ಪ್ರಧಾನ ಮಂತ್ರಿಯವರ ಕಛೇರಿ

2019-20ನೇ ಸಾಲಿನ ಕೇಂದ್ರ ಬಜೆಟ್ ನ್ನು ಶ್ಲಾಘಿಸಿದ ಪ್ರಧಾನಿ 

Posted On: 05 JUL 2019 2:39PM by PIB Bengaluru

2019-20ನೇ ಸಾಲಿನ ಕೇಂದ್ರ ಬಜೆಟ್ ನ್ನು ಶ್ಲಾಘಿಸಿದ ಪ್ರಧಾನಿ 

ಈ ಬಜೆಟ್ 21ನೇ ಶತಮಾನದಲ್ಲಿ ಭಾರತದ ಅಭಿವೃದ್ಧಿಯನ್ನು ಉತ್ತೇಜಿಸಲಿದೆ- ಪ್ರಧಾನಿ

 

2019-20 ನೇ ಸಾಲಿನ ಕೇಂದ್ರ ಮುಂಗಡಪತ್ರವನ್ನು ನವಭಾರತ ನಿರ್ಮಾಣದ ಬಜೆಟ್ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಕೇಂದ್ರ ಹಣಕಾಸು ಸಚಿವರು ಸಂಸತ್ತಿನಲ್ಲಿ 2019-20 ನೇ ಸಾಲಿನ ಮುಂಗಡಪತ್ರವನ್ನು ಮಂಡಿಸಿದ ಬಳಿಕ ಈ ಕುರಿತು ಹೇಳಿಕೆ ನೀಡಿರುವ ಪ್ರಧಾನಮಂತ್ರಿಯವರು, ಈ ಬಜೆಟ್ ಬಡವರಿಗೆ ಶಕ್ತಿ ತುಂಬುವುದಲ್ಲದೆ, ದೇಶದ ಯುವಜನತೆಗೆ ಉತ್ತಮ ಭವಿಷ್ಯ ರೂಪಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಜೆಟ್ ನ ಸಂಭಾವ್ಯ ಪ್ರಯೋಜನಗಳನ್ನು ಪ್ರಸ್ತಾಪಿಸಿದ ಪ್ರಧಾನಿಯವರು, ಇದು ರಾಷ್ಟ್ರದ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುವುದಲ್ಲದೆ, ಮಧ್ಯಮ ವರ್ಗಕ್ಕೆ ಹೆಚ್ಚಿಗೆ ಲಾಭ ತಂದುಕೊಡಲಿದೆ. “ತೆರಿಗೆ ಪ್ರಕ್ರಿಯೆಯನ್ನು ಸರಳಗೊಳಿಸುವ ಬಜೆಟ್, ದೇಶದ ಮೂಲಸೌಕರ್ಯವನ್ನು ಆಧುನೀಕರಣಗೊಳಿಸುವಲ್ಲಿ ಸಹಾಯಕಾರಿಯಾಗಲಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಈ ಬಜೆಟ್ ಉದ್ದಿಮೆಗಳನ್ನು ಬಲಪಡಿಸುವ ಜತೆಗೆ ಉದ್ದಿಮೆದಾರರಿಗೂ ಶಕ್ತಿ ನೀಡುತ್ತದೆ. ಜತೆಗೆ ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸಲಿದೆ. ಅಲ್ಲದೆ, ದೇಶದ ಕೃಷಿ ವಲಯದ ಪರಿವರ್ತನೆಗೆ ಮಾರ್ಗಸೂಚಿಯನ್ನೂ ಹೊಂದಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.

 2019-20 ನೇ ಸಾಲಿನ ಮುಂಗಡಪತ್ರವನ್ನು ಪೂರ್ಣ ಭರವಸೆಯ ಬಜೆಟ್ ವಿಶ್ಲೇಷಿಸಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು, 21ನೇ ಶತಮಾನದಲ್ಲಿ ಭಾರತದ ಅಭಿವೃದ್ಧಿಗೆ ಇನ್ನಷ್ಟು ವೇಗ ನೀಡಲು ಇದು ಸಹಕಾರಿಯಾಗಲಿದೆ ಎಂದಿದ್ದಾರೆ.

ಬಡವರು, ರೈತರು, ಪರಿಶಿಷ್ಟ ಜಾತಿ, ತುಳಿತಕ್ಕೊಳಗಾದವರು,  ಸೌಲಭ್ಯವಂಚಿತರ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಸರ್ವಾಂಗೀಣ ಕ್ರಮಗಳನ್ನು ಕೈಗೊಂಡಿದೆ. ಈ ಸಬಲೀಕರಣವು ಮುಂಬರುವ ಐದು ವರ್ಷಗಳಲ್ಲಿ ಆ ಜನರನ್ನು ಶಕ್ತಿಶಾಲಿಗಳನ್ನಾಗಿ ಮಾಡುತ್ತದೆ.  ಇವರಿಂದ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕನಸನ್ನು ಈಡೇರಿಸುವ ಶಕ್ತಿ ದೇಶಕ್ಕೆ ಸಿಗಲಿದೆ ಎಂದು ಪ್ರಧಾನಮಂತ್ರಿಯವರು ಹೇಳಿದ್ದಾರೆ.



(Release ID: 1577522) Visitor Counter : 246