ಜಲ ಸಂಪನ್ಮೂಲ ಸಚಿವಾಲಯ

2017 – 18 ರಿಂದ 2019 – 20 ರ ಅವಧಿಯಲ್ಲಿ ರಾಷ್ಟ್ರವ್ಯಾಪಿ ಪ್ರವಾಹ ನಿರ್ವಹಣೆ ಮತ್ತು ನದಿ ನಿರ್ವಹಣೆ ಮತ್ತು ಗಡಿ ಪ್ರದೇಶಗಳ ಚಟುವಟಿಕೆಗಳಿಗಾಗಿ “ಎಫ್ ಎಂ ಬಿ ಎ ಪಿ” ಕಾರ್ಯಕ್ರಮಗಳಿಗೆ ಸಚಿವ ಸಂಪುಟ ಅನುಮೋದನೆ

Posted On: 07 MAR 2019 2:35PM by PIB Bengaluru

2017 – 18 ರಿಂದ 2019 – 20 ರ ಅವಧಿಯಲ್ಲಿ ರಾಷ್ಟ್ರವ್ಯಾಪಿ ಪ್ರವಾಹ ನಿರ್ವಹಣೆ ಮತ್ತು ನದಿ ನಿರ್ವಹಣೆ ಮತ್ತು ಗಡಿ ಪ್ರದೇಶಗಳ ಚಟುವಟಿಕೆಗಳಿಗಾಗಿ “ಎಫ್ ಎಂ ಬಿ ಎ ಪಿ” ಕಾರ್ಯಕ್ರಮಗಳಿಗೆ ಸಚಿವ ಸಂಪುಟ ಅನುಮೋದನೆ

 

2017 – 18 ರಿಂದ 2019 – 20 ರ ಅವಧಿಯಲ್ಲಿ ರಾಷ್ಟ್ರವ್ಯಾಪಿ ಪ್ರವಾಹ ನಿರ್ವಹಣೆ ಮತ್ತು ನದಿ ನಿರ್ವಹಣಾ ಚಟುವಟಿಕೆಗಳು ಮತ್ತು ಗಡಿ ಪ್ರದೇಶಗಳ ಕಾರ್ಯಗಳಿಗೆ 3342.00 ಕೋಟಿ ರೂ. ವೆಚ್ಚದಲ್ಲಿ “ಪ್ರವಾಹ ನಿರ್ವಹಣೆ ಮತ್ತು ಗಡಿ ಪ್ರದೇಶಗಳ ಕಾರ್ಯಕ್ರಮ” (FMBAP) ವನ್ನು ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದಿಸಿದೆ.  

 

ಅನುಕೂಲತೆಗಳು 

 

ಪರಿಣಾಮಕಾರಿಯಾಗಿ  ಪ್ರವಾಹ ನಿರ್ವಹಣೆ, ಭೂ ಸವೆತ ನಿಯಂತ್ರಣ ಮತ್ತು ಕಡಲ್ಕೊರೆತ ತಡೆಯುವ ಸಲುವಾಗಿ FMBAP ಕಾರ್ಯಯೋಜನೆಯನ್ನು ದೇಶದಾದ್ಯಂತ ಅನುಷ್ಠಾನಗೊಳಿಸಲಾಗುವುದು. ಪಟ್ಟಣಗಳು, ಹಳ್ಳಿಗಳು, ಕೈಗಾರಿಕಾ ಸಂಸ್ಥೆಗಳು, ಸಂವಹನಾ ಸಂಪರ್ಕಗಳು, ಕೃಷಿ ಭೂಮಿ, ಮೂಲಸೌಕರ್ಯಗಳು ಮುಂತಾದವುಗಳನ್ನು ಪ್ರವಾಹ ಮತ್ತು  ಭೂ ಸವೆತದಿಂದ ರಕ್ಷಿಸಲು  ಈ ಪ್ರಸ್ತಾವನೆಯು ಅನುಕೂಲಕರವಾಗಿದೆ. ಜಲಾನಯನ ಪ್ರದೇಶಗಳ ರಕ್ಷಣಾ ಕೆಲಸಗಳು ನದಿಗಳಲ್ಲಿ ಹೂಳೆತ್ತುವ ನಿಟ್ಟಿನಲ್ಲಿ ಸಹಾಯಕವಾಗುತ್ತದೆ.

 

ಹೂಡಿಕೆಯ ವಿಧಾನ:

 

ಸಾಮಾನ್ಯ ಪ್ರವರ್ಗದ ರಾಜ್ಯಗಳಲ್ಲಿ ಪ್ರವಾಹ ನಿರ್ವಹಣೆಯ ಘಟಕಗಳಿಗೆ ಹೂಡಿಕೆಯ ವಿಧಾನವು ಕೇಂದ್ರ ಮತ್ತು ರಾಜ್ಯಗಳ ಶೇಕಡಾ 50:50 ರ ಅನುಪಾತದಲ್ಲಿಯೂ; ಈಶಾನ್ಯ ರಾಜ್ಯಗಳು, ಸಿಕ್ಕಿಂ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡಗಳಿಗೆ ಕೇಂದ್ರ ಮತ್ತು ರಾಜ್ಯಗಳ ಶೇಕಡಾ 70:30 ರ  ಅನುಪಾತದಲ್ಲಿಯೂ ಮುಂದುವರೆಯುತ್ತದೆ. ನದಿ ನಿರ್ವಹಣೆ ಮತ್ತು ಗಡಿ ಚಟುವಟಿಕೆಗಳ ಅಂಗಗಳು ನೆರೆ ರಾಷ್ಟ್ರಗಳ ಗಡಿ ಪ್ರದೇಶಗಳ ಚಟುವಟಿಕೆಗಳಿಗೆ ಸೀಮಿತವಾಗಿದ್ದು ದ್ವಿಪಕ್ಷೀಯ ಕಾರ್ಯಸೂಚಿಗಳ ಪ್ರಕಾರ ಯೋಜನೆಗಳು / ಕೆಲಸಗಳಿಗೆ ಕೇಂದ್ರದಿಂದ ಶೇಕಡಾ 100 ರಷ್ಟು ಅನುದಾನ/ಸಹಕಾರದ ರೀತಿಯಲ್ಲಿ ಮುಂದುವರೆಯುತ್ತದೆ. 

 

ಪ್ರಮುಖ ಲಕ್ಷಣಗಳು:

 

“ಎಫ್ ಎಂ ಬಿ ಎ ಪಿ” ಯೋಜನೆಯನ್ನು ಪ್ರಸ್ತುತ ಇರುವ ಹನ್ನೆರಡನೇ ಯೋಜನೆಯ “ಪ್ರವಾಹ ನಿರ್ವಹಣಾ ಕಾರ್ಯಕ್ರಮ (ಎಫ್ ಎಂ ಪಿ)”  ಮತ್ತು “ನದಿ ನಿರ್ವಹಣಾ ಕಾರ್ಯಕ್ರಮಗಳು ಮತ್ತು ಗಡಿ ಪ್ರದೇಶಗಳ ಕೆಲಸಗಳು (ಆರ್ ಎಂ ಬಿ ಎ )” ಇವೆರಡನ್ನೂ ಒಗ್ಗೂಡಿಸಿ ರಚಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ರಚನಾತ್ಮಕ ಮತ್ತು ರಚನಾರಹಿತ ಕ್ರಮಗಳ ಗರಿಷ್ಠ ಹೊಂದಾಣಿಕೆಯೊಂದಿಗೆ ಪ್ರವಾಹದ ವಿರುದ್ಧ ಸಮಂಜಸವಾದ ರಕ್ಷಣೆ ನೀಡಲು ರಾಜ್ಯ ಸರ್ಕಾರಗಳಿಗೆ ನೆರವಾಗುವುದು ಮತ್ತು ತತ್ಸಂಬಂಧದ ವ್ಯಾಪ್ತಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳ ಸಾಮರ್ಥ್ಯಗಳನ್ನು ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. 

 

ಈ ಯೋಜನೆಯ ಅಡಿಯಲ್ಲಿ ಕೈಗೆತ್ತಿಕೊಳ್ಳುವ ಕೆಲಸಗಳು ಮೌಲ್ಯಯುತ ಭೂಪ್ರದೇಶಗಳನ್ನು ಭೂಸವೆತ ಮತ್ತು ಪ್ರವಾಹದಿಂದ ರಕ್ಷಿಸುತ್ತವೆ ಮತ್ತು ಗಡಿಯಲ್ಲಿ ಶಾಂತಿ ಕಾಪಾಡಲು ಸಹಾಯ ಮಾಡುತ್ತವೆ. ಈ ಯೋಜನೆಯು ಈಗಾಗಲೇ ಎಫ್ ಎಂ ಪಿ ಯೋಜನೆಯ ಅಡಿಯಲ್ಲಿ ಅಂಗೀಕರಿಸಲ್ಪಟ್ಟು ಮುಂದುವರೆದುಕೊಂಡು ಹೋಗುತ್ತಿರುವ ಯೋಜನೆಗಳನ್ನು ಪೂರ್ಣಗೊಳಿಸುವ ಗುರಿಯನ್ನು  ಹೊಂದಿದೆ. ಜೊತೆಗೆ ಈ ಯೋಜನೆಯು ನೆರೆಹೊರೆಯ ರಾಷ್ಟ್ರಗಳ ನೀರು ಮತ್ತು ಹವಾಮಾನದ ಅವಲೋಕನ ಮತ್ತು ನೆರೆಯ ರಾಷ್ಟ್ರಗಳೊಂದಿಗೆ ಹಂಚಿಕೊಂಡಿರುವ ನದಿಗಳಲ್ಲಿ ಪ್ರವಾಹ ಮುನ್ಸೂಚನೆಯನ್ನು ನೀಡುವ ನಿಟ್ಟಿನಲ್ಲಿ ಕೂಡಾ ಸಹಾಯಕವಾಗಿದೆ. ಈ ಯೋಜನೆಯು ನೆರೆಯ ನೇಪಾಳದ ಜೊತೆಗೆ ಹಂಚಿಕೆಯಾಗಿರುವ ನದಿ ಯೋಜನೆಗಳಾದ ಪಂಚೇಶ್ವರ್ ವಿವಿಧೋದ್ದೇಶ ಯೋಜನೆ, ಸಪ್ತ ಕೋಸಿ-ಸನ್ ಕೋಸಿ ಯೋಜನೆಗಳ ನೀರಿನ ಸಂಪನ್ಮೂಲಗಳ ಪರಿಶೀಲನೆ ಮತ್ತು ತನಿಖೆ, ವಿಸ್ತೃತ ಯೋಜನಾ ವರದಿಯ ತಯಾರಿಕೆ ಇವುಗಳನ್ನೂ ಸಹ ಒಳಗೊಂಡಿದೆ.



(Release ID: 1568305) Visitor Counter : 82


Read this release in: Urdu , Tamil , English , Hindi , Telugu