ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ವರ್ಷಾಂತ್ಯದ ಪರಾಮರ್ಶೆ -2019
Posted On:
16 DEC 2019 6:30PM by PIB Bengaluru
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ವರ್ಷಾಂತ್ಯದ ಪರಾಮರ್ಶೆ -2019
ಇಒಡಿಬಿಯಲ್ಲಿ ಅಗ್ರ 10 ಸುಧಾರಣಾಕಾರರಲ್ಲಿ ಭಾರತ; 190 ದೇಶಗಳಲ್ಲಿ ಭಾರತಕ್ಕೆ 63 ನೇ ಸ್ಥಾನ. ಸ್ಟಾರ್ಟ್ಅಪ್ ಇಂಡಿಯಾ ಇನಿಶಿಯೇಟಿವ್ ಇಂಡಿಯಾ ಅಡಿಯಲ್ಲಿ ಮಾನ್ಯತೆ ಪಡೆದ 21,778 ಸ್ಟಾರ್ಟ್ಅಪ್ ಗಳು. ಗ್ಲೋಬಲ್ ಇನ್ನೋವೇಶನ್ ಸೂಚ್ಯಂಕದಲ್ಲಿ 52 ನೇ ಸ್ಥಾನ. NIRVIK: ರಫ್ತುದಾರರಿಗೆ ಹೊಸ ಕ್ರೆಡಿಟ್ ಯೋಜನೆ ಘೋಷಣೆ; ಇಸಿಜಿಸಿ ನಿಧಿಗೆ ಪುನರ್ಧನದೊಂದಿಗೆ ರಫ್ತು ಬೆಂಬಲಕ್ಕಾಗಿ ರಾಷ್ಟ್ರೀಯ ವ್ಯಾಪಾರಿಗಳ ಕಲ್ಯಾಣ ಮಂಡಳಿ ಸ್ಥಾಪನೆ
ವಿಶ್ವ ಬ್ಯಾಂಕಿನ ಸುಗಮ ವ್ಯವಹಾರ ವ್ಯವಹಾರ ವರದಿ 2020 ರಲ್ಲಿ ಭಾರತದ ಗಮನಾರ್ಹ ಜಿಗಿತ
77 ನೇ ಸ್ಥಾನದಲ್ಲಿದ್ದ ಭಾರತ 14 ಶ್ರೇಯಾಂಕಗಳನ್ನು ಸುಧಾರಿಸಿ 2019 ರಲ್ಲಿ 190 ದೇಶಗಳಲ್ಲಿ 63 ನೇ ಸ್ಥಾನದಲ್ಲಿದೆ. ಭಾರತವು 10 ಸೂಚಕಗಳಲ್ಲಿ 7 ರಲ್ಲಿ ತನ್ನ ಸ್ಥಾನವನ್ನು ಸುಧಾರಿಸಿದೆ ಮತ್ತು ಅಂತರರಾಷ್ಟ್ರೀಯ ಅತ್ಯುತ್ತಮ ಅಭ್ಯಾಸಗಳಿಗೆ ಹತ್ತಿರವಾಗಿದೆ. 2020ರ ವರದಿಯು ಸತತ ಮೂರನೇ ಬಾರಿಗೆ ಭಾರತವನ್ನು ಅಗ್ರ 10 ಸುಧಾರಣಾಕಾರರಲ್ಲಿ ಒಂದೆಂದು ಒಪ್ಪಿಕೊಂಡಿದೆ. 3 ವರ್ಷಗಳಲ್ಲಿ 67 ಶ್ರೇಯಾಂಕಗಳನ್ನು ಸುಧಾರಿಸಿಕೊಂಡಿದೆ. ಇದು 2011 ರ ನಂತರ ಯಾವುದೇ ಬೃಹತ್ ರಾಷ್ಟ್ರವು ಸಾಧಿಸಿದ ಅತಿ ಹೆಚ್ಚು ಜಿಗಿತವಾಗಿದೆ.
ಹೊಸ ಎತ್ತರಕ್ಕೆ ಸ್ಟಾರ್ಟ್ಅಪ್ ಇಂಡಿಯಾ, ನಾವೀನ್ಯತೆಯಲ್ಲಿ ಭಾರತವೇ ಜಾಗತಿಕ ನಾಯಕ
ಸ್ಟಾರ್ಟ್ಅಪ್ ಇಂಡಿಯಾ ಇನಿಶಿಯೇಟಿವ್ ಅಡಿಯಲ್ಲಿ ಒಟ್ಟು 25,930 ಸ್ಟಾರ್ಟ್ಅಪ್ ಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 7,033 ಸ್ಟಾರ್ಟ್ಅಪ್ ಗಳನ್ನು 2019 ರ ಜೂನ್ 1 ರಿಂದ ಗುರುತಿಸಲಾಗಿದೆ.
ಸ್ಟಾರ್ಟ್ಅಪ್ ಇಂಡಿಯಾ ಹಬ್ 3,64,818 ನೋಂದಾಯಿತ ಬಳಕೆದಾರರನ್ನು ಹೊಂದಿದ್ದು, ಅದರಲ್ಲಿ 44,197 ಬಳಕೆದಾರರನ್ನು 2019 ರ ಜೂನ್ 1 ರಿಂದೀಚೆಗೆ ಸೇರಿಸಲಾಗಿದೆ. ಆಗಸ್ಟ್ 1, 2019 ರಂದು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 54 ಜಿಬಿಯಲ್ಲಿನ ತಿದ್ದುಪಡಿಯೊಂದಿಗೆ ಸ್ಟಾರ್ಟ್ಅಪ್ ನಲ್ಲಿ ಕನಿಷ್ಠ ಶೇ.50 ಷೇರು ಬಂಡವಾಳ ಅಥವಾ ಮತದಾನದ ಹಕ್ಕುಗಳನ್ನು ಶೇ.25 ಕ್ಕೆ ಸಡಿಲಿಸಲಾಗಿದೆ.
ಜಾಗತಿಕ ಇನ್ನೋವೇಶನ್ ಸೂಚ್ಯಂಕದಲ್ಲಿ (ಜಿಐಐ)ಭಾರತದ ಗಮನಾರ್ಹ ಸಾಧನೆ
ಜಿಐಐನಲ್ಲಿ ಭಾರತದ ಶ್ರೇಯಾಂಕವು ಗಮನಾರ್ಹ ಜಿಗಿತ ಕಂಡಿದೆ. 2015 ರಲ್ಲಿದ್ದ 81 ನೇ ಶ್ರೇಯಾಂಕದಿಂದ ಜಿಐಐ 2019 ರ ವರದಿಯನ್ವಯ ಪ್ರಸ್ತುತ 52 ನೇ ಸ್ಥಾನಕ್ಕೆ ಸುಧಾರಿಸಿದೆ. ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ (ಡಬ್ಲ್ಯುಐಪಿಒ) ಮತ್ತು ಕಾನ್ಫೆಡರೇಶನ್ ಆಫ್ ಇಂಡಿಯಾ (ಸಿಐಐ) ಸಹಯೋಗದೊಂದಿಗೆ ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್ (ಜಿಐಐ) ಅನ್ನು ಪ್ರಾರಂಭಿಸಿದ ಮೊದಲ ಅಭಿವೃದ್ಧಿ ಹೊಂದುತ್ತಿರುವ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
ನಾವೀನ್ಯತೆಯನ್ನು ಉತ್ತೇಜಿಸುವ ಸಲುವಾಗಿ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಲಾಗಿದೆ:
ಅಂತಿಮ ಪೇಟೆಂಟ್ (ತಿದ್ದುಪಡಿ) ನಿಯಮಗಳು, 2019 - ಸೆಪ್ಟೆಂಬರ್ 17, 2019 ರಂದು ಪ್ರಕಟವಾಗಿದೆ. ಪೇಟೆಂಟ್ ನಿಯಮಗಳು, 2003 ಅನ್ನು ತಿದ್ದುಪಡಿ ಮಾಡಲಾಗಿದ್ದು ವಿಶೇಷವಾಗಿ ಸ್ಟಾರ್ಟ್ ಅಪ್ ಮತ್ತು ಎಂಎಸ್‌ಎಂಇಗಳಿಗೆ ನಿಯಮಗಳ ಗಮನಾರ್ಹ ಸರಳೀಕರಣಕ್ಕೆ ಕಾರಣವಾಗಿದೆ.
ಪೇಟೆಂಟ್ (ಎರಡನೇ ತಿದ್ದುಪಡಿ) ನಿಯಮಗಳು, 2019 ಪೇಟೆಂಟ್ ಕಾಯ್ದೆ, 1970 ರ ವಿವಿಧ ವಿಭಾಗಗಳ ಅಡಿಯಲ್ಲಿ ಪೇಟೆಂಟ್ ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲು ಸಣ್ಣ ಘಟಕ / ಎಂಎಸ್‌ಎಂಇಗಳಿಗೆ ಶುಲ್ಕವನ್ನು ಕಡಿಮೆ ಮಾಡಲು ಪ್ರಕಟಿಸಲಾಗಿದೆ.
ರಫ್ತು ಉತ್ತೇಜನಕ್ಕಾಗಿ ವಾಣಿಜ್ಯ ಇಲಾಖೆ ವಿವಿಧ ಕ್ರಮಗಳನ್ನು ಕೈಗೊಂಡಿದೆ:
ರಫ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಇಸಿಜಿಸಿ) ರಫ್ತುದಾರರಿಗಾಗಿ 'NIRVIK' ಎಂಬ ಹೊಸ ರಫ್ತು ಕ್ರೆಡಿಟ್ ವಿಮಾ ಯೋಜನೆಯನ್ನು (ಇಸಿಐಎಸ್) ಪರಿಚಯಿಸಿದೆ. ಇದರಲ್ಲಿ ರಫ್ತು ಸಾಲಕ್ಕಾಗಿ ಹೆಚ್ಚಿದ ವಿಮಾ ರಕ್ಷಣೆಯನ್ನು ಬ್ಯಾಂಕುಗಳು ಮೂಲ ಸಾಲ ಹಾಗೂ ಬಡ್ಡಿ ಎರಡಕ್ಕೂ ಅಸ್ತಿತ್ವದಲ್ಲಿರುವ ಸರಾಸರಿ ಶೇ.60 ರಿಂದ ಶೇ.90 ವರೆಗೆ ವಿಸ್ತರಿಸಿವೆ.
80 ಕೋ.ರೂ.ಗಿಂತ ಕಡಿಮೆಯಿರುವ ಖಾತೆಗಳಿಗೆ, ಪ್ರೀಮಿಯಂ ದರವನ್ನು ವಾರ್ಷಿಕ 0.60 ಕ್ಕೆ ಮತ್ತು 80 ಕೋ.ರೂ. ಗಿಂತ ಹೆಚ್ಚಿನ ಖಾತೆಗಳಿಗೆ ಇದು ವಾರ್ಷಿಕ 0.72 ಆಗಿರುತ್ತದೆ. ಈ ಉಪಕ್ರಮಕ್ಕೆ ವಾರ್ಷಿಕವಾಗಿ ಸುಮಾರು 1,700 ಕೋಟಿ ರೂ. ವೆಚ್ಚ ತಗಲುತ್ತದೆ. ಇದು ಬ್ಯಾಂಕುಗಳಿಗೆ ಸಾಲದ ವೆಚ್ಚವನ್ನು ಕಡಿಮೆ ಮಾಡುತ್ತದೆ.
ನಿರ್ದಿಷ್ಟ ಕೃಷಿ ಉತ್ಪನ್ನಗಳಿಗಾಗಿ ‘ಸಾರಿಗೆ ಮತ್ತು ಮಾರುಕಟ್ಟೆ ನೆರವು’ (ಟಿಎಂಎ) ಯೋಜನೆಯಡಿ ಅರ್ಜಿಗಳನ್ನು ಸಲ್ಲಿಸಲು ಆನ್‌ಲೈನ್ ಪೋರ್ಟಲ್ ಅನ್ನು ಪ್ರಾರಂಭಿಸಲಾಗಿದೆ.
ಪಾರದರ್ಶಕತೆಯ ಮೂಲಕ ಇಸಿಜಿಸಿಯೊಂದಿಗೆ ರಫ್ತುದಾರರ ಕ್ಲೈಮ್ ಗಳನ್ನು ಸರಾಗಗೊಳಿಸುವುದು
ಬಾಕಿ ಇರುವ ಎಲ್ಲಾ ಕ್ಲೈಮ್‌ಗಳಿಗಾಗಿ ಇಸಿಜಿಸಿ ಡೇಟಾಬೇಸ್ ಸಿದ್ಧಪಡಿಸಿದೆ. ಕ್ಲೈಮ್‌ಗಳ ಸ್ಥಿತಿಯ ಕುರಿತು ಆನ್‌ಲೈನ್ ಪ್ರವೇಶವನ್ನು ಒದಗಿಸಲಾಗಿದೆ. ರಫ್ತುದಾರರಿಗೆ ಮಾಹಿತಿ ಒದಗಿಸಲು ಇದು ನಿರ್ಣಾಯಕ ಸಾಧನವಾಗಿದೆ.
ಆನ್ಲೈನ್ “ಒರಿಜಿನ್ ಮ್ಯಾನೇಜ್ಮೆಂಟ್ ಸಿಸ್ಟಮ್” ಎಲ್ಲಾ ರಫ್ತುದಾರರಿಗೆ, ಎಲ್ಲಾ ಮುಕ್ತ ವ್ಯಾಪಾರ ಒಪ್ಪಂದಗಳಿಗೆ (ಎಫ್‌ಟಿಎ) ಆದ್ಯತೆಯ ವ್ಯಾಪಾರ ಒಪ್ಪಂದಗಳಿಗೆ (ಪಿಟಿಎ) ಮತ್ತು ಎಲ್ಲಾ ಏಜೆನ್ಸಿಗಳಿಗೆ ಒಂದೇ ಪ್ರವೇಶ ನೀಡುತ್ತದೆ. ಭಾರತದಲ್ಲಿ 15 ಎಫ್‌ಟಿಎ / ಪಿಟಿಎ ಇದ್ದು, ವಾರ್ಷಿಕವಾಗಿ 7 ಲಕ್ಷ ಮೂಲ ಪ್ರಮಾಣಪತ್ರಗಳನ್ನುನೀಡಲಾಗುತ್ತದೆ. ಸಂಬಂಧಪಟ್ಟ ಪಾಲುದಾರ ರಾಷ್ಟ್ರಗಳ ಒಪ್ಪಿಗೆಯಂತೆ ವೇದಿಕೆಯನ್ನು ಎಫ್‌ಟಿಎಗಳಿಗಾಗಿ ನೇರಗೊಳಿಸಲಾಗುವುದು. ಈ ಪ್ರಕ್ರಿಯೆಯು ಎಲೆಕ್ಟ್ರಾನಿಕ್, ಕಾಗದರಹಿತ ಮತ್ತು ಉತ್ಪನ್ನ ಮಟ್ಟದಲ್ಲಿ ಮತ್ತು ರಾಷ್ಟ್ರ ಮಟ್ಟದಲ್ಲಿ ಎಫ್‌ಟಿಎ ಬಳಕೆಯ ನೈಜ ಸಮಯದ ಟ್ರ್ಯಾಕಿಂಗ್ ನೊಂದಿಗೆ ಪಾರದರ್ಶಕವಾಗಿರುತ್ತದೆ. ಇದು ವಹಿವಾಟು ವೆಚ್ಚ ಮತ್ತು ಸಮಯವನ್ನು ಕಡಿತಗೊಳಿಸುತ್ತದೆ.
ಭಾರತದಿಂದ ಅಸ್ತಿತ್ವದಲ್ಲಿರುವ ಮರ್ಚಂಡೈಸ್ ರಫ್ತುಗಳನ್ನು ಬದಲಿಸಲು ರೂಪಿಸಲಾದ ರಫ್ತು ಉತ್ಪನ್ನದ ಮೇಲಿನ ಕರ್ತವ್ಯಗಳನ್ನು ಅಥವಾ ತೆರಿಗೆಗಳನ್ನು (RoDTEP) ರೂಪಿಸಲಾಗಿದೆ. ರಫ್ತು ಉತ್ತೇಜಿಸಲು ಇದು ಡಬ್ಲ್ಯುಟಿಒ ಗೆ ಅನುಗುಣವಾದ ಯೋಜನೆಯಾಗಿದೆ. ಪ್ರಸ್ತುತ ಶೇ.2 ರವರೆಗಿನ ಪ್ರೋತ್ಸಾಹವನ್ನು ಪಡೆಯುತ್ತಿರುವ ಜವಳಿ ಮತ್ತಿತರ ಕ್ಷೇತ್ರಗಳು MEISನಿಂದ 1.1.2020 ರಿಂದ RoDTEP ಗೆ ಬದಲಾಗುತ್ತವೆ. RoDTEP ಎಲ್ಲಾ ಕ್ಷೇತ್ರಗಳನ್ನು ವ್ಯಾಪಿಸಲಿದ್ದು, ಆದಾಯವು ಸುಮಾರು 50,000 ಕೋಟಿ ರೂ. ಇರಲಿದೆ.
ರಫ್ತು ಬೆಂಬಲಕ್ಕಾಗಿ ಪುನರ್ಧನ ನಿಧಿ
21 ಜೂನ್ 2019 ರಂದು ರಫ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್‌ಗೆ (ಇಸಿಜಿಸಿ) 389 ಕೋಟಿ ರೂ. ಪುನರ್ಧನ ನೀಡಲಾಗಿದೆ. ಇದು ಆಫ್ರಿಕಾ, ಸಿಐಎಸ್, ಲ್ಯಾಟಿನ್ ಅಮೆರಿಕ ಮತ್ತು ಏಷ್ಯಾದ ರಾಷ್ಟ್ರಗಳಂತಹ ಉದಯೋನ್ಮುಖ ಮತ್ತು ಸವಾಲಿನ ಮಾರುಕಟ್ಟೆಗಳಿಗೆ ರಫ್ತು ಮಾಡಲು ಹೆಚ್ಚುವರಿ ಬೆಂಬಲವನ್ನು ನೀಡುತ್ತದೆ.
2019 ರ ಜೂನ್ 21 ರಂದು ರಾಷ್ಟ್ರೀಯ ರಫ್ತು ವಿಮಾ ಖಾತೆ (ಎನ್‌ಇಐಎ) ಟ್ರಸ್ಟ್‌ಗೆ 300 ಕೋಟಿ ರೂ. ಅನುದಾನ ನೀಡಲಾಗಿದೆ. ಆ ಮೂಲಕ ಸವಾಲಿನ ಮಾರುಕಟ್ಟೆಗಳಲ್ಲಿ ಯೋಜನಾ ರಫ್ತುಗಳನ್ನು ಬೆಂಬಲಿಸಲು ಅಪಾಯವನ್ನು ಸ್ವೀಕರಿಸುವ ಸಾಮರ್ಥ್ಯವನ್ನು ಹೆಚ್ಚಿಸಿದೆ.
ರತ್ನ ಮತ್ತು ಆಭರಣ ರಫ್ತುದಾರರಿಗೆ ಉತ್ತೇಜನ: ಪ್ರದರ್ಶನದ ಉದ್ದೇಶ / ರವಾನೆ ಆಧಾರದ ಮೇಲೆ ಮೊದಲೇ ರಫ್ತು ಮಾಡಲಾದ ಸರಕುಗಳ ಮರು-ಆಮದಿಗೆ ಐಜಿಎಸ್‌ಟಿ ಪಾವತಿಸುವ ಅಗತ್ಯವನ್ನು ತೆಗೆದುಹಾಕುವಂತಹ ವಿವಿಧ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ರತ್ನ ಮತ್ತು ಆಭರಣ ರಫ್ತುದಾರರಿಗೆ ಉತ್ತೇಜನ ನೀಡಲಾಗಿದೆ. ಆಭರಣ ರಫ್ತುದಾರರಿಗೆ ಚಿನ್ನವನ್ನು ಆಮದು ಮಾಡಿಕೊಳ್ಳಲು ನಾಮನಿರ್ದೇಶಿತ ಏಜೆನ್ಸಿಗಳು / ಬ್ಯಾಂಕುಗಳು ಕಾರ್ಯಗತಗೊಳಿಸಿದ ಬಾಂಡ್‌ಗಳನ್ನು ಭಾಗಶಃ ಬಿಡುಗಡೆ ಮಾಡಲು ಅವಕಾಶ ಮಾಡಿಕೊಡುವುದು, ಆ ಮೂಲಕ ನಾಮನಿರ್ದೇಶಿತ ಏಜೆನ್ಸಿಗಳು / ಬ್ಯಾಂಕುಗಳು ತಮ್ಮ ರಫ್ತು ಬಾಧ್ಯತೆಯನ್ನು ಪೂರೈಸಿದ ಆಭರಣ ರಫ್ತುದಾರರ ಬ್ಯಾಂಕ್ ಖಾತರಿಯನ್ನು ಬಿಡುಗಡೆ ಮಾಡಲು ಅನುವು ಮಾಡಿಕೊಡುವುದು ನಿರ್ಬಂಧಿತ ಕಾರ್ಯ ಬಂಡವಾಳದ ಬಿಡುಗಡೆಗೆ ಸಹಾಯ ಮಾಡಿದೆ.
ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿ, 2019
ಒಟ್ಟು ಲಾಜಿಸ್ಟಿಕ್ಸ್ ವೆಚ್ಚವನ್ನು ದೇಶದ ಜಿಡಿಪಿಯ ಶೇ.14 ರಿಂದ ಶೇ.9 ಕ್ಕೆ ಇಳಿಸುವ ಉದ್ದೇಶದಿಂದ ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯನ್ನು ಸಿದ್ಧಪಡಿಸಲಾಗುತ್ತಿದೆ. ವ್ಯವಹಾರ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು, ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಮತ್ತು ಭಾರತವನ್ನು ಜಾಗತಿಕ ಲಾಜಿಸ್ಟಿಕ್ಸ್ ಕೇಂದ್ರವನ್ನಾಗಿ ಮಾಡಲು ಈ ನೀತಿಯು ಉದ್ದೇಶಿಸಿದೆ.
ಸರಕುಗಳ ಮಲ್ಟಿ-ಮೋಡಲ್ ಸಾರಿಗೆ ಮಸೂದೆ, 2019 ಅನ್ನು ಅನುಮೋದನೆಗಾಗಿ ಅಂತಿಮಗೊಳಿಸಲಾಗಿದೆ. ರಫ್ತು, ಆಮದು ಮತ್ತು ದೇಶೀಯ ವ್ಯಾಪಾರಕ್ಕಾಗಿ ಸರಕುಗಳ ಚಲನೆಗೆ ಅನುಕೂಲವಾಗುವಂತೆ ಈ ಮಸೂದೆ ಉದ್ದೇಶಿಸಿದೆ. ಅದರ ನಿಬಂಧನೆಗಳ ಉಲ್ಲಂಘನೆಗಾಗಿ ಹೊಣೆಗಾರರನ್ನಾಗಿ ಮಾಡಲು ಇದು ಸಹಾಯ ಮಾಡುತ್ತದೆ.
ಲಾಜಿಸ್ಟಿಕ್ಸ್ ವಲಯಕ್ಕೆ ಕೌಶಲ್ಯ
ಲಾಜಿಸ್ಟಿಕ್ಸ್ ವಲಯದಲ್ಲಿ ತೊಡಗಿರುವ ಮಾನವಶಕ್ತಿಯ ಕೌಶಲ್ಯ ಅಭಿವೃದ್ಧಿಗಾಗಿ 34 ಅರ್ಹತಾ ಪ್ಯಾಕ್‌ಗಳನ್ನು (QPs) ಅಭಿವೃದ್ಧಿಪಡಿಸಲಾಗಿದೆ ಮತ್ತು ಲಾಜಿಸ್ಟಿಕ್ಸ್ ಸ್ಕಿಲ್ ಕೌನ್ಸಿಲ್ ಸಹಯೋಗದೊಂದಿಗೆ ಅಂತಿಮಗೊಳಿಸಲಾಗಿದೆ. ಇಂತಹ ಅರ್ಹತಾ ಪ್ಯಾಕ್‌ಗಳನ್ನು ಅಭಿವೃದ್ಧಿಪಡಿಸುತ್ತಿರುವುದು ಇದೇ ಮೊದಲು.
ಕೃಷಿ ರಫ್ತು ನೀತಿಯ ಅನುಷ್ಠಾನ
ಕೃಷಿ ರಫ್ತು ನೀತಿಯನ್ನು 2019-20ಕ್ಕೆ 206 ಕೋಟಿ ರೂ. ಗಳಿಗೆ ಅನುಮೋದಿಸಲಾಗಿದೆ. ರೈತ ಉತ್ಪಾದಕ ಸಂಸ್ಥೆಗಳು (ಎಫ್‌ಪಿಒ) ಮತ್ತು ರಫ್ತುದಾರರ ನಡುವೆ ಸಂಪರ್ಕವನ್ನು ಸ್ಥಾಪಿಸುವ ಸಲುವಾಗಿ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಪಿಇಡಿಎ) ಒಂದು ಪೋರ್ಟಲ್ ಅನ್ನು ರೂಪಿಸಿದೆ. ಫಾರ್ಮರ್ಸ್ ಕನೆಕ್ಟ್ ಪೋರ್ಟಲ್ ಅಡಿಯಲ್ಲಿ ಸುಮಾರು 740 ರೈತ ಉತ್ಪಾದಕ ಸಂಸ್ಥೆಗಳನ್ನು ನೋಂದಾಯಿಸಲಾಗಿದೆ.
ಹಿಂದುಳಿದ ಪ್ರದೇಶಗಳಿಗೆ ಯೋಜನೆಗಳು
ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ್ ಮತ್ತು ಸಿಕ್ಕಿಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿರುವ ಘಟಕಗಳಿಗೆ ಜಿ ಎಸ್ ಟಿ ಯಲ್ಲಿ ಬಜೆಟ್ ಬೆಂಬಲವನ್ನು ನೀಡಲಾಗಿದೆ. ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ ಪ್ರೋತ್ಸಾಹಕ್ಕಾಗಿ (ಡಿಪಿಐಐಟಿ) 1,700 ಕೋಟಿ ರೂ .ಗಳನ್ನು ಅರ್ಹ ಕೈಗಾರಿಕಾ ಘಟಕಗಳಿಗೆ ವಿತರಿಸಲು ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿಗೆ (ಸಿಬಿಐಸಿ) ಅಧಿಕಾರ ನೀಡಲಾಗಿದೆ. ಈ ಯೋಜನೆಯಡಿ 2019 ರ ನವೆಂಬರ್ 15 ರವರೆಗೆ 1,692 ಕೋಟಿಗಳನ್ನು ಸಿಬಿಐಸಿ ಈಗಾಗಲೇ ವಿತರಿಸಿದೆ. ಕಳೆದ 6 ತಿಂಗಳಲ್ಲಿ ಹಿಮಾಲಯನ್ ರಾಜ್ಯಗಳಿಗೆ ವಿಶೇಷ ಪ್ಯಾಕೇಜ್ ಅಡಿಯಲ್ಲಿ 420 ಕೈಗಾರಿಕಾ ಘಟಕಗಳಿಗೆ 86 ಕೋಟಿ ರೂ. ವಿತರಿಸಲಾಗಿದೆ.
ದೇಶೀಯ ಉದ್ಯಮ ಮತ್ತು ರೈತರಿಗೆ ಸುರಕ್ಷತೆ ಖಾತರಿಪಡಿಸುವುದು
ಆಂಟಿಡಂಪಿಂಗ್‌ಗಾಗಿ ಡಂಪಿಂಗ್ ವಿರೋಧಿ ತನಿಖೆಯನ್ನು ಪ್ರಾರಂಭಿಸಲು ತೆಗೆದುಕೊಂಡ ಸರಾಸರಿ ದಿನಗಳ ಸಂಖ್ಯೆ 2016 ರಲ್ಲಿದ್ದ 259 ದಿನಗಳಿಂದ 2019 ರಲ್ಲಿ 32 ದಿನಗಳಿಗೆ (ನವೆಂಬರ್ 1 ರವರೆಗೆ) ಇಳಿದಿದೆ.
ದೇಶೀಯ ಉದ್ಯಮವನ್ನು ರಕ್ಷಿಸಲು ಡೈರೆಕ್ಟೋರೇಟ್ ಜನರಲ್ ಆಫ್ ಟ್ರೇಡ್ ರೆಮಿಡೀಸ್ (ಡಿಜಿಟಿಆರ್) ಮೊದಲ ಬಾರಿಗೆ ದ್ವಿಪಕ್ಷೀಯ ಸುರಕ್ಷತೆಯ 2 ಪ್ರಕರಣಗಳನ್ನು ಪ್ರಾರಂಭಿಸಿತು. ಡಿಜಿ ಸೇಫ್‌ಗಾರ್ಡ್ಸ್ / ಡೈರೆಕ್ಟೋರೇಟ್ ಜನರಲ್ ಆಫ್ ಆಂಟಿ-ಡಂಪಿಂಗ್ ಮತ್ತು ಅಲೈಡ್ ಡ್ಯೂಟೀಸ್ ಈ ಹಿಂದೆ ಯಾವುದೇ ದ್ವಿಪಕ್ಷೀಯ ಸುರಕ್ಷತೆಯನ್ನು ಪ್ರಾರಂಭಿಸಿರಲಿಲ್ಲ.
ಜಾಗತಿಕ ಸುರಕ್ಷತೆಗಳ ಎರಡು ಪ್ರಕರಣಗಳನ್ನು ಪ್ರಾರಂಭಿಸಲು ತೆಗೆದುಕೊಂಡ ದಿನಗಳ ಸಂಖ್ಯೆಯಲ್ಲಿ ಗಮನಾರ್ಹ ಕುಸಿತ ಕಂಡುಬಂದಿದೆ. ಸಾಮಾನ್ಯವಾದ 75 ದಿನಗಳಿಗೆ ಹೋಲಿಸಿದರೆ, 2019 ರಲ್ಲಿ, ತೆಗೆದುಕೊಂಡ ದಿನಗಳ ಸರಾಸರಿ ಸಂಖ್ಯೆ ಕೇವಲ 61 ಆಗಿದೆ.
ಎಫ್‌ಟಿಎಗಳಲ್ಲಿನ ಭಾರತೀಯ ಉದ್ಯಮ ಮತ್ತು ರೈತರ ಹಿತಾಸಕ್ತಿಗಳನ್ನು ಖಚಿತಪಡಿಸಿಕೊಳ್ಳಲು ಭಾರತವು ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದಲ್ಲಿ (ಆರ್‌ಸಿಇಪಿ) ತನ್ನ ನಿಲುವನ್ನು ಯಶಸ್ವಿಯಾಗಿ ತಿಳಿಸಿತು. ಅದರಲ್ಲಿ ಭಾರತದ ಪ್ರಮುಖ ಕಾಳಜಿಗಳನ್ನು ಬಗೆಹರಿಸಲಾಗಿಲ್ಲ. ದೇಶೀಯ ಉತ್ಪಾದಕರ ಹಿತಾಸಕ್ತಿ ಕಾಪಾಡಲು ಭಾರತ ಬಲವಾದ ನಿಲುವು ತೆಗೆದುಕೊಂಡಿತು. ಈ ನಿರ್ಧಾರವು ದುರ್ಬಲ ವಲಯಗಳು ಮತ್ತು ಸಣ್ಣ ತಯಾರಕರು, ರೈತರು ಮತ್ತು ಡೈರಿ ವಲಯ ಸೇರಿದಂತೆ ಆರ್‌ಸಿಇಪಿ ನಿಯಮಗಳಿಂದ ಬೆದರಿಕೆಗೆ ಒಳಗಾದವರಿಗೆ.ಸಹಾಯ ಮಾಡುತ್ತದೆ.
ಪುನರಾವರ್ತಿತ ಅನುಸರಣೆಯ ನಂತರ ಭಾರತವು ಆಸಿಯಾನ್ ಎಫ್‌ಟಿಎ (ಏಷಿಯಾನ್-ಇಂಡಿಯಾ ಫ್ರೀ ಟ್ರೇಡ್ ಏರಿಯಾ-AIFTA) ಪರಿಶೀಲನೆಗೆ ಒಪ್ಪಂದವನ್ನು ಮಾಡಿಕೊಂಡಿದೆ. ಇದು ಭಾರತೀಯ ಉತ್ಪಾದಕರು ಮತ್ತು ರಫ್ತುದಾರರ ಮೇಲೆ ಪರಿಣಾಮ ಬೀರುವ ನಿಯಮಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಮತ್ತು ಭಾರತೀಯ ರಫ್ತು ಮತ್ತು ಮೇಕ್ ಇನ್ ಇಂಡಿಯಾವನ್ನು ಸಹ ಉತ್ತೇಜಿಸುತ್ತದೆ.
ಉಕ್ಕುಆಮದು ಉಸ್ತುವಾರಿ ವ್ಯವಸ್ಥೆ (SIMS)
ಪರಿಣಾಮಕಾರಿ ನೀತಿ ಮಧ್ಯಸ್ಥಿಕೆಗಳಿಗಾಗಿ ಸರ್ಕಾರ, ಉಕ್ಕು ಉದ್ಯಮ ಮತ್ತು ಉಕ್ಕು ಆಮದುದಾರರು ಸೇರಿದಂತೆ ಎಲ್ಲಾ ಪಾಲುದಾರರಿಗೆ ಉಕ್ಕಿನ ಆಮದಿನ ಬಗ್ಗೆ ಮುಂಗಡ ಮಾಹಿತಿಯನ್ನು ಒದಗಿಸುವ ಮೂಲಕ SIMS ಉಕ್ಕಿನ ಉದ್ಯಮಕ್ಕೆ ಅನುಕೂಲವಾಗಲಿದೆ. ನಿಗದಿತ ಉಕ್ಕಿನ ಉತ್ಪನ್ನಗಳ ಆಮದುದಾರರು ಸಿಮ್ಸ್‌ನ ವೆಬ್ ಪೋರ್ಟಲ್‌ನಲ್ಲಿ ಮುಂಚಿತವಾಗಿ ನೋಂದಾಯಿಸಿಕೊಳ್ಳುತ್ತಾರೆ. ನೋಂದಣಿ ಆನ್‌ಲೈನ್ ಮತ್ತು ಸ್ವಯಂಚಾಲಿತವಾಗಿರುತ್ತದೆ ಮತ್ತು ಯಾವುದೇ ಮಾನವ ಹಸ್ತಕ್ಷೇಪದ ಅಗತ್ಯವಿಲ್ಲ.
ಸಿಮ್ಸ್ ಅನ್ನು 2019 ರ ನವೆಂಬರ್ 1 ರಿಂದ ಜಾರಿಗೆ ತರಲಾಗಿದೆ.
ವ್ಯಾಪಾರ ಸೌಲಭ್ಯ ಕ್ರಮಗಳು
ಭಾರತ-ಮಾರಿಷಸ್ ಸಮಗ್ರ ಆರ್ಥಿಕ ಸಹಕಾರ ಮತ್ತು ಸಹಭಾಗಿತ್ವ ಒಪ್ಪಂದದ (ಸಿಇಸಿಪಿಎ) ಮಾತುಕತೆ ಪೂರ್ಣಗೊಳ್ಳುವುದರಿಂದ ಉಭಯ ದೇಶಗಳ ನಡುವೆ ವ್ಯಾಪಾರ ವೃದ್ಧಿಗೆ ಸಾಧ್ಯವಾಗುತ್ತದೆ.
ಬಾಂಗ್ಲಾದೇಶದೊಂದಿಗೆ ವ್ಯಾಪಾರವನ್ನು ಸುಧಾರಿಸುವುದು - ತ್ರಿಪುರ ಮತ್ತು ಮೇಘಾಲಯದಲ್ಲಿ ಭಾರತ-ಬಾಂಗ್ಲಾದೇಶದ ಗಡಿಯುದ್ದಕ್ಕೂ ನಾಲ್ಕು ಕಾರ್ಯಾಚರಣೆಯ ಗಡಿ ಕೇಂದ್ರಗಳಲ್ಲದೆ, ಮೇಘಾಲಯದಲ್ಲಿ ಮೂರು ಗಡಿ ಕೇಂದ್ರಗಳ ನಿರ್ಮಾಣ, ಈಗಾಗಲೇ ಗುರುತಿಸಲಾದ ಆರು ಸ್ಥಳಗಳಲ್ಲಿ (ತ್ರಿಪುರದಲ್ಲಿ ಎರಡು ಮತ್ತು ಮೇಘಾಲಯದಲ್ಲಿ ನಾಲ್ಕು) ಪೂರ್ಣಗೊಂಡಿವೆ.
ವ್ಯಾಪಾರ ಮತ್ತು ಅಭಿವೃದ್ಧಿ ಮಂಡಳಿ ಮತ್ತು ವ್ಯಾಪಾರ ಮಂಡಳಿಗಳ ವಿಲೀನ: ಪಾಲುದಾರರ ಆತಂಕಗಳನ್ನು ಪರಿಹರಿಸಲು ಒಂದು ಸಾಮಾನ್ಯ ವೇದಿಕೆಯನ್ನು ಒದಗಿಸುತ್ತದೆ.
ಕೈಗಾರಿಕೆ, ರಫ್ತು ಉತ್ತೇಜನ ಮಂಡಳಿಗಳು, ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಪ್ರತಿನಿಧಿಗಳು ಮತ್ತು ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ಪ್ರತಿನಿಧಿಗಳನ್ನು ಒಳಗೊಂಡ ಈ ಸಾಮಾನ್ಯ ವೇದಿಕೆಯು ರಫ್ತು ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ, ಇವುಗಳನ್ನು ಆದ್ಯತೆಯ ಆಧಾರದ ಮೇಲೆ ಪರಿಹರಿಸುವತ್ತ ಗಮನ ಹರಿಸಲಾಗಿದೆ. ಈ ಸಾಮಾನ್ಯ ವೇದಿಕೆಯ ಮೊದಲ ಸಭೆ 2019 ರ ಜೂನ್ 6 ರಂದು ನಡೆಯಿತು.
ವಿಶೇಷ ಆರ್ಥಿಕ ವಲಯ (ತಿದ್ದುಪಡಿ) ಮಸೂದೆ, 2019; ಹೊಸ ಸರ್ಕಾರವು ಅಂಗೀಕರಿಸಿದ ಮೊದಲ ಕಾಯ್ದೆ
ವಿಶೇಷ ಆರ್ಥಿಕ ವಲಯ (ತಿದ್ದುಪಡಿ) ಮಸೂದೆ 2019 ಸಂಸತ್ತು ಅಂಗೀಕರಿಸಿದ್ದು, ಇದು ಹೊಸ ಸರ್ಕಾರದ ಮೊದಲ ಕಾಯ್ದೆಯಾಯಿತು. ಟ್ರಸ್ಟ್‌ಗಳು ಸೇರಿದಂತೆ ಎಸ್‌ಇಜಡ್‌ಗಳಲ್ಲಿ ಯಾವುದೇ ಘಟಕವನ್ನು ಸ್ಥಾಪಿಸಲು ಇದು ಅವಕಾಶ ಕಲ್ಪಿಸುತ್ತದೆ. ಇದು ಹೂಡಿಕೆಗಳನ್ನು ಹೆಚ್ಚಿಸಲು ಮತ್ತು ಹೊಸ ರಫ್ತು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.
ಈ ವರ್ಷದ ಆರಂಭದಲ್ಲಿ ಸುಗ್ರೀವಾಜ್ಞೆಯನ್ನು ಹೊರಡಿಸಿದಾಗಿನಿಂದ 1.1 ಬಿಲಿಯನ್ ಡಾಲರ್ ಹೂಡಿಕೆಗಳನ್ನು ಪ್ರಸ್ತಾಪಿಸಲಾಗಿದೆ.
ಉದ್ಯೋಗಿಗಳಿಗೆ ಉತ್ತಮ ಸೌಲಭ್ಯಗಳು: ಎಸ್‌ಇಜಡ್ ಘಟಕಗಳು ತಮ್ಮ ವಿಶೇಷ ಬಳಕೆಗಾಗಿ ಮಕ್ಕಳ ಲಾಲನಾ ಕೇಂದ್ರಗಳು, ಜಿಮ್ನಾಷಿಯಂ, ಕೆಫೆಟೇರಿಯಾದಂತಹ ಸೌಲಭ್ಯಗಳು, ಸೌಕರ್ಯಗಳನ್ನು ನಿರ್ಮಿಸಲು ಅವಕಾಶ ಮಾಡಿಕೊಡಲಾಗಿದೆ.
ವಿದೇಶಿ ನೇರ ಹೂಡಿಕೆಯನ್ನು ಉತ್ತೇಜಿಸುವುದು
ಕಲ್ಲಿದ್ದಲು ಗಣಿಗಾರಿಕೆ ಹಾಗೂ ಸಂಬಂಧಿತ ಸಂಸ್ಕರಣಾ ಮೂಲಸೌಕರ್ಯ ಚಟುವಟಿಕೆಗಳಿಗೆ ಶೇ. 100 ಎಫ್‌ಡಿಐ ಅನ್ನು ಸ್ವಯಂಚಾಲಿತ ಮಾರ್ಗದಲ್ಲಿ ಅನುಮತಿಸಲಾಗಿದೆ.
ಗುತ್ತಿಗೆ ತಯಾರಿಕೆಯಲ್ಲಿ ಸ್ವಯಂಚಾಲಿತ ಮಾರ್ಗದಲ್ಲಿ ಶೇ.100 ಎಫ್‌ಡಿಐಗೆ ಅವಕಾಶ ನೀಡಲಾಗಿದೆ.
ಏಕ ಬ್ರಾಂಡ್ ರಿಟೇಲ್ ವ್ಯಾಪಾರ (ಎಸ್‌ಬಿಆರ್‌ಟಿ) ಘಟಕಗಳಿಗೆ ಹೆಚ್ಚು ನಮ್ಯತೆ ಮತ್ತು ಕಾರ್ಯಾಚರಣೆಯಲ್ಲಿ ಸರಳತೆಯನ್ನು ಒದಗಿಸುವುದು. ಭಾರತದಲ್ಲಿ ತಯಾರಿಸಿದ ಎಲ್ಲಾ ಉತ್ಪನ್ನಗಳನ್ನು ಅವುಗಳನ್ನು ಭಾರತದಲ್ಲಿ ಮಾರಾಟ ಮಾಡಲಾಗಿದ್ದರೂ ಅಥವಾ ರಫ್ತು ಮಾಡಲಾಗಿದ್ದರೂ ಎಂದು ದೇಶೀಯವೆ<ಂದು ಪರಿಗಣಿಸಲಾಗುತ್ತದೆ.
ಸರ್ಕಾರಿ ಖರೀದಿಗಳಲ್ಲಿ ಮೇಕ್ ಇನ್ ಇಂಡಿಯಾಕ್ಕೆ ಉತ್ತೇಜನ
ಸ್ಥಳೀಯ ಸರಬರಾಜುದಾರರಿಗೆ ಅನುಕೂಲವಾಗುವಂತೆ ಪ್ರಗತಿಪರ ತಿದ್ದುಪಡಿಗಳನ್ನು ಮಾಡಲಾಗಿದ್ದು, 50 ಲಕ್ಷ ರೂ.ಗಳವರೆಗೆ ಖರೀದಿಯನ್ನು ಸ್ಥಳೀಯ ಸರಬರಾಜುದಾರರಿಗೆ ಪ್ರತ್ಯೇಕವಾಗಿ ಮೀಸಲಿಡಲಾಗಿದೆ (ಕೆಲವು ಸಂದರ್ಭಗಳನ್ನು ಹೊರತುಪಡಿಸಿ). ಇಲ್ಲಿ ಖರೀದಿ ಮೌಲ್ಯವನ್ನು ಲೆಕ್ಕಿಸದೆ ಸಾಕಷ್ಟು ಸ್ಥಳೀಯ ಸಾಮರ್ಥ್ಯ ಮತ್ತು ಸ್ಥಳೀಯ ಸ್ಪರ್ಧೆ ಇರುವ ಕಡೆ ಸ್ಥಳೀಯ ಸರಬರಾಜುದಾರರು ಮಾತ್ರ ವಸ್ತುಗಳನ್ನು ಪೂರೈಸಲು ಬಿಡ್ ಮಾಡಲು ಅರ್ಹರಾಗಿದ್ದಾರೆ.
ಬೈಸಿಕಲ್ ಉದ್ಯಮದ ಅನುಕೂಲಕ್ಕಾಗಿ ಬೈಸಿಕಲ್ ಅಭಿವೃದ್ಧಿ ಮಂಡಳಿ ರಚನೆ
ಭಾರತೀಯ ಬೈಸಿಕಲ್ ಉದ್ಯಮವು ವಿಶ್ವದಲ್ಲಿ ಎರಡನೇ ಅತಿದೊಡ್ಡ ಬೈಸಿಕಲ್ ಉದ್ಯಮವಾಗಿದೆ. ಬೈಸಿಕಲ್ ಉದ್ಯಮ ಮತ್ತು ಬಿಡಿ ಭಾಗ ತಯಾರಕರನ್ನು ಜಾಗತಿಕ ಮಾನದಂಡಗಳತ್ತ ಅಭಿವೃದ್ಧಿಪಡಿಸಲು ಬೈಸಿಕಲ್ ಅಭಿವೃದ್ಧಿ ಮಂಡಳಿಯನ್ನು ರಚಿಸಲಾಗಿದೆ.
ರಾಷ್ಟ್ರೀಯ ವಿನ್ಯಾಸ ಸಂಸ್ಥೆ (ತಿದ್ದುಪಡಿ) ಕಾಯ್ದೆ, 2019
ನಾಲ್ಕು ಹೊಸ ರಾಷ್ಟ್ರೀಯ ವಿನ್ಯಾಸ ಸಂಸ್ಥೆ (ಎನ್‌ಐಡಿ) ಗಳಿಗೆ ರಾಷ್ಟ್ರೀಯ ಮಹತ್ವದ ಸ್ಥಾನಮಾನವನ್ನು ನೀಡಲು 2019 ರ ಆಗಸ್ಟ್ 6 ರಂದು ರಾಜ್ಯಸಭೆಯಲ್ಲಿ ಅಂಗೀಕಾರಕ್ಕಾಗಿ ಮಂಡಿಸಲಾಯಿತು. ರಾಜ್ಯಸಭೆಯು ಮಸೂದೆಯನ್ನು ಅಂಗೀಕರಿಸಿತು. ಇದನ್ನು ಲೋಕಸಭೆಯ ಮುಂಬರುವ ಅಧಿವೇಶನದಲ್ಲಿ ಮಂಡಿಸಲಾಗುವುದು. ಆಂಧ್ರಪ್ರದೇಶ, ಮಧ್ಯಪ್ರದೇಶ, ಅಸ್ಸಾಂ ಮತ್ತು ಹರಿಯಾಣದಲ್ಲಿನ ನಾಲ್ಕು ಹೊಸ ಎನ್‌ಐಡಿಗಳನ್ನು ಅಹಮದಾಬಾದ್‌ನ ಎನ್‌ಐಡಿ ಮಾದರಿಯಲ್ಲಿ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳೆಂದು ಘೋಷಿಸಲಾಗುವುದು. ಮಧ್ಯಪ್ರದೇಶ ಮತ್ತು ಅಸ್ಸಾಂ ಎನ್‌ಐಡಿಗಳು 2019-20ರ ಶೈಕ್ಷಣಿಕ ಅಧಿವೇಶನವನ್ನು 2019 ಜುಲೈ 29 ರಿಂದ ಪ್ರಾರಂಭಿಸಿವೆ.
ರಾಷ್ಟ್ರೀಯ ವ್ಯಾಪಾರಿಗಳ ಕಲ್ಯಾಣ ಮಂಡಳಿಯ ಸ್ಥಾಪನೆ (ಜುಲೈ 26, 2019)
ವ್ಯಾಪಾರಿಗಳು ಮತ್ತು ನೌಕರರು ತಮ್ಮ ದಿನನಿತ್ಯದ ವ್ಯವಹಾರ ಕಾರ್ಯಾಚರಣೆಗಳು ಮತ್ತು ಅವರ ಯೋಗಕ್ಷೇಮದಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ತೊಂದರೆಗಳನ್ನು ಅರ್ಥಮಾಡಿಕೊಳ್ಳಲು ಮಂಡಳಿಯ ಸ್ಥಾಪನೆಯಿಂದಾಗಿ ವ್ಯಾಪಾರಿಗಳ ದೀರ್ಘಕಾಲದ ಬೇಡಿಕೆ ಈಡೇರಿದೆ. ಈ ಮಂಡಳಿಯು ವ್ಯಾಪಾರಿಗಳ ಸಂಘದಿಂದ ಹಲವಾರು ಪ್ರತಿನಿಧಿಗಳನ್ನು ಸದಸ್ಯರಾಗಿ ಹೊಂದಿರುತ್ತದೆ.
(Release ID: 1597321)
Visitor Counter : 289