ಪ್ರಧಾನ ಮಂತ್ರಿಯವರ ಕಛೇರಿ
ಟೆಕ್ಸಾಸ್ ನ ಹ್ಯೂಸ್ಟನ್ ನಲ್ಲಿ ಪ್ರಧಾನ ಮಂತ್ರಿಗಳಿಂದ ಅಮೆರಿಕ ಅಧ್ಯಕ್ಷ ರ ಪರಿಚಯ
Posted On:
22 SEP 2019 11:00PM by PIB Bengaluru
ಟೆಕ್ಸಾಸ್ ನ ಹ್ಯೂಸ್ಟನ್ ನಲ್ಲಿ ಪ್ರಧಾನ ಮಂತ್ರಿಗಳಿಂದ ಅಮೆರಿಕ ಅಧ್ಯಕ್ಷ ರ ಪರಿಚಯ
ಶುಭೋದಯ ಹ್ಯೂಸ್ಟನ್
ಶುಭೋದಯ ಟೆಕ್ಸಾಸ್
ಶುಭೋದಯ ಅಮೆರಿಕ
ಭಾರತದಲ್ಲಿರುವ ಮತ್ತು ವಿಶ್ವದೆಲ್ಲೆಡೆಯ ನನ್ನ ಭಾರತೀಯ ಸ್ನೇಹಿತರಿಗೆ ಶುಭಾಶಯಗಳು
ಸ್ನೇಹಿತರೆ,
ಈ ದಿನದ ಬೆಳಗಿನಲ್ಲಿ ನಮ್ಮೊಂದಿಗೆ ಒಬ್ಬ ವಿಶೇಷ ವ್ಯಕ್ತಿಯಿದ್ದಾರೆ. ಅವರಿಗೆ ಪರಿಚಯದ ಅವಶ್ಯಕತೆಯಿಲ್ಲ. ಈ ಗ್ರಹದ ಮೇಲಿರುವ ಎಲ್ಲರಿಗೂ ಅವರ ಹೆಸರು ಚಿರಪರಿಚಿತ.
ಜಾಗತಿಕ ರಾಜಕೀಯದಲ್ಲಿ ವಿಶ್ವದ ಯಾವುದೇ ಮಾತುಕತೆಯಿರಲಿ ಅದರಲ್ಲಿ ಇವರ ಹೆಸರು ಕೇಳಿಬರುತ್ತದೆ.
ಈ ಅದ್ಭುತ ದೇಶದಲ್ಲಿ ವಿಜಯ ಸಾಧಿಸಿ ಅತ್ಯುನ್ನತ ಪದವಿಯನ್ನು ಅಲಂಕರಿಸುವ ಮೊದಲೂ ಅವರು ಮನೆಮಾತಾಗಿದ್ದರು ಮತ್ತು ಬಹು ಪ್ರಸಿದ್ಧಿ ಹೊಂದಿದ್ದರು.
ಸಿಇಒ ದಿಂದ ಪ್ರಧಾನ ದಂಡನಾಯಕನ ಹುದ್ದೆವರೆಗೆ, ನಿರ್ದೇಶಕರ ಚರ್ಚಾ ಕೊಠಡಿಯಿಂದ ಓವಲ್ ಕಛೇರಿವರೆಗೆ, ಸ್ಟುಡಿಯೋಗಳಿಂದ ಜಾಗತಿಕ ವೇದಿಕೆವರೆಗೂ, ರಾಜಕೀಯದಿಂದ ಆರ್ಥಿಕತೆವರೆಗೆ ಮತ್ತು ರಕ್ಷಣಾ ವಲಯದವರೆಗೆ ಎಲ್ಲ ಕ್ಷೇತ್ರದಲ್ಲೂ ಅವರು ಗಾಢವಾದ ಮತ್ತು ಎಂದೂ ಅಳಿಯದ ಛಾಪನ್ನು ಮೂಡಿಸಿದ್ದಾರೆ.
ಇಂದು ಇಲ್ಲಿ ಅವರು ನಮ್ಮೊಂದಿಗಿದ್ದಾರೆ. ಈ ಭವ್ಯವಾದ ಕ್ರೀಡಾಂಗಣ ಮತ್ತು ಭವ್ಯವಾದ ಸಭೆಗೆ ಅವರನ್ನು ಸ್ವಾಗತಿಸಲು ದೊರೆತ ಗೌರವಯುತ ಅವಕಾಶವಾಗಿದೆ.
ಇವರನ್ನು ಭೇಟಿಯಾಗಲು ನನಗೆ ಬಹಳಷ್ಟು ಅವಕಾಶಗಳು ದೊರೆತವು ಮತ್ತು ಪ್ರತಿ ಬಾರಿಯ ಭೇಟಿಯಲ್ಲೂ ಅವರಲ್ಲಿ ನಾನು ಸ್ನೇಹಪರತೆ, ಅಪ್ಯಾಯಮಾನತೆ, ಶಕ್ತಿಯನ್ನು ಕಂಡೆ. ಅವರೇ ಅಮೆರಿಕದ ಅಧ್ಯಕ್ಷ ಶ್ರೀಯುತ ಡೋನಾಲ್ಡ್ ಟ್ರಂಪ್
ಇದು ಅತ್ಯದ್ಭುತವಾಗಿದೆ, ಇದು ಅಭೂತಪೂರ್ವವಾಗಿದೆ.
ಸ್ನೇಹಿತರೆ,
ನಾನು ನಿಮಗೆ ಈಗಾಗಲೇ ಹೇಳಿದಂತೆ ನಾವು ಹಲವು ಬಾರಿ ಭೇಟಿಯಾಗಿದ್ದೇವೆ ಮತ್ತು ಪ್ರತಿಬಾರಿಯೂ ಅವರು ಅಷ್ಟೇ ಸ್ನೇಹಪರ, ಆಪ್ಯಾಯಮಾನತೆಯುಳ್ಳವರು, ಸರಳ ಸಜ್ಜನಿಕೆಯ, ಬುದ್ಧಿವಂತ, ಶಕ್ತಿಯುತ ವ್ಯಕ್ತಿಯಾಗಿದ್ದಾರೆ. ಅವರನ್ನು ಇನ್ನೂ ಕೆಲ ವಿಷಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ.
ಅವರ ನಾಯಕತ್ವ ಚತುರತೆ, ಅಮೇರಿಕದ ಬಗ್ಗೆ ಒಲವು, ಪ್ರತಿಯೊಬ್ಬ ಅಮೇರಿಕನ್ನನ ಕುರಿತು ಕಾಳಜಿ, ಅಮೆರಿಕದ ಭವಿಷ್ಯದ ಬಗ್ಗೆ ನಂಬಿಕೆ ಮತ್ತು ಅಮೇರಿಕವನ್ನು ಮತ್ತೆ ಉತ್ತುಂಗಕ್ಕೆ ಕೊಂಡೊಯ್ಯುವ ಬಲವಾದ ಸಂಕಲ್ಪ
ಅಲ್ಲದೆ ಈಗಾಗಲೇ ಅವರು ಅಮೆರಿಕದ ಆರ್ಥಿಕತೆಯನ್ನು ಸಾಕಷ್ಟು ಸಧೃಡಗೊಳಿಸಿದ್ದಾರೆ. ಅವರು ಅಮೆರಿಕ ಮತ್ತು ವಿಶ್ವಕ್ಕೆ ಈಗಾಗಲೇ ಸಾಕಷ್ಟು ಸಾಧನೆ ಮಾಡಿದ್ದಾರೆ.
ಸ್ನೇಹಿತರೆ,
ನಾವು ಭಾರತದಲ್ಲಿ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದೇವೆ. ಅಭ್ಯರ್ಥಿ ಟ್ರಂಪ್ ಅವರ ಅಬ್ಕಿ ಬಾರ್ ಟ್ರಂಪ್ ಸರ್ಕಾರ ಎಂಬ ನುಡಿ ಸ್ಪಷ್ಟವಾಗಿ ಮತ್ತು ಗಟ್ಟಿಯಾಗಿ ಪ್ರತಿಧ್ವನಿಸಿದೆ. ಶ್ವೇತ ಭವನದಲ್ಲಿ ಅವರ ವಿಜಯದ ಸಂಭ್ರಮ ಮಿಲಿಯನ್ ಗಟ್ಟಲೆ ಜನರ ಮೊಗದಲ್ಲಿ ಆನಂದ ಮತ್ತು ಮೆಚ್ಚುಗೆಯನ್ನು ಮೂಡಿಸಿದೆ.
ಅವರನ್ನು ಪ್ರಥಮ ಬಾರಿಗೆ ನಾನು ಭೇಟಿಯಾದಾಗ ಅವರು ನನಗೆ ‘ಭಾರತ ಶ್ವೇತಭವನದಲ್ಲಿ ಒಬ್ಬ ನಿಜ ಸ್ನೇಹಿತನನ್ನು ಹೊಂದಿದೆ’ ಎಂದು ಹೇಳಿದ್ದರು. ಇಂದು ಇಲ್ಲಿ ನಿಮ್ಮ ಉಪಸ್ಥಿತಿ ಅದಕ್ಕೆ ಸಾಕ್ಷಿಯಂತಿದೆ.
ಈ ಕೆಲ ವರ್ಷಗಳಲ್ಲಿ ಉಭಯ ದೇಶಗಳು ಈ ಸಂಬಂಧವನ್ನು ಹೊಸ ಉತ್ತುಂಗಕ್ಕೆ ಕೊಂಡೊಯ್ದಿದೆ. ಮಾನ್ಯ ಅಧ್ಯಕ್ಷರೇ ಹ್ಯೂಸ್ಟನ್ ನ ಈ ಮುಂಜಾವಿನಲ್ಲಿ ವಿಶ್ವದ 2 ಅತಿದೊಡ್ಡ ಪ್ರಜಾಪ್ರಭುತ್ವದ ಈ ಅದ್ಭುತ ಪಾಲುದಾರಿಕೆಯ ಸಂಭ್ರಮದ ಹೃದಯಮಿಡಿತವನ್ನು ನೀವು ಆಲಿಸಬಹುದು.
ನಮ್ಮ ಎರಡು ಮೇರು ರಾಷ್ಟ್ರಗಳ ಮಧ್ಯೆ ಇರುವಂತಹ ಮಾನವೀಯ ಅನುಬಂಧದ ಗಾಢತೆಯನ್ನು ನೀವು ಅನುಭವಿಸಬಹುದು. ಹ್ಯೂಸ್ಟನ್ ನಿಂದ ಹೈದ್ರಾಬಾದ್ ವರೆಗೆ, ಬೊಸ್ಟನ್ ನಿಂದ ಬೆಂಗಳೂರಿನವರೆಗೆ, ಶಿಕಾಗೊದಿಂದ ಶಿಮ್ಲಾವರೆಗೆ, ಲಾಸ್ ಎಂಜಲೀಸ್ ನಿಂದ ಲುಧಿಯಾನಾವರೆಗೆ, ನ್ಯೂ ಜೆರ್ಸಿಯಿಂದ ನವದೆಹಲಿವರೆಗೆ ಜನರು ಎಲ್ಲ ಸಂಬಂಧಗಳ ಹೃದಯಾಂತರಾಳದಲ್ಲಿದ್ದಾರೆ.
ಭಾನುವಾರದ ತಡ ರಾತ್ರಿಯ ಈ ಘಳಿಗೆಯಲ್ಲಿಯೂ ಭಾರತದಲ್ಲಿ ಹತ್ತಾರು ಲಕ್ಷ ಜನರು ಮತ್ತು ವಿಶ್ವದಾದ್ಯಂತ ವಿಭಿನ್ನ ಕಾಲಾವಧಿಯಲ್ಲಿ ಜನರು ಟಿವಿ ಸೆಟ್ ಗಳ ಮುಂದೆ ಕುಳಿತು ನಮ್ಮೊಂದಿಗೆ ಬೆರೆತಿದ್ದಾರೆ. ಅವರು ಇತಿಹಾಸ ರಚನೆಯ ಕಾರ್ಯಕ್ಕೆ ಸಾಕ್ಷಿಯಾಗುತ್ತಿದ್ದಾರೆ.
ಮಾನ್ಯ ಅಧ್ಯಕ್ಷರೇ 2017 ರಲ್ಲಿ ನೀವು ನನ್ನನ್ನು ನಿಮ್ಮ ಕುಟುಂಬಕ್ಕೆ ಪರಿಚಯಿಸಿದ್ದಿರಿ ಮತ್ತು ಇಂದು ನಿಮ್ಮನ್ನು ಶತಕೋಟಿಗೂ ಹೆಚ್ಚು ಭಾರತೀಯರು ಮತ್ತು ವಿಶ್ವದಾದ್ಯಂತದ ಭಾರತೀಯ ಪರಂಪರೆಯ ಜನರ ನನ್ನ ಕುಟುಂಬಕ್ಕೆ ಪರಿಚಯಿಸುವ ಸೌಭಾಗ್ಯ ನನಗೆ ದೊರೆತಿದೆ.
ಮಹಿಳೆಯರೇ ಮತ್ತು ಮಹನೀಯರೇ, ನನ್ನ ಸ್ನೇಹಿತ, ಭಾರತದ ಮಿತ್ರ, ಅಮೆರಿಕದ ಶ್ರೇಷ್ಠ ಅಧ್ಯಕ್ಷ ಶ್ರೀಯುತ ಡೋನಾಲ್ಡ ಟ್ರಂಪ್ ಅವರನ್ನು ಪರಿಚಯಿಸುತ್ತಿದ್ದೇನೆ
(Release ID: 1586247)
Visitor Counter : 108