ಸಂಪುಟ
ಟೆಲಿಕಾಂ ಸೇವಾ ವಲಯ ಎದುರಿಸುತ್ತಿರುವ ಆರ್ಥಿಕ ಒತ್ತಡ ತಗ್ಗಿಸುವ ಪ್ರಸ್ತಾಪಕ್ಕೆ ಸಂಪುಟದ ಅನುಮೋದನೆ
Posted On:
20 NOV 2019 10:37PM by PIB Bengaluru
ಟೆಲಿಕಾಂ ಸೇವಾ ವಲಯ ಎದುರಿಸುತ್ತಿರುವ ಆರ್ಥಿಕ ಒತ್ತಡ ತಗ್ಗಿಸುವ ಪ್ರಸ್ತಾಪಕ್ಕೆ ಸಂಪುಟದ ಅನುಮೋದನೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ದೂರಸಂಪರ್ಕ (ಟೆಲಿಕಾಂ) ಸೇವಾ ವಲಯ ಎದುರಿಸುತ್ತಿರುವ ಆರ್ಥಿಕ ಒತ್ತಡ ತಗ್ಗಿಸುವ ಪ್ರಸ್ತಾಪಕ್ಕೆ ಈ ಕೆಳಕಂಡಂತೆ ತನ್ನ ಅನುಮೋದನೆ ನೀಡಿದೆ.
ದೂರಸಂಪರ್ಕ ಇಲಾಖೆ, ಟೆಲಿಕಾಂ ಸೇವಾ ಪೂರೈಕೆದಾರರು (ಟಿಎಸ್.ಪಿ.ಗಳು)ಗಳಿಗೆ 2020-21 ಮತ್ತು 2021-22ರ ಬಾಕಿ ಇರುವ ತರಂಗಾಂತರ ಹರಾಜು ಕಂತುಗಳ ಪಾವತಿಯನ್ನು ಒಂದು ಅಥವಾ ಎರಡೂ ವರ್ಷಗಳವರೆಗೆ ಮುಂದೂಡಲು ಒಂದು ಆಯ್ಕೆಯನ್ನು ನೀಡುತ್ತದೆ. ಈ ಮುಂದೂಡಲ್ಪಟ್ಟ ಮೊತ್ತದ ಬಿಲ್ ಅನ್ನು ಟಿಎಸ್.ಪಿ.ಗಳು ಪಾವತಿಸಬೇಕಾದ ಉಳಿದ ಕಂತುಗಳಿಗೆ ಸಮಾನವಾಗಿ ಹಂಚಲಾಗುತ್ತದೆ. ಸಂಬಂಧಪಟ್ಟ ತರಂಗಾಂತರವನ್ನು ಹರಾಜು ಮಾಡುವಾಗ ನಿಗದಿಪಡಿಸಿದ ಬಡ್ಡಿಯನ್ನು ವಿಧಿಸಲಾಗುತ್ತದೆ ಆದ್ದರಿಂದ ಎನ್‌ಪಿವಿಯನ್ನು ರಕ್ಷಿಸಲಾದಂತಾಗುತ್ತದೆ.
ತರಂಗಾಂತರ ಹರಾಜು ಕಂತುಗಳ ಮುಂದೂಡಿಕೆಯು ಒತ್ತಡದಲ್ಲಿರುವ ಟಿ.ಎಸ್.ಪಿ.ಗಳಿಗೆ ನಗದು ಹರಿವನ್ನು ಸುಗಮಗೊಳಿಸುತ್ತದೆ ಮತ್ತು ಶಾಸನಬದ್ಧ ಋಣವನ್ನು ಮತ್ತು ಬ್ಯಾಂಕ್ ಬಡ್ಡಿಯನ್ನು ಪಾವತಿಸಲು ಅವಕಾಶ ಕಲ್ಪಿಸುತ್ತದೆ. ಟಿಎಸ್.ಪಿ.ಗಳ ಕಾರ್ಯಾಚರಣೆಯ ಮುಂದುವರಿಕೆ ಉದ್ಯೋಗ ಮತ್ತು ಆರ್ಥಿಕ ಪ್ರಗತಿಗೆ ಉತ್ತೇಜನ ನೀಡುತ್ತದೆ. ಟಿಎಸ್.ಪಿ.ಗಳ ಆರ್ಥಿಕ ಆರೋಗ್ಯ ಸುಧಾರಣೆ ಗ್ರಾಹಕರಿಗೆ ಗುಣಮಟ್ಟದ ಸೇವೆಯನ್ನು ಒದಗಿಸಲು ಅವಕಾಶ ನೀಡುತ್ತದೆ.
ಎರಡು ವರ್ಷಗಳ ಕಾಲ ತರಂಗಾಂತರ ಕಂತಿನ ಪಾವತಿಯನ್ನು ಮುಂದೂಡಿಕೆ ಮಾಡುವ ನಿರ್ಧಾರವನ್ನು ಹದಿನೈದು ದಿನಗಳ ಒಳಗಾಗಿ ಜಾರಿಗೊಳಿಸಲಾಗುವುದು. ಪರವಾನಗಿಯ ತಿದ್ದುಪಡಿಯನ್ನು ಘನತೆವೆತ್ತ ಸಂಪರ್ಕ ಸಚಿವರ ಅನುಮೋದನೆಯೊಂದಿಗೆ ತ್ವರಿತವಾಗಿ ನೀಡಲಾಗುವುದು.
***
(Release ID: 1593062)
Visitor Counter : 135
Read this release in:
Assamese
,
English
,
Urdu
,
Hindi
,
Marathi
,
Bengali
,
Punjabi
,
Gujarati
,
Tamil
,
Telugu
,
Malayalam