಿಯೂ ಖಾದಿ ಉತ್ಪನ್ನ ಮಾರುಕಟ್ಟೆಯು ವಿಸ್ತರಿಸುತ್ತದೆ.

 

  • ಗೋವಾದಲ್ಲಿ ಕೆವಿಐಸಿಯ ಹೊಸ ಉಪಕ್ರಮಗಳು: ಕೆವಿಐಸಿಯು ಇತ್ತೀಚೆಗೆ 160 ಕುಟುಂಬಗಳಿಗೆ ವಿದ್ಯುತ್ ಕುಂಬಾರಿಕೆ ಚಕ್ರಗಳನ್ನು ವಿತರಿಸಿತು ಮತ್ತು ಗೋವಾದಲ್ಲಿ ತರಬೇತಿ ಪಡೆದ 50 ಮಹಿಳೆಯರಿಗೆ ಹೊಸ ಮಾದರಿಯ ಚರಕಗಳನ್ನು (ನೂಲುವ ಚಕ್ರಗಳು) ವಿತರಿಸಿತು. ಇದರಿಂದ 700 ಜನರಿಗೆ ನೇರ ಉದ್ಯೋಗ ಸೃಷ್ಟಿಯಾಗುತ್ತದೆ. ಕೆವಿಐಸಿ ಗೋವಾದಲ್ಲಿ ಲಿಜ್ಜತ್ ಹಪ್ಪಳ ಘಟಕವನ್ನು ಸ್ಥಾಪಿಸುತ್ತಿದೆ, ಇದು ಸ್ಥಳೀಯ ಮಹಿಳೆಯರಿಗೆ 200 ನೇರ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಗೋವಾದಲ್ಲಿ ಇಂತಹ ಉಪಕ್ರಮಗಳು ಮೊದಲ ಬಾರಿಯಾಗಿವೆ. ಏಕೆಂದರೆ ಗೋವಾದಲ್ಲಿ ಈ ಹಿಂದೆ ಯಾವುದೇ ನೂಲುವ ಮತ್ತು ನೇಯ್ಗೆಯ ಚಟುವಟಿಕೆ ಅಥವಾ ಲಿಜ್ಜತ್ ಹಪ್ಪಳ ಘಟಕಗಳು ಇರಲಿಲ್ಲ. ಹೆಚ್ಚು ಶ್ರಮದಾಯಕವಾದ ಮತ್ತು ಉತ್ಪಾದನೆಯ ವಿಷಯದಲ್ಲಿ ಕಡಿಮೆ ದಕ್ಷತೆಯನ್ನು ಹೊಂದಿದ್ದ ಸಾಂಪ್ರದಾಯಿಕ ಕುಂಬಾರಿಕೆ ಚಕ್ರದ ಬದಲಿಗೆ ಮೊದಲ ಬಾರಿಗೆ ವಿದ್ಯುತ್ ಚಾಲಿತ ಕುಂಬಾರಿಕೆ ಚಕ್ರಗಳನ್ನು ನೀಡಲಾಗಿದೆ, ಗೋವಾ ರಾಜ್ಯದಲ್ಲಿ, 43 ಜೇನುಸಾಕಣೆದಾರರಿಗೆ 215 ಜೇನು ಸಾಕಣೆ-ಪೆಟ್ಟಿಗೆಗಳನ್ನು ವಿತರಿಸಲಾಗಿದೆ.

 

  • ಭಯೋತ್ಪಾದನೆ ಪೀಡಿತ ಜಮ್ಮು ಮತ್ತು ಕಾಶ್ಮೀರದಲ್ಲಿ ಮಹಿಳೆಯರು ತಯಾರಿಸಿದ ಖಾದಿ ರುಮಾಲ್ ಮಾರಾಟಕ್ಕೆ ಚಾಲನೆ: ಕೇಂದ್ರ ಎಂಎಸ್ಎಂಇ ಸಚಿವ ಶ್ರೀ ನಿತಿನ್ ಗಡ್ಕರಿ ಅವರು ಡಿಸೆಂಬರ್ 17, 2019 ರಂದು ಭಯೋತ್ಪಾದನೆ ಪೀಡಿತ ಜೆ & ಕೆ ಯ ಮಹಿಳೆಯರು ತಯಾರಿಸಿದ ಖಾದಿ ರುಮಾಲ್ ಮಾರಾಟಕ್ಕೆ ಚಾಲನೆ ನೀಡಿದರು. ಖಾದಿ ರುಮಾಲ್ ಮಾರಾಟವು ಜಮ್ಮು ಮತ್ತು ಕಾಶ್ಮೀರದಾದ್ಯಂತದ ಮಹಿಳೆಯರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ, ಸ್ವತಂತ್ರ ಮತ್ತು ಗೌರವಾನ್ವಿತ ಜೀವನವನ್ನು ನಡೆಸಲು ನೆರವಾಗುತ್ತದೆ. ಆನ್‌ಲೈನ್ ಪ್ಲಾಟ್‌ಫಾರ್ಮ್ ಮತ್ತು ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ 2 ಕೋಟಿ ಪ್ಯಾಕೆಟ್ ಖಾದಿ ರುಮಾಲ್ ಅನ್ನು ಮಾರಾಟ ಮಾಡುವ ಒಪ್ಪಂದಕ್ಕೆ ಕೆವಿಐಸಿಯು ಪೇಟಿಎಮ್ ನೊಂದಿಗೆ ಸಹಿ ಹಾಕಿದೆ.


(Release ID: 1597948) Visitor Counter : 190