ಸಂಪುಟ

ಔದ್ಯೋಗಿಕ ಸುರಕ್ಷತೆ ಮತ್ತು ಆರೋಗ್ಯ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಜರ್ಮನಿ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

Posted On: 07 MAR 2019 2:44PM by PIB Bengaluru

ಔದ್ಯೋಗಿಕ ಸುರಕ್ಷತೆ ಮತ್ತು ಆರೋಗ್ಯ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಜರ್ಮನಿ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಔದ್ಯೋಗಿಕ ಸುರಕ್ಷತೆ ಮತ್ತು ಆರೋಗ್ಯ (ಓಎಸ್.ಎಚ್.) ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಜರ್ಮನಿ ನಡುವೆ ಆಗಿರುವ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಅನುಮೋದನೆ ನೀಡಿದೆ. ಈ ತಿಳಿವಳಿಕೆ ಒಪ್ಪಂದವನ್ನು 2018ರ ನವೆಂಬರ್ 13ರಂದು ನವೀಕರಿಸಲಾಗಿತ್ತು. 

ಪ್ರಯೋಜನಗಳು: 

ಈ ದಿನದವರೆಗೆ ಈ ಸಹಯೋಗವು ಆರ್ಥಿಕ ಚಟುವಟಿಕೆಗಳ ವಿಭಿನ್ನ ವಲಯಗಳ ಚಟುವಟಿಕೆಯಲ್ಲಿ ಔದ್ಯೋಗಿಕ ಸುರಕ್ಷತೆ ಮತ್ತು ಆರೋಗ್ಯದ ವಿವಿಧ ಅಂಶಗಳಲ್ಲಿ ಆಧುನಿಕ ತರಬೇತಿ ತಂತ್ರಗಳು ಮತ್ತು ಜಾಕಾತಿಗಳನ್ನು ಅಳವಡಿಸಿಕೊಳ್ಳಲು ಬಹಳ ನೆರವಾಗಿದೆ. ಈ ತಿಳಿವಳಿಕೆ ಒಪ್ಪಂದದ ಅಡಿಯಲ್ಲಿ ಓಎಸ್ಎಚ್ ಅದರಲ್ಲೂ ನಿರ್ಮಾಣ ಮತ್ತು ಉತ್ಪಾದನಾ ವಲಯದಲ್ಲಿನ ಸವಾಲುಗಳನ್ನು ಎದುರಿಸಲು ಜರ್ಮನಿಯ ಸಾಮಾಜಿಕ ಅಪಘಾತ ವಿಮೆ (ಡಿಜಿಯುವಿ) ಅಂತಾರಾಷ್ಟ್ರೀಯ ಸಾಮಾಜಿಕ ಸುರಕ್ಷತೆ ಸಂಘಟನೆ (ಐಎಸ್.ಎಸ್.ಎ) ಮೂಲಕ ತಂತ್ರಜ್ಞಾನದ ಅರಿವನ್ನು ತರುತ್ತದೆ. ಇದು ಬೃಹತ್ ಕಾರ್ಯ ಪಡೆಗೆ ತಮ್ಮ ಸುರಕ್ಷತೆ ಮತ್ತು ಆರೋಗ್ಯ ಸುಧಾರಿಸಿಕೊಳ್ಳಲು ನೆರವಾಗಲಿದೆ ಮತ್ತು ಔದ್ಯೋಗಿಕ ಕಾಯಿಲೆಗಳು ಮತ್ತು ಗಾಯಗಳನ್ನು ತಡೆಯುತ್ತದೆ. ಈ ಸಹಕಾರವು ಕಾರ್ಖಾನೆ ಸಲಹಾ ಸೇವೆ ಮತ್ತು ಕಾರ್ಮಿಕ ಸಂಸ್ಥೆಗಳ ಮಹಾ ನಿರ್ದೇಶನಾಲಯ (ಡಿಜಿಎಫ್ಎಎಸ್ಎಲ್ಐ), ಓಎಸ್ಎಚ್ ವಲಯದ ಭಾರತದ ಕಾರ್ಮಿಕ ಸಚಿವಾಲಯಕ್ಕೆ ಹೊಂದಿಕೊಂಡಿರುವ ತಾಂತ್ರಿಕ ವಿಭಾಗ ಮತ್ತು ಕಾರ್ಖಾನೆಗಳ ಅಧಿಕಾರಿಗಳ ಮುಖ್ಯ ಪರಿವೀಕ್ಷಕರ (ಸಿಐಎಫ್ ಗಳು) ಸಾಮರ್ಥ್ಯವರ್ಧನೆಗೆ, ಹೊರಹೊಮ್ಮುವ ಸವಾಲುಗಳನ್ನು ಎದುರಿಸಲು ಪರಿಶೀಲನಾ ವ್ಯವಸ್ಥೆ ಬಲಪಡಿಸಲು, ಓಎಸ್ಎಚ್ ರಂಗದಲ್ಲಿ ಮುಂದುವರಿದ ಸಂಶೋಧನೆ ನಡೆಸುವ ಪ್ರಯೋಗಾಲಯಗಳನ್ನು ಮೇಲ್ದರ್ಜೆಗೇರಿಸಲು, ಓಎಸ್ಎಚ್ ಮಾನದಂಡ ಅಭಿವೃದ್ಧಿ ಮತ್ತು ಭಾರತೀಯ ಕಾರ್ಯಪಡೆಯಲ್ಲಿ ಸುರಕ್ಷತೆ ಸಂಸ್ಕೃತಿ ಅಭಿವೃದ್ಧಿಪಡಿಸಲು ಮತ್ತು ಅದನ್ನು ಉತ್ತಮಪಡಿಸಲು ನೆರವಾಗಲಿದೆ ಎಂದು ನಿರೀಕ್ಷಿಸಲಾಗಿದೆ, . 



(Release ID: 1568260) Visitor Counter : 83