ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿಯವರಿಂದ ಕರ್ತಾರ್ಪುರ್ ಸಾಹಿಬ್ ಕಾರಿಡಾರ್ ಏಕೀಕೃತ ಚೆಕ್ ಪೋಸ್ಟ್ ಉದ್ಘಾಟನೆ ಮತ್ತು ಯಾತ್ರಾರ್ಥಿಗಳ ಮೊದಲನೇ ತಂಡಕ್ಕೆ ಹಸಿರು ನಿಶಾನೆ

Posted On: 09 NOV 2019 4:29PM by PIB Bengaluru

ಪ್ರಧಾನಮಂತ್ರಿಯವರಿಂದ ಕರ್ತಾರ್ಪುರ್ ಸಾಹಿಬ್ ಕಾರಿಡಾರ್ ಏಕೀಕೃತ ಚೆಕ್ ಪೋಸ್ಟ್ ಉದ್ಘಾಟನೆ ಮತ್ತು ಯಾತ್ರಾರ್ಥಿಗಳ ಮೊದಲನೇ ತಂಡಕ್ಕೆ ಹಸಿರು ನಿಶಾನೆ
 

ಪಂಜಾಬ್ನ ಗುರುದಾಸ್ಪುರದ ಕರ್ತಾರ್ಪುರ್ ಸಾಹಿಬ್ ಕಾರಿಡಾರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಏಕೀಕೃತ ಚೆಕ್ ಪೋಸ್ಟ್ ಅನ್ನು ಉದ್ಘಾಟಿಸಿದರು ಮತ್ತು ಯಾತ್ರಾರ್ಥಿಗಳ ಮೊದಲ ತಂಡಕ್ಕೆ ಹಸಿರು ನಿಶಾನೆ ತೋರಿದರು.

 

ಕರ್ತಾರ್ಪುರ ಕಾರಿಡಾರ್ ಉದ್ಘಾಟನೆಗೆ ಮುನ್ನ ಪ್ರಧಾನಿಯವರು ಗುರುನಾನಕ್ ದೇವ್ ಅವರ ಜೀವನ ಮತ್ತು ಪ್ರಯಾಣಿಕರ ಟರ್ಮಿನಲ್ ಕಟ್ಟಡ ಕುರಿತ ಡಿಜಿಟಲ್ ಅನುಸ್ಥಾಪನೆಯ ಪ್ರವಾಸ ಕೈಗೊಂಡರು.

 

ಮೊದಲನೇ ತಂಡದ ಯಾತ್ರಾರ್ಥಿಗಳು ನಿರ್ಗಮಿಸುವ ಮುನ್ನ ಪ್ರಧಾನಿಯವರು ಅವರೊಂದಿಗೆ ಸಂವಾದ ನಡೆಸಿದರು.

 

 

ಏಕೀಕೃತ ಚೆಕ್ ಪೋಸ್ಟ್, ಕರ್ತಾರ್ಪುರ್ ಕಾರಿಡಾರ್

 

ಏಕೀಕೃತ ಚೆಕ್ ಪೋಸ್ಟ್, ಭಾರತೀಯ ಯಾತ್ರಿಕರು ಪಾಕಿಸ್ತಾನದ ಗುರುದ್ವಾರ ಕರ್ತಾಪುರ್ ಸಾಹಿಬ್ಗೆ ಭೇಟಿ ನೀಡಲು ಅನುಕೂಲ ಕಲ್ಪಿಸಲಿದೆ.

ಅಂತರರಾಷ್ಟ್ರೀಯ ಗಡಿಯ ಡೇರಾ ಬಾಬಾ ನಾನಕ್ ಜೀರೋ ಪಾಯಿಂಟ್ ನಲ್ಲಿರುವ ಕರ್ತಾರ್ಪುರ್ ಸಾಹಿಬ್ ಕಾರಿಡಾರ್ ಅನ್ನು ಕಾರ್ಯಗತಗೊಳಿಸುವ ವಿಧಾನಗಳ ಕುರಿತು ಭಾರತವು ಅಕ್ಟೋಬರ್ 24, 2019 ರಂದು ಪಾಕಿಸ್ತಾನದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು.

ಶ್ರೀ ಗುರು ನಾನಕ್ ದೇವ್ ಅವರ 550 ನೇ ಜಯಂತಿಯ ಐತಿಹಾಸಿಕ ಸಂದರ್ಭವನ್ನು ದೇಶಾದ್ಯಂತ ಮತ್ತು ಜಗತ್ತಿನಾದ್ಯಂತ ಆಚರಿಸಲು ಕೇಂದ್ರ ಸಚಿವ ಸಂಪುಟವು 22 ನವೆಂಬರ್ 2018 ರಂದು ನಿರ್ಣಯವನ್ನು ಅಂಗೀಕರಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಭಾರತದ ಯಾತ್ರಾರ್ಥಿಗಳು ದರ್ಬಾರ್ ಸಾಹಿಬ್ ಕರ್ತಾರ್ಪುರ ಗುರುದ್ವಾರಕ್ಕೆ ವರ್ಷಪೂರ್ತಿ ಸುಗಮವಾಗಿ ಮತ್ತು ಸುಲಭವಾಗಿ ಭೇಟಿ ನೀಡಲು ಅನುಕೂಲವಾಗುವಂತೆ ಡೇರಾ ಬಾಬಾ ನಾನಕ್ನಿಂದ ಅಂತರರಾಷ್ಟ್ರೀಯ ಗಡಿಯವರೆಗೆ ಕರ್ತಾರ್ಪುರ್ ಸಾಹಿಬ್ ಕಾರಿಡಾರ್ ನಿರ್ಮಾಣ ಮತ್ತು ಅಭಿವೃದ್ಧಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತು.

ಯಾತ್ರಿಕರಿಗೆ ಒದಗಿಸಲಾದ ಅನುಕೂಲಗಳು

ಅಮೃತಸರ - ಗುರುದಾಸ್ಪುರ ಹೆದ್ದಾರಿಯಿಂದ ಡೇರಾ ಬಾಬಾ ನಾನಕ್ ಅನ್ನು ಸಂಪರ್ಕಿಸುವ 4.2 ಕಿ.ಮೀ ಉದ್ದದ ನಾಲ್ಕು ಪಥದ ಹೆದ್ದಾರಿಯನ್ನು 120 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಅತ್ಯಾಧುನಿಕ ಪ್ರಯಾಣಿಕರ ಟರ್ಮಿನಲ್ ಕಟ್ಟಡವು 15 ಎಕರೆ ಪ್ರದೇಶದಲ್ಲಿದೆ. ವಿಮಾನ ನಿಲ್ದಾಣಕ್ಕೆ ಸಮನಾದ ಸಂಪೂರ್ಣ ಹವಾನಿಯಂತ್ರಿತ ಕಟ್ಟಡವು ದಿನಕ್ಕೆ ಸುಮಾರು 5000 ಯಾತ್ರಾರ್ಥಿಗಳಿಗೆ ಅನುಕೂಲ ಕಲ್ಪಿಸುವ 50 ಕ್ಕೂ ಹೆಚ್ಚು ವಲಸೆ ಕೌಂಟರ್ಗಳನ್ನು ಹೊಂದಿದೆ.

ಕಿಯೋಸ್ಕ್ ಗಳು, ಶೌಚಾಲಯಗಳು, ಮಕ್ಕಳ ಆರೈಕೆ, ಪ್ರಥಮ ಚಿಕಿತ್ಸಾ ವೈದ್ಯಕೀಯ ಸೌಲಭ್ಯಗಳು, ಪ್ರಾರ್ಥನಾ ಕೊಠಡಿ ಮತ್ತು ಮುಖ್ಯ ಕಟ್ಟಡದ ಒಳಗೆ ತಿಂಡಿ ಕೌಂಟರ್ಗಳಂತಹ ಎಲ್ಲಾ ಸಾರ್ವಜನಿಕ ಸೌಲಭ್ಯಗಳನ್ನು ಇದು ಹೊಂದಿದೆ.

ಸಿಸಿಟಿವಿ ಕಣ್ಗಾವಲು ಮತ್ತು ಸಾರ್ವಜನಿಕ ದೂರು ವ್ಯವಸ್ಥೆಗಳೊಂದಿಗೆ ಭದ್ರತಾ ಮೂಲಸೌಕರ್ಯವನ್ನು ನಿರ್ಮಿಸಲಾಗಿದೆ.

ಅಂತರರಾಷ್ಟ್ರೀಯ ಗಡಿಯಲ್ಲಿ 300 ಅಡಿಯ ರಾಷ್ಟ್ರ ಧ್ವಜವನ್ನು ಸಹ ಹಾರಿಸಲಾಗುತ್ತಿದೆ.

ಅಕ್ಟೋಬರ್ 24 ರಂದು ಪಾಕಿಸ್ತಾನದೊಂದಿಗೆ ಮಾಡಿಕೊಂಡ ಒಪ್ಪಂದವು ಕರ್ತಾರ್ಪುರ್ ಸಾಹಿಬ್ ಕಾರಿಡಾರ್ನ ಕಾರ್ಯಾಚರಣೆಗೆ ಔಪಚಾರಿಕ ಚೌಕಟ್ಟನ್ನು ಒದಗಿಸುತ್ತದೆ.

ಒಪ್ಪಂದದ ಮುಖ್ಯಾಂಶಗಳು

• ಎಲ್ಲಾ ಧರ್ಮಗಳ ಭಾರತೀಯ ಯಾತ್ರಿಕರು ಮತ್ತು ಭಾರತೀಯ ಮೂಲದ ವ್ಯಕ್ತಿಗಳು ಕಾರಿಡಾರ್ ಅನ್ನು ಬಳಸಬಹುದು

• ಪ್ರಯಾಣವು ವೀಸಾ ರಹಿತವಾಗಿರುತ್ತದೆ

• ಯಾತ್ರಿಕರು ಸಿಂಧುವಾದ ಪಾಸ್ಪೋರ್ಟ್ ಹೊಂದಿರಬೇಕು

• ಭಾರತೀಯ ಮೂಲದ ವ್ಯಕ್ತಿಗಳು ತಮ್ಮ ದೇಶದ ಪಾಸ್ಪೋರ್ಟ್ನೊಂದಿಗೆ ಒಸಿಐ ಕಾರ್ಡ್ ಹೊಂದಿರಬೇಕು

• ಕಾರಿಡಾರ್ ಮುಂಜಾನೆಯಿಂದ ಮುಸ್ಸಂಜೆಯವರೆಗೆ ತೆರೆದಿರುತ್ತದೆ. ಬೆಳಿಗ್ಗೆ ಪ್ರಯಾಣಿಸುವ ಯಾತ್ರಿಕರು ಅದೇ ದಿನ ಹಿಂದುರಗಬೇಕು

• ಮುಂಚಿತವಾಗಿಯೇ ತಿಳಿಸುವ ಅಧಿಸೂಚಿತ ದಿನಗಳನ್ನು ಹೊರತುಪಡಿಸಿ ಕಾರಿಡಾರ್ ವರ್ಷವಿಡೀ ಕಾರ್ಯನಿರ್ವಹಿಸುತ್ತದೆ

• ಯಾತ್ರಾರ್ಥಿಗಳು ವ್ಯಕ್ತಿಗಳಾಗಿ ಅಥವಾ ಗುಂಪುಗಳಾಗಿ ಭೇಟಿ ನೀಡಲು ಮತ್ತು ಕಾಲ್ನಡಿಗೆಯಲ್ಲಿ ಹೋಗಲು ಆಯ್ಕೆ ಇರುತ್ತದೆ

• ಪ್ರಯಾಣದ ದಿನಾಂಕಕ್ಕಿಂತ 10 ದಿನಗಳ ಮುಂಚಿತವಾಗಿ ಭಾರತವು ಪಾಕಿಸ್ತಾನಕ್ಕೆ ಯಾತ್ರಾರ್ಥಿಗಳ ಪಟ್ಟಿಯನ್ನು ಕಳುಹಿಸುತ್ತದೆ. ಪ್ರಯಾಣಕ್ಕೆ 4 ದಿನಗಳ ಮೊದಲು ದೃಢೀಕರಣವನ್ನು ಯಾತ್ರಿಕರಿಗೆ ಕಳುಹಿಸಲಾಗುತ್ತದೆ

•  ‘ಲಂಗಾರ್’ ಮತ್ತು ‘ಪ್ರಸಾದ’ ವಿತರಣೆಗೆ ಸಾಕಷ್ಟು ಸರಬರಾಜು ಒದಗಿಸುವುದಾಗಿ ಪಾಕಿಸ್ತಾನವು ಭಾರತಕ್ಕೆ ಭರವಸೆ ನೀಡಿದೆ

ನೋಂದಣಿಯ ಪೋರ್ಟಲ್

ಯಾತ್ರಾರ್ಥಿಗಳು prakashpurb550.mha.gov.in ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳಬೇಕು. ಮತ್ತು ಯಾವುದೇ ದಿನ ಪ್ರಯಾಣಿಸಲು ತಮ್ಮ ಆಯ್ಕೆಯನ್ನು ಮಾಡಿಕೊಳ್ಳಬಹುದು. ಯಾತ್ರಾರ್ಥಿಗಳಿಗೆ ಪ್ರಯಾಣದ ದಿನಾಂಕಕ್ಕಿಂತ 3 ರಿಂದ 4 ದಿನಗಳ ಮುಂಚಿತವಾಗಿ ನೋಂದಣಿ ದೃಢೀಕರಣವನ್ನು ಎಸ್ಎಂಎಸ್ ಮತ್ತು ಇಮೇಲ್ ಮೂಲಕ ತಿಳಿಸಲಾಗುವುದು. ಎಲೆಕ್ಟ್ರಾನಿಕ್ ಟ್ರಾವೆಲ್ ದೃಢೀಕರಣವನ್ನು ಸಹ ರಚಿಸಲಾಗುತ್ತದೆ. ಯಾತ್ರಿಕರು ಪ್ರಯಾಣಿಕರ ಟರ್ಮಿನಲ್ ಕಟ್ಟಡಕ್ಕೆ ಬಂದಾಗ ತಮ್ಮ ಪಾಸ್ಪೋರ್ಟ್ನೊಂದಿಗೆ ಎಲೆಕ್ಟ್ರಾನಿಕ್ ಟ್ರಾವೆಲ್ ದೃಢೀಕರಣವನ್ನು ಹೋಂದಿರಬೇಕು.



(Release ID: 1592649) Visitor Counter : 112