ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಫ್ಯಾಕ್ಟ್ ಹೊಂದಿರುವ 481.79 ಎಕರೆ ಭೂಮಿಯನ್ನು ಕೇರಳ ಸರ್ಕಾರಕ್ಕೆ ಮಾರಾಟ ಮಾಡಲು ಮತ್ತು ಮಾರಾಟದಿಂದ ಬರುವ ಹಣವನ್ನು ಫ್ಯಾಕ್ಟ್ ಬಳಕೆ ಮಾಡಿಕೊಳ್ಳಲು ಸಂಪುಟದ ಅನುಮೋದನೆ

Posted On: 24 JUL 2019 4:24PM by PIB Bengaluru

ಫ್ಯಾಕ್ಟ್ ಹೊಂದಿರುವ 481.79 ಎಕರೆ ಭೂಮಿಯನ್ನು ಕೇರಳ ಸರ್ಕಾರಕ್ಕೆ ಮಾರಾಟ ಮಾಡಲು ಮತ್ತು ಮಾರಾಟದಿಂದ ಬರುವ ಹಣವನ್ನು ಫ್ಯಾಕ್ಟ್ ಬಳಕೆ ಮಾಡಿಕೊಳ್ಳಲು ಸಂಪುಟದ ಅನುಮೋದನೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ಈ ಕೆಳಗಿನ ಪ್ರಸ್ತಾವನೆಗಳಿಗೆ ತನ್ನ ಅನುಮೋದನೆ ನೀಡಿದೆ:

1.  ರಸಗೊಬ್ಬರ ಮತ್ತು ರಾಸಾಯನಿಕಗಳ ಟ್ರವಾಂಕೂರ್ ನಿಯಮಿತ (ಎಫ್.ಎ.ಸಿ.ಟಿ. - ಫ್ಯಾಕ್ಟ್) ಹೊಂದಿರುವ 481.79 ಎಕರೆ ಭೂಮಿಯನ್ನು ಕೇರಳ ಸರ್ಕಾರಕ್ಕೆ ಈ ಕೆಳಗಿನ ಮಾದರಿಯಲ್ಲಿ ಮಾರಾಟ ಮಾಡಲು:

a.     150 ಎಕರೆ ಜಮೀನನ್ನು ಪ್ರತಿ ಎಕರೆಗೆ 1 ಕೋಟಿ ರೂಪಾಯಿಯಂತೆ (ಇದಕ್ಕೆ ಬದಲಾಗಿ 143.22 ಎಕರೆ ಭೂಮಿಯನ್ನು ಫ್ಯಾಕ್ಟ್ ಗೆ ಉಚಿತವಾಗಿ ನೀಡಲು ಕೇರಳ ಸರ್ಕಾರ ಸಮ್ಮತಿಸಿದೆ) ; ಮತ್ತು

b.    ಉಳಿದ 331.79 ಎಕರೆ ಭೂಮಿಯನ್ನು ಎರ್ನಾಕುಲಂ ಜಿಲ್ಲಾಧಿಕಾರಿಗಳೇ ನಿರ್ಧರಣೆ ಮಾಡಿರುವಂತೆ ಪ್ರತಿ ಎಕರೆಗೆ 2.4758 ಕೋಟಿ ರೂಪಾಯಿಯಂತೆ  ಮಾರಾಟ ಮಾಡಲು

2.     ಈ ಮಾರಾಟದಿಂದ ಬಂದ ಹಣವನ್ನು ಫ್ಯಾಕ್ಟ್ ತನ್ನ ಕಾರ್ಯಾಚರಣೆ ಬಂಡವಾಳ ಕೊರತೆ ತುಂಬಿಕೊಳ್ಳಲು, ಲೆಕ್ಕತಖ್ತೆ (ಬ್ಯಾಲೆನ್ಸ್ ಶೀಟ್) ಸುಧಾರಣೆಗಾಗಿ ಮತ್ತು ಸಾಮರ್ಥ್ಯ ವಿಸ್ತರಣೆಯ ಮೂಲಕ ಸುಸ್ಥಿರ ಪ್ರಗತಿಗಾಗಿ ಕಂಪನಿಯ ಭೌತಿಕ ಮತ್ತು ಹಣಕಾಸು ಕ್ಷಮತೆಯ ವರ್ಧನೆಗಾಗಿ ಬಳಸಿಕೊಳ್ಳಲು.

 

ಪ್ರಮುಖ ಪರಿಣಾಮಗಳು:

ಈ ಅನುಮೋದನೆಯು ಫ್ಯಾಕ್ಟ್ ಗೆ ತನ್ನ ಬ್ಯಾಂಕ್ ಸಾಲವನ್ನು ತಗ್ಗಿಸಿಕೊಳ್ಳಲು ಮತ್ತು ರಸಗೊಬ್ಬರ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಮತ್ತು ತನ್ನ ಸಾಗಣೆ ವ್ಯವಸ್ಥೆ ಮೇಲ್ದರ್ಜೆಗೇರಿಸಲು/ ಕಚ್ಚಾ ಸಾಮಗ್ರಿ ಸೌಲಭ್ಯ ನಿರ್ವಹಣೆಗೆ ನೆರವಾಗುತ್ತದೆ.

 

ಪ್ರಯೋಜನಗಳು:

ಫ್ಯಾಕ್ಟ್ ಪುನಶ್ಚೇತನವು ಕಂಪನಿಯ ವಿಸ್ತರಣೆ ಮತ್ತು ವೈವಿಧ್ಯೀಕರಣಕ್ಕೆ ಅವಕಾಶ ಕಲ್ಪಿಸುತ್ತದೆ ಮತ್ತು ಇದರಿಂದಾಗಿ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಾವಕಾಶಗಳು ಹೆಚ್ಚಲಿವೆ. ಇದರ ಒಟ್ಟಾರೆ ಪರಿಣಾಮ ಕೇರಳ ರಾಜ್ಯದ ಆರ್ಥಿಕತೆಗೆ ಉತ್ತೇಜನ ನೀಡುತ್ತದೆ ಹಾಗೂ ದಕ್ಷಿಣ ಭಾರತದಲ್ಲಿ ರಸಗೊಬ್ಬರ ಲಭ್ಯತೆಯನ್ನು ಸುಧಾರಿಸುತ್ತದೆ. ರಸಗೊಬ್ಬರ ಮತ್ತು ರಾಸಾಯನಿಕಗಳ ಆಮದಿನ ಮೇಲಿನ ಅವಲಂಬನೆಯನ್ನು ತಗ್ಗಿಸುತ್ತದೆ, ಇದು ದೇಶದ ವಿದೇಶೀ ವಿನಿಮಯ ಉಳಿತಾಯಕ್ಕೂ ಕಾರಣವಾಗುತ್ತದೆ ಮತ್ತು ರಸಗೊಬ್ಬರ ಮತ್ತು ಆಹಾರ ಭದ್ರತೆಯನ್ನು ಸುಧಾರಿಸುತ್ತದೆ. ಭೂಮಿ ಮಾರಾಟದ ಪ್ರಕ್ರಿಯೆ ಜಾರಿಯ ಮೇಲ್ವಿಚಾರಣೆ ಮಾಡಲು ನಿಗದಿತ ಕಾಲಸೂಚಿಯನ್ನು ಸೇರ್ಪಡೆ ಮಾಡುವ ಮೂಲಕ, ಭೂಮಿ ಮಾರಾಟದ ನಂತರ ಕಾರ್ಯಕ್ಷಮತೆಯನ್ನು ಸಾಧಿಸುವಲ್ಲಿ ನಿರ್ವಹಣೆಯ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಈ ಘಟಕವು ಈಗಾಗಲೇ ಪೂರಕ ಸಾಮಗ್ರಿ ಮತ್ತು ಇಂಧನವಾಗಿ ಶುದ್ಧ ಎಲ್.ಎನ್.ಜಿ.ಯತ್ತ ಸಾಗಿದ್ದು, ಇದು ಇಂಧನ ದಕ್ಷತೆ ಮತ್ತು ಪರಿಸರ ಸ್ನೇಹಾತ್ಮಕತೆಯನ್ನೂ ಸುಧಾರಿಸುತ್ತದೆ.

 

*************


(Release ID: 1580207)