ಸಂಪುಟ

ದ್ವಿತೆರಿಗೆ ತಪ್ಪಿಸಲು ಭಾರತ ಮತ್ತು ಚಿಲಿ ನಡುವೆ ಒಪ್ಪಂದ ಮತ್ತು ಶಿಷ್ಟಾಚಾರಕ್ಕೆ ಸಂಪುಟದ ಅನುಮೋದನೆ

Posted On: 27 NOV 2019 11:16AM by PIB Bengaluru

ದ್ವಿತೆರಿಗೆ ತಪ್ಪಿಸಲು ಭಾರತ ಮತ್ತು ಚಿಲಿ ನಡುವೆ ಒಪ್ಪಂದ ಮತ್ತು ಶಿಷ್ಟಾಚಾರಕ್ಕೆ ಸಂಪುಟದ ಅನುಮೋದನೆ
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ದ್ವಿತೆರಿಗೆ ತಡೆ ಒಪ್ಪಂದ (ಡಿಟಿಎಎ) ಮತ್ತು ದ್ವಿ ತೆರಿಗೆ ನಿರ್ಮೂಲನೆಗೆ ಹಾಗೂ ಆರ್ಥಿಕ ವಂಚನೆ ತಡೆಯಲು ಮತ್ತು ಆದಾಯದ ಮೇಲಿನ ತೆರಿಗೆ ತಪ್ಪಿಸಿಕೊಳ್ಳುವುದನ್ನು ತಡೆಯಲು ಭಾರತ ಮತ್ತು ಚಿಲಿ ಗಣರಾಜ್ಯಗಳ ನಡುವೆ ಶಿಷ್ಟಾಚಾರಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.
ಪ್ರಮುಖ ಪರಿಣಾಮಗಳು:
ಡಿಟಿಎಎ ದ್ವಿತೆರಿಗೆ ನಿರ್ಮೂಲನೆಗೆ ಅವಕಾಶ ಕಲ್ಪಿಸುತ್ತದೆ. ಎರಡೂ ದೇಶಗಳ ಹೂಡಿಕೆದಾರರು ಮತ್ತು ವ್ಯವಹಾರಗಳಿಗೆ ತೆರಿಗೆ ನಿಶ್ಚಿತತೆ ಒದಗಿಸುತ್ತದೆ, ಆದರೆ ಮೂಲ ರಾಷ್ಟ್ರದಲ್ಲಿ ತೆರಿಗೆ ದರಗಳನ್ನು ನಿಗದಿಪಡಿಸುವ ಮೂಲಕ ಹೂಡಿಕೆಯ ಹರಿವು, ಬಡ್ಡಿ, ರಾಯಧನ ಮತ್ತು ತಾಂತ್ರಿಕ ಸೇವೆಗಳಿಗೆ ಶುಲ್ಕಗಳನ್ನು ಹೆಚ್ಚಿಸುವ ಮೂಲಕ ಒಪ್ಪಂದವೇರ್ಪಟ್ಟ ದೇಶಗಳ ನಡುವೆ ತೆರಿಗೆ ಹಕ್ಕುಗಳ ಸ್ಪಷ್ಟ ಹಂಚಿಕೆ ಸ್ಪಷ್ಟಪಡಿಸುತ್ತದೆ.
ಒಪ್ಪಂದ ಮತ್ತು ಶಿಷ್ಟಾಚಾರ ಅನುಷ್ಠಾನವು ಜಿ -20 ಒಇಸಿಡಿ ಆಧಾರದ ಸವೆತದ ಲಾಭ ವರ್ಗಾವಣೆ (ಬಿಇಪಿಎಸ್) ಯೋಜನೆಯ ಕನಿಷ್ಠ ಮಾನದಂಡಗಳು ಮತ್ತು ಇತರ ಶಿಫಾರಸುಗಳನ್ನು ಕಾರ್ಯಗತಗೊಳಿಸುತ್ತದೆ. ಪೀಠಿಕೆಯ ಪಠ್ಯ, ಪ್ರಧಾನ ಉದ್ದೇಶದ ಪರೀಕ್ಷೆ ಸೇರ್ಪಡೆ ಒಪ್ಪಂದದಲ್ಲಿ ಸಾಮಾನ್ಯ ನಿಂದನೆ-ವಿರೋಧಿ ನಿಬಂಧನೆ ಮತ್ತು ಲಾಭಗಳ ಸರಳೀಕೃತ ಮಿತಿಯ ಷರತ್ತುಗಳ ಜೊತೆಗೆ ಬಿಇಪಿಎಸ್ ಯೋಜನೆಯ ಪ್ರಕಾರ ತೆರಿಗೆ ಯೋಜನಾ ಕಾರ್ಯತಂತ್ರಗಳನ್ನು ನಿಗ್ರಹಿಸುವುದರಿಂದ ತೆರಿಗೆ ನಿಯಮಗಳಲ್ಲಿನ ಅಂತರ ಮತ್ತು ಸಾಮರಸ್ಯವಿಲ್ಲದ ಸಂಬಂಧವನ್ನು ನಿವಾರಿಸುತ್ತದೆ.
ಕಾರ್ಯತಂತ್ರ ಮತ್ತು ಗುರಿಯ ಅನುಷ್ಠಾನ:
ಸಂಪುಟದ ಅನುಮೋದನೆಯ ಬಳಿಕ, ಒಪ್ಪಂದ ಮತ್ತು ಶಿಷ್ಟಾಚಾರದ ಆರಂಭಕ್ಕೆ ಅಗತ್ಯ ವಿಧಿವಿಧಾನಗಳ ಜಾರಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಜಾರಿಯ ಕುರಿತಂತೆ ಸಚಿವಾಲಯ ನಿಗಾವಹಿಸುತ್ತದೆ ಮತ್ತು ವರದಿ ಪಡೆಯುತ್ತದೆ.

 

***



(Release ID: 1593727) Visitor Counter : 56