ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ

ಪಿಂಚಣಿ ಸಪ್ತಾಹ ಉದ್ಘಾಟಿಸಿದ ಶ್ರೀ ಸಂತೋಷ್ ಗಂಗ್ವಾರ್

Posted On: 30 NOV 2019 1:19PM by PIB Bengaluru

ಪಿಂಚಣಿ ಸಪ್ತಾಹ ಉದ್ಘಾಟಿಸಿದ ಶ್ರೀ ಸಂತೋಷ್ ಗಂಗ್ವಾರ್

 

ಪ್ರಧಾನಮಂತ್ರಿ ಶ್ರಮಯೋಗಿ ಮಾನದನ್(ಪಿಎಂ-ಎಸ್ ವೈ ಎಂ) ಮತ್ತು ವರ್ತಕರು ಹಾಗೂ ಸ್ವಯಂ ಉದ್ಯೋಗಿಗಳ ರಾಷ್ಟ್ರೀಯ ಪಿಂಚಣಿ ಯೋಜನೆ(ಎನ್ ಪಿ ಎಸ್-ಟ್ರೇಡರ್ಸ್) ಯೋಜನೆಗಳ ನೋಂದಣಿಯನ್ನು ಉತ್ತೇಜಿಸುವ ಸಲುವಾಗಿ ಕಾರ್ಮಿಕ ಸಚಿವಾಲಯ ನವೆಂಬರ್ 30ರಿಂದ - ಡಿಸೆಂಬರ್ 6 2019 ವರೆಗೆ ಪಿಂಚಣಿ ಸಪ್ತಾಹವನ್ನು ಆಚರಿಸಲು ನಿರ್ಧರಿಸದೆ. ಪ್ರಧಾನ ಸಮಾರಂಭವನ್ನು ಶ್ರೀ ಸಂತೋಷ್ ಗಂಗ್ವಾರ್, ಕಾರ್ಮಿಕ ಮತ್ತು ಉದ್ಯೋಗ ಖಾತೆ (ಸ್ವತಂತ್ರ ಹೊಣೆಗಾರಿಕೆ) ಸಚಿವರು ಉದ್ಘಾಟಿಸಿದರು. ಇದರಡಿ 2020 ಮಾರ್ಚ್ ವೇಳೆಗೆ ಪಿ ಎಂ ಎಸ್ ವೈ ಎಂನಲ್ಲಿ ಒಂದು ಕೋಟಿ ಫಲಾನುಭವಿಗಳನ್ನು ಮತ್ತು ಎನ್ ಪಿ ಎಸ್ಟ್ರೇಡರ್ಸ್ ಯೋಜನೆಯಲ್ಲಿ 50 ಲಕ್ಷ ಫಲಾನುಭವಿಗಳನ್ನು ನೋಂದಣಿ ಮಾಡಿಸುವ ಗುರಿ ಹೊಂದಲಾಗಿದೆ. ಕಾರ್ಯಕ್ರಮವನ್ನು ದೇಶಾದ್ಯಂತ ಇರುವ 3.5 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳಿಂದ(ಸಿ ಎಸ್ ಸಿ ಎಸ್) ನೇರ ವೆಬ್ ಕಾಸ್ಟ್ ಮಾಡಲಾಯಿತು.  

ಶ್ರೀ ಸಂತೋಷ್ ಗಂಗ್ವಾರ್ ಅವರು, ಎರಡು ಪಿಂಚಣಿ ಯೋಜನೆಗಳು ಅತ್ಯಂತ ಸರಳ ಹಾಗೂ ಯಾವುದೇ ಅಡೆತಡೆಗಳಿಂದ ಮುಕ್ತವಾಗಿದೆ. ಇದರಡಿ ನೋಂದಣಿಗೆ ಕೇವಲ ಆಧಾರ್ ಮತ್ತು ಬ್ಯಾಂಕ್ ಉಳಿತಾಯ ಖಾತೆ/ಜನಧನ್ ಖಾತೆ ಅಗತ್ಯವಿದೆ. ಯೋಜನೆಗಳ ನೋಂದಣಿಗೆ ಓರ್ವ ವ್ಯಕ್ತಿಗೆ ಕೇವಲ 2-3 ನಿಮಿಷಗಳು ಸಾಕು. ಅಲ್ಲದೆ ಯೋಜನೆಗಳಡಿ ವಂತಿಗೆದಾರರಾಗಲು ಅವರು ಯೋಜನೆಗೆ ಸೇರ್ಪಡೆಗೊಳ್ಳುವ ವಯಸ್ಸನ್ನು ಆಧರಿಸಿ ಕನಿಷ್ಠ 55 ರಿಂದ 200 ರೂಪಾಯಿಗಳ ವರೆಗೆ ಪ್ರತಿ ತಿಂಗಳು ವಂತಿಗೆ ಪಾವತಿಸಬೇಕಾಗುತ್ತದೆ. ಓರ್ವ ವ್ಯಕ್ತಿಗೆ 30 ವರ್ಷಗಳಾಗಿದ್ದರೆ ಆತ ಸುಮಾರು ತಿಂಗಳಿಗೆ 100 ರೂಪಾಯಿಯಷ್ಟು ವಂತಿಗೆ ಪಾವತಿಸಬೇಕಾಗುತ್ತದೆ. ರೀತಿಯಲ್ಲಿ ವ್ಯಕ್ತಿ ಒಂದು ವರ್ಷಕ್ಕೆ 1200 ರೂಪಾಯಿ ವಂತಿಗೆಯನ್ನು ಪಾವತಿಸಿದರೆ, ಆತ ತನ್ನ ಇಡೀ ವಂತಿಗೆ ಪಾವತಿ ಅವಧಿ ವೇಳೆ ಒಟ್ಟು 36,000 ರೂ. ಪಾವತಿಸಿದಂತಾಗುತ್ತದೆ. ಆತ 60 ವರ್ಷವಾದಾಗ ಪ್ರತಿ ವರ್ಷ 36,000 ರೂ. ಪಿಂಚಣಿ ಗಳಿಸುತ್ತಾನೆ. ಜೀವನಚಕ್ರದ  ಪ್ರಕಾರ ಓರ್ವ ವ್ಯಕ್ತಿ 60 ವರ್ಷ ಪೂರ್ಣಗೊಳಿಸಿದರೆ ಸುಮಾರು 80 ವರ್ಷಗಳವರೆಗೆ ಬದುಕುಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ರೀತಿಯಲ್ಲಿ ಆತ ವರ್ಷಕ್ಕೆ 36,000 ರೂಪಾಯಿ ಪಿಂಚಣಿ ಪಡೆಯುತ್ತಾನೆ. ಆತನ ಮರಣಾ ನಂತರ ಆತನ ಪತ್ನಿಗೆ ಶೇ.50ರಷ್ಟು ಪಿಂಚಣಿ ಅಂದರೆ ತಿಂಗಳಿಗೆ ಒಂದೂವರೆ ಸಾವಿರ ರೂಪಾಯಿ ಪಿಂಚಣಿ ಪಡೆಯುತ್ತಾರೆ. ಪತಿ ಮತ್ತು ಪತ್ನಿ ಇಬ್ಬರೂ ಕೂಡ ಪಿಂಚಣಿ ಯೋಜನೆಗೆ ಅರ್ಹರಾಗಿದ್ದರೆ ಅವರು ಪ್ರತ್ಯೇಕವಾಗಿ ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದು ಮತ್ತು 60 ವರ್ಷದ ನಂತರ ಅವರು ತಿಂಗಳಿ 6,000 ರೂಪಾಯಿ ಪಿಂಚಣಿ ಪಡೆಯುತ್ತಾರೆ. ಅದು ವೃದ್ಧಾಪ್ಯದಲ್ಲಿ ಅವರ ದೈನಂದಿನ ಅಗತ್ಯತೆಗಳಿಗೆ ಸಾಕಾಗುತ್ತದೆ. ಪಿಂಚಣಿ ಅವಧಿಯಲ್ಲಿ ಇಬ್ಬರಲ್ಲಿ ಒಬ್ಬರು ಮೃತಪಟ್ಟರೆ ಮತ್ತೊಬ್ಬರು ತಿಂಗಳಿಗೆ 4,500 ಸಾವಿರ ರೂಪಾಯಿ ಪಿಂಚಣಿ (3,000ರೂ. ಒಬ್ಬರದು ಮತ್ತು ಇನ್ನೊಬ್ಬರದು 1,500 ಸಾವಿರ ರೂ.)ಪಡೆಯುತ್ತಾರೆ.

ಪಿಂಚಣಿ ಸಪ್ತಾಹ  ಜಾಗೃತಿ ಅಭಿಯಾನದಿಂದ 10  ಕೋಟಿ ಆಯುಷ್ಮಾನ್ ಫಲಾನುಭವಿಗಳು, 11 ಕೋಟಿ ಮನ್ರೇಗಾ ಕೂಲಿಗಾರರು, 4-5 ಕೋಟಿ ಹಿಂದುಳಿದ ವರ್ಗದ ಕೆಲಸಗಾರರು, 2.5 ಕೋಟಿ ಸ್ವ-ಸಹಾಯ ಗುಂಪುಗಳ ಸದಸ್ಯರು, 40 ಲಕ್ಷ ಅಂಗನವಾಡಿ ಕಾರ್ಯಕರ್ತರು, 10 ಲಕ್ಷ ಆಶಾ ಕಾರ್ಯಕರ್ತೆಯರು ಯೋಜನೆಗಳ ಪ್ರಯೋಜನವನ್ನು ಪಡೆಯಲಿದ್ದಾರೆ ಎಂದು ಸಚಿವರು ಹೇಳಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕಾರ್ಮಿಕ ಕಾರ್ಯದರ್ಶಿ ಶ್ರೀ ಹೀರಾಲಾಲ್ ಸಮಾರಿಯಾ ಅವರು, ಸಿ ಎಸ್ ಸಿ ಎಸ್ ನಲ್ಲಿ ಪಿಂಚಣಿ ಸಪ್ತಾಹದ ವೇಳೆ 100ಕ್ಕೂ ಅಧಿಕ ಮಂದಿಯನ್ನು ನೋಂದಣಿ ಮಾಡಬಹುದಾಗಿದೆ. ಇದರಿಂದ ಅವುಗಳಿಗೆ ಹೆಚ್ಚುವರಿ ಭತ್ಯೆ ಸಿಗಲಿದೆ. ಭತ್ಯೆಗಳಲ್ಲಿ ಸಿ ಎಸ್ ಸಿಎಸ್ ಪಿ ವಿ ಯಾವುದೇ ಹಣವನ್ನು ಹಂಚಿಕೆ ಮಾಡುವಂತಿಲ್ಲ. ಸಂಪೂರ್ಣ ಭತ್ಯೆ ಹಣ ಸಂಬಂಧಿಸಿದ ವಿಎಲ್ ಇಎಸ್/ಸಿ ಎಸ್ ಸಿ ಎಸ್ ಗಳಿಗೆ ವರ್ಗಾವಣೆಗೊಳ್ಳಲಿದೆ.

ಶ್ರೀ ಸಮಾರಿಯಾ ಅವರು, ಕಟ್ಟಡ ಕೆಲಸಗಾರರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಮನೆ ಕೆಲಸಗಾರರು ಸೇರಿದಂತೆ ನಿಗದಿತ ಗುಂಪುಗಳಿಗೆ ಪ್ರಾಮಾಣಿಕ ಪ್ರಯತ್ನದ ಮೂಲಕ ಯೋಜನೆಯ ಫಲ ಲಭ್ಯವಾಗುವಂತೆ ಮಾಡಲಾಗುವುದು ಎಂದರು. ಪಿಂಚಣಿ ಸಪ್ತಾಹದ ವೇಳೆ ರಾಜ್ಯ ಸರ್ಕಾರಗಳು ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆಗೂಡಿ ಗರಿಷ್ಠ ಸಂಖ್ಯೆಯ ಫಲಾನುಭವಿಗಳ ನೋಂದಣಿಗೆ ಪ್ರಯತ್ನಿಸಲಿವೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು. ಯೋಜನೆಗಳ ಪ್ರಗತಿಯನ್ನು ಸಚಿವಾಲಯ ನಿರಂತರವಾಗಿ ಪರಾಮರ್ಶೆ ನಡೆಸುತ್ತಿದೆ.

ಕಾರ್ಮಿಕ ಮತ್ತು ಉದ್ಯೋಗ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಶ್ರೀಮತಿ ಅನುರಾಧಾ ಪ್ರಸಾದ್, ಸಿ ಪಿ ಎಫ್ ಸಿ ಶ್ರೀ ಸುನಿಲ್ ಭರತ್ವಾಲ್, ಡಿಜಿಎಲ್ ಡಬ್ಲ್ಯೂ ಶ್ರೀ ಅಜಯ್ ತಿವಾರಿ ಮತ್ತು ಹಿರಿಯ ಅಧಿಕಾರಿಗಳು ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

****

 



(Release ID: 1594502) Visitor Counter : 119