ಪ್ರಧಾನ ಮಂತ್ರಿಯವರ ಕಛೇರಿ
ಚಂದ್ರಯಾನ 2 ರ ಅಂತಿಮ ಇಳಿಕೆಯನ್ನು ಪ್ರಧಾನ ಮಂತ್ರಿ ವೀಕ್ಷಿಸಲಿದ್ದಾರೆ.
Posted On:
06 SEP 2019 12:05PM by PIB Bengaluru
ಚಂದ್ರಯಾನ 2 ರ ಅಂತಿಮ ಇಳಿಕೆಯನ್ನು ಪ್ರಧಾನ ಮಂತ್ರಿ ವೀಕ್ಷಿಸಲಿದ್ದಾರೆ.
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿರುವ ಇಸ್ರೋ ಕೇಂದ್ರ ಕಚೇರಿಗೆ ಆಗಮಿಸಿ 2019ರ ಸೆಪ್ಟೆಂಬರ್ 7ರಂದು ಚಂದ್ರನ ದಕ್ಷಿಣ ದ್ರುವದ ಮೇಲೆ ಚಂದ್ರಯಾನ 2 ಇಳಿಯುವುದನ್ನು ವೀಕ್ಷಿಸಲಿದ್ದಾರೆ.
ಅವರು ಈ ಸಂದರ್ಭ ಭಾರತಾದ್ಯಂತ 8 ನೇ ತರಗತಿಯಿಂದ 10 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಬಾಹ್ಯಾಕಾಶ ರಸಪ್ರಶ್ನೆ ಕಾರ್ಯಕ್ರಮದ ವಿಜೇತರ ಜೊತೆ ಸಂವಾದ ನಡೆಸಲಿದ್ದಾರೆ.
ವಿಜ್ಞಾನದ ಬಗ್ಗೆ ಮತ್ತು ಅದರ ಸಾಧನೆಯ ಬಗ್ಗೆ ಭಾರೀ ಆಳವಾದ ಮೆಚ್ಚುಗೆಯನ್ನು ಹೊಂದಿರುವ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಸ್ರೋಗೆ ನೀಡುತ್ತಿರುವ ಭೇಟಿಯು ಭಾರತೀಯ ಬಾಹ್ಯಾಕಾಶ ವಿಜ್ಞಾನಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ, ಮಾತ್ರವಲ್ಲ ಯುವ ಜನತೆಗೆ ಅನ್ವೇಷಣಾಶೀಲ ಮನೋಭಾವವನ್ನು ಮತ್ತು ಪ್ರಶ್ನಿಸುವ ಸ್ಪೂರ್ತಿಯನ್ನು ಬೆಳೆಸಿಕೊಳ್ಳಲು ಪ್ರೇರಣೆ ಒದಗಿಸಲಿದೆ.
ಚಂದ್ರಯಾನ 2 ರಲ್ಲಿ ಅವರ ವೈಯಕ್ತಿಕ ಆಸಕ್ತಿಯಿಂದಾಗಿ ಪ್ರಧಾನ ಮಂತ್ರಿ ಶ್ರೀ ಮೋದಿ ಅವರು ಇದನ್ನು “ಹೃದಯದಲ್ಲಿ ಭಾರತೀಯ, ಸ್ಪೂರ್ತಿಯಲ್ಲಿ ಭಾರತೀಯ ! ಇದು ಪೂರ್ಣವಾಗಿ ದೇಶೀಯ ಯೋಜನೆ ಎಂಬುದೇ ಪ್ರತೀ ಭಾರತೀಯರಿಗೂ ಹೆಮ್ಮೆ ತರುವಂತಹ ಸಂಗತಿಯಾಗಿದೆ.” ಎಂದು ಹೇಳಿದ್ದರು.
“ಚಂದ್ರನಲ್ಲಿ ಇಳಿಯುವ ಲ್ಯಾಂಡರ್ ವಿಕ್ರಮ್ , 2019 ರ ಸೆಪ್ಟೆಂಬರ್ 7 ರಂದು ಭಾರತೀಯ ಕಾಲಮಾನ 0100ರಿಂದ 0200 ನಡುವೆ ಚಂದ್ರನಲ್ಲಿಗೆ ಇಳಿಯಲಿದೆ. ಬಳಿಕ ಲ್ಯಾಂಡರ್ 0130-೦230ರ ನಡುವೆ ಚಂದ್ರನನ್ನು ಸ್ಪರ್ಶಿಸಲಿದೆ “ ಎಂದು ಇಸ್ರೋ ಹೇಳಿಕೆಯಲ್ಲಿ ತಿಳಿಸಿದೆ.
(Release ID: 1584328)
Visitor Counter : 155