ಪ್ರಧಾನ ಮಂತ್ರಿಯವರ ಕಛೇರಿ

ನೀತಿ ಆಯೋಗದ ಆಡಳಿತ ಮಂಡಳಿಯ ಐದನೇ ಸಭೆಯಲ್ಲಿ ಪ್ರಧಾನಮಂತ್ರಿಗಳ ಮುನ್ನುಡಿ

Posted On: 15 JUN 2019 3:49PM by PIB Bengaluru

ನೀತಿ ಆಯೋಗದ ಆಡಳಿತ ಮಂಡಳಿಯ ಐದನೇ ಸಭೆಯಲ್ಲಿ ಪ್ರಧಾನಮಂತ್ರಿಗಳ ಮುನ್ನುಡಿ
 

ಎಲ್ಲರೊಂದಿಗೆ, ಎಲ್ಲರ ವಿಕಾಸ, ಎಲ್ಲರ ವಿಶ್ವಾಸ ಮಂತ್ರದ ಸಾಕಾರದಲ್ಲಿ ನೀತಿ ಆಯೋಗ ಪ್ರಮುಖ ಪಾತ್ರವಹಿಸಬೇಕು-ಪ್ರಧಾನಮಂತ್ರಿ
 

2024ರ ಹೊತ್ತಿಗೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಷ್ಟ್ರವಾಗಿಸುವ ಗುರಿ ಸವಾಲಿನದಾಗಿದೆ, ಆದರೆ, ರಾಜ್ಯಗಳ ಸಂಘಟಿತ ಪ್ರಯತ್ನದೊಂದಿಗೆ ಇದು ಕಾರ್ಯಸಾಧ್ಯ-ಪ್ರಧಾನಮಂತ್ರಿ
 

ಪ್ರಧಾನಮಂತ್ರಿ- ಆದಾಯ ಮತ್ತು ಉದ್ಯೋಗ ಉತ್ತೇಜನದಲ್ಲಿ ರಫ್ತು ವಲಯದ ಪ್ರಮುಖವಾದ್ದಾಗಿದೆ; ರಾಜ್ಯಗಳು ರಫ್ತು ಉತ್ತೇಜನಕ್ಕೆ ಗಮನ ಹರಿಸಬೇಕು.

ಪ್ರಧಾನಮಂತ್ರಿ-ಹೊಸದಾಗಿ ರಚಿಸಲಾಗಿರುವ ಜಲ ಶಕ್ತಿ ಸಚಿವಾಲಯ ನೀರಿಗೆ ಸಂಯೋಜಿತ ನಿಲುವು ಒದಗಿಸಲು ನೆರವಾಗಲಿದೆ; ರಾಜ್ಯಗಳು ಕೂಡ ಜಲ ಸಂರಕ್ಷಣೆ ಮತ್ತು ನಿರ್ವಹಣೆ ನಿಟ್ಟಿನಲ್ಲಿ ಸಂಯೋಜಿತ ಪ್ರಯತ್ನ ಮಾಡಬೇಕು.
 

ಪ್ರಧಾನಮಂತ್ರಿಪ್ರಧಾನಮಂತ್ರಿ- ನಾವೀಗಕಾರ್ಯಕ್ಷಮತೆ, ಪಾರದರ್ಶಕತೆ ಮತ್ತು ವಿತರಣೆಯಿಂದ ನಿರೂಪಿಸಲ್ಪಟ್ಟ ಆಡಳಿತ ವ್ಯವಸ್ಥೆಯತ್ತ ಸಾಗುತ್ತಿದ್ದೇವೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ನವ ದೆಹಲಿಯ ರಾಷ್ಟ್ರಪತಿಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ನೀತಿ ಆಯೋಗದ ಆಡಳಿತ ಮಂಡಳಿಯ ಐದನೇ ಸಭೆಯನ್ನು ಉದ್ದೇಶಿಸಿ ಆರಂಭಿಕ ನುಡಿಗಳನ್ನಾಡಿದರು.

  • ಮತ್ತು ಕಾಶ್ಮೀರದ ರಾಜ್ಯಪಾಲರು, ಮುಖ್ಯಮಂತ್ರಿಗಳು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಲೆಫ್ಟಿನೆಂಟ್ ಗೌರ್ನರ್ ಗಳು ಹಾಗೂ ಇತರ ಗಣ್ಯರನ್ನು ಸ್ವಾಗತಿಸಿದ ಪ್ರಧಾನಮಂತ್ರಿಯವರು, ಎಲ್ಲರೊಂದಿಗೆ ಎಲ್ಲರ ವಿಕಾಸ, ಎಲ್ಲರ ವಿಶ್ವಾಸ ಮಂತ್ರದ ಸಾಕಾರದಲ್ಲಿ ನೀತಿ ಆಯೋಗ ಮಹತ್ವದ ಪಾತ್ರವಿದೆ ಎಂದು ಪುನರುಚ್ಚರಿಸಿದರು.

ಇತ್ತೀಚಿನ ಸಾರ್ವತ್ರಿಕ ಚುನಾವಣೆಯನ್ನು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ಕಸರತ್ತು ಎಂದು ಬಣ್ಣಿಸಿದ ಪ್ರಧಾನಮಂತ್ರಿಯವರು, ಭಾರತದ ಅಭಿವೃದ್ಧಿಗಾಗಿ ಶ್ರಮಿಸಲು ಎಲ್ಲರಿಗೂ ಸಕಾಲ ಎಂದರು. ಬಡತನ, ನಿರುದ್ಯೋಗ, ಬರ, ಪ್ರವಾಹ, ಮಾಲಿನ್ಯ, ಭ್ರಷ್ಟಾಚಾರ ಮತ್ತು ಹಿಂಸಾಚಾರ ಇತ್ಯಾದಿಯ ವಿರುದ್ಧ ಎಲ್ಲರೂ ಸಂಘಟಿತ ಹೋರಾಟ ಮಾಡಬೇಕೆಂದು ಹೇಳಿದರು.

ಈ ವೇದಿಕೆಯಲ್ಲಿರುವ ಪ್ರತಿಯೊಬ್ಬರಿಗೂ 2022ರ ಹೊತ್ತಿಗೆ ನವ ಭಾರತ ನಿರ್ಮಾಣ ಮಾಡುವ ಸಮಾನ ಗುರಿ ಇದೆ ಎಂದರು. ಸ್ವಚ್ಛ ಭಾರತ ಅಭಿಯಾನ ಮತ್ತು ಪಿ.ಎಂ. ವಸತಿ ಯೋಜನೆಗಳು ಕೇಂದ್ರ ಮತ್ತು ರಾಜ್ಯಗಳು ಒಟ್ಟಿಗೆ ಸೇರಿದರೆ ಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ಉದಾಹರಣೆಯಾಗಿವೆ ಎಂದರು.

ಸುಗಮ ಜೀವನ ನಿರ್ವಹಣೆ ಮತ್ತು ಸಬಲೀಕರಣವನ್ನು ಪ್ರತಿಯೊಬ್ಬ ಭಾರತೀಯನಿಗೂ ಒದಗಿಸಬೇಕು ಎಂದು ಪ್ರಧಾನಮಂತ್ರಿಯವರು ಹೇಳಿದರು.

ಮಹಾತ್ಮಾ ಗಾಂಧಿ ಅವರ 150ನೇ ಜಯಂತಿಗಾಗಿ ನಿಗದಿ ಮಾಡಲಾಗಿರುವ ಗುರಿಗಳನ್ನು ಅಕ್ಟೋಬರ್ 2ರ ಹೊತ್ತಿಗೆ ಸಾಧಿಸಬೇಕು ಮತ್ತು 2022ರಲ್ಲಿ ಆಚರಿಸಲಾಗುವ 75ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯ ಗುರಿಗಳ ಕಾರ್ಯವನ್ನು ಶೀಘ್ರ ಶ್ರದ್ಧೆಯಿಂದ ಪ್ರಾರಂಭಿಸಬೇಕು ಎಂದು ಅವರು ಹೇಳಿದರು.

ಅಲ್ಪಕಾಲೀನ ಮತ್ತು ದೀರ್ಘ ಕಾಲೀನ ಗುರಿಗಳ ಸಾಧನೆಗೆ ಸಂಘಟಿತ ಹೊಣೆಗಾರಿಕೆಗೆ ಗಮನ ಇರಬೇಕೆಂದು ಅವರು ಪ್ರತಿಪಾದಿಸಿದರು.

2024ರ ಹೊತ್ತಿಗೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕ ರಾಷ್ಟ್ರವಾಗಿ ಮಾಡುವ ಗುರಿ ಸವಾಲಿನದ್ದಾಗಿದೆ, ಆದರೆ ಇದನ್ನು ಖಂಡಿತ ಸಾಧಿಸಬಹುದು ಎಂದರು. ರಾಜ್ಯಗಳು ತಮ್ಮ ಪ್ರಮುಖ ಸಾಮರ್ಥ್ಯವನ್ನು ಗುರುತಿಸಬೇಕು, ಮತ್ತು ಜಿಲ್ಲಾಮಟ್ಟದಿಂದಲೇ ಜಿಡಿಪಿ ಹೆಚ್ಚಳದ ಗುರಿ ಸಾಧನೆಗೆ ಶ್ರಮಿಸಬೇಕು ಎಂದರು.

ರಫ್ತು ವಲಯ ಅಭಿವೃದ್ಧಿಶೀಲ ರಾಷ್ಟ್ರಗಳ ಪ್ರಗತಿಯ ಮಹತ್ವದ ಅಂಶವಾಗಿದೆ ಎಂದ ಅವರು, ತಲಾದಾಯದ ಹೆಚ್ಚಳಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರೆಡೂ ರಫ್ತು ವೃದ್ಧಿಗೆ ಶ್ರಮಿಸಬೇಕು ಎಂದರು. ಈಶಾನ್ಯ ರಾಜ್ಯಗಳೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಇನ್ನೂ ಬಳಸಿಕೊಳ್ಳದ ವಿಪುಲ ರಫ್ತು ಸಾಮರ್ಥ್ಯವಿದೆ ಎಂದರು. ರಾಜ್ಯಮಟ್ಟದಲ್ಲಿ ರಫ್ತಿಗೆ ನೀಡುವ ಪ್ರೋತ್ಸಾಹ ಆದಾಯ ಮತ್ತು ಉದ್ಯೋಗವನ್ನು ಉತ್ತೇಜಿಸುತ್ತದೆ ಎಂದರು.

ನೀರು ಬದುಕಿನ ಅತಿ ಮುಖ್ಯ ಅಂಶ ಎಂದು ಬಣ್ಣಿಸಿದ ಪ್ರಧಾನಮಂತ್ರಿಯವರು, ಬಡವರು ನೀರಿನ ಸಂರಕ್ಷಣಾ ಪ್ರಯತ್ನಗಳ ಸಾಕಷ್ಟು ಭಾರವನ್ನು ಹೊರುತ್ತಾರೆ ಎಂದು ಹೇಳಿದರು. ಹೊಸದಾಗಿ ರಚಿಸಲಾಗಿರುವ ಜಲ ಶಕ್ತಿ ಸಚಿವಾಲಯವು ನೀರಿಗೆ ಸಮಗ್ರ ದೃಷ್ಟಿಕೋನ ಒದಗಿಸಲು ನೆರವಾಗುತ್ತದೆ ಎಂದರು. ರಾಜ್ಯಗಳು ಕೂಡ ಜಲ ಸಂರಕ್ಷಣೆ ಮತ್ತು ನಿರ್ವಹಣೆಯ ನಿಟ್ಟಿನಲ್ಲಿ ಸಮಗ್ರ ಪ್ರಯತ್ನ ಮುಂದುವರಿಸಬೇಕು ಎಂದು ಮನವಿ ಮಾಡಿದರು. ಲಭ್ಯ ಜಲ ಸಂಪನ್ಮೂಲದ ನಿರ್ವಹಣೆ ಪ್ರಮುಖ ಮತ್ತು ಕಡ್ಡಾಯ ಎಂದರು. 2024ರ ಹೊತ್ತಿಗೆ ಪ್ರತಿಯೊಂದು ಗ್ರಾಮೀಣ ಮನೆಗೂ ಕೊಳವೆಯ ಮೂಲಕ ನೀರು ಪೂರೈಸುವ ಗುರಿ ಹೊಂದಲಾಗಿದೆ ಎಂದರು. ಜಲ ಸಂರಕ್ಷಣೆ ಮತ್ತು ಅಂತರ್ಜಲ ಮಟ್ಟ ಹೆಚ್ಚಳಕ್ಕೆಗಮನ ಹರಿಸಬೇಕು ಎಂದರು. ಜಲ ಸಂರಕ್ಷಣೆ ಮತ್ತು ನಿರ್ವಹಣೆಗೆ ಹಲವು ರಾಜ್ಯಗಳು ಮಾಡಿರುವ ಪ್ರಯತ್ನವನ್ನು ಅವರು ಶ್ಲಾಘಿಸಿದರು. ಕಾನೂನು ಮತ್ತು ಕಟ್ಟಳೆಗಳು ಅಂದರೆ, ಮಾದರಿ ಕಟ್ಟಡ ಅಂಗರಚನೆಗಳನ್ನು ಸಹ ಜಲ ಸಂರಕ್ಷಣೆ ಮತ್ತು ನಿರ್ವಹಣೆಗೆ ರಚಿಸಬೇಕು ಎಂದರು. ಪ್ರಧಾನಮಂತ್ರಿಯವರ ಕೃಷಿ ಸಿಂಚಾಯಿಯೋಜನೆ ಅಡಿಯಲ್ಲಿ ಜಿಲ್ಲಾ ನೀರಾವರಿ ಯೋಜನೆಗಳನ್ನು ಎಚ್ಚರಿಕೆಯಿಂದ ಅನುಷ್ಠಾನಗೊಳಿಸಬೇಕು ಎಂದರು.

ಬರವನ್ನು ನಿರ್ವಹಿಸಲು ಪರಿಣಾಮಕಾರಿಯಾದ ಕ್ರಮಗಳನ್ನು ಕೈಗೊಳ್ಳುವಂತೆ ಪ್ರಧಾನಮಂತ್ರಿಯವರು ಕರೆ ನೀಡಿದರು. ಪ್ರತಿ ಹನಿ ನೀರು, ಹೆಚ್ಚಿನ ಇಳುವರಿಯನ್ನು ಉತ್ತೇಜಿಸುವ ಅಗತ್ಯವನ್ನು ಅವರು ಪ್ರತಿಪಾದಿಸಿದರು.

ರೈತರ ಆದಾಯವನ್ನು 2022ರ ಹೊತ್ತಿಗೆ ದುಪ್ಪಟ್ಟು ಮಾಡುವ ಕೇಂದ್ರ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿಯವರು, ಇದಕ್ಕಾಗಿ ಮೀನುಗಾರಿಕೆ, ಪಶು ಸಂಗೋಪನೆ, ತೋಟಗಾರಿಕೆ, ಹಣ್ಣು ಮತ್ತು ತರಕಾರಿಯತ್ತ ಗಮನ ಹರಿಸುವ ಅಗತ್ಯವಿದೆ ಎಂದರು. ಪಿಎಂ – ಕಿಸಾನ್ – ಕಿಸಾನ್ ಸಮ್ಮಾನ ನಿಧಿ – ಮತ್ತು ಇತರ ರೈತ ಕೇಂದ್ರಿತ ಯೋಜನೆಗಳ ಪ್ರಯೋಜನ ಸಕಾಲದಲ್ಲಿ ಅರ್ಹ ಫಲಾನುಭವಿಗಳಿಗೆ ತಲುಪಬೇಕು ಎಂದರು. ಕೃಷಿಯಲ್ಲಿ ರಚನಾತ್ಮಕ ಸುಧಾರಣೆಯ ಅಗತ್ಯವಿದೆ ಎಂದ ಪ್ರಧಾನಮಂತ್ರಿಯವರು, ಸಾಂಸ್ಥಿಕ ಹೂಡಿಕೆ ಉತ್ತೇಜಿಸುವ, ಸಾರಿಗೆ ಬಲಪಡಿಸುವ, ಮತ್ತು ಹೆಚ್ಚಿನ ಮಾರುಕಟ್ಟೆ ಬೆಂಬಲ ಒದಗಿಸುವ ಅಗತ್ಯವಿದೆ ಎಂದರು. ಆಹಾರ ಸಂಸ್ಖರಣೆ ವಲಯ ಆಹಾರ ಧಾನ್ಯ ಉತ್ಪಾದನೆಗಿಂತ ಹೆಚ್ಚು ವೇಗದಲ್ಲಿ ಬೆಳೆಯಬೇಕು ಎಂದು ಅವರು ಹೇಳಿದರು.

ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಉತ್ತಮ ಆಡಳಿತದ ಬಗ್ಗೆ ಗಮನ ಇಡಬೇಕೆಂದರು. ಆಡಳಿತದಲ್ಲಿನ ಸುಧಾರಣೆಗಳು ಹಲವು ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಗಣನೀಯ ಪ್ರಗತಿಗೆ ಕಾರಣವಾಗಿವೆ ಎಂದರು. ಹಲವು ಉದಾಹರಣೆಗಳನ್ನು ನೀಡಿದ ಅವರು, ಈ ಕೆಲವು ಜಿಲ್ಲೆಗಳಲ್ಲಿ ವಿಭಿನ್ನ ಕಲ್ಪನೆಗಳು ಮತ್ತು ನಾವಿನ್ಯ ಸೇವೆಗಳ ವಿತರಣೆ ಪ್ರಯತ್ನಗಳು ಅತ್ಯದ್ಭುತ ಫಲಿತಾಂಶ ನೀಡಿವೆ ಎಂದರು.

ಹಲವು ಮಹತ್ವಾಕಾಂಕ್ಷೆಯ ಜಿಲ್ಲೆಗಳು ನಕ್ಸಲ್ ಹಿಂಸಾಚಾರದಿಂದ ಬಾಧಿತವಾಗಿವೆ ಎಂದು ಪ್ರಧಾನಮಂತ್ರಿ ತಿಳಿಸಿದರು. ನಕ್ಸಲ್ ಹಿಂಸಾಚಾರ ವಿರುದ್ಧದ ಸಮರ ಈಗ ನಿರ್ಣಾಯಕ ಹಂತದಲ್ಲಿದೆ.ಅಭಿವೃದ್ಧಿಯು ವೇಗವಾಗಿ ಮತ್ತು ಸಮತೋಲಿತ ರೀತಿಯಲ್ಲಿ ಮುಂದುವರಿದರೂ ಹಿಂಸಾಚಾರವನ್ನು ದೃಢವಾಗಿ ನಿಗ್ರಹಿಸಲಾಗುವುದು ಎಂದರು.

ಆರೋಗ್ಯ ವಲಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಪ್ರಧಾನಮಂತ್ರಿಯವರು, 2022ರ ಹೊತ್ತಿಗೆ ಸಾಧಿಸಬೇಕಾದ ಹಲವು ಗುರಿಗಳನ್ನು ಮನದಲ್ಲಿ ಇಟ್ಟುಕೊಳ್ಳಲಾಗಿದೆ ಎಂದರು. 2025ರ ಹೊತ್ತಿಗೆ ಟಿಬಿಯನ್ನು ನಿರ್ಮೂಲನೆ ಮಾಡುವ ಗುರಿಯ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ಆಯುಷ್ಮಾನ್ ಭಾರತ್ ಅಡಿಯಲ್ಲಿ ಪಿಎಂಜೆಎವೈ ಅನ್ನು ಅನುಷ್ಠಾನದ ಮಾಡದ ರಾಜ್ಯಗಳಿಗೆ ಸಾಧ್ಯವಾದಷ್ಟು ಬೇಗ ಇದನ್ನು ಜಾರಿ ಮಾಡುವಂತೆ ಪ್ರಧಾನಿ ಮನವಿ ಮಾಡಿದರು. ಆರೋಗ್ಯ ಮತ್ತು ಕ್ಷೇಮ ಪ್ರತಿಯೊಂದು ನಿರ್ಧಾರದಲ್ಲೂ ಪ್ರಮುಖ ಅಂಶವಾಗಬೇಕೆಂದರು.

ನಾವೀಗ ಸಾಧನೆ, ಪಾರದರ್ಶಕತೆ ಮತ್ತು ವಿತರಣೆಯಿಂದ ನಿರೂಪಿಸಲ್ಪಟ್ಟ ಆಡಳಿತ ವ್ಯವಸ್ಥೆಯತ್ತ ಸಾಗುತ್ತೇವೆ ಎಂದು ಪ್ರಧಾನಿ ಹೇಳಿದರು. ಯೋಜನೆಗಳು ಮತ್ತು ನಿರ್ಧಾರಗಳ ಸೂಕ್ತ ಅನುಷ್ಠಾನ ಮಹತ್ವದ್ದಾಗಿದೆ ಎಂದು ಅವರು ಹೇಳಿದರು. ಜನರ ವಿಶ್ವಾಸ ಗೆಲ್ಲುವಂತ ಮತ್ತು ಕಾರ್ಯಗತವಾಗುವಂಥ ಸರ್ಕಾರಿ ವ್ಯವಸ್ಥೆ ರೂಪಿಸುವಂತೆ ನೀತಿ ಆಯೋಗದ ಎಲ್ಲ ಆಡಳಿತ ಮಂಡಳಿಯ ಸದಸ್ಯರಿಗೆ ಅವರು ಕರೆ ನೀಡಿದರು.

*****(Release ID: 1574719) Visitor Counter : 232