ಸಂಪುಟ

ಸಾಂಪ್ರದಾಯಿಕ ವೈದ್ಯ ಪದ್ಧತಿ ಮತ್ತು ಹೋಮಿಯೋಪಥಿ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಬ್ರೆಜಿಲ್ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

Posted On: 06 FEB 2019 9:52PM by PIB Bengaluru

ಸಾಂಪ್ರದಾಯಿಕ ವೈದ್ಯ ಪದ್ಧತಿ ಮತ್ತು ಹೋಮಿಯೋಪಥಿ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಬ್ರೆಜಿಲ್ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸಾಂಪ್ರದಾಯಿಕ ವೈದ್ಯ ಪದ್ಧತಿ ಮತ್ತು ಹೋಮಿಯೋಪಥಿ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಬ್ರೆಜಿಲ್ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಅನುಮೋದನೆ ನೀಡಿದೆ.

ಪ್ರಯೋಜನಗಳು:

ಈ ತಿಳಿವಳಿಕೆ ಒಪ್ಪಂದವು ಭಾರತ ಮತ್ತು ಬ್ರೆಜಿಲ್ ನಡುವೆ ಸಾಂಪ್ರದಾಯಿಕ ವೈದ್ಯ ಪದ್ಧತಿ ಕ್ಷೇತ್ರದಲ್ಲಿನ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸಲಿದೆ. ಎರಡೂ ದೇಶಗಳ ನಡುವಿನ ಹಂಚಿಕೆಯ ಸಾಂಸ್ಕೃತಿಕ ಪರಂಪರೆಯನ್ನು ಪರಿಗಣಿಸಿದಾಗ ಇದು ಪರಸ್ಪರರಿಗೆ ಅತಿ ಮಹತ್ವದ್ದಾಗಿದೆ.

ಹಿನ್ನೆಲೆ:

ಭಾರತವು ಔಷಧೀಯ ಸಸ್ಯಗಳೂ ಸೇರಿದಂತೆ ಸಂಪೂರ್ಣ ಅಭಿವೃದ್ಧಿ ಹೊಂದಿದ ಸಾಂಪ್ರದಾಯಿಕ ವೈದ್ಯ ಪದ್ಧತಿಗಳಿಂದ ಹರಸಲ್ಪಟ್ಟಿದ್ದು, ಇದು ಜಾಗತಿಕ ಆರೋಗ್ಯ ಸನ್ನಿವೇಶದಲ್ಲಿ ಅದ್ಭುತ ಸಾಮರ್ಥ್ಯವನ್ನು ಹೊಂದಿದೆ. ಭಾರತ ಮತ್ತು ಬ್ರೆಜಿಲ್ ಅತ್ಯಂತ ಆಪ್ತ ಮತ್ತು ಬಹುಮುಖಿ ಬಾಂಧವ್ಯವನ್ನು ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಮಟ್ಟದಲ್ಲಿ ಅಂದರೆ, ಬ್ರಿಕ್ಸ್, ಬಿ.ಎ.ಎಸ್.ಐ.ಸಿ., ಜಿ-20, ಜಿ-4, ಬಿ.ಎಸ್.ಎ ಮತ್ತು ಬೃಹತ್ ಬಹುಪಕ್ಷೀಯ ಕಾಯಗಳು ಅಂದರೆ ವಿಶ್ವಸಂಸ್ಥೆ, ಡಬ್ಲ್ಯುಟಿಓ, ಯುನೆಸ್ಕೋ ಮತ್ತು ಡಬ್ಲ್ಯು.ಎಚ್.ಓ.ಗಳಲ್ಲಿ ಹಂಚಿಕೊಂಡಿವೆ. ಇಡೀ ಲ್ಯಾಟಿನ್ ಅಮೆರಿಕಾದಲ್ಲಿ ಮತ್ತು ಕೆರೇಬಿಯನ್ ವಲಯದಲ್ಲಿ ಬ್ರೆಜಿಲ್ ಭಾರತದ ಅತಿ ಮಹತ್ವದ ವಾಣಿಜ್ಯ ಪಾಲುದಾರ ರಾಷ್ಟ್ರಗಳಲ್ಲಿ ಒಂದಾಗಿದೆ.

ಭಾರತ ಮತ್ತು ಬ್ರೆಜಿಲ್ ಗಳೆರಡೂ ಸಾಂಪ್ರದಾಯಿಕ ಔಷಧ ಬಳಕೆಯ ಇತಿಹಾಸದಲ್ಲಿ ಮತ್ತು ಔಷಧೀಯ ಸಸ್ಯಗಳ ಆಧಾರದ ಆರೋಗ್ಯ ರೂಢಿಗಳಲ್ಲಿ ಶ್ರೀಮಂತ ಜೀವ ವೈವಿಧ್ಯತೆಯ ಬೃಹತ್ ಶ್ರೇಣಿಯನ್ನು ಹೊಂದಿವೆ. ಆಯುರ್ವೇದ, ಯೋಗ ಮತ್ತು ಇತರ ಸಾಂಪ್ರದಾಯಿಕ ಪದ್ಧತಿಗಳು ಬ್ರೆಜಿಲ್ ನಲ್ಲಿ ಜನಪ್ರಿಯವಾಗಿವೆ.
 

***



(Release ID: 1563066) Visitor Counter : 80