ಸಂಪುಟ

ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಮಸೂದೆ, 2019 ಕ್ಕೆ ಸಂಪುಟ ಅನುಮೋದನೆ 

Posted On: 10 JUL 2019 6:04PM by PIB Bengaluru

ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಮಸೂದೆ, 2019 ಕ್ಕೆ ಸಂಪುಟ ಅನುಮೋದನೆ 

ಸಂಸತ್ ಅಧಿವೇಶನದಲ್ಲಿ ಮಂಡನೆಯಾಗಲಿರುವ ಮಸೂದೆ 

 

ಪ್ರಧಾನಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಮಸೂದೆ 2019 ಕ್ಕೆ ಅನುಮೋದನೆ ನೀಡಿದೆ. ಇದು 2019 ರ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಸುಗ್ರೀವಾಜ್ಞೆಗೆ ಬದಲಾಗಿ ಬರಲಿದೆ.

ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಮಸೂದೆ -2019 , 2019 ರ ಫೆಬ್ರವರಿ 21 ರಂದು ಘೋಷಿಸಲಾದ ಸುಗ್ರೀವಾಜ್ಞೆಯ ಬದಲಿಗೆ ಬರಲಿದೆ. 

ಪರಿಣಾಮ
ದೇಶದಲ್ಲಿ ಅಕ್ರಮ ಠೇವಣಿ ಚಟುವಟಿಕೆಗಳ ಭೀತಿಯನ್ನು ನಿಭಾಯಿಸಲು ಈ ಮಸೂದೆ ಸಹಾಯ ಮಾಡುತ್ತದೆ. ಕಠಿಣ ಆಡಳಿತಾತ್ಮಕ ಕ್ರಮಗಳ ಕೊರತೆಯಿಂದಾಗಿ, ಪ್ರಸ್ತುತ ಇರುವ ನಿಯಂತ್ರಣಗಳನ್ನು ದುರ್ಬಳಕೆ ಮಾಡಿಕೊಂಡು, ಬಡವರು ಮತ್ತು ಕಷ್ಟಪಟ್ಟು ದುಡಿದ ಜನರು ತಮ್ಮ ಉಳಿತಾಯದ ಹಣಕ್ಕೆ ಮೋಸ ಹೋಗುವುದನ್ನು ತಪ್ಪಿಸುತ್ತದೆ.

ಹಿನ್ನೆಲೆ
ಅನಿಯಂತ್ರಿತ ಠೇವಣಿ ಯೋಜನೆ ನಿಷೇಧ ಮಸೂದೆ, 2018 ನ್ನು ಲೋಕಸಭೆಯಲ್ಲಿ ಫೆಬ್ರವರಿ 13, 2019 ರಂದು ಚರ್ಚೆಯ ನಂತರ ಅಂಗೀಕಾರವಾಗಿತ್ತು. ಪ್ರಸ್ತಾವಿತ ಅಧಿಕೃತ ತಿದ್ದುಪಡಿಗಳ ಮೂಲಕ ತಿದ್ದುಪಡಿ ಮಾಡಿದಂತೆ, ಅನಿಯಂತ್ರಿತ ಠೇವಣಿ ಯೋಜನೆ ನಿಷೇಧ ಮಸೂದೆ 2019ನ್ನು ಅಂಗೀಕರಿಸಲಾಯಿತು. ಆದಾಗ್ಯೂ, ಇದನ್ನು ರಾಜ್ಯಸಭೆಯಲ್ಲಿ ಅಂಗೀಕರಿಸುವ ಮೊದಲು, ರಾಜ್ಯಸಭೆಯನ್ನು ಅದೇ ದಿನ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು.



(Release ID: 1578302) Visitor Counter : 123