ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಎಫ್ ಟಿ ಐಐ ನಿಂದ  ಚಿತ್ರ ವಿಮರ್ಶೆ ಮತ್ತು   ವಿಮರ್ಶೆ ಕಲೆ  ಕುರಿತಾದ ನೂತನ ಕೋರ್ಸ್  

Posted On: 10 APR 2019 12:42PM by PIB Bengaluru

ಎಫ್ ಟಿ ಐಐ ನಿಂದ  ಚಿತ್ರ ವಿಮರ್ಶೆ ಮತ್ತು   ವಿಮರ್ಶೆ ಕಲೆ  ಕುರಿತಾದ ನೂತನ ಕೋರ್ಸ್  

 

ಪ್ರಥಮ ಬಾರಿಗೆ ಎಫ್ ಟಿ ಐಐ ( ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಫಿಲ್ಮ್ ಆಂಡ್ ಟೆಲಿವಿಷನ್)  ಚಿತ್ರ ವಿಮರ್ಶೆ ಮತ್ತು ವಿಮರ್ಶೆ ಕಲೆಗಳ ಕುರಿತಾದ ಹೊಸ ಕೋರ್ಸ್ ನ್ನು ಆರಂಭಿಸಲಿದೆ. 28ಮೇ ನಿಂದ 19ಜೂನ್ 2019ರ ವರೆಗೆ ಇಪ್ಪತ್ತು ದಿನಗಳ ಕಾಲ ನಡೆಯಲಿರುವ ಈ  ಕೋರ್ಸ್ ನ್ನು   ದೆಹಲಿಯ ಭಾರತೀಯ ಸಮೂಹ ಸಂಪರ್ಕ  ಸಂಸ್ಥೆಯೊಂದಿಗೆ ಜಂಟಿಯಾಗಿ ಆಯೋಜಿಸಲಾಗುತ್ತದೆ.

 

ಈ ಕೋರ್ಸ್ ನ್ನು ಆರಂಭಿಸುವ ಮೂಲಕ ಚಲನಚಿತ್ರ ವಿಮರ್ಶಕರು, ಸಿನಿಮಾ ಬ್ಲಾಗರ್ಸ್, ಸಂಶೋಧನಾ ಪರಿಣಿತರು, ಚಲನಚಿತ್ರ ತರಬೇತುದಾರರು ಮತ್ತು ಚಲನಚಿತ್ರಗಳಲ್ಲಿ ವಿಶೇಷ ಆಸಕ್ತಿ ಉಳ್ಳವರ ಬಹುದಿನಗಳ ಬೇಡಿಕೆಯನ್ನು ಎಫ್ ಟಿ ಐಐ ಪೂರೈಸಲಿದೆ ಎಂದು ಸಂಸ್ಥೆಯ  ನಿರ್ದೇಶಕರಾದ ಶ್ರೀ ಭೂಪೇಂದ್ರ ಕೈಂತೋಲ  ಹೇಳಿದ್ದಾರೆ. ಈ ಕೋರ್ಸಿನ ಮೂಲಕ  ಚಿತ್ರವನ್ನು ವೀಕ್ಷಿಸುವ ಹಾಗೂ ಅರ್ಥೈಸಿಕೊಳ್ಳುವ ಬಗೆಯನ್ನು ತಿಳಿಸಿಕೊಡಲಾಗುವುದು ಎಂದು  ಅವರು ಹೇಳಿದರು.

 

ಭೂಪಾಲ್ ಮೂಲದ ಚಿತ್ರ ನಿರ್ಮಾತೃ, ಎಫ್.ಟಿ.ಐ.ಐ.ನ ಹಿರಿಯ ವಿದ್ಯಾರ್ಥಿನಿ ಕುಮಾರಿ ರಾಜುಲಾ ಶಾಹ ಅವರು ಈ ಕೋರ್ಸಿನ ನೇತೃತ್ವ ವಹಿಸಲಿದ್ದಾರೆ. ಅವರು ಎಫ್.ಟಿ.ಐ.ಐ.ನಲ್ಲಿ 1997ರಿಂದ 2000ದವರೆಗೆ ಸಿನಿಮಾ ನಿರ್ದೇಶನದ ತರಬೇತಿಯನ್ನು ಪಡೆದಿದ್ದಾರೆ.   ಡಿಜಿಟಲ್ ಆರ್ಟ್ಸ್ ಮತ್ತು ಚಲನಚಿತ್ರ ಅಧ್ಯಯನದ ವ್ಯಾಪ್ತಿಯನ್ನು ವಿಸ್ತರಿಸುವಲ್ಲಿ ಅವರು ವಿಶೇಷ ಆಸಕ್ತಿ ಹಾಗೂ ಕಾರ್ಯಾನುಭವ ಹೊಂದಿದ್ದಾರೆ.

 

ಈ ಕೋರ್ಸಿನ  ಬಗ್ಗೆ ಮಾತನಾಡುತ್ತಾ, ಕುಮಾರಿ ಶಾಹ  ಅವರು ಇದು ಸಿನಿಮಾ ವಿಮರ್ಶೆ ಮತ್ತು ಕೋರ್ಸಿನಲ್ಲಿ ಪಾಲ್ಗೊಳ್ಳುವವರನ್ನು ಸಿನಿಮಾದ ಗಂಭೀರ  ವೀಕ್ಷಕರನ್ನಾಗಿಸಲು ಮೂಲ ತಳಹದಿಯನ್ನು ಒದಗಿಸುತ್ತದೆ ಎಂದು ಹೇಳಿದರು. ವಿಮರ್ಶಾತ್ಮಕ ಆಲೋಚನೆಯ ಮೂಲಕ ಸಿನಿಮಾದ ಇತಿಹಾಸದಿಂದ ಗಣನೀಯವಾದ ಚಲನಚಿತ್ರಗಳ ಅಧ್ಯಯನಕ್ಕೆ ಈ ಕೋರ್ಸ್ ಅವಕಾಶ ಕಲ್ಪಿಸಿಕೊಡಲಿದೆ ಎಂದರು.

 

ದೇಶದ್ಯಾಂತ 37 ನಗರಗಳಲ್ಲಿ ಸುಮಾರು 5800ಕ್ಕಿಂತಲೂ ಹೆಚ್ಚು ಕಲಿಕಾರ್ಥಿಗಳನ್ನು ಹೊಂದಿರುವ ಎಸ್.ಕೆ.ಐ.ಎಫ್.ಟಿ. (ಚಲನಚಿತ್ರ ಮತ್ತು ದೂರದರ್ಶನದಲ್ಲಿ ಭಾರತೀಯ ಕೌಶಲ್ಯಾಭಿವೃದ್ಧಿ ಉಪಕ್ರಮದ ಮೂಲಕ ಚಲನಚಿತ್ರ ಕಲಿಕಾ ವಿಭಾಗದಲ್ಲಿ ಸುಮಾರು 135 ಅಲ್ಪಾವಧಿ ಕೋರ್ಸ್ಗಳನ್ನು ಎಫ್.ಟಿ.ಐ.ಐ. ಆಯೋಜಿಸುತ್ತಿದೆ.

ಈ ಕೋರ್ಸ್ಗಳಿಗೆ ವಯೋಮಾನದ ಮಿತಿಯಿಲ್ಲದೇ ಎಲ್ಲರಿಗೂ ಮುಕ್ತವಾಗಿದೆ. ಅರ್ಜಿ ಸಲ್ಲಿಸಲು 22 ಏಪ್ರಿಲ್ 2019 ಕೊನೆಯ ದಿನ. ಹೊರರಾಜ್ಯಗಳಿಂದ ಆಗಮಿಸುವ  ಆಯ್ದ ವಿದ್ಯಾರ್ಥಿಗಳಿಗೆ ಬೇಡಿಕೆಯ ಮೇರೆಗೆ ವಸತಿ ವ್ಯವಸ್ಥೆ  ಮಾಡಿಕೊಡಲಾಗುವುದು. ಕೋರ್ಸ್ ನ ವಿವರಗಳಿಗಾಗಿ ಭೇಟಿ ನೀಡಿ http://www.ftii.ac.in/

 

*******8



(Release ID: 1570399) Visitor Counter : 106