ಸಂಪುಟ

ರಾಷ್ಟ್ರೀಯ ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ಪ್ರಬಂದನ ಸಂಸ್ಥೆ (ಎನ್ ಐ ಎಫ್ ಟಿ ಇ ಎಮ್) ಮಸೂದೆ,2019 ಕ್ಕೆ ಸಂಪುಟ ಅನುಮೋದನೆ

प्रविष्टि तिथि: 06 FEB 2019 9:37PM by PIB Bengaluru

ರಾಷ್ಟ್ರೀಯ ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ಪ್ರಬಂದನ ಸಂಸ್ಥೆ (ಎನ್ ಐ ಎಫ್ ಟಿ ಇ ಎಮ್) ಮಸೂದೆ,2019 ಕ್ಕೆ ಸಂಪುಟ ಅನುಮೋದನೆ 

ಹರಿಯಾಣ ರಾಜ್ಯದ ಕುಂಡ್ಲಿಯಲ್ಲಿರುವ ಎನ್ ಐ ಎಫ್ ಟಿ ಇ ಎಮ್ ಮತ್ತು ತಮಿಳುನಾಡಿನ ತಂಜಾವೂರಿನಲ್ಲಿರುವ ಐ ಐ ಎಫ್ ಪಿ ಟಿ ಸಂಸ್ಥೆಗಳಿಗೆ "ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳು " ಎಂಬ ಸ್ಥಾನ 
 

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ರಾಷ್ಟ್ರೀಯ ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ಪ್ರಬಂಧನ ಸಂಸ್ಥೆ (ಎನ್ ಐ ಎಫ್ ಟಿ ಇ ಎಮ್) ಮಸೂದೆ, 2019 ರ ಪರಿಚಯವನ್ನು ಅನುಮೋದಿಸಿತು 

ಹರಿಯಾಣ ರಾಜ್ಯದ ಕುಂಡ್ಲಿಯಲ್ಲಿರುವ ರಾಷ್ಟ್ರೀಯ ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ಪ್ರಬಂಧನ ಸಂಸ್ಥೆ (ಎನ್ ಐ ಎಫ್ ಟಿ ಇ ಎಮ್) ಮತ್ತು ತಮಿಳುನಾಡಿನ ತಂಜಾವೂರಿನಲ್ಲಿರುವ ರಾಷ್ಟ್ರೀಯ ಆಹಾರ ಸಂಸ್ಕರಣಾ ತಂತ್ರಜ್ಞಾನ ಸಂಸ್ಥೆಗಳಿಗೆ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳ ಸ್ಥಾನವನ್ನು ನೀಡುವ ಉದ್ದೇಶ ಈ ಮಸೂದೆಯದಾಗಿದೆ. 

ಪ್ರಯೋಜನಗಳು: 

ಶಿಕ್ಷಣದ ಕೋರ್ಸ್ಗಳನ್ನು ವಿನ್ಯಾಸಗೊಳಿಸಲು ಮತ್ತು ಅಭಿವೃದ್ಧಿಗೊಳಿಸುವ ಸಂಸ್ಥೆಗಳಿಗೆ ಕ್ರಿಯಾತ್ಮಕ ಸ್ವಾಯತ್ತತೆ ನೀಡಲು, ಸಂಶೋಧನಾ ಚಟುವಟಿಕೆಗಳನ್ನು ಮತ್ತು ಅವರ ಶೈಕ್ಷಣಿಕ ಅನ್ವೇಷಣೆಗಳನ್ನು ಕೈಗೊಳ್ಳಲು ಹೆಚ್ಚಿನ ಅಧಿಕಾರವನ್ನು ನೀಡಲು ಈ ಶಾಸನ ನೆರವಾಗಲಿದೆ, ಇದರಿಂದಾಗಿ ಈ ಸಂಸ್ಥೆಗಳು ವಿಶ್ವ ದರ್ಜೆಯ ಸಂಸ್ಥೆಗಳಾಗುತ್ತವೆ. ಈ ಸಂಸ್ಥೆಯು ಸರಕಾರದ ಮೀಸಲಾತಿ ನೀತಿಯನ್ನು ಜಾರಿಗೊಳಿಸುತ್ತದೆ ಮತ್ತು ಸಂಬಂಧಪಟ್ಟವರ ಪ್ರಯೋಜನಕ್ಕಾಗಿ ವಿಶೇಷ ಚಟುವಟಿಕೆಗಳನ್ನು ಸಹ ಕೈಗೊಳ್ಳಲಿದೆ. ನವೀನ ಪದ್ದತಿಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ವಿಶ್ವ ದರ್ಜೆಯ ಬೋಧನೆ ಮತ್ತು ಸಂಶೋಧನಾ ಅನುಭವವನ್ನು ಒದಗಿಸುವ ಸಂಸ್ಥೆಗಳಿಗೆ ಇದು ಸಹಾಯ ಮಾಡುತ್ತದೆ. 


(रिलीज़ आईडी: 1563132) आगंतुक पटल : 165
इस विज्ञप्ति को इन भाषाओं में पढ़ें: English , Urdu , Marathi , Assamese , Gujarati , Tamil , Malayalam