ಪ್ರಧಾನ ಮಂತ್ರಿಯವರ ಕಛೇರಿ

ಕನ್ಯಾಕುಮಾರಿಯಲ್ಲಿ ಅಭಿವೃದ್ದಿ ಯೋಜನೆಗಳಿಗೆ ಪ್ರಧಾನಮಂತ್ರಿ ಅವರಿಂದ ಚಾಲನೆ

Posted On: 01 MAR 2019 5:32PM by PIB Bengaluru

ಕನ್ಯಾಕುಮಾರಿಯಲ್ಲಿ ಅಭಿವೃದ್ದಿ ಯೋಜನೆಗಳಿಗೆ ಪ್ರಧಾನಮಂತ್ರಿ ಅವರಿಂದ ಚಾಲನೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಮಧುರೈ ಮತ್ತು ಚೆನ್ನೈ ನಡುವಣ ತೇಜಸ್ ಎಕ್ಸ್ ಪ್ರೆಸ್  ರೈಲಿಗೆ ಹಸಿರು ನಿಶಾನೆ ತೋರಿದರು. ಕನ್ಯಾಕುಮಾರಿಯಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಅವರು ರಾಮೇಶ್ವರಂ ಮತ್ತು ಧನುಷ್ಕೋಡಿ ನಡುವಿನ ರೈಲು ಸಂಪರ್ಕ ಮರುಸ್ಥಾಪನೆಗೆ ಮತ್ತು ಪಂಬನ್ ಸೇತುವೆ ಮರುಸ್ಥಾಪನೆಗೆ ಶಿಲಾನ್ಯಾಸ ಮಾಡಿದರು. ಕೆಲವು ರಸ್ತೆ ಯೋಜನೆಗಳನ್ನೂ ಪ್ರಧಾನಮಂತ್ರಿ ಅವರು ಉದ್ಘಾಟಿಸಿದರು.

 

ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು ವೀರ ವಿಂಗ್ ಕಮಾಂಡರ್ ಅಭಿನಂದನ್ ಅವರು ತಮಿಳುನಾಡಿಗೆ ಸೇರಿದವರು ಎಂಬ ಬಗ್ಗೆ ಪ್ರತೀ ಭಾರತೀಯರಿಗೂ ಹೆಮ್ಮೆ ಇದೆ ಎಂದರು.

 

ಕೆಲವು ದಿನಗಳ ಹಿಂದೆ ಗಾಂಧಿ ಶಾಂತಿ ಪ್ರಶಸ್ತಿ ಪಡೆದುದಕ್ಕಾಗಿ ವಿವೇಕಾನಂದ ಕೇಂದ್ರಕ್ಕೆ ಅವರು ಅಭಿನಂದನೆ ಸಲ್ಲಿಸಿದರು.

 

ತೇಜಸ್ ಎಕ್ಸ್ ಪ್ರೆಸ್ ರೈಲು ಅತ್ಯಂತ ಆಧುನಿಕ ರೈಲುಗಳಲ್ಲಿ ಒಂದು ಮತ್ತು  “ಮೇಕ್ ಇನ್ ಇಂಡಿಯಾ” ಕ್ಕೆ ಇಂದು ದೊಡ್ಡ ಉದಾಹರಣೆ ಎಂದವರು ಹೇಳಿದರು.

 

ರಾಮೇಶ್ವರಂ –ಧನುಷ್ಕೋಡಿ ರೈಲು ಮಾರ್ಗ 1964ರ ಪ್ರಾಕೃತಿಕ ವಿಕೋಪದಲ್ಲಿ ಹಾನಿಗೀಡಾಯಿತು. ಆದರೆ ಕಳೆದ ಐವತ್ತು ವರ್ಷಗಳಲ್ಲಿ ಈ ಮಾರ್ಗದ ಬಗ್ಗೆ ಗಮನ ಕೊಡಲಿಲ್ಲ. ಈಗ ತಡವಾಗಿಯಾದರೂ ಅದನ್ನು ಕೈಗೆತ್ತಿಕೊಳ್ಳಲಾಯಿತು ಎಂದರು.

 

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಅಂಗವಾಗಿ 1.1 ಕೋಟಿ ರೈತರಿಗೆ ಈಗಾಗಲೇ ಅವರ ಮೊದಲ ಕಂತಿನ ಹಣ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಆಗಿದೆ. ಫೆಬ್ರವರಿ 1 ರಂದು ಘೋಷಿಸಿದ ಯೋಜನೆ ಅದೇ ತಿಂಗಳು ಅನುಷ್ಟಾನಕ್ಕೆ ಬಂದಿದೆ ಎಂದವರು ಹೇಳಿದರು. 24 ದಿನಗಳೊಳಗೆ ಯೋಜನೆ ಕಾರ್ಯರೂಪಕ್ಕೆ ತರುವುದಕ್ಕಾಗಿ ನಾವು ನಿರಂತರ 24 ಗಂಟೆಯೂ ದುಡಿದೆವು ಎಂದವರು ಹೇಳಿದರು. ಹತ್ತು ವರ್ಷಗಳಲ್ಲಿ ಸುಮಾರು 7.5 ಲಕ್ಷ ಕೋ.ರೂ.ಗಳನ್ನು ಕಠಿಣ ದುಡಿಮೆ ಮಾಡುವ ರೈತರು ಪಡೆಯಬಹುದಾಗಿದೆ ಎಂದರು.

 

ಜನತೆ ಪ್ರಾಮಾಣಿಕತೆ, ಅಭಿವೃದ್ದಿ, ಪ್ರಗತಿ, ಅವಕಾಶಗಳು ಮತ್ತು ಭದ್ರತೆಯನ್ನು ಸರಕಾರದಿಂದ ಅಪೇಕ್ಷಿಸುತ್ತಾರೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

 

ರಕ್ಷಣೆ ಮತ್ತು ಭದ್ರತೆಯ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿ ಅವರು,  ಭಾರತವು ಹಲವು ವರ್ಷಗಳಿಂದ ಭಯೋತ್ಪಾದನೆಯ ಹಾವಳಿಯನ್ನು ಎದುರಿಸುತ್ತಿದೆ ಎಂದರು. ಈಗ ಕಾಣುತ್ತಿರುವ ವ್ಯತ್ಯಾಸವೆಂದರೆ ಭಾರತವು ಭಯೋತ್ಪಾದನೆಯ ಹಿನ್ನೆಲೆಯಲ್ಲಿ ಅಸಹಾಯಕವಾಗಿಲ್ಲ ಎಂಬ ಅಂಶ ಎಂದ ಪ್ರಧಾನಮಂತ್ರಿ ಅವರು ಭಯೋತ್ಪಾದಕರು ಮಾಡಿದ ಹಾನಿಗೆ ಅದರ ಬಡ್ಡಿ ಸೇರಿಸಿ ಹಿಂದೆ ಕೊಡುವ ನವಭಾರತ ಈಗಿನದ್ದು ಎಂದೂ ನುಡಿದರು. ರಕ್ಷಣೆ ಮತ್ತು ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ನಾವು ಭಾರತೀಯರು ಮೊದಲಿಗರು ಮತ್ತು ಭಾರತೀಯರಿಗೆ ಮಾತ್ರ ಎಂದೂ ಪ್ರಧಾನಮಂತ್ರಿ ಅಭಿಪ್ರಾಯಪಟ್ಟರು.

 

ಕೇಂದ್ರ ಸರಕಾರವು ಭ್ರಷ್ಟಾಚಾರದ ವಿರುದ್ದ ಕೈಗೊಂಡ ಕ್ರಮಗಳನ್ನು ಪ್ರಧಾನಮಂತ್ರಿ ಅವರು ಎಳೆ ಎಳೆಯಾಗಿ ವಿವರಿಸಿದರು.



(Release ID: 1567467) Visitor Counter : 91