ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿಯವರಿಗೆ ಅಭಿನಂದನೆಗಳ ಕರೆ

Posted On: 26 MAY 2019 5:05PM by PIB Bengaluru

ಪ್ರಧಾನಿಯವರಿಗೆ ಅಭಿನಂದನೆಗಳ ಕರೆ

 

ಪಾಕಿಸ್ತಾನದ ಪ್ರಧಾನಿ ಶ್ರೀ ಇಮ್ರಾನ್ ಖಾನ್, ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ಶ್ರೀ ಮೊಹಮದ್ ನಶೀದ್ ಮತ್ತು ನೇಪಾಳದ ಮಾಜಿ ಪ್ರಧಾನಿ ಶ್ರೀ ಮಾಧವ್ ನೇಪಾಳ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ದೂರವಾಣಿ ಕರೆಮಾಡಿ ಇತ್ತೀಚಿನ ಸಾರ್ವತ್ರಿಕ ಚುನಾವಣೆಗಳಲ್ಲಿನ ಗೆಲುವಿಗಾಗಿ ಅಭಿನಂದಿಸಿದರು.

 

ಪಾಕಿಸ್ತಾನದ ಪ್ರಧಾನಿಯವರ ದೂರವಾಣಿ ಕರೆ ಹಾಗೂ ಶುಭಾಶಯಗಳಿಗಾಗಿ ಪ್ರಧಾನಿಯವರು ವಂದನೆ ಸಲ್ಲಿಸಿದರು. ತಮ್ಮ ಸರ್ಕಾರದ ನೆರೆಹೊರೆಯವರು ಮೊದಲು ನೀತಿಗನುಗುಣವಾಗಿ ಬಡತನ ನಿರ್ಮೂಲನೆಗಾಗಿ ಜಂಟಿ ಹೋರಾಟ ನಡೆಸಲು ಈ ಮೊದಲು ತಾವು ಪಾಕಿಸ್ತಾನದ ಪ್ರಧಾನಿಯವರಿಗೆ ನೀಡಿದ ಸಲಹೆಗಳನ್ನು ಪ್ರಸ್ತಾಪಿಸಿದರು. ನಮ್ಮ ಪ್ರದೇಶದಲ್ಲಿ ಶಾಂತಿ, ಪ್ರಗತಿ ಮತ್ತು ಸಮೃದ್ಧಿಗೆ ಸ��ಕಾರವನ್ನು ಬಲವರ್ಧನೆಗೊಳಿಸಲು ಹಿಂಸಾಚಾರ ಮತ್ತು ಭಯೋತ್ಪಾದನೆಯಿಂದ ಮುಕ್ತವಾದ ಪರಿಸರವನ್ನು ಸೃಷ್ಟಿಸುವುದು ಅಗತ್ಯ ಎಂದು ಅವರು ಒತ್ತಿ ಹೇಳಿದರು.

 

ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ಶ್ರೀ ಮೊಹಮದ್ ನಶೀದ್ ಅವರು ಐತಿಹಾಸಿಕ ಚುನಾವಣಾ ಗೆಲುವಿಗಾಗಿ ಪ್ರಧಾನಿಯವರನ್ನು ಅಭಿನಂದಿಸಿದರು. ಮಾಲ್ಡೀವ್ಸ್ ಮತ್ತು ಭಾರತದ ನಡುವಿನ ಸಂಬಂಧಗಳು ಇತ್ತೀಚೆಗೆ ಗಾಢವಾಗಿವೆ ಎಂದರು. ಈ ಪ್ರದೇಶದಲ್ಲಿನ ಭಯೋತ್ಪಾದನೆ ಮತ್ತು ತೀವ್ರಗಾಮಿತ್ವದ ವಿರುದ್ಧ ಹೋರಾಡಲು ನಿಕಟ ಸಹಕಾರವನ್ನು ಬಲಪಡಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು. ಪ್ರಧಾನ ಮಂತ್ರಿಯವರು ಶುಭಾಶಯಕ್ಕೆ ಅವರಿಗೆ ಧನ್ಯವಾದ ಸಲ್ಲಿಸಿದರು. ಈ ಪ್ರದೇಶದಲ್ಲಿನ ಶಾಂತಿ, ಭದ್ರತೆ ಮತ್ತು ಅಭಿವೃದ್ಧಿಗಾಗಿ ಎರಡು ದೇಶಗಳ ನಡುವಿನ ಬಲವಾದ, ಪರಸ್ಪರ ಪ್ರಯೋಜನಕಾರಿ ಮತ್ತು ಸರ್ವತೋಮುಖ ಪಾಲುದಾರಿಕೆಯನ್ನು ಉತ್ತೇಜಿಸಲು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.

 

ತಮ್ಮ ಪಕ್ಷ ಹಾಗೂ ಮೈತ್ರಿ ಕೂಟದ ಐತಿಹಾಸಿಕ ಜಯಕ್ಕಾಗಿ ಪ್ರಧಾನಮಂತ್ರಿಯವರನ್ನು ನೇಪಾಳದ ಮಾಜಿ ಪ್ರಧಾನಿ ಶ್ರೀ ಮಾಧವ್ ನೇಪಾಳ್ ಅವರು ಅಭಿನಂದಿಸಿದರು. ಮುಂಚೂಣಿಯ ವಿಶ್ವಶಕ್ತಿಯಾಗಿ ಭಾರತದ ಹೊರಹೊಮ್ಮುವಿಕೆಯು ಇಡೀ ಪ್ರದೇಶವನ್ನು ಗುಣಾತ್ಮಕವಾಗಿ ಮೇಲಕ್ಕೆತ್ತಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಅಭಿನಂದನೆಗಾಗಿ ಶ್ರೀ ಮಾಧವ್ ನೇಪಾಳ್ ಅವರಿಗೆ ವಂದನೆ ಸಲ್ಲಿಸಿದ ಪ್ರಧಾನಿಯವರು ಭಾರತ ಮತ್ತು ನೇಪಾಳದ ನಡುವಿನ ಐತಿಹಾಸಿಕ ಸ್ನೇಹ ಮತ್ತು ಬಹುಮುಖಿ ಸಂಬಂಧಗಳನ್ನು ಇನ್ನಷ್ಟು ಬಲಪಡಿಸುವ ಮತ್ತು ಗಾಢವಾಗಿಸುವ ತಮ್ಮ ನೆಚ್ಚಿನ ಆಶಯವನ್ನು ವ್ಯಕ್ತಪಡಿಸಿದರು.



(Release ID: 1572669) Visitor Counter : 102