ಪಿಎಮ್‍ಇಎಸಿ

ಆರ್ಥಿಕ ಬಲವರ್ಧನೆ, ಹಣಕಾಸಿನ ಶಿಸ್ತು ಮತ್ತು ಹೂಡಿಕೆಗಳಿಗೆ ಆರ್ಥಿಕ ಸಮೀಕ್ಷೆಯಲ್ಲಿ ಒತ್ತು- ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿ ಸ್ವಾಗತ

Posted On: 04 JUL 2019 2:00PM by PIB Bengaluru

ರ್ಥಿಕ ಬಲವರ್ಧನೆ, ಹಣಕಾಸಿನ ಶಿಸ್ತು ಮತ್ತು ಹೂಡಿಕೆಗಳಿಗೆ ಆರ್ಥಿಕ ಸಮೀಕ್ಷೆಯಲ್ಲಿ ಒತ್ತು- ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿ ಸ್ವಾಗತ

ಆರ್ಥಿಕ ಸಮೀಕ್ಷೆ ಮುಂದಿನ ಐದು ವರ್ಷಗಳ ಬೆಳವಣಿಗೆ ಮತ್ತು ಉದ್ಯೋಗಾವಕಾಶಗಳ ನೀಲನಕ್ಷೆ   - ಡಾ. ಬೈಬೆಕ್ ಡೆಬ್ರಾಯ್

ಸಂಯುಕ್ತ ವ್ಯವಸ್ಥೆ, ವೆಚ್ಚ ಸುಧಾರಣೆ, ಎಂಎಸ್ ಎಂಇ ನೀತಿ, ಜಿಎಸ್ ಟಿ ಮತ್ತು ನೇರ ತೆರಿಗೆಗಳ ಸುಧಾರಣೆ ಮೇಲೆ ಕೇಂದ್ರೀಕರಿಸಿರುವುದು ಸರ್ಕಾರದ ದೂರದೃಷ್ಟಿ ತೋರಿಸುತ್ತದೆ   ಎಂದು ಅವರು ಹೇಳಿದರು.

ನ್ಯಾಯಾಂಗ ಸುಧಾರಣೆ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ದತ್ತಾಂಶ ಸಂಗ್ರಹಣೆ ಉತ್ತಮ ನಡೆ- ಪ್ರಧಾನಮಂತ್ರಿಯವರ ಆರ್ಥಿಕ ಸಲಹಾ ಮಂಡಳಿ ಅಧ್ಯಕ್ಷರು

 

ಆರ್ಥಿಕ ಸಮೀಕ್ಷೆಯಲ್ಲಿ ದೇಶದ ಆರ್ಥಿಕ ಬಲವರ್ದನೆ ಮತ್ತು ಹಣಕಾಸಿನ ಶಿಸ್ತು ಹಾಗೂ ಹೂಡಿಕೆಗಳಿಗೆ ಅದರಲ್ಲೂ ಮುಖ್ಯವಾಗಿ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಖಾಸಗಿ ಹೂಡಿಕೆಗೆ ಒತ್ತು ನೀಡಿರುವುದನ್ನು ಪ್ರಧಾನ ಮಂತ್ರಿಯವರ ಆರ್ಥಿಕ ಸಲಹಾ ಮಂಡಳಿ ಅಧ್ಯಕ್ಷರಾದ ಶ್ರೀ ಬೈಬೆಕ್ ಡೆಬ್ರಾಯ್ ಸ್ವಾಗತಿಸಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ದೇಶದ ಜಿಡಿಪಿ ಬೆಳವಣಿಗೆ ದರ ಸರಾಸರಿ ಶೇ. 7.5ರಷ್ಟಿದೆ. ಆರ್ಥಿಕ ಸಮೀಕ್ಷೆಯ ಅಂದಾಜಿನ ಪ್ರಕಾರ 2024-25ರ ವೇಳೆಗೆ ದೇಶದ ಆರ್ಥಿಕತೆ 5 ಟ್ರಿಲಿಯನ್ ಅಮೆರಿಕನ್ ಡಾಲರ್ ಆಗಲು ವಾರ್ಷಿಕ ಹಣದುಬ್ಬರ ದರ ಶೇ. 4 ಮತ್ತು ಸರಾಸರಿ ಜಿಡಿಪಿ ದರ ಶೇ. 8ರಷ್ಟಿರಬೇಕು. ಇದು ಸಾಧಿಸಬಹುದಾದ ಗುರಿ. ಆದರೆ, ಮಧ್ಯಮಾವಧಿ ಹಣಕಾಸು ನೀತಿಯ ಹೇಳಿಕೆಯಲ್ಲಿ ನಿಗದಿಪಡಿಸಿದ ಹಣಕಾಸಿನ ಬಲವರ್ದನೆ ಹಾದಿಯಿಂದ ವಿಮುಖವಾಗಬಾರದು. ಸಮೀಕ್ಷೆಯಲ್ಲಿ ಹಣಕಾಸಿನ ಕೊರತೆ/ ಜಿಡಿಪಿ ಅನುಪಾತ ಮತ್ತು ಸಾಲ/ ಜಿಡಿಪಿ ಅನುಪಾತದಲ್ಲಿ ಇದನ್ನು ನಿರೂಪಿಸಲಾಗಿದೆ.ಹೆಚ್ಚಿನ ಕೊರತೆಗಳು ಖಾಸಗಿ ಹೂಡಿಕೆಗಳನ್ನು ಒಟ್ಟುಗೂಡಿಸುತ್ತಿದ್ದು,  ಇದು ಖಾಸಗಿ ಬಂಡವಾಳ ವೆಚ್ಚ ಹೆಚ್ಚಿಸುತ್ತದೆ. ಅಲ್ಲದೆ, ವಸತಿ ಕ್ಷೇತ್ರದ ಆರ್ಥಿಕ ಉಳಿತಾಯಕ್ಕೂ ಕಾರಣವಾಗುತ್ತದೆ. 2018-19ರಲ್ಲಿ ಭಾರತದ ಬೆಳವಣಿಗೆ ಪ್ರಮಾಣ ಶೇ. 6.8ಕ್ಕೆ ಏರಿಕೆಯಾಗಲಿದೆ ಎಂದು ಊಹಿಸಲಾಗಿತ್ತಾದರೂ ಸಾರ್ವಜನಿಕ ವೆಚ್ಚದ ಪ್ರಮಾಣ ಕಡಿಮೆಯಾಗಿದೆ.  ಆದ್ದರಿಂದಹಣಕಾಸಿನ ಬಲವರ್ಧನೆ ಮತ್ತು ಹೂಡಿಕೆಗಳ ಉತ್ತೇಜನ,ಅದರಲ್ಲೂ ವಿಶೇಷವಾಗಿ ಖಾಸಗಿ ಹೂಡಿಕೆಗಳಿಗೆ ಸಮೀಕ್ಷೆಯಲ್ಲಿ ಒತ್ತು ನೀಡಿರುವುದು ಸ್ವಾಗತಾರ್ಹ ಎಂದು ಶ್ರೀ ಬೈಬೆಕ್ ಡೆಬ್ರಾಯ್ ಹೇಳಿದ್ದಾರೆ.

ಮುಂದಿನ ಐದು ವರ್ಷಗಳ ಬೆಳವಣಿಗೆ ಮತ್ತು ಉದ್ಯೋಗ ವಿಚಾರದಲ್ಲಿ ಸಮೀಕ್ಷೆಯು ನೀಲನಕ್ಷೆಯೊಂದನ್ನು ಸಿದ್ಧಪಡಿಸಿದೆ. ನಡವಳಿಕೆ ಬದಲಾವಣೆ ಸೇರಿದಂತೆ ಶ್ರೀ ನರೇಂದ್ರ ಮೋದಿ ಅವರ ಸರ್ಕಾರ 2014-2019ರ ಮಧ್ಯೆ ಆರಂಭಿಸಿದ ಉಪಕ್ರಮಗಳು ಸಮೀಕ್ಷೆ ಸಿದ್ಧಪಡಿಸಿದ ನೀಲನಕ್ಷೆಯಲ್ಲಿದೆ. ಅಲ್ಲದೆ, 2014-2019ರ ನೀತಿಗಳು ಮತ್ತು 2019-2024ರವರೆಗಿನ ನೀತಿಗಳ ನಡುವೆ ನಿರಂತರತೆ ಇದೆ. ಹಣಕಾಸಿನ ಹಂಚಿಕೆ ಮತ್ತು ಸಂಯುಕ್ತ ವ್ಯವಸ್ಥೆ, ವೆಚ್ಚ ಸುಧಾರಣೆ, ಎಂಎಸ್ಎಂಇ (ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮಗಳು) ಗಳಿಗೆ ಸೂಕ್ತ ನೀತಿಗಳು, ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಮತ್ತು ನೇರ ತೆರಿಗೆಗಳ ಸುಧಾರಣೆಯನ್ನು ಸೂಕ್ತವಾಗಿ ನಿರೂಪಿಸಲಾಗಿದೆ.   ವರ್ಷದ ಆರ್ಥಿಕ ಸಮೀಕ್ಷೆಯ ನೂತನ ಮತ್ತು ಸ್ವಾಗತಾರ್ಹ ಅಂಶವೆಂದರೆ, ನ್ಯಾಯಾಂಗ ಸುಧಾರಣೆಗಳು ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ದತ್ತಾಂಶಗಳನ್ನು ಸಂಗ್ರಹಿಸುವುದಾಗಿದೆ ಎಂದು ಶ್ರೀ ಬೈಬೆಕ್ ಡೆಬ್ರಾಯ್ ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಾರೆ ಆರ್ಥಿಕ ಸಮೀಕ್ಷೆಯು ಸಾಕಷ್ಟು ಒಳನೋಟಗಳನ್ನು ನೀಡಿದೆ. ಅಲ್ಲದೆ, ಸಂಸ್ಕೃತದ ಪದ, ಉಲ್ಲೇಖಗಳನ್ನು ಪ್ರಸ್ತಾಪಿಸುವ ಮೂಲಕ ಹಳೆಯದನ್ನೂ ಮೆಲುಕು ಹಾಕಿದೆ. ಅಲ್ಲದೆ, ಇದರಲ್ಲಿ ಉತ್ತಮ ಆಡಳಿತಕ್ಕೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿಗಳಿವೆ. ಕೌಟಿಲ್ಯನ ಜತೆಗೆ ಕಮಂಡಕಿಯ ನೀತಿಸಾರವನ್ನೂ ಪ್ರಸ್ತಾಪಿಸಿರುವ ಸಮೀಕ್ಷೆಯನ್ನು ಅಭಿನಂದಿಸಬೇಕಾಗಿದೆ ಎಂದು ಶ್ರೀ ಬೈಬೆಕ್ ಡೆಬ್ರಾಯ್ ಹೇಳಿದ್ದಾರೆ.   



(Release ID: 1577199) Visitor Counter : 127