ಪ್ರಧಾನ ಮಂತ್ರಿಯವರ ಕಛೇರಿ

ಅಯೋಧ್ಯೆ ತೀರ್ಪು ಹಿನ್ನೆಲೆಯಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡಲು ಪ್ರಧಾನಮಂತ್ರಿ ಕರೆ   

Posted On: 09 NOV 2019 2:07PM by PIB Bengaluru

ಅಯೋಧ್ಯೆ ತೀರ್ಪು ಹಿನ್ನೆಲೆಯಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡಲು ಪ್ರಧಾನಮಂತ್ರಿ ಕರೆ   

ತೀರ್ಪನ್ನು ಸೋಲು ಅಥವಾ ಗೆಲುವು ಎಂದು ನೋಡಬಾರದು ಎಂದು ಹೇಳಿಕೆ  

ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಕರೆ ನೀಡಿದ್ದಾರೆ.

 

ಘನ ಸರ್ವೋನ್ನತ ನ್ಯಾಯಾಲಯ ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ತನ್ನ ತೀರ್ಪು ನೀಡಿದೆ. ಈ ತೀರ್ಪನ್ನು ಯಾರೇ ಆದರೂ ಸೋಲು ಅಥವಾ ಗೆಲುವು ಎಂದು ನೋಡಬಾರದು, ಅದು ರಾಮಭಕ್ತಿಯೇ ಇರಲಿ ಅಥವಾ ರಹೀಮ್ ಭಕ್ತಿಯೇ ಇರಲಿ, ನಾವು ರಾಷ್ಟ್ರಭಕ್ತಿಯ ಸ್ಫೂರ್ತಿಯನ್ನು ಬಲಪಡಿಸುವುದು ಅಗತ್ಯ. ಶಾಂತಿ ಹಾಗೂ ಸೌಹಾರ್ದ ನೆಲೆಸಲಿ! ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

ಸರ್ವೋನ್ನತ ನ್ಯಾಯಾಲಯದ ತೀರ್ಪು ಗಮನಾರ್ಹವಾದದ್ದು ಏಕೆಂದರೆ: ಯಾವುದೇ ವಿವಾದವನ್ನು ಕಾನೂನಿನ ಸರಿಯಾದ ಪ್ರಕ್ರಿಯೆಯ ಸ್ಫೂರ್ತಿಯಲ್ಲಿ ಸೌಹಾರ್ದಯುತವಾಗಿ ಪರಿಹರಿಸಬಹುದು ಎಂದು ಇದು ತೋರಿಸುತ್ತದೆ. ಇದು ನಮ್ಮ ನ್ಯಾಯಾಂಗದ ಸ್ವಾತಂತ್ರ್ಯ, ಪಾರದರ್ಶಕತೆ ಮತ್ತು ದೂರದೃಷ್ಟಿಯನ್ನು ಪುನರುಚ್ಚರಿಸುತ್ತದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಇದು ಸ್ಪಷ್ಟವಾಗಿ ವಿವರಿಸುತ್ತದೆ.

ದಶಕಗಳಿಂದ ನಡೆಯುತ್ತಿದ್ದ ಪ್ರಕರಣವನ್ನು ನ್ಯಾಯಾಂಗಣ ಸೌಹಾರ್ದಯುತವಾಗಿ ಇತ್ಯರ್ಥಪಡಿಸಿದೆ. ಎಲ್ಲ ಕಡೆಯವರಿಗೂ, ಪ್ರತಿ ಅಭಿಪ್ರಾಯದ ಅಂಶಕ್ಕೂ ಸೂಕ್ತ ಸಮಯಾವಕಾಶ ಮತ್ತು ವಿವಿಧ ಅಂಶಗಳ ಅಭಿಪ್ರಾಯ ಮಂಡನೆಗೆ ಅವಕಾಶ ನೀಡಲಾಗಿತ್ತು. ಈ ತೀರ್ಪು ನ್ಯಾಯಾಂಗ ಪ್ರಕ್ರಿಯೆಯಲ್ಲಿ ಜನರ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಇಂದಿನ ತೀರ್ಪಿನ ಬಗ್ಗೆ 130 ಕೋಟಿ ಭಾರತೀಯರು ಕಾಪಾಡಿಕೊಂಡ ಸಂಯಮ ಮತ್ತು ಶಾಂತಿ ಭಾರತೀಯರಲ್ಲಿ ಅಂತರ್ಗತವಾಗಿರುವ ಶಾಂತಿಯುತ ಸಹಬಾಳ್ವೆಯ ಬದ್ಧತೆಯ ಅಭಿವ್ಯಕ್ತಿಯಾಗಿದೆ. ಈ ಏಕತೆಯ ಸ್ಫೂರ್ತಿ ಮತ್ತು ಒಗ್ಗಟ್ಟಿನ ಶಕ್ತಿ ನಮ್ಮ ದೇಶದ ಅಭಿವೃದ್ಧಿಯ ಫಥವಾಗಿದೆ. ಪ್ರತಿಯೊಬ್ಬ ಭಾರತೀಯರೂ ಸಬಲರಾಗಲಿ.”

 

ನರೇಂದ್ರ ಮೋದಿ

✔@narendramodi

 

ಘನ ಸರ್ವೋನ್ನತ ನ್ಯಾಯಾಲಯ ಅಯೋಧ್ಯೆ ಪ್ರಕರಣದಲ್ಲಿ ತನ್ನ ತೀರ್ಪು ನೀಡಿದೆ. ಈ ತೀರ್ಪನ್ನು ಯಾರೇ ಆಗಲಿ ಸೋಲು ಅಥವಾ ಗೆಲುವು ಎಂದು ನೋಡಬಾರದು.

ಅದು ರಾಮ ಭಕ್ತಿ ಅಥವಾ ರಹೀಮ್ ಭಕ್ತಿಯಾಗಿರಲಿ, ರಾಷ್ಟ್ರಭಕ್ತಿಯ ಸ್ಫೂರ್ತಿಯನ್ನು ಬಲಪಡಿಸುವುದು ಅತ್ಯಗತ್ಯವಾಗಿದೆ.  ಶಾಂತಿ ಮತ್ತು ಸೌಹಾರ್ದತೆ ನೆಲೆಸಲಿ.l!



(Release ID: 1592646) Visitor Counter : 89