ಸಂಪುಟ

ಫೋರ್ ಸ್ಟಾರ್ ಜನರಲ್ ಶ್ರೇಣಿಯಲ್ಲಿ ರಕ್ಷಣಾ ಮುಖ್ಯಸ್ಥರ ಹುದ್ದೆ ರಚನೆಗೆ ಸಚಿವ ಸಂಪುಟ ಸಭೆ ಅನುಮೋದನೆ

Posted On: 24 DEC 2019 5:44PM by PIB Bengaluru

ಫೋರ್ ಸ್ಟಾರ್ ಜನರಲ್ ಶ್ರೇಣಿಯಲ್ಲಿ ರಕ್ಷಣಾ ಮುಖ್ಯಸ್ಥರ ಹುದ್ದೆ ರಚನೆಗೆ ಸಚಿವ ಸಂಪುಟ ಸಭೆ ಅನುಮೋದನೆ

 

ದೇಶದಲ್ಲಿ ಉಚ್ಚಮಟ್ಟದ ರಕ್ಷಣಾ ಆಡಳಿತ ವರ್ಗದಲ್ಲಿ ಮಹತ್ತರ ಸುಧಾರಣೆಗಳೊಂದಿಗೆ ತೆಗೆದುಕೊಳ್ಳಲಾದ ಚಾರಿತ್ರಿಕ ನಿರ್ಧಾರದಲ್ಲಿ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಒಬ್ಬ ಸೇವಾ ಮುಖ್ಯಸ್ಥರ ಸಮನಾದ ಸಂಬಳ ಮತ್ತು ವಿಶೇಷ ಸೌಲಭ್ಯಗಳ ಜೊತೆಗೆ ಫೋರ್ ಸ್ಟಾರ್ ಜನರಲ್ ಶ್ರೇಣಿಯಲ್ಲಿ ರಕ್ಷಣಾ ಮುಖ್ಯಸ್ಥರ ಹುದ್ದೆ ರಚನೆಗೆ ಅನುಮೋದನೆ ನೀಡಿದೆ. ರಕ್ಷಣಾ ಸಿಬ್ಬಂದಿ  ಮುಖ್ಯಸ್ಥರು ಸೇನಾ ವ್ಯವಹಾರಗಳ ಇಲಾಖೆ (ಡಿಎಂಎ) ಯನ್ನು ಸಹ ನಿರ್ವಹಿಸಲಿದ್ದಾರೆ. ಇದನ್ನು ರಕ್ಷಣಾ ಸಚಿವಾಲಯದಲ್ಲಿ ಆಂತರಿಕವಾಗಿ ರೂಪಿಸಲಾಗುವುದು ಮತ್ತು ಅದರ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುವುದು.

ಈ ಕೆಳಗಿನ ವ್ಯಾಪ್ತಿಯ ಕ್ಷೇತ್ರಗಳು ಸಿ ಡಿ ಎಸ್ ನೇತೃತ್ವದ ಸೇನಾ ವ್ಯವಹಾರಗಳ ಇಲಾಖೆ ನಿರ್ವಹಿಸುತ್ತದೆ:
i. ಕೇಂದ್ರದ ಸಶಸ್ತ್ರ ಪಡೆಗಳಾದ ಸೇನಾ ಪಡೆ, ನೌಕಾ ಪಡೆ ಮತ್ತು ವಾಯುಪಡೆ
ii. ಸೇನಾ ಪ್ರಧಾನ ಕಛೇರಿಗಳು, ನೌಕಾ  ಪ್ರಧಾನ ಕಛೇರಿಗಳು, ವಾಯು ಬಲದ ಪ್ರಧಾನ ಕಛೇರಿಗಳು ಹಾಗೂ ರಕ್ಷಣಾ ಸಿಬ್ಬಂದಿ ಪ್ರಧಾನ ಕಛೇರಿಗಳನ್ನು ಒಳಗೊಂಡಿರುವ ರಕ್ಷಣಾ ಸಚಿವಾಲಯದ ಸಮಗ್ರ ಪ್ರಧಾನ ಕಛೇರಿ.
iii. ಪ್ರಾದೇಶಿಕ ಸೇನೆ
iv. ಸೇನೆ, ನೌಕಾ ಪಡೆ ಮತ್ತು ವಾಯು ಪಡೆಗೆ ಸಂಬಂಧಿಸಿದ ಕೆಲಸಗಳು
v. ಚಾಲ್ತಿಯಲ್ಲಿರುವ ನಿಯಮಗಳು ಮತ್ತು ನಿರ್ವಹನಾ ವಿಧಾನಗಳ ಪ್ರಕಾರ ಬಂಡವಾಳ ಸ್ವಾಧೀನತೆ ಹೊರತುಪಡಿಸಿ ಪ್ರತ್ಯೇಕವಾಗಿ ಸೇವೆಗಳಿಗಾಗಿ ಮೀಸಲು

ಮೇಲಿನವುಗಳನ್ನು ಹೊರತುಪಡಿಸಿ ಸೇನಾ ವ್ಯವಹಾರಗಳ ಇಲಾಖೆಯು ಈ ಕೆಳಗಿನ ಕ್ಷೇತ್ರಗಳನ್ನೂ ಒಳಗೊಂಡಿರುತ್ತದೆ:
a. ಜಂಟಿ ಯೋಜನೆಯ ಮೂಲಕ ಸೇವೆಗಳಿಗೆ ಸಿಬ್ಬಂದಿ ನೇಮಕಾತಿ ಮತ್ತು ತರಬೇತಿ ನೀಡುವುದು ಹಾಗೂ ಅವರ ಅವಶ್ಯಕತೆಗಳ ಸಮಗ್ರ ಪೂರೈಕೆ, ವಸೂಲಾತಿಯಲ್ಲಿ ಸಹಭಾಗಿತ್ವಕ್ಕೆ ಪ್ರೋತ್ಸಾಹ.
b. ಸಹಭಾಗಿತ್ವ / ಥಿಯೇಟರ್ ಆದೆಶಗಳ ಪಾಲನೆಯೂ ಸೇರಿದಂತೆ, ಕಾರ್ಯಾಚರೆಣೆಗಳಲ್ಲಿ ಸಹಭಾಗಿತ್ವವನ್ನು ಸ್ಥಾಪಿಸುವ ಮೂಲಕ ಸಂಪನ್ಮೂಲಗಳ ಅತ್ಯುತ್ತಮ ಬಳಕೆಗಾಗಿ ಸೇನಾ ಆದೇಶಗಳ ಪುನರ್ ರಚನೆಗೆ ಅನಕೂಲ ಕಲ್ಪಿಸುವುದು.
c. ಸೇವೆಗಳಿಂದ ಸ್ಥಳೀಯ ಉಪಕರಣಗಳ ಬಳಕೆಗೆ ಉತ್ತೇಜನ.

ಸೇನಾ ವ್ಯವಹಾರಗಳ ಇಲಾಖೆಯ ಮುಖ್ಯಸ್ಥರಾಗಿರುವುದಲ್ಲದೇ, ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು, ಸಿಬ್ಬಂದಿ ಸಮೀತಿಯ ಮುಖ್ಯಸ್ಥರ ಖಾಯಂ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಾರೆ. ರಕ್ಷಣಾ ಸಚಿವಾಲಯದ ಮೂರು ಸೇವೆಗಳ ವಿಷಯಗಳಲ್ಲೂ ಪ್ರಧಾನ ಸೇನಾ ಸಲಹೆಗಾರರಾಗಿಯೂ ಅವರು ಕೆಲಸ ನಿರ್ವಹಿಸುತ್ತಾರೆ. ಮೂವರು ಮುಖ್ಯಸ್ಥರು ತಂತಮ್ಮ ವಿಷಯಗಳು ಅದರಲ್ಲೂ ವಿಶೇಷವಾಗಿ ತಮ್ಮ ಸೇವಾ ವಲಯಕ್ಕೆ ಸಂಬಂಧಿಸಿದವುಗಳ ಕುರಿತು ಆರ್ ಎಂ ಗೆ ಸಲಹೆ ಸೂಚನೆ ನೀಡುವುದನ್ನು ಮುಂದುವರೆಸುತ್ತಾರೆ. ರಾಜಕೀಯ ನಾಯಕತ್ವಕ್ಕೆ ನಿಷ್ಪಕ್ಷಪಾತ ಸಲಹೆಯನ್ನು ನೀಡಲು ಸಾಧ್ಯವಾಗಲೆಂದು ಮೂವರು ಸೇನಾ ಮುಖ್ಯಸ್ಥರನ್ನೂ ಒಳಗೊಂಡಂತೆ ಸಿ ಡಿ ಎಸ್ ಯಾವುದೇ ಸೇನಾ ಆದೇಶಗಳನ್ನೂ ನೀಡುವುದಿಲ್ಲ.


ಸಿಬ್ಬಂದಿ ಸಮೀತಿ ಮುಖ್ಯಸ್ಥರುಗಳ ಖಾಯಂ ಅಧ್ಯಕ್ಷರಾದ ಸಿ ಡಿ ಎಸ್ ಈ ಕೆಳಗಿನ ಕಾರ್ಯಗಳನ್ನು ನಿರ್ವಹಿಸುತ್ತಾರೆ:
• ಮೂರೂ ಸೇವೆಗಳ ಸಂಸ್ಥೆಗಳನ್ನು ಸಿ ಡಿ ಎಸ್ ನಿರ್ವಹಿಸುತ್ತಾರೆ. ಮೂರೂ ಸೇವಾ ಸಂಸ್ಥೆಗಳು / ಸಮೀತಿಗಳು / ಸೈಬರ್ ಮತ್ತು ಬಾಹ್ಯಾಕಾಶಕ್ಕೆ ಸಂಬಂಧಿಸಿದ ಆದೇಶಗಳು ಸಿ ಡಿ ಎಸ್ ಅವರ ಅಧೀನದಲ್ಲಿರುತ್ತವೆ
• ರಕ್ಷಣಾ ಸಚಿವರ ಅಧ್ಯಕ್ಷತೆಯ ರಕ್ಷಣಾ ಸ್ವಾಧೀನ ಮಂಡಳಿ ಮತ್ತು ಎನ್ ಎಸ್ ಎ ಅಧ್ಯಕ್ಷತೆಯ ರಕ್ಷಣಾ ಯೋಜನಾ ಸಮಿತಿಯ ಸದಸ್ಯತ್ವವನ್ನು ಸಿ ಡಿ ಎಸ್ ಹೊಂದಿರುತ್ತಾರೆ
• ನ್ಯೂಕ್ಲಿಯರ್ ಕಮಾಂಡ್ ಪ್ರಾಧಿಕಾರದ ಸೇನಾ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಾರೆ
• ಪ್ರಥಮ ಸಿ ಡಿ ಎಸ್ ಅಧಿಕಾರ ವಹಿಸಿಕೊಂಡ ಮೂರು ವರ್ಷಗಳೊಳಗೆ ಸೇವೆಗಳ ಕಾರ್ಯಾಚರಣೆ, ಸಾಗಾಣಿಕೆ, ಸಾರಿಗೆ, ತರಬೇತಿ, ಪೂರಕ ಸೇವೆಗಳು, ಸಂವಹನ, ರಿಪೇರಿ ಮತ್ತು ನಿರ್ವಹಣೆ ಮುಂತಾದವುಗಳಲ್ಲಿ ಸಹ-ಭಾಗಿತ್ವವನ್ನು ತರುವುದು.
• ಸೇವೆಗಳಲ್ಲಿ ಸಹ-ಭಾಗಿತ್ವದೊಂದಿಗೆ ಮೂಲ ಸೌಕರ್ಯಗಳ ಅತ್ಯುತ್ತಮ ಬಳಕೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಅದರಲ್ಲಿ ಸುಧಾರಣೆ ತರುವುದು.
• ಸಮಗ್ರ ಸಾಮರ್ಥ್ಯ ಅಭಿವೃದ್ಧಿ ಯೋಜನೆ (ಐ ಸಿ ಡಿ ಪಿ) ಯ ಅನುಸರಣೆಯ ರೂಪದಲ್ಲಿ ಪಂಚವಾರ್ಷಿಕ ರಕ್ಷಣಾ ಬಂಡವಾಳ ಸ್ವಾಧೀನ ಯೋಜನೆ (ಡಿ ಸಿ ಎ ಪಿ) ಮತ್ತು ದ್ವೈ ವಾರ್ಷಿಕ ರೋಲ್ ಆನ್ ವಾರ್ಷಿಕ ಸ್ವಾಧೀನ ಯೋಜನೆ (ಎ ಎ ಪಿ) ಗಳನ್ನು ಕಾರ್ಯರೂಪಕ್ಕೆ ತರುವುದು.
• ನಿರೀಕ್ಷಿತ ಆಯವ್ಯಯ ಆಧರಿಸಿ ಬಂಡವಾಳ ಸ್ವಾಧಿನ ಪ್ರಸ್ತಾಪಗಳಿಗೆ ಆಂತರಿಕ ಸೇವೆಗಳ ಆದ್ಯತೆಯನ್ನು ನಿಗದಿ ಪಡಿಸುವುದು.
• ವ್ಯರ್ಥ ಖರ್ಚುಗಳನ್ನು ತಗ್ಗಿಸಿ ಸಶಸ್ತ್ರ ಪಡೆಗಳ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಮೂರೂ ಸೇವೆಗಳ ಕಾರ್ಯಚಟುವಟಿಕೆಗಳಲ್ಲಿ ಸುಧಾರಣೆಗಳನ್ನು ತರುವುದು.

ಉಚ್ಛಮಟ್ಟದ ರಕ್ಷಣಾ ನಿರ್ವಹಣೆಯಲ್ಲಿನ ಈ ಸುಧಾರಣೆಗಳು ಸಶಸ್ತ್ರ ಪಡೆಗಳಿಗೆ ಸಂಘಟಿತ ರಕ್ಷಣಾ ಸಿದ್ಧಾಂತಗಳು ಮತ್ತು ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳಲು ಮತ್ತು ಮೂರೂ ಸೇವೆಗಳಲ್ಲಿ ಸಹಭಾಗಿತ್ವಕ್ಕೆ ಪ್ರೋತ್ಸಾಹ ನೀಡಿ ಬಹು ದೂರ ಸಾಗಲು ಅನುಕೂಲ ಕಲ್ಪಿಸುತ್ತವೆ ಎಂದು ನಿರೀಕ್ಷಿಸಲಾಗಿದೆ. ತರಬೇತಿ, ಸಾಗಾಣಿಕೆ, ಕಾರ್ಯಾಚರಣೆಗಳಲ್ಲಿ  ಸಂಘಟಿತ ಕ್ರಮದಿಂದ ಮತ್ತು ಸಹಭಾಗಿತ್ವದಿಂದ ದೇಶಕ್ಕೆ ಮಾತ್ರವಲ್ಲದೇ, ಸಂಗ್ರಹಣಾ ಆದ್ಯತೆಗೂ ಲಾಭವಾಗುತ್ತದೆ.

ಹಿನ್ನೆಲೆ

2019ರ ಆಗಸ್ಟ್ 15 ರಂದು ಪ್ರಧಾನ ಮಂತ್ರಿ ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಹೀಗೆ ಹೇಳಿದ್ದರು “ಭಾರತ ಅನಿಶ್ಚಿತ ನಿಲುವು ಹೊಂದಿರಬಾರದು. ನಮ್ಮ ಸಂಪೂರ್ಣ ಸೇನಾ ಶಕ್ತಿ ಸಾಮರಸ್ಯದೊಂದಿಗೆ ಮುಂದೆ ಸಾಗ ಬೇಕು. ಎಲ್ಲ ಮೂರೂ (ಸೇವೆಗಳು) ಏಕ ಕಾಲಕ್ಕೆ ಒಂದೇ ವೇಗದಲ್ಲಿ ಮುನ್ನಡೆಯ ಬೇಕು. ಉತ್ತಮ ಸಮನ್ವಯತೆ ಹೊಂದಿರಬೇಕು ಮತ್ತು ನಮ್ಮ ಜನರ ಭರವಸೆ ಹಾಗೂ ಆಕಾಂಕ್ಷೆಗಳಿಗೆ ಪೂರಕವಾಗಿರಬೇಕು. ವಿಶ್ವದಲ್ಲಿ ಬದಲಾಗುತ್ತಿರುವ ಯುದ್ಧ ಮತ್ತು ಭದ್ರತಾ ಪರಿಸರಕ್ಕೆ ಅನುಗುಣವಾಗಿರಬೇಕು. ಈ ಹುದ್ದೆಯ ರಚನೆಯ ನಂತರ ಎಲ್ಲ ಮೂರೂ ಪಡೆಗಳೂ ಉನ್ನತ ಮಟ್ಟದ ಪರಿಣಾಮಕಾರಿ ನಾಯಕತ್ವವನ್ನು ಪಡೆಯುತ್ತವೆ”.

 
****



(Release ID: 1597682) Visitor Counter : 256