ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ನಾಳೆ ಜಾರ್ಖಂಡ್ ಗೆ ಭೇಟಿ 

Posted On: 16 FEB 2019 7:23PM by PIB Bengaluru

ಪ್ರಧಾನಮಂತ್ರಿ ನಾಳೆ ಜಾರ್ಖಂಡ್ ಗೆ ಭೇಟಿ 

 

ಹಜರಿಬಾಗ್, ದುಮ್ಕಾ ಮತ್ತು ಪಲಾಮು ವೈದ್ಯಕೀಯ ಕಾಲೇಜುಗಳ ಉದ್ಘಾಟನೆ; ಆಚಾರ್ಯ ವಿನೋಬಾ ಭಾವೆ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನಗಳ ಕೇಂದ್ರಕ್ಕೆ ಶಂಕುಸ್ಥಾಪನೆ; ಹಜರಿಬಾಗ್ನಲ್ಲಿ ಹಲವು ಅಭಿವೃದ್ಧಿ ಯೋಜನೆಗಳ ಅನಾವರಣ; ಪ್ರಧಾನಮಂತ್ರಿ ಆರೋಗ್ಯ ಯೋಜನೆ – ಆಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ

 

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಫೆಬ್ರವರಿ 17ರಂದು ನಾಳೆ ಜಾರ್ಖಂಡ್ ನ ರಾಂಚಿ ಮತ್ತು ಹಜರಿಬಾಗ್ ಗೆ ಭೇಟಿ ನೀಡಲಿದ್ದಾರೆ. ಅವರು ಆರೋಗ್ಯ, ಶಿಕ್ಷಣ ನೀರು ಪೂರೈಕೆ ಮತ್ತು ನೈರ್ಮಲೀಕರಣ ಸೇರಿದಂತೆ ಹಲವು ವಲಯಗಳ ಯೋಜನೆಗಳನ್ನು ಉದ್ಘಾಟಿಸುವರು. ಹಲವು ಯೋಜನೆಗಳಿಂದ ಜಾರ್ಖಂಡ್ ನ ಬುಡಕಟ್ಟು ಜನಾಂಗಕ್ಕೆ ಅನುಕೂಲವಾಗುವ ಸಾಧ್ಯತೆ ಇದೆ. ಹಜರಿಬಾಗ್ ನಲ್ಲಿ ಪ್ರಧಾನಮಂತ್ರಿ ಅವರು ಈ ಕೆಳಗಿನ ಯೋಜನೆಗಳನ್ನು ಉದ್ಘಾಟಿಸುವರು.

        ಪ್ರಧಾನಮಂತ್ರಿ ಅವರು ಹಜರಿಬಾಗ್, ದುಮ್ಕಾ ಮತ್ತು ಪಲಮು ಮೂರು ವೈದ್ಯಕೀಯ ಕಾಲೇಜುಗಳ ಕಟ್ಟಡಗಳನ್ನು ಉದ್ಘಾಟಿಸುವರು. ಅಲ್ಲದೆ ಹಜರಿಬಾಗ್, ದುಮ್ಕಾ, ಪಲಮು ಮತ್ತು ಜೆಮ್ ಶೆಡ್ ಪುರ ಈ ನಾಲ್ಕು ಆಸ್ಪತ್ರೆಗಳಲ್ಲಿ ತಲಾ  500 ಹಾಸಿಗೆಗಳ ಆಸ್ಪತ್ರೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವರು.

ಪ್ರಧಾನಮಂತ್ರಿ ಅವರು ಹಜರಿಬಾಗ್ ಮತ್ತು ರಾಮ್ ಗಡ್ ಜಿಲ್ಲೆಗಳ ನಾಲ್ಕು ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳನ್ನು ಉದ್ಘಾಟಿಸುವರು. ಜೊತೆಗೆ ಅವರು ಈ ಎರಡು ಜಿಲ್ಲೆಗಳಲ್ಲಿ ಆರು ಗ್ರಾಮೀಣ ಕುಡಿಯುವ ನೀರಿನ ಪೂರೈಕೆ ಯೋಜನೆಗಳು ಮತ್ತು ಹಜರಿಬಾಗ್ನ ನಗರ ನೀರು ಪೂರೈಕೆ ಯೋಜನೆ ಉದ್ಘಾಟಿಸುವರು.

        ಪ್ರಧಾನಮಂತ್ರಿ ಅವರು, ನಮಾಮಿ ಗಂಗಾ ಯೋಜನೆಯಡಿ ಕೈಗೊಂಡಿರುವ ಮಧುಸೂದನ್ ಘಾಟ್, ಸಾಹಿಬ್ ಗಂಜ್ ಕೊಳಚೆ ನೀರು ಶುದ್ಧೀಕರಣ ಘಟಕಗಳನ್ನು ಉದ್ಘಾಟಿಸುವರು. ರಾಮ್ ಗಢ್ನಲ್ಲಿ ಪ್ರಧಾನಮಂತ್ರಿ ಅವರು, ಮಹಿಳಾ ಇಂಜಿನಿಯರಿಂಗ್ ಕಾಲೇಜು ಕಟ್ಟಡವನ್ನೂ ಸಹ ಉದ್ಘಾಟಿಸಲಿದ್ದಾರೆ.

        ಅಲ್ಲದೆ, ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳು ವಾಸಿಸುವ ಪ್ರದೇಶಗಳಿಗೆ ಕುಡಿಯುವ ನೀರಿನ ಯೋಜನೆಗೆ ಪ್ರಧಾನಮಂತ್ರಿ ಶಂಕುಸ್ಥಾಪನೆ ನೆರವೇರಿಸುವರು.

        ಪ್ರಧಾನಮಂತ್ರಿ ಅವರು, ಹಜರಿಬಾಗ್ ನ ಆಚಾರ್ಯ ವಿನೋಬಾ ಭಾವೆ ವಿಶ್ವವಿದ್ಯಾಲಯದಲ್ಲಿ ಬುಡಕಟ್ಟು ಅಧ್ಯಯನಗಳ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸುವರು. ಇ-ನ್ಯಾಮ್ ಅಡಿಯಲ್ಲಿ ಮೊಬೈಲ್ ಫೋನ್ ಗಳ ಖರೀದಿಗೆ ರೈತರಿಗೆ ನೇರ ನಗದು ವರ್ಗಾವಣೆ ಯೋಜನೆ ಉದ್ಘಾಟಿಸಲು ಆಯ್ದ ಫಲಾನುಭವಿಗಳಿಗೆ ಪ್ರಧಾನಮಂತ್ರಿ ಅವರು ಚೆಕ್ ಗಳನ್ನು ವಿತರಿಸಲಿದ್ದಾರೆ.

        ಪ್ರಧಾನಮಂತ್ರಿ ಅವರು, ಪೌಷ್ಟಿಕಾಂಶ ಕೊರತೆ ಸುಧಾರಣೆಗೆ ಸರ್ಕಾರಿ ಶಾಲೆಗಳ ಮಕ್ಕಳಿಗೆ ಹಾಲಿನ ಕೊಡುಗೆ ಯೋಜನೆ ಆರಂಭಕ್ಕೆ ಆಯ್ದ ಶಾಲಾ ಮಕ್ಕಳಿಗೆ ಹಾಲು ವಿತರಿಸಲಿದ್ದಾರೆ.

        ರಾಂಚಿಯಲ್ಲಿ ಪ್ರಧಾನಮಂತ್ರಿ ಅವರು, ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ – ಆಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿಗಳ ಜೊತೆ ಸಂವಾದ ನಡೆಸಲಿದ್ದಾರೆ.

****************


(Release ID: 1564962) Visitor Counter : 88