ಸಂಪುಟ

ಭಾರತದ ಮಧ್ಯಸ್ಥಿಕೆ ಮೂಲಕ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ವಸಾಹತು ಒಪ್ಪಂದಗಳ ಕುರಿತಾದ ಸಮಾವೇಶಕ್ಕೆ ಸಹಿ ಹಾಕಲು ಸಚಿವ ಸಂಪುಟ  ಅನುಮೋದನೆ

Posted On: 31 JUL 2019 3:37PM by PIB Bengaluru

ಭಾರತದ ಮಧ್ಯಸ್ಥಿಕೆ ಮೂಲಕ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ವಸಾಹತು ಒಪ್ಪಂದಗಳ ಕುರಿತಾದ ಸಮಾವೇಶಕ್ಕೆ ಸಹಿ ಹಾಕಲು ಸಚಿವ ಸಂಪುಟ  ಅನುಮೋದನೆ

 

ಸಿಂಗಾಪೂರ್ ಅಥವಾ ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯಾಲಯದಲ್ಲಿ 7 ಆಗಸ್ಟ್ 2019 ರಂದು ಭಾರತದ ಮಧ್ಯಸ್ಥಿಕೆಯಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ವಸಾಹತು ಒಪ್ಪಂದಗಳ ಕುರಿತಾದ ಸಮಾವೇಶಕ್ಕೆ (ಯು ಎನ್ ಐ ಎಸ್ ಎ ) ಸಹಿ ಹಾಕಲು ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.  

 

ಲಾಭ:

ಈ ಒಡಂಬಡಿಕೆಗೆ ಸಹಿ ಹಾಕುವದರಿಂದ ಹೂಡಿಕೆದಾರರಲ್ಲಿ ವಿಶ್ವಾಸ ವೃದ್ಧಿಸುತ್ತದೆ ಮತ್ತು ಪರ್ಯಾಯ ವಿವಾದ ಪರಿಹಾರ ಕುರಿತು ಅಂತಾರಾಷ್ಟ್ರೀಯ ರೂಢಿಯನ್ನು ಅನುಸರಿಸುವ ಭಾರತದ ಬದ್ಧತೆ ಬಗ್ಗೆ ವಿದೇಶಿ ಕೂಡಿಕೆದಾರರಲ್ಲಿ ಸಕಾರಾತ್ಮಕ ನಿಲುವು ಮೂಡಿಸುತ್ತದೆ. 

 

ಎಡಿಆರ್ ಕಾರ್ಯ ವಿಧಾನಗಳನ್ನು ಉತ್ತೇಜಿಸಲು ಕೈಗೊಂಡ ಕ್ರಮಗಳು

ಭಾರತದಲ್ಲಿ ಅಂತಾರಾಷ್ಟ್ರೀಯ ವಾಣಿಜ್ಯ ಮಧ್ಯಸ್ಥಿಕೆ ಉತ್ತೇಜನಕ್ಕಾಗಿ ಮತ್ತು ಮಧ್ಯಸ್ಥಿಕೆಯ ಪರಿಸರ ವಿಕಸನಕ್ಕೆ ಸರ್ಕಾರ ನವದೆಹಲಿಯಲ್ಲಿ ಮಧ್ಯಸ್ಥಿಕೆ ಕೇಂದ್ರವನ್ನು (ಎನ್ ಡಿ ಐ ಎ ಸಿ) ಶಾಸನಬದ್ಧ ಸಂಸ್ಥೆಯ ರೂಪದಲ್ಲಿ ಸ್ಥಾಪಿಸಿದೆ. ವಾಣಿಜ್ಯ ನ್ಯಾಯಾಲಯಗಳ ಕಾಯ್ದೆ 2015 ನ್ನು ತಿದ್ದುಪಡಿ ಮಾಡಲಾಗಿದೆ ಮತ್ತು ಮಧ್ಯಸ್ಥಿಕೆ ಮತ್ತು ಸಂಧಾನ ಕಾಯ್ದೆ 1996 ರ ತಿದ್ದುಪಡಿಗೆ ಶಾಸಕಾಂಗ ಕ್ರಮ ಕೈಗೊಳ್ಳುತ್ತಿದೆ. ಎಡಿಆರ್ ಮೆಕ್ಯಾನಿಸಮ್ ಆರ್ಬಿಟ್ರೆಶನ್ ಭಾರತದಲ್ಲಿ ವಾಣಿಜ್ಯಾತ್ಮಕ ವ್ಯಾಜ್ಯೆಗಳು, ಸ್ಥಾನೀಯ ಮತ್ತು ಅಂತಾರಾಷ್ಟ್ರೀಯ ವಾಣಿಜ್ಯ ವಿವಾದಗಳನ್ನು ಸಂಧಾನ ಮತ್ತು ಮಧ್ಯಸ್ಥಿಕೆ ಮೂಲಕ ಇತ್ಯರ್ಥಪಡಿಸುವುದನ್ನು ಉತ್ತೇಜಿಸಲು ಈ ಉಪಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೆಲವು ವರ್ಗದ ಪ್ರಕರಣಗಳಲ್ಲಿ ಬಗೆಹರಿಸಿಕೊಳ್ಳುವ ಉದ್ದೇಶದಿಂದ ವಾಣಿಜ್ಯ ನ್ಯಾಯಾಲಯ ಕಾಯ್ದೆ 2015 ರಲ್ಲಿ ಹೊಸ ಅಧ್ಯಾಯವನ್ನು (IIIA) ಸೇರಿಸಲಾಗಿದೆ. ಆದ್ದರಿಂದ ಸಮಾವೇಶದ ನಿಬಂಧನೆಗಳು ಸ್ಥಳೀಯ ಕಾನೂನು ಮತ್ತು ವಿವಾದ ಪರಿಹಾರ ಪರ್ಯಾಯ ವಿಧಾನಗಳನ್ನು ಬಲಪಡಿಸಲು ಮಾಡಿದ ಯತ್ನಗಳಿಗೆ ಅನುಗುಣವಾಗಿರುತ್ತವೆ.      

 

ಹಿನ್ನೆಲೆ:

ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಡಿಸೆಂಬರ್ 20, 2018 ರಂದು ಮಧ್ಯಸ್ಥಿಕೆ ಮೂಲಕ ಏರ್ಪಡುವ ಅಂತಾರಾಷ್ಟ್ರೀಯ ವಸಾಹತು ಒಪ್ಪಂದಗಳ ಕುರಿತ ವಿಶ್ವಸಂಸ್ಥೆಯ ಸಮಾವೇಶವನ್ನು ಅಂಗೀಕರಿಸಿತು. 7 ಆಗಸ್ಟ್ 2019 ರಂದು ಸಿಂಗಾಪೂರ್ ನಲ್ಲಿ ಅಂಗೀಕೃತ ರುಜುವಾತಿಗೆ ಸಾಮಾನ್ಯ ಸಭೆ ಅಂಗೀಕಾರ ನೀಡಿತು ಮತ್ತು ಇದನ್ನು ಸಿಂಗಾಪೂರ್ ಕನ್ವೆಶನ್ ಆನ್ ಮಿಡಿಯೇಶನ್ ಎಂದು ಕರೆಯಲಾಗುತ್ತದೆ.   

ಮಧ್ಯಸ್ಥಿಕೆ ಮೂಲಕ ಅಂತಾರಾಷ್ಟ್ರೀಯ ವಸಾಹತು ಒಪ್ಪಂದಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಈ ಸಮಾವೇಶ ಸಮರ್ಥ ಏಕರೂಪ ವೇದಿಕೆಯನ್ನು ಕಲ್ಪಿಸುತ್ತದೆ ಹಾಗೂ ಇಂತಹ ಒಪ್ಪಂದಗಳನ್ನು ಪಕ್ಷಗಳು ಮತ್ತೊಮ್ಮೆ ಜಾರಿಗೆ ತರಲು ಕನ್ವೆನ್ಶನ್ ಆನ್ ರಿಕಗ್ನಿಶನ್ ಮತ್ತು ಎನ್ಫೋರ್ಸಮೆಂಟ್ ಆಫ್ ಫಾರಿನ್ ಆರ್ಬಿಟ್ರಲ್ ಅವಾರ್ಡ್ಸ (ನ್ಯೂಯಾರ್ಕ್ 1958) (ನ್ಯೂಯಾರ್ಕ್ ಸಮಾವೇಶ)  ಅಡಿಯಲ್ಲಿ ಆರ್ಬಿಟ್ರಲ್ ಪ್ರಶಸ್ತಿಗಳನ್ನು ನೀಡಲಾಗುವುದು. ನ್ಯಾಯಾಲಯವು ತನ್ನದೇ ಆದ ಆಧಾರಗಳ ಮೇಲೆ ಪರಿಹಾರ ನಿರಾಕರಿಸಲು ಈ ಸಮಾವೇಶ 2 ಹೆಚ್ಚುವರಿ ಕಾರಣಗಳನ್ನು ವ್ಯಾಖ್ಯಾನಿಸುತ್ತದೆ. ಮಧ್ಯಸ್ಥಿಕೆ ಮೂಲಕ ವ್ಯಾಜ್ಯೆ ಪರಿಹಾರ ಸಾಧ್ಯವಿಲ್ಲ ಅಥವಾ ಸಾರ್ವಜನಿಕ ನೀತಿಗೆ ವಿರುದ್ಧವಾಗಿದೆ ಎಂಬ ಅಂಶಗಳ ಮೇಲೆ ಈ ಹೆಚ್ಚುವರಿ ಕಾರಣಗಳು ಅವಲಂಬಿತವಾಗಿವೆ. 

 

*********



(Release ID: 1580978) Visitor Counter : 178