ಬಾಹ್ಯಾಕಾಶ ವಿಭಾಗ
ನಿಗದಿತ ವ್ಯೂಮ ಕಕ್ಷೆಗೆ ಚಂದ್ರಯಾನ-2 ಯಶಸ್ವಿ ಸೇರ್ಪಡೆ: ಇಸ್ರೋ ಅಧ್ಯಕ್ಷರು
Posted On:
20 AUG 2019 3:58PM by PIB Bengaluru
ನಿಗದಿತ ವ್ಯೂಮ ಕಕ್ಷೆಗೆ ಚಂದ್ರಯಾನ-2 ಯಶಸ್ವಿ ಸೇರ್ಪಡೆ: ಇಸ್ರೋ ಅಧ್ಯಕ್ಷರು
ಇಸ್ರೋಗೆ ಸೆಪ್ಟಂಬರ್7 ರಂದು ಬೆಳಿಗ್ಗೆ 1.55ಕ್ಕೆ ಚಂದ್ರಯಾನ-2 ನೌಕೆಯನ್ನು ಚಂದ್ರನ ಕಕ್ಷೆಗೆ ಸೇರಿಸುವ ಗುರಿ- ಅಧ್ಯಕ್ಷ ಡಾ.ಕೆ ಶಿವನ್
ಬೆಂಗಳೂರು, ಆಗಸ್ಟ್ 20, 2019
ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ನೌಕೆಯನ್ನು ಇಂದು ಭೂಮಿಯ ಕಕ್ಷೆಯಿಂದ ಚಂದ್ರನ ಸನಿಹದ ನಿಗದಿತ ಕಕ್ಷೆಗೆ ಯಶಸ್ವಿಯಾಗಿ ಸೇರಿಸಲಾಯಿತು. ನೌಕೆಯನ್ನು ಇಂದು ಬೆಳಿಗ್ಗೆ 9 ಗಂಟೆ 2 ನಿಮಿಷಕ್ಕೆನಿಗದಿತ ವ್ಯೂಮ ಕಕ್ಷೆಗೆ ಸೇರ್ಪಡೆ ಮಾಡಲಾಯಿತು. ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಕೇಂದ್ರ(ಇಸ್ರೋ)ದ ಅಧ್ಯಕ್ಷ ಡಾ.ಕೆ.ಶಿವನ್ ಬೆಂಗಳೂರಿನಲ್ಲಿಂದು ಚಂದ್ರಯಾನ-2 ಚಂದ್ರನ ಕಕ್ಷೆಗೆ ಸೇರಿದ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಇದರೊಂದಿಗೆ ಚಂದ್ರಯಾನ-2 ಮಹತ್ವದ ಹಜ್ಜೆ ದಾಟಿದೆ ಎಂದು ಅವರು ಹೇಳಿದರು.
ಸೆಪ್ಟಂಬರ್ 7ರಂದು ಬೆಳಿಗ್ಗೆ 1.55ಕ್ಕೆ ನೌಕೆಯನ್ನು ಯಶಸ್ವಿಯಾಗಿ ಚಂದ್ರನ ಕಕ್ಷೆಗೆ ಸೇರಿಸುವ ಗುರಿಯನ್ನು ಇಸ್ರೋ ಹೊಂದಿದೆ ಎಂದು ಡಾ. ಶಿವನ್ ತಿಳಿಸಿದರು. ಚಂದ್ರನ ದಕ್ಷಿಣ ದೃವ ಪ್ರದೇಶಕ್ಕೆ ಸುಗಮವಾಗಿ ಇಳಿಸಲಾಗುವುದು. ಮಹತ್ವದ ಕಾರ್ಯ ಬರುವ ಸೆಪ್ಟಂಬರ್ 2ರಂದು ನಡೆಯಲಿದ್ದು, ಅಂದು ನೌಕೆಯನ್ನು ಲ್ಯಾಂಡರ್ ನಿಂದ ಬೇರ್ಪಡಿಸಲಾಗುವುದು. ಆದು ಯಶಸ್ವಿಯಾಗುತ್ತದೆ ಎಂಬ ವಿಶ್ವಾಸ ಇಸ್ರೋಗೆ ಇದೆ ಎಂದು ಅಧ್ಯಕ್ಷರು ಹೇಳಿದರು. ಇಸ್ರೋ ಇಂತಹ ಹಲವು ನೌಕೆಗಳನ್ನು ಯಶಸ್ವಿಯಾಗಿ ಇಳಿಸಿದೆ. ಚಂದ್ರಯಾನ-2 ಮತ್ತೆ ಇಂತಹ ನಾಲ್ಕು ಹಂತದಲ್ಲಿ ವ್ಯೂಹಗಳನ್ನು ದಾಟಬೇಕಿದೆ. ನಾಳೆ ಮೊದಲ ವ್ಯೂಹ, ಆನಂತರ ಆಗಸ್ಟ್ 28ರಂದು, ಆಗಸ್ಟ್ 30 ಮತ್ತು ಸೆಪ್ಟಂಬರ್ 1ರಂದು ಇತರ ವ್ಯೂಹಗಳನ್ನು ದಾಟಲಿದೆ ಎಂದು ಅವರು ಹೇಳಿದರು.
ಇಸ್ರೋದ ಮಹತ್ವದ ಚಂದ್ರಯಾನ-1 ಯೋಜನೆ 2008ರಲ್ಲಿ ಯಶಸ್ವಿಯಾಗಿ ನಡೆಸಿದ ನಂತರ ಕೈಗೊಂಡಿರುವ ಎರಡನೇ ಯೋಜನೆ ಇದಾಗಿದೆ. ಕಳೆದ ಜು.22ರಂದು ಚಂದ್ರಯಾನ-2 ನೌಕೆಯನ್ನು ಶ್ರೀಹರಿಕೋಟಾದಿಂದ ಯಶಸ್ವಿಯಾಗಿ ಉಡಾಯಿಸಲಾಯಿತು. ಅದು ವಿಕ್ರಂ ಲ್ಯಾಂಡರ್ ಮತ್ತು ಪ್ರಾಗ್ಯಾನ್ ರೋವರ್ ಅನ್ನು ಹೊತ್ತೊಯ್ದಿದೆ.
ಸುದ್ದಿಗೋಷ್ಠಿಯ ಪೂರ್ಣ ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ
https://youtu.be/2K0AJXuqy3A
(Release ID: 1582447)
Visitor Counter : 122