ಪ್ರಧಾನ ಮಂತ್ರಿಯವರ ಕಛೇರಿ

ಸಂಸತ್ತಿನಲ್ಲಿ ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರ ಅನಾವರಣ ವೇಳೆ  ಪ್ರಧಾನಮಂತ್ರಿ   ಅವರಿಂದ ಭಾವಪೂರ್ಣ ಶ್ರದ್ಧಾಂಜಲಿ: ಸದಾ ಜನರ ಪರ ಧನಿ ಎತ್ತುತ್ತಿದ್ದ ಅಟಲ್ ಜೀ ಶ್ರೇಷ್ಠ ಸಂವಹನಕಾರರೆಂದು ಬಣ್ಣನೆ

Posted On: 12 FEB 2019 12:45PM by PIB Bengaluru

ಸಂಸತ್ತಿನಲ್ಲಿ ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರ ಅನಾವರಣ ವೇಳೆ  ಪ್ರಧಾನಮಂತ್ರಿ   ಅವರಿಂದ ಭಾವಪೂರ್ಣ ಶ್ರದ್ಧಾಂಜಲಿ: ಸದಾ ಜನರ ಪರ ಧನಿ ಎತ್ತುತ್ತಿದ್ದ ಅಟಲ್ ಜೀ ಶ್ರೇಷ್ಠ ಸಂವಹನಕಾರರೆಂದು ಬಣ್ಣನೆ

 

ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದು ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರವನ್ನು ಅನಾವರಣಗೊಳಿಸಿದರು.

 

ಈ ಸಂದರ್ಭದಲ್ಲಿ ಉಪರಾಷ್ಟ್ರಪತಿ ಶ್ರೀ ಎಂ.ವೆಂಕಯ್ಯನಾಯ್ಡು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಲೋಕಸಭಾ ಸ್ಪೀಕರ್, ಶ್ರೀಮತಿ ಸುಮಿತ್ರಾ ಮಹಾಜನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

 

ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿದ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ವಾಜಪೇಯಿ ಅವರು ಸದಾ ಸಂಸತ್ತಿನ ಸೆಂಟ್ರಲ್ ಹಾಲ್ ನಿಂದ ಎಲ್ಲರಿಗೂ ಸ್ಪೂರ್ತಿ ನೀಡಲಿದ್ದಾರೆ ಮತ್ತು ಆಶೀರ್ವದಿಸಲಿದ್ದಾರೆದಂರು.

 

ವಾಜಪೇಯಿ ಅವರ ಬಹುಮುಖಿ ವ್ಯಕ್ತಿತ್ವವನ್ನು ಸ್ಮರಿಸಿದ  ಪ್ರಧಾನಮಂತ್ರಿ   , ಅವರು ಮಾನವೀಯ ಮೌಲ್ಯಗಳಿಗೆ ಮತ್ತು ಜನತೆಯ ಬಗೆಗೆ ಮಮಕಾರವನ್ನು ಹೊಂದಿದ್ದರು. ಅಟಲ್ ಜೀ ಅವರ ಸದ್ಗುಣಗಳ ಬಗ್ಗೆ ಮಾತನಾಡಲು ಎಷ್ಟು ಗಂಟೆ ಸಮಯ ನೀಡಿದರೂ ಸಾಕಾಗುವುದಿಲ್ಲವೆಂದು ಅವರು ಹೇಳಿದರು.

 

ವಾಜಪೇಯಿಯವರು ತಮ್ಮ ಬಹುತೇಕ ರಾಜಕೀಯ ಜೀವನವನ್ನು ವಿರೋಧಪಕ್ಷದಲ್ಲಿದ್ದುಕೊಂಡೇ ಕಳೆದರು, ಆದರೆ ಅವರು ತಮ್ಮ ಸಿದ್ದಾಂತಗಳಿಂದ ವಿಚಲಿತರಾಗದೆ ಸದಾ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಪರ ಧನಿ ಎತ್ತುತ್ತಿದ್ದರೆಂದರು.

 

ಶ್ರೀ ಅಟಲ್ ಜೀ ಅವರ ಸಂವಹನ ಕಲೆಗೆ ಯಾರೂ ಸರಿಸಾಟಿಯಲ್ಲ, ಬೇರೆಯವರ ಜೊತೆ ಹೋಲಿಕೆ ಮಾಡಲಾಗದು ಎಂದು ಬಣ್ಣಿಸಿದ  ಪ್ರಧಾನಮಂತ್ರಿ   , ಅವರು ಹಾಸ್ಯಪ್ರಜ್ಞೆಯನ್ನೂ ಸಹ ಹೊಂದಿದ್ದರೆಂದರು.

 

ವಾಜಪೇಯಿ ಅವರ ಮೌನ  ಅವರ ಭಾಷಣದಷ್ಟೇ ಶಕ್ತಿಶಾಲಿಯಾಗಿತ್ತು ಎಂದ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, “ ಅವರು ಯಾವಾಗ ಮಾತನಾಡಬೇಕು ಮತ್ತು ಯಾವಾಗ ಮೌನವಾಗಿರಬೇಕು” ಎಂಬ ವಿಶಿಷ್ಟ ಗುಣವನ್ನು ರೂಢಿಸಿಕೊಂಡಿದ್ದರೆಂದರು.

 

ಅಟಲ್ ಬಿಹಾರಿ ವಾಜಪೇಯಿ ಅವರ ಗತವೈಭವವನ್ನು ವರ್ಣಿಸಿದ  ಪ್ರಧಾನಮಂತ್ರಿ   ಅವರು, ಪ್ರಜಾಪ್ರಭುತ್ವದಲ್ಲಿ ಯಾರೊಬ್ಬರೂ ವಿರೋಧಿಗಳಲ್ಲ, ಆದರೆ ರಾಜಕೀಯ ವೈರಿಗಳಷ್ಟೇ ಎಂಬ ಪ್ರಮುಖ ಸಂದೇಶವನ್ನು ಅವರಿಂದ ನಾವೆಲ್ಲಾ ಅರಿತುಕೊಳ್ಳಬೇಕಾಗಿದೆ ಎಂದು ಹೇಳಿದರು.



(Release ID: 1564171) Visitor Counter : 68