ಪ್ರಧಾನ ಮಂತ್ರಿಯವರ ಕಛೇರಿ

ಆಯುಷ್ಮಾನ್ ಭಾರತ್ ಯೋಜನೆಯಡಿ ಸುಮಾರು 50 ಲಕ್ಷ ಮಂದಿಗೆ ಪ್ರಯೋಜನ

Posted On: 15 OCT 2019 10:46AM by PIB Bengaluru

ಆಯುಷ್ಮಾನ್ ಭಾರತ್  ಯೋಜನೆಯಡಿ ಸುಮಾರು 50 ಲಕ್ಷ ಮಂದಿಗೆ ಪ್ರಯೋಜನ
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಆಯುಷ್ಮಾನ್ ಭಾರತ್ ಯೋಜನೆಯಡಿ ಸುಮಾರು 50 ಲಕ್ಷ ಜನರಿಗೆ ಅನುಕೂಲ ಒದಗಿಸಿಕೊಡುವ ಮೂಲಕ ಮಹತ್ವದ ಮೈಲಿಗಲ್ಲನ್ನು ಭಾರತ ಸಾಧಿಸಿರುವುದರಿಂದ ಆರೋಗ್ಯ ವಲಯದಲ್ಲಿ ನಡೆದ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ.

“ಆರೋಗ್ಯಕರ ಭಾರತ ನಿರ್ಮಾಣದ ಪಯಣದಲ್ಲಿ ಮಹತ್ವದ ಮೈಲಿಗಲ್ಲು ! ಇದು ಒಂದು ವರ್ಷದಲ್ಲಿ ಸುಮಾರು 50 ಲಕ್ಷ ಜನರಿಗೆ ಉಚಿತ ಚಿಕಿತ್ಸೆಯ ಪ್ರಯೋಜನವನ್ನು ಒದಗಿಸಿರುವುದರಿಂದ ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆ ಎನಿಸುತ್ತಿದೆ. ಆಯುಷ್ಮಾನ್ ಭಾರತ್ ಯೋಜನೆಗೆ ಧನ್ಯವಾದಗಳು. ಇದು ಕೇವಲ ಕಾಯಿಲೆ ಗುಣಮುಖಕ್ಕೆ ಸಹಕಾರಿಯಾಗುವುದಲ್ಲದೆ, ಈ ಯೋಜನೆ ಸಹಸ್ರಾರು ಭಾರತೀಯರನ್ನು ಸಬಲೀಕರಣಗೊಳಿಸುತ್ತಿದೆ” ಎಂದು ಹೇಳಿದ್ದಾರೆ.

ಆರೋಗ್ಯಕರ ಭಾರತ ನಿರ್ಮಾಣದ ಪಯಣದಲ್ಲಿ ಮಹತ್ವದ ಮೈಲಿಗಲ್ಲು !

ಒಂದು ವರ್ಷದಲ್ಲಿ ಸುಮಾರು 50 ಲಕ್ಷ ಜನರಿಗೆ ಉಚಿತ ಚಿಕಿತ್ಸೆಯ ಪ್ರಯೋಜನವನ್ನು ಒದಗಿಸಿರುವುದರಿಂದ ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆ ಎನಿಸುತ್ತಿದೆ. ಆಯುಷ್ಮಾನ್ ಭಾರತ್ ಯೋಜನೆಗೆ ಧನ್ಯವಾದಗಳು. ಇದು ಕೇವಲ ಕಾಯಿಲೆ ಗುಣಮುಖಕ್ಕೆ ಸಹಕಾರಿಯಾಗುವುದಲ್ಲದೆ, ಈ ಯೋಜನೆ ಸಹಸ್ರಾರು ಭಾರತೀಯರನ್ನು ಸಬಲೀಕರಣಗೊಳಿಸುತ್ತಿದೆ.

pic.twitter.com/0aNb6VkmMh

-       ನರೇಂದ್ರ ಮೋದಿ (@narendramodi) ಅಕ್ಟೋಬರ್ 15, 2019

ಸರಿಯಾಗಿ ಕಳೆದ ಒಂದು ವರ್ಷದ ಹಿಂದೆ 2018ರಲ್ಲಿ ವಿಶ್ವದ ಅತಿದೊಡ್ಡ ಆರೋಗ್ಯ ವಿಮಾ ಯೋಜನೆ ಜಾರಿಗೊಳಿಸಲಾಯಿತು. ಅದರ ಉದ್ದೇಶ ದೇಶದ ಸುಮಾರು 10.74 ಕೋಟಿ ಬಡಜನರಿಗೆ ಸುಲಭವಾಗಿ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದಾಗಿದೆ.

ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ(ಪಿಎಂ-ಜೆಎವೈ) ಅಡಿಯಲ್ಲಿ ಈವರೆಗೆ 16,085 ಆಸ್ಪತ್ರೆಗಳು ನೋಂದಣಿ ಮಾಡಿಕೊಂಡಿವೆ ಮತ್ತು 10 ಕೋಟಿ ಇ-ಕಾರ್ಡ್ ಗಳನ್ನು ವಿತರಿಸಲಾಗಿದೆ.

ಆಯುಷ್ಮಾನ್ ಭಾರತ್ ಯೋಜನೆಯಡಿ ದೇಶಾದ್ಯಂತ ಸುಮಾರು 17,150 ಆರೋಗ್ಯ ಮತ್ತು ಸೌಖ್ಯ ಕೇಂದ್ರಗಳನ್ನು ಕಾರ್ಯಾರಂಭ ಮಾಡಲಾಗಿದೆ.



(Release ID: 1588338) Visitor Counter : 98