ಸಂಪುಟ
ಫೇಮ್ ಇಂಡಿಯಾ ಎರಡನೇ ಹಂತದ ಯೋಜನೆಗೆ ಸಂಪುಟ ಅನುಮೋದನೆ
प्रविष्टि तिथि:
28 FEB 2019 10:27PM by PIB Bengaluru
ಫೇಮ್ ಇಂಡಿಯಾ ಎರಡನೇ ಹಂತದ ಯೋಜನೆಗೆ ಸಂಪುಟ ಅನುಮೋದನೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ದೇಶದಲ್ಲಿ ವಿದ್ಯುತ್ ವಾಹನಗಳ ಬಳಕೆ ಉತ್ತೇಜಿಸಲು “ಭಾರತದಲ್ಲಿ ವಿದ್ಯುತ್ ವಾಹನಗಳ ಉತ್ಪಾದನೆ ಮತ್ತು ತ್ವರಿತ ಅಳವಡಿಕೆ – ಎರಡನೇ ಹಂತ(ಫೇಮ್ ಇಂಡಿಯಾ ಫೇಸ್-2) ಶೀರ್ಷಿಕೆಅಡಿಯಲ್ಲಿ ಕೈಗೊಂಡಿರುವ ಯೋಜನೆ ಜಾರಿಗೆ ಅನುಮೋದನೆ ನೀಡಲಾಗಿದೆ.
ಈ ಯೋಜನೆ ಏಪ್ರಿಲ್ 1, 2019ರಿಂದ ಆರಂಭವಾಗಿ ಮೂರು ವರ್ಷಗಳ ಅವಧಿಗೆ ಒಟ್ಟು ಹತ್ತು ಸಾವಿರ ಕೋಟಿ ರೂಪಾಯಿ ತೆಗೆದಿರಿಸಲಾಗಿದೆ. ಈ ಯೋಜನೆ 2015ರ ಏಪ್ರಿಲ್ 1 ರಂದು 895 ಕೋಟಿ ವೆಚ್ಚದಲ್ಲಿ ಆರಂಭಿಸಲಾದ ಫೇಮ್ ಇಂಡಿಯಾ ಶೀರ್ಷಿಕೆಯಡಿ ಪ್ರಸ್ತುತ ಜಾರಿಯಲ್ಲಿರುವ ಯೋಜನೆಯ ವಿಸ್ತೃತ ರೂಪವಾಗಿದೆ. ಹಣಕಾಸು ಪರಿಣಾಮಗಳು:
2019-20ರಿಂದ 2021-22ರ ಮೂರು ವರ್ಷಗಳ ಅವಧಿಗೆ ಒಟ್ಟು ಯೋಜನೆಗಾಗಿ ಹತ್ತು ಸಾವಿರ ಕೋಟಿ ರೂಪಾಯಿ ನಿಧಿ ಅಗತ್ಯವಿದೆ.
ಪರಿಣಾಮಗಳು :
ಈ ಯೋಜನೆಯ ಪ್ರಮುಖ ಉದ್ದೇಶವೆಂದರೆ ವಿದ್ಯುತ್ ಮತ್ತು ಹೈಬ್ರಿಡ್ ವಾಹನಗಳ ತ್ವರಿತ ಅಳವಡಿಕೆಗೆ ಉತ್ತೇಜನ ನೀಡುವುದು ಮತ್ತು ಅದಕ್ಕಾಗಿ ವಿದ್ಯುತ್ ಚಾಲಿತ ವಾಹನಗಳ ಖರೀದಿಗೆ ವಿನಾಯಿತಿ ನೀಡುವುದು ಹಾಗೂ ಅಗತ್ಯ ರಿಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ವಿದ್ಯುತ್ ಚಾಲಿತ ವಾಹನಗಳಿಗೆ ಮೂಲಸೌಕರ್ಯ ವೃದ್ಧಿಸುವುದು, ಜೊತೆಗೆ ಈ ಯೋಜನೆ ಇಂಧನ ಸುರಕ್ಷತೆ ಮತ್ತು ಪರಿಸರ ಮಾಲಿನ್ಯ ಸಮಸ್ಯೆಗಳನ್ನು ಎದುರಿಸಲು ಸಹಾಯಕವಾಗಲಿದೆ.
ವಿವರಗಳು:
• ಸಾರ್ವಜನಿಕ ಸಾರಿಗೆಯ ವಿದ್ಯುದೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು, ಇದರಲ್ಲಿ ಹಂಚಿಕೆ ಸಾರಿಗೆಯೂ ಸೇರಿದೆ.
• ರಾಜ್ಯ/ನಗರ ಸಾರಿಗೆ ನಿಗಮಗಳು(ಎಸ್ ಟಿ ಯು)ಗಳಿಗೆ ವಿದ್ಯುತ್ ಚಾಲಿತ ಬಸ್ ಗಳನ್ನು ನೀಡುವ ಮೂಲಕ ಬೇಡಿಕೆ ಆಧಾರಿತ ಕಾರ್ಯಾಚರಣೆ ವೆಚ್ಚವನ್ನು ಭರಿಸುವ ಪದ್ಧತಿ ಪಾಲಿಸಲಾಗುವುದು.
• ಸಾರ್ವಜನಿಕ ಸಾರಿಗೆ ವಾಹನಗಳು ಅಥವಾ ವಾಣಿಜ್ಯ ಉದ್ದೇಶಕ್ಕೆ ನೋಂದಾಯಿತ ವಾಹನಗಳಿಗೆ ಅನ್ವಯವಾಗುವಂತೆ 3 ವ್ಯಾಟ್ ಮತ್ತು 4 ವ್ಯಾಟ್ ವಾಹನ ವಲಯದಲ್ಲಿ ಪ್ರೋತ್ಸಾಹ ಧನವನ್ನು ನೀಡುವುದು.
• ವಿದ್ಯುತ್ ಚಾಲಿತ 2 ವ್ಯಾಟ್ ವಾಹನಗಳ ವಲಯದಲ್ಲಿ ಖಾಸಗಿ ವಾಹನಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡುವುದು.
• ಯೋಜನೆಯ ಮೂಲಕ ಹತ್ತು ಲಕ್ಷ ವಿದ್ಯುತ್ ಚಾಲಿತ 2 ವ್ಯಾಟ್ ವಾಹನಗಳು, 5 ಲಕ್ಷ ವಿದ್ಯುತ್ ಚಾಲಿತ 3 ವ್ಯಾಟ್ ವಾಹನಗಳು ಮತ್ತು 55 ಸಾವಿರ 4 ವ್ಯಾಟ್ ವಾಹನಗಳು ಹಾಗೂ 7 ಸಾವಿರ ಬಸ್ ಗಳಿಗೆ ನೆರವು ನೀಡುವ ಉದ್ದೇಶವಿದೆ.
• ಆಧುನಿಕ ತಂತ್ರಜ್ಞಾನ ಉತ್ತೇಜಿಸುವ ಸಲುವಾಗಿ ಯಾವ ವಾಹನಗಳಿಗೆ ಲೀಥಿಯಮ್ ಅಯಾನ್ ಬ್ಯಾಟರಿ ಮತ್ತು ಇತರೆ ಹೊಸ ತಂತ್ರಜ್ಞಾನ ಆಧಾರಿತ ಬ್ಯಾಟರಿಗಳನ್ನು ಅಳವಡಿಸಿಕೊಳ್ಳುವ ವಾಹನಗಳಿಗೆ ಸಹಾಯಧನದ ಪ್ರಯೋಜನಗಳನ್ನು ಕಲ್ಪಿಸಲಾಗುವುದು.
• ಈ ಯೋಜನೆಯಡಿ ಚಾರ್ಜಿಂಗ್ ಮೂಲಸೌಕರ್ಯವನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಮೆಟ್ರೋ ನಗರಗಳಲ್ಲಿ 2700 ಚಾರ್ಜಿಂಗ್ ಘಟಕಗಳನ್ನು ಹಾಗೂ ಇತರೆ ನಗರ, ಸ್ಮಾರ್ಟ್ ಸಿಟಿ ಮತ್ತು ಗುಡ್ಡಗಾಡು ರಾಜ್ಯಗಳಲ್ಲಿ ಒಂದು ಮಿಲಿಯನ್ ಗೂ ಅಧಿಕ ಚಾರ್ಜಿಂಗ್ ಘಟಕಗಳನ್ನು ದೇಶಾದ್ಯಂತ ಸ್ಥಾಪಿಸಲಾಗುವುದು, ಆ ಮೂಲಕ ಕನಿಷ್ಠ 3 ಕಿಲೋಮೀಟರ್ ಸುತ್ತಳತೆಯಲ್ಲಿ ಒಂದಾದರೂ ಚಾರ್ಜಿಂಗ್ ಘಟಕ ಲಭ್ಯವಾಗುವಂತೆ ನೋಡಿಕೊಳ್ಳಲಾಗುವುದು.
• ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಗಳಲ್ಲೂ ಚಾರ್ಜಿಂಗ್ ಘಟಕಗಳನ್ನು ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ.
• ಹೆದ್ದಾರಿಗಳಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಸುಮಾರು 25 ಕಿಲೋಮೀಟರ್ ಅಂತರದಲ್ಲಿ ಚಾರ್ಜಿಂಗ್ ಘಟಕಗಳನ್ನು ಸ್ಥಾಪಿಸಲಾಗುವುದು.
*******
(रिलीज़ आईडी: 1567478)
आगंतुक पटल : 99