ಪ್ರಧಾನ ಮಂತ್ರಿಯವರ ಕಛೇರಿ

ಮಾರ್ಚ್ 4 ಮತ್ತು 5 ರಂದು ಗುಜರಾತ್ ಗೆ ಭೇಟಿ ನೀಡಲಿರುವ ಪ್ರಧಾನ ಮಂತ್ರಿಗಳು

Posted On: 03 MAR 2019 8:15PM by PIB Bengaluru

ಮಾರ್ಚ್ 4 ಮತ್ತು 5 ರಂದು ಗುಜರಾತ್ ಗೆ ಭೇಟಿ ನೀಡಲಿರುವ ಪ್ರಧಾನ ಮಂತ್ರಿಗಳು

ಜಾಮ್ ನಗರದಲ್ಲಿ ನಾಳೆ ಪ್ರಧಾನಮಂತ್ರಿಗಳಿಂದ ಸೌನಿ ಯೋಜನೆಗಳ ಉದ್ಘಾಟನೆ, ನಾಳೆ1 ನೇ ಹಂತದ ಅಹ್ಮದಾಬಾದ್  ಮೆಟ್ರೋ ರೈಲು ಯೋಜನೆಗೆ ಚಾಲನೆ ನೀಡಲಿರುವ ಪ್ರಧಾನ ಮಂತ್ರಿಗಳು

ಮಾರ್ಚ್ 5 ರಂದು ವಸ್ತ್ರಾಲ್ ನಲ್ಲಿ ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್ ಶಾನ್ ಯೋಜನೆ ಉದ್ಘಾಟಿಸಲಿದ್ದಾರೆ

2019 ರ ಮಾರ್ಚ್ 4 ಮತ್ತು 5 ರಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಗುಜರಾತ್ ಗೆ ಭೇಟಿ ನೀಡಲಿದ್ದಾರೆ. ಅವರು ಜಾಮ್ ನಗರ್, ಜಾಸ್ಪುರ್ ಮತ್ತು ಅಹ್ಮದಾಬಾದ್ ಗೆ ತೆರಳಲಿದ್ದಾರೆ. ಹಾಗೆಯೇ ಮಾರ್ಚ್ 5 ರಂದು ಅದಲಾಜ್ ಮತ್ತು ವಸ್ತ್ರಾಲ್ ಗೆ ಭೇಟಿ ನೀಡಲಿದ್ದಾರೆ.  

ಮಾರ್ಚ್ 4 ರಂದು ಜಾಮ್ ನಗರದಲ್ಲಿ ಪ್ರಧಾನ ಮಂತ್ರಿಗಳು ವೈದ್ಯಕೀಯ ಕಾಲೇಜು ಕ್ಯಾಂಪಸ್ ಗೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ. ಅವು – 

ಗುರು ಗೋವಿಂದ್ ಸಿಂಗ್ ಆಸ್ಪತ್ರೆಯ ವಿಸ್ತ್ರತ ಭಾಗವನ್ನು ಲೋಕಾರ್ಪಣೆ ಮಾಡುವುದು: 

ಗುರು ಗೋವಿಂದ್ ಸಿಂಗ್ ಆಸ್ಪತ್ರೆಯ 750 ಹಾಸಿಗೆಗಳ ಹೆಚ್ಚುವರಿ ವಿಸ್ತರಣೆಯನ್ನು ಪ್ರಧಾನ ಮಂತ್ರಿಗಳು ದೇಶಕ್ಕೆ ಸಮರ್ಪಿಸಲಿದ್ದಾರೆ.  

ಹೊಸದಾಗಿ ನಿರ್ಮಿಸಲಾದ ಆಸ್ಪತ್ರೆಯ ಸ್ನಾತಕೋತ್ತರ ವಸತಿ ಗೃಹವನ್ನು ಕೂಡಾ ಉದ್ಘಾಟನೆ ಮಾಡಲಿದ್ದಾರೆ. 

ಪ್ರಧಾನ ಮಂತ್ರಿಗಳು ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದದೊಂದಿಗೆ ಮಾತುಕತೆಯಾಡಲಿದ್ದಾರೆ. 

ಸೌನಿ ಯೋಜನೆಗಳಿಗೆ ಚಾಲನೆ 

ನಿಗದಿತ ಸ್ಥಳದಲ್ಲಿ  ಗುಂಡಿಯನ್ನು ಒತ್ತುವ ಮೂಲಕ ಪ್ರಧಾನ ಮಂತ್ರಿಗಳು ಸೌನಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. 

ಉಂಡ್ – 1 ನಿಂದ ರಂಜಿತ್ ಸಾಗರ್ ಏತ ನೀರಾವರಿ ಯೋಜನೆ ಮತ್ತು ಮಚ್ಚು 1 ರಿಂದ ನ್ಯಾರಿ ಏತ ನೀರಾವರಿ ಯೋಜನೆಗಳನ್ನು ಸೌನಿ ಯೋಜನೆಗಳು ಒಳಗೊಂಡಿವೆ. ಜೊಡಿಯಾ ಉಪ್ಪಿನಾಂಶ ತೆಗೆಯುವ ಘಟಕ ಮತ್ತು ಉಂಡ್ – 3 ಯಿಂದ ವೆನು -2 ಏತ ನೀರಾವರಿ ಯೋಜನೆಗೆ ಅಡಿಗಲ್ಲು ಸಮಾರಂಭ ನೆರವೇರಿಸಲಿದ್ದಾರೆ  

ಬಾಂದ್ರಾ – ಜಾಮ್ ನಗರ್ ಹಮ್ ಸಫರ್ ಎಕ್ಸ್ ಪ್ರೆಸ್ ಗೆ ಹಸಿರು ನಿಶಾನೆ 

ವಿಡಿಯೋ ಲಿಂಕ್ ಮೂಲಕ ಬಾಂದ್ರಾ – ಜಾಮ್ ನಗರ್ ಹಮ್ ಸಫರ್ ಎಕ್ಸ್ ಪ್ರೆಸ್ ಗೆ ಪ್ರಧಾನ ಮಂತ್ರಿಗಳು ಹಸಿರು ನಿಶಾನೆ ತೋರಲಿದ್ದಾರೆ. 

ಇತರ ಯೋಜನೆಗಳು  

ಫಲಕ ಅನಾವರಣಗೊಳಿಸುವ ಮೂಲಕ ಆಜಿ – 3 ರಿಂದ ಖಿಜಾಡಿಯಾವರೆಗಿನ 51 ಕೀ ಮೀ ಪೈಪ್ ಲೈನ್ ನ್ನು ಪ್ರಧಾನ ಮಂತ್ರಿಗಳು ಲೋಕಾರ್ಪಣೆಗೊಳಿಸಲಿದ್ದಾರೆ. ರಾಜ್ ಕೋಟ್ – ಕಾನಾಲುಸ್ ರೈಲು ಹಳಿ ಡಬ್ಲಿಂಗ್ ಯೋಜನೆಗೂ ಅವರು ಅಡಿಗಲ್ಲು ನೆಡಲಿದ್ದಾರೆ. 

ಜಾಮ್ ನಗರ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿದ 1008 ಫ್ಲ್ಯಾಟ್ ಗಳ ಮತ್ತು ಜಾಮ್ ನಗರ್ ಪುರಸಭೆ ನಿರ್ಮಿಸಿದ 448 ಮನೆಗಳ ಬೀಗದ ಕೈಯನ್ನು ಫಲಾನುಭವಿಗಳಿಗೆ ವಿತರಿಸಲಿದ್ದಾರೆ. ಸಮಾರಂಭದಲ್ಲಿ ಪ್ರಧಾನ ಮಂತ್ರಿಗಳು ನೆರೆದ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.   

ಜಾಸ್ಪುರ್ ದಲ್ಲಿ 

ಗುಜರಾತ್ ನ ಜಾಸ್ಪುರ್ ಗೆ ಭೇಟಿ ನೀಡಲಿರುವ ಪ್ರಧಾನ ಮಂತ್ರಿಗಳು ವಿಶ್ವ ಉಮಿಯಾಧಮ್  ಸಂಕೀರ್ಣದ ಅಡಿಗಲ್ಲು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. 

ಸಮಾರಂಭದಲ್ಲಿ ಪ್ರಧಾನ ಮಂತ್ರಿಗಳು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ವಸ್ತ್ರಾಲ್ ಗಾಮ್ ಮೆಟ್ರೋ ನಿಲ್ದಾಣ, ಅಹ್ಮದಾಬಾದ್

ಅಹ್ಮದಾಬಾದ್ ನ ಮೊದಲ ಹಂತದ ಮೆಟ್ರೋ ವನ್ನು ಪ್ರಧಾನ ಮಂತ್ರಿಗಳು ವಸ್ತ್ರಾಲ್ ಗಾಮ್ ಮೆಟ್ರೋ ನಿಲ್ದಾಣದಿಂದ ಉದ್ಘಾಟನೆಗೈಯ್ಯಲಿದ್ದಾರೆ. 2 ನೇ ಹಂತದ ಮೆಟ್ರೋ ಗೆ ಅಡಿಗಲ್ಲು ನೆಡಲಿದ್ದಾರೆ. 

ಅಹ್ಮದಾಬಾದ್ ಮೆಟ್ರೋ ಕಾಮನ್ ಮೊಬಿಲಿಟಿ ಕಾರ್ಡ್ ನ್ನು ಬಿಡುಗಡೆ ಮಾಡಲಿರುವ ಪ್ರಧಾನ ಮಂತ್ರಿಗಳು 

ವಸ್ತ್ರಾಲ್ ಗಾಂವ್ ಸ್ಟೇಶನ್ ನಿಂದ ಮೆಟ್ರೋ ರೈಲಿಗೆ ಹಸಿರು ನಿಶಾನೆ ತೋರಲಿರುವ ಪ್ರಧಾನ ಮಂತ್ರಿಗಳು ಮೆಟ್ರೋದಲ್ಲಿ ಸವಾರಿಗೈಯ್ಯಲಿದ್ದಾರೆ.   

ಫೆಬ್ರವರಿ 2019 ರಲ್ಲಿ ಅಹ್ಮದಾಬಾದ್ ಮೆಟ್ರೋ ರೈಲು ಯೋಜನೆಯ 2 ನೇ ಹಂತಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. 2 ನೇ ಹಂತ ಒಟ್ಟು 28.254 ಕಿ ಮೀಟರ್ ಉದ್ದದ 2 ಕಾರಿಡಾರ್ ಗಳನ್ನು ಒಳಗೊಂಡಿದೆ. ಇದು ಪ್ರವಾಸಿಗಳಿಗೆ ಅದರಲ್ಲೂ ಅಹ್ಮದಾಬಾದ್ ಮತ್ತು ಗಾಂಧೀನಗರದವರಿಗೆ ಸುಖಕರ ಮತ್ತು ಭರವಸೆಯ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕಲ್ಪಿಸಲಿದೆ. 

ಅಹ್ಮದಾಬಾದ್ ಮೊದಲ ಹಂತದ ಮೆಟ್ರೋ ರೈಲು ಯೋಜನೆ ಒಟ್ಟು 40.03 ಕೀ ಮೀಟರ್ ವ್ಯಾಪ್ತಿಯನ್ನು ಹೊಂದಿದ್ದು 6.5 ಕಿ ಮೀ ಸುರಂಗ ಮಾರ್ಗವಿದ್ದು ಮಿಕ್ಕಿದ್ದು ಎತ್ತರದಲ್ಲಿ ಸಿರ್ಮಿಸಲಾಗಿದೆ. 

ಈ ಮೆಟ್ರೋ ಯೋಜನೆಗಳು ಸಂಪರ್ಕ ವೃದ್ಧಿಸುವುದು ಮಾತ್ರವಲ್ಲದೇ ಪ್ರಯಾಣದ ಸಮಯ ತಗ್ಗಿಸುತ್ತವೆ ಮತ್ತು  ಪಟ್ಟಣ ಪ್ರದೇಶಗಳಲ್ಲಿ ಕ್ರಮೇಣ ಜೀವನ ಸರಳಗೊಳಿಸಲಿದೆ. 

ಬಿ ಜೆ ಮೆಡಿಕಲ್ ಕಾಲೇಜು, ಅಹ್ಮದಾಬಾದ್ 

ಬಿ ಜೆ ಮೆಡಿಕಲ್ ಕಾಲೇಜು ಮೈದಾನದಲ್ಲಿ, ಪ್ರಧಾನ ಮಂತ್ರಿಗಳು ಆರೋಗ್ಯ ಮತ್ತು ರೈಲ್ವೇಗೆ ಸಂಬಂಧಿಸಿದ ಹಲವಾರು ಯೋಜನೆಗಳನ್ನು ಚಾಲನೆ ನೀಡಲಿದ್ದಾರೆ  

ಆರೋಗ್ಯ

ಅಹ್ಮದಾಬಾದ್ ಪ್ರದೇಶದಲ್ಲಿ ನಿರ್ಮಿಸಲಾದ ವಿವಿಧ ಆಸ್ಪತ್ರೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಅವು ಮಹಿಳೆಯರ ಮತ್ತು ಮಕ್ಕಳ ಹಾಗೂ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ, ಕ್ಯಾನ್ಸರ್ ಆಸ್ಪತ್ರೆ, ಕಣ್ಣಿನ ಆಸ್ಪತ್ರೆ, ಹಲ್ಲಿನ ಆಸ್ಪತ್ರೆ.   

ಈ ಆಸ್ಪತ್ರೆಗಳು ಅಹ್ಮದಾಬಾದ್ ಭಾಗದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಬಹುದೊಡ್ಡ ಕೊಡುಗೆಯನ್ನು ನೀಡಲಿವೆ. ಈ ಆಸ್ಪತ್ರೆಗಳಿಂದ ಅಹ್ಮದಾಬಾದ್ ಮತ್ತು ಸುತ್ತಮುತ್ತಲ ಪ್ರದೇಶದ ಜನರಿಗೆ ಉತ್ತಮ ಆರೋಗ್ಯವನ್ನು ಖಚಿತಪಡಿಸಲಿದೆ. 

ಪ್ರಧಾನ ಮಂತ್ರಿಗಳು ಪಿ ಎಂ-ಜೆ ಎ ವಾಯ್- ಆಯುಷ್ಮಾನ್ ಭಾರತ ಯೋಜನೆಯ ಆಯ್ದ ಫಲಾನುಭವಿಗಳಿಗೆ ಗೋಲ್ಡನ್ ಕಾರ್ಡ್ ನ್ನು ವಿತರಿಸಲಿದ್ದಾರೆ.     

ರೈಲುಗಳು

ಪ್ರಧಾನ ಮಂತ್ರಿಗಳು ಪಟನ್ – ಬಿಂಡಿ ರೈಲು ಹಳಿಯನ್ನು ಉದ್ಘಾಟನೆ ಮಾಡಲಿದ್ದಾರೆ. ಅಲ್ಲದೆ ರೈಲ್ವೇ ವ್ಯಾಗನ್ ಗಳನ್ನು ಆಧುನೀಕರಣಗೊಳಿಸುವ ಹಾಗೂ ಅವುಗಳ ಪಿ ಒ ಹೆಚ್ ಸಾಮರ್ಥ್ಯವನ್ನು ತಿಂಗಳಿಗೆ 150 ವ್ಯಾಗನ್ ಗಳಿಗೇರಿಸುವ ದಾಹೊದ್ ರೈಲ್ವೇ ಕಾರ್ಯಾಗಾರವನ್ನು ಕೂಡಾ ಅವರು ಲೋಕಾರ್ಪಣೆಗೈಯ್ಯಲಿದ್ದಾರೆ. ಆನಂದ್ – ಗೋಧ್ರಾ ರೈಲ್ವೇ ಲೈನ್ ಡಬ್ಲಿಂಗ್ ಯೋಜನೆಗೆ ಕೂಡಾ ಪ್ರಧಾನಿಗಳು ಅಡಿಗಲ್ಲು ಸಮಾರಂಭ ನೆರವೇರಿಸಲಿದ್ದಾರೆ.   

ಹೊಸ ಸಾರ್ವಜನಿಕ ಆಸ್ಪತ್ರೆಗೂ ಪ್ರಧಾನಿಗಳು ಭೇಟಿ ನೀಡಲಿದ್ದಾರೆ ಮತ್ತು 1200 ಹಾಸಿಗೆಗಳ ಹೊಸ ಸಾರ್ವಜನಿಕ ಆಸ್ಪತ್ರೆ ಉದ್ಘಾಟನೆಯನ್ನು ರಿಬ್ಬನ್ ಕತ್ತರಿಸುವ ಮೂಲಕ ನೆರವೇರಿಸಲಿದ್ದಾರೆ. ಜೊತೆಗೆ ಅಹ್ಮದಾಬಾದ್ ನಲ್ಲಿಯ ಹೊಸ ಕ್ಯಾನ್ಸರ್ ಆಸ್ಪತ್ರೆ ಮತ್ತು ಕಣ್ಣಿನ ಆಸ್ಪತ್ರೆಗೂ ಅವರು ಭೇಟಿ ನೀಡಲಿದ್ದಾರೆ.   

5 ಮಾರ್ಚ್ 2019

ಅಡಲಜ್, ಗಾಂಧೀನಗರ

 5 ಮಾರ್ಚ್ ರಂದು  ಗಾಂಧೀನಗರದ ಅಡಲಜ್ ನಲ್ಲಿ ಪ್ರಧಾನ ಮಂತ್ರಿಗಳು ಅನ್ನಪೂರ್ಣ ಧಾಮ್ ಸಂಸ್ಥೆಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು ಶಿಕ್ಷಣ ಭವನ ಮತ್ತು ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಲಿದ್ದಾರೆ.    

ನೆರೆದ ಜನತೆಯನ್ನುದ್ದೇಶಿಸಿ ಪ್ರಧಾನ ಮಂತ್ರಿಗಳು ಭಾಷಣ ಮಾಡಲಿದ್ದಾರೆ. 

ಪ್ರಧಾನ ಮಂತ್ರಿ ಶ್ರಮ್ ಯೋಗಿ ಮನ್ ಧನ್ ಯೋಜನೆ (PM-SYM) ಪ್ರಾರಂಭ 

ವಸ್ತ್ರಾಲ್ ನಲ್ಲಿ ಪ್ರಧಾನ ಮಂತ್ರಿಗಳು ಅಸಂಘಟಿತ ವಲಯದ ಕೆಲಸಗಾರರಿಗೆ ಪಿಂಚಣಿ ಯೋಜನೆ ಪ್ರಧಾನ ಮಂತ್ರಿ ಶ್ರಮ್ ಯೋಗಿ ಮನ್ ಧನ್ ಯೋಜನೆಯನ್ನು ಫಲಾನುಭಿಗಳಿಗೆ ಆನ್ ಲೈನ್ ಮೂಲಕ ಹಣ ವರ್ಗಾವಣೆ ಮಾಡುವ ಮೂಲಕ ಆರಂಭಿಸಲಿದ್ದಾರೆ. 

ಆಯ್ದ ಫಲಾನುಭವಿಗಳಿಗೆ PM-SYM ಪಿಂಚಣಿ ಕಾರ್ಡ್ ಗಳನ್ನು ಅವರು ವಿತರಿಸಲಿದ್ದಾರೆ. 

PM-SYM ಕುರಿತು

2019 – 20 ರ ಮಧ್ಯಂತರ ಬಜೆಟ್ ನಲ್ಲಿ ಭಾರತ ಸರ್ಕಾರ ಪ್ರಧಾನ ಮಂತ್ರಿ ಶ್ರಮ್ ಯೋಗಿ ಮನ್ ಧನ್ ಯೋಜನೆ (PM-SYM) ಎಂಬ ಬಹು ದೊಡ್ಡ ಪಿಂಚಣಿ  ಯೋಜನೆ ಪರಿಚಯಿಸಿತು. ಇದು ಮಾಸಿಕ ರೂ 15,000/- ಕ್ಕಿಂತ ಕಡಿಮೆ ಆದಾಯ ಹೊಂದಿದ ಅಸಂಘಟಿತ ವಲಯದ ಕೆಲಸಗಾರರಿಗೆ ವೃದ್ಧಾಪ್ಯ ರಕ್ಷಣೆಯನ್ನು ಖಾತರಿಪಡಿಸಲಿದೆ.  

ಇದು ಒಂದು ಸ್ವಯಂಪ್ರೇರಿತ ಮತ್ತು ಸಹಾಯಕ ಪಿಂಚಣಿ ಯೋಜನೆಯಾಗಿದೆ. PMSYM ಅಡಿ ನೊಂದಾವಣೆ ಮಾಡಿಕೊಂಡ ಪ್ರತಿಯೊಬ್ಬರೂ ತಮ್ಮ 60 ವರ್ಷ ತಲುಪಿದಂದಿನಿಂದ ತಿಂಗಳಿಗೆ ಕನಿಷ್ಟ ರೂ. 3000 ಪಿಂಚಣಿ ಪಡೆಯಲಿದ್ದಾರೆ. ಫಲಾನುಭವಿಗಳ ವಯಸ್ಸಿನ ತಕ್ಕಂತೆ ಕೇಂದ್ರ ಸರ್ಕಾರ ಹೊಂದಾಣಿಕೆಯಾಗುವ ಕೊಡುಗೆ ನೀಡಲಿದೆ.  

ಮುಂದಿನ 5 ವರ್ಷಗಳಲ್ಲಿ ಅಸಂಘಟಿತ ವಲಯದ ಕನಿಷ್ಟ 10 ಕೋಟಿ ಕೆಲಸಗಾರರು ಪ್ರಧಾನ ಮಂತ್ರಿ ಶ್ರಮ್ ಯೋಗಿ ಮನ್ ಧನ್ ಯೋಜನೆಯ ಲಾಭವನ್ನು ಪಡೆಯಲಿದ್ದಾರೆ ಎಂದು ಅಂದಾಜಿಸಲಾಗಿದೆ. 

ಭಾರತದ ಜಿ ಡಿ ಪಿ ಯ ಸುಮಾರು ಅರ್ಧದಷ್ಟು ಅಸಂಘಟಿತ ವಲಯದಡಿ ಬರುವ ಬೀದಿ ವ್ಯಾಪಾರಿಗಳು, ರಿಕ್ಷಾ ಚಾಲಕರು, ಕಟ್ಟಡ ಕೆಲಸಗಾರರು, ಚಿಂದಿ ಆಯುವವರು, ಕೃಷಿ ಕೆಲಸಗಾರರು, ಬೀಡಿ ಕೆಲಸಗಾರರು, ಕೈಮಗ್ಗದವರು, ಚರ್ಮ ಮತ್ತು ಇನ್ನೂ ಹಲವು ಇತರ ಇಂಥ ಉದ್ಯೋಗದಲ್ಲಿ ತೊಡಗಿರುವ 40 ಕೋಟಿಗಿಂತ ಹೆಚ್ಚು ಕೆಲಸಗಾರರಿಂದ ಬರುತ್ತದೆ.

ಆಯುಷ್ಮಾನ್ ಭಾರತ ದಡಿ ಆರೋಗ್ಯ ರಕ್ಷಣೆ ಜೊತೆಗೆ ಮತ್ತು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಅಡಿ ಜೀವನ ಮತ್ತು ಅಂಗ ವೈಕಲ್ಯ ಪರಿಹಾರ ನೀಡುವುದು ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯೊಂದಿಗೆ PM-SYM ಅಸಂಘಟಿತ ವಲಯದ ಕೆಲಸಗಾರರಿಗೆ ಅವರ ವೃದ್ಧಾಪ್ಯದಲ್ಲಿ ಸಮಗ್ರ ಸಾಮಾಜಿಕ ರಕ್ಷಣೆ ದೊರೆಯುವುದನ್ನು ಖಚಿತಪಡಿಸುತ್ತದೆ.   

****



(Release ID: 1567451) Visitor Counter : 57