ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನ ಮಂತ್ರಿ ನಾಳೆ ದಾದ್ರಾ ಮತ್ತು ನಗರ ಹವೇಲಿಗೆ ಭೇಟಿ ;ದೊರೆಯಲಿದೆ ಹಲವು ಅಭಿವೃದ್ದಿಕಾಮಗಾರಿಗಳಿಗೆ ಚಾಲನೆ.

Posted On: 18 JAN 2019 6:45PM by PIB Bengaluru

ಪ್ರಧಾನ ಮಂತ್ರಿ ನಾಳೆ ದಾದ್ರಾ ಮತ್ತು ನಗರ ಹವೇಲಿಗೆ ಭೇಟಿ ;ದೊರೆಯಲಿದೆ ಹಲವು ಅಭಿವೃದ್ದಿಕಾಮಗಾರಿಗಳಿಗೆ ಚಾಲನೆ.



ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ 2019 ರ ಜನವರಿ 19 ರಂದು ದಾದ್ರಾ ಮತ್ತು ನಗರ ಹವೇಲಿಗಳ ರಾಜಧಾನಿ ಸಿಲ್ವಾಸಾಕ್ಕೆ ಭೇಟಿ ನೀಡುವರು. 

ಈ ಭೇಟಿಯಲ್ಲಿ ಅವರು ದಾದ್ರಾ ಮತ್ತು ನಗರ ಹವೇಲಿಯ ಸಾಯ್ಲಿಯಲ್ಲಿ ವೈದ್ಯಕೀಯ ಕಾಲೇಜಿಗೆ ಶಿಲಾನ್ಯಾಸ ಮಾಡುವರು. ದಮನ್ ಮತ್ತು ದಿಯು ಹಾಗು ದಾದ್ರಾ ಮತ್ತು ನಗರ ಹವೇಲಿಗಳಲ್ಲಿ ವಿವಿಧ ಅಭಿವೃದ್ದಿ ಯೋಜನೆಗಳ ಉದ್ಘಾಟನೆಯ ನಾಮಫಲಕವನ್ನು ಅವರು ಅನಾವರಣ ಮಾಡುವರು. 

ಎಂ-ಆರೋಗ್ಯ ಆಪ್ ನ್ನು ಮತ್ತು ಮನೆ ಮನೆಯಿಂದ ತ್ಯಾಜ್ಯ ಸಂಗ್ರಹಣೆ, ದಾದ್ರಾ ಮತ್ತು ನಗರ ಹವೇಲಿಗಳಲ್ಲಿ ಡಿಜಿಟಲ್ ವ್ಯವಸ್ಥೆಯ ಮೂಲಕ ಘನ ತ್ಯಾಜ್ಯ ವಿಂಗಡಣೆ ಮತ್ತು ಸಂಸ್ಕರಣೆಯ ಕಾರ್ಯಕ್ಕೂ ಅವರು ಚಾಲನೆ ನೀಡುವರು. 

ಪ್ರಧಾನಮಂತ್ರಿಯವರು ಕೇಂದ್ರಾಡಳಿತ ಪ್ರದೇಶಗಳ ಮಾಹಿತಿ ತಂತ್ರಜ್ಞಾನ ನೀತಿಯನ್ನೂ ಬಿಡುಗಡೆ ಮಾಡುವರು. 

ಕೆಲವು ಫಲಾನುಭವಿಗಳಿಗೆ ಅವರು ಪ್ರಧಾನಮಂತ್ರಿ ಜನ ಆರೋಗ್ಯ ಯೋಜನಾ ಪ್ರಮಾಣ ಪತ್ರಗಳನ್ನು ಮತ್ತು ಆರಣ್ಯ ಹಕ್ಕುಗಳ ಪ್ರಮಾಣಪತ್ರಗಳನ್ನು ವಿತರಿಸುವರು. 

ಸಿಲ್ವಾಸಾದ ಸಾಯ್ಲಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಯಿಂದ ದಾದ್ರಾ ಮತ್ತು ನಗರ ಹವೇಲಿ ಹಾಗು ದಮನ್ ಮತ್ತು ದಿಯು ಮತ್ತು ನೆರೆ ಹೊರೆಯ ಪ್ರದೇಶಗಳಲ್ಲಿ ತೃತೀಯ ಹಂತದ ಆರೋಗ್ಯ ಸೌಲಭ್ಯಗಳು ಸುಧಾರಿಸಲಿವೆ. ಇದರಿಂದ ವಿದ್ಯಾರ್ಥಿಗಳಿಗೆ, ಅದರಲ್ಲೂ ಈ ಎರಡು ಕೇಂದ್ರಾಡಳಿತ ಪ್ರದೇಶಗಳ ಬುಡಕಟ್ಟು ಮತ್ತು ಗ್ರಾಮೀಣ ಪ್ರದೇಶಗಳ ಜನತೆಗೆ ಪ್ರಯೋಜನವಾಗಲಿದೆ. ಇದು ವೈದ್ಯರ ಲಭ್ಯತೆಯನ್ನು ಹೆಚ್ಚಿಸಲಿದೆ ಹಾಗು ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣದ ಅವಕಾಶಗಳನ್ನು ಹೆಚ್ಚಿಸಲಿದೆ. ವೈದ್ಯಕೀಯ ಕಾಲೇಜು ಮತ್ತು ವೈದ್ಯ ಹಾಗು ಅರೆ ವೈದ್ಯಕೀಯ ಕಾಲೇಜು ಹಾಸ್ಟೆಲ್ ಗಳು, ನಿವಾಸಿ ಕಟ್ಟಡಗಳಿಗಾಗಿ 210 ಕೋ.ರೂ.ಗಳನ್ನು ತೆಗೆದಿಡಲಾಗಿದೆ. 
 

***



(Release ID: 1560685) Visitor Counter : 64