ಪ್ರಧಾನ ಮಂತ್ರಿಯವರ ಕಛೇರಿ

ರೋಮಾಂಚಕ ಗುಜರಾತ್ ಶೃಂಗದ ಜೊತೆಗಿನ ಪ್ರಮುಖ ಕಾರ್ಯಕ್ರಮ, ಜಾಗತಿಕ ವ್ಯಾಪಾರ ಪ್ರದರ್ಶನಕ್ಕೆ ಗಾಂಧಿನಗರದಲ್ಲಿ ಪ್ರಧಾನಮಂತ್ರಿ ಚಾಲನೆ. 

Posted On: 17 JAN 2019 3:31PM by PIB Bengaluru

ರೋಮಾಂಚಕ ಗುಜರಾತ್ ಶೃಂಗದ ಜೊತೆಗಿನ ಪ್ರಮುಖ ಕಾರ್ಯಕ್ರಮ, ಜಾಗತಿಕ ವ್ಯಾಪಾರ ಪ್ರದರ್ಶನಕ್ಕೆ ಗಾಂಧಿನಗರದಲ್ಲಿ ಪ್ರಧಾನಮಂತ್ರಿ ಚಾಲನೆ. 
 

ಮತ್ತೊಂದು ಪ್ರಧಾನ ಆಕರ್ಷಣೆ , ಅಹ್ಮದಾಬಾದ್ ಶಾಪಿಂಗ್ ಹಬ್ಬ ಇಂದು ಆರಂಭ. 

ಗಾಂಧಿನಗರದಲ್ಲಿ ರೋಮಾಂಚಕ ಗುಜರಾತ್ ಶೃಂಗ 2019 ರ ತಯಾರಿ ಪೂರ್ಣ, 

ಗುಜರಾತಿನಲ್ಲಿ ಹೂಡಿಕೆಗೆ ಪ್ರೇರಣೆ ಒದಗಿಸುವ ರೋಮಾಂಚಕ ಗುಜರಾತ್ ಶೃಂಗದ 9 ನೇ ಆವೃತ್ತಿಗೆ ನಾಳೆ ಚಾಲನೆ ನೀಡಲಿದ್ದಾರೆ ಪ್ರಧಾನಮಂತ್ರಿ. 

ನಾಳೆ ಗಾಂಧೀನಗರದ ಮಹಾತ್ಮಾ ಮಂದಿರ ವಸ್ತುಪ್ರದರ್ಶನ ಮತ್ತು ಸಮಾವೇಶ ಕೇಂದ್ರದಲ್ಲಿ ರೋಮಾಂಚಕ ಗುಜರಾತ್ ಶೃಂಗದ 9 ನೇ ಆವೃತ್ತಿಗೆ ಸಿದ್ದತೆಗಳು ಪೂರ್ಣಗೊಂಡಿವೆ. ಗುಜರಾತಿನಲ್ಲಿ ಹೂಡಿಕೆಗೆ ಉತ್ತೇಜನ ನೀಡುವ ಉದ್ದೇಶದ ಈ ಶೃಂಗದ ಉದ್ಘಾಟನಾ ಅಧಿವೇಶನದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಷಣ ಮಾಡಲಿದ್ದಾರೆ. 

ಜನವರಿ 18-20 ರವರೆಗೆ ನಡೆಯುವ ರೋಮಾಂಚಕ ಗುಜರಾತ್ ಶೃಂಗದ ಅಂಗವಾಗಿ ವಸ್ತುಪ್ರದರ್ಶನ ಕೇಂದ್ರದಲ್ಲಿ ಏರ್ಪಟ್ಟಿರುವ ಜಾಗತಿಕ ವ್ಯಾಪಾರ ಪ್ರದರ್ಶನವನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ವಿವಿಧ ಪ್ರದರ್ಶನಾಂಗಗಳಿಗೆ ಭೇಟಿ ನೀಡಿದ ಪ್ರಧಾನ ಮಂತ್ರಿ ಅವರು ಇಸ್ರೋ, ಡಿ.ಆರ್.ಡಿ.ಒ, ಖಾದಿ ಇತ್ಯಾದಿಗಳಲ್ಲಿ ವಿಶೇಷ ಆಸಕ್ತಿ ತೋರಿದರು. ಅವರ ಮೇಕ್ ಇನ್ ಇಂಡಿಯಾ ಚಿಂತನೆಯನ್ನು ಚರಕದಿಂದ ಚಂದ್ರಯಾನದವರೆಗೆ ಎಂಬ ಘೋಷವಾಕ್ಯದಲ್ಲಿ ಬಿಂಬಿಸಲಾಗಿದ್ದು, ಇದೂ ಪ್ರಧಾನ ಮಂತ್ರಿಗಳನ್ನು ಆಕರ್ಷಿಸಿತು. ಅವರ ಜೊತೆ ಗುಜರಾತ್ ಮುಖ್ಯಮಂತ್ರಿ ವಿಜಯ ರೂಪಾನಿ ಮತ್ತು ಇತರ ಗಣ್ಯರು ಇದ್ದರು. ಜಾಗತಿಕ ವ್ಯಾಪಾರ ಪ್ರದರ್ಶನದಲ್ಲಿ 25 ಕ್ಕೂ ಅಧಿಕ ಕೈಗಾರಿಕಾ ಮತ್ತು ವ್ಯಾಪಾರೋದ್ಯಮ ವಲಯಗಳು ಪಾಲ್ಗೊಂಡು ತಮ್ಮ ಚಿಂತನೆ, ಉತ್ಪಾದನೆ, ವಿನ್ಯಾಸಗಳನ್ನು ಒಂದೇ ಕೊಡೆಯಡಿ ಪ್ರದರ್ಶನಕ್ಕಿಟ್ಟಿವೆ. ಪ್ರದರ್ಶನಾಂಗಣ 200,000 ಚದರ ಮೀಟರ್ ವಿಸ್ತಾರವಿದೆ. 

ಶೃಂಗದ ಅಂಗವಾಗಿ ಅದರ ಜೊತೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಇಂದಿನ ಪ್ರಮುಖ ಆಕರ್ಷಣೆ ಎಂದರೆ ಅಹ್ಮದಾಬಾದ್ ಶಾಪಿಂಗ್ ಹಬ್ಬ-2019, ಇದನ್ನು ಬಳಿಕ ಇಂದು ಸಂಜೆ ಪ್ರಧಾನ ಮಂತ್ರಿಯವರು ಉದ್ಘಾಟಿಸುತ್ತಾರೆ. ರೋಮಾಂಚಕ ಗುಜರಾತ್ ಅಹ್ಮದಾಬಾದ್ ಶಾಪಿಂಗ್ ಹಬ್ಬದ ಶುಭಚಿಹ್ನೆಯನ್ನು ಇದೇ ಸಂದರ್ಭ ಪ್ರಧಾನ ಮಂತ್ರಿ ಅವರು ಅನಾವರಣ ಮಾಡುವರು. ಅಹ್ಮದಾಬಾದ್ ಶಾಪಿಂಗ್ ಹಬ್ಬ -2019 ದೇಶದಲ್ಲಿ ಈ ಮಾದರಿಯಲ್ಲಿ , ಇದೇ ಮೊದಲ ಬಾರಿಗೆ ಆಯೋಜನೆಗೊಂಡಿದೆ ಮತ್ತು ನಗರದ ಉದ್ಯಮಗಳಿಗೆ ಅವುಗಳ ಉತ್ಪಾದನೆಯನ್ನು ಪ್ರದರ್ಶಿಸಲು ಒಂದು ಅವಕಾಶವನ್ನು ಒದಗಿಸಿದೆ. 

ರೋಮಾಂಚಕ ಗುಜರಾತ್ ಅಂಗವಾಗಿ ಆಯೋಜನೆಗೊಂಡಿರುವ ಪ್ರಧಾನ ಕಾರ್ಯಕ್ರಮ , ಶೃಂಗದ 9 ನೇ ಆವೃತ್ತಿಯು ವೈವಿಧ್ಯಮಯ ಸ್ವಭಾವದ ಜ್ಞಾನವನ್ನು ಪರಸ್ಪರ ಹಂಚಿಕೊಳ್ಳುವ ಉದ್ದೇಶದೊಂದಿಗೆ ಸಂಪೂರ್ಣವಾಗಿ ಹೊಸ ವೇದಿಕೆಗಳನ್ನು ಒಳಗೊಳ್ಳಲಿದೆ. ಮತ್ತು ಪಾಲ್ಗೊಳ್ಳುವ ಪ್ರತಿನಿಧಿಗಳ ನಡುವೆ ಸಂಪರ್ಕ ಜಾಲದ ಮಟ್ಟವನ್ನು ಎತ್ತರಿಸಲಿದೆ. 

ಹಿನ್ನೆಲೆ: 

ರೋಮಾಂಚಕ ಗುಜರಾತ್ ಶೃಂಗದ ಚಿಂತನೆಯನ್ನು 2003 ರಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ರೂಪಿಸಿದ್ದರು. ಗುಜರಾತನ್ನು ಹೂಡಿಕೆಗೆ ಆಯ್ಕೆಮಾಡುವ ತಾಣವಾಗಿ ಮರುಸ್ಥಾಪನೆ ಮಾಡುವುದು ಇದರ ಉದ್ದೇಶವಾಗಿತ್ತು. ಈ ಶೃಂಗವು ಜಾಗತಿಕ ಸಮಾಜೋ –ಆರ್ಥಿಕ ಅಭಿವೃದ್ದಿ, ಜ್ಞಾನ ಹಂಚಿಕೆ ಮತ್ತು ಸಮರ್ಥ ಹಾಗು ಕ್ರಿಯಾಶೀಲ ಸಹಭಾಗಿತ್ವ ರೂಪಿಸಿಕೊಳ್ಳಲು ವೇದಿಕೆಯನ್ನು ಒದಗಿಸುತ್ತದೆ. 

ರೋಮಾಂಚಕ ಗುಜರಾತ್ 2019 ರ ಇತರ ಪ್ರಮುಖಾಂಶಗಳು ಇಂತಿವೆ- 

1. ಭಾರತದಲ್ಲಿ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ (ಸ್ಟೆಮ್) ಶಿಕ್ಷಣ ಮತ್ತು ಸಂಶೋಧನೆ ಅವಕಾಶಗಳಿಗಾಗಿ ದುಂಡು ಮೇಜಿನ ಸಭೆ. ಇದರಲ್ಲಿ ಪ್ರಖ್ಯಾತ ಶಿಕ್ಷಣ ತಜ್ಞರು, ಮತ್ತು ಪ್ರಮುಖ ನೀತಿ ನಿರೂಪಕರು ಪಾಲ್ಗೊಂಡು “ಭಾರತದಲ್ಲಿ ಸ್ಟೆಮ್ (ಎಸ್.ಟಿ.ಇ.ಎಂ.) ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಅವಕಾಶಗಳ ಪಥ”ವನ್ನು ನಿರೂಪಿಸಲಿದ್ದಾರೆ. 

2 .ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ (ಸ್ಟೆಮ್ ) ಕುರಿತು ಅಂತಾರಾಷ್ಟ್ರೀಯ ಸಮ್ಮೇಳನ. 

3. ಭವಿಷ್ಯದ ತಂತ್ರಜ್ಞಾನಗಳು ಮತ್ತು ಬಾಹ್ಯಾಕಾಶ ಯಾನದ ಭವಿಷ್ಯದ ಚಿಂತನೆಯನ್ನು ಒದಗಿಸುವ ಬಾಹ್ಯಾಕಾಶ ಅನ್ವೇಷಣೆಯನ್ನು ಕುರಿತ ವಸ್ತುಪ್ರದರ್ಶನ. 

4. ಬಂದರು ಕೇಂದ್ರಿತ ಅಭಿವೃದ್ಧಿ ಮತ್ತು ಭಾರತವನ್ನು ಏಶ್ಯಾದ ಹಡಗಿನಿಂದ ಹಡಗಿಗೆ ವರ್ಗಾಯಿಸುವ , ಹಡಗು ಬದಲಾವಣೆಯ ತಾಣವನ್ನಾಗಿ ರೂಪಿಸುವ ವ್ಯೂಹಗಳ ಕುರಿತ ವಿಚಾರಸಂಕಿರಣ. 

5. ಭಾರತದಲ್ಲಿ ಮೇಕ್ ಇನ್ ಇಂಡಿಯಾದ ಯಶೋಗಾಥೆಯನ್ನು ದರ್ಶಿಸುವ ಮೇಕ್ ಇನ್ ಇಂಡಿಯಾ ಕಾರ್ಯಕ್ರಮ ಮತ್ತು ಅದರಲ್ಲಿ ಸರಕಾರದ ಪ್ರಮುಖ ಮಧ್ಯಪ್ರವೇಶಗಳನ್ನು ಕುರಿತ ವಿಚಾರ ಸಂಕಿರಣ. 

6. ರಕ್ಷಣಾ ಕೈಗಾರಿಕೆ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿರುವ ಅವಕಾಶಗಳ ಬಗ್ಗೆ ವಿಚಾರ ಸಂಕಿರಣ; ಭಾಗವಹಿಸಿದ ಪ್ರತಿನಿಧಿಗಳಲ್ಲಿ ರಕ್ಷಣಾ ಮತ್ತು ವಾಯು ಯಾನಕ್ಕೆ ಸಂಬಂಧಿಸಿ ಗುಜರಾತಿನಲ್ಲಿರುವ ಅವಕಾಶಗಳ ಬಗ್ಗೆ ಸೂಕ್ಷ್ಮತ್ವ ಮೂಡಿಸುವುದು ಮತ್ತು ಭಾರತ ಹಾಗು ಗುಜರಾತ್ ಗಳನ್ನು ರಕ್ಷಣಾ ಮತ್ತು ವಾಯು ಯಾನ ಕ್ಷೇತ್ರದ ಉತ್ಪಾದನಾ ತಾಣವಾಗಿ ರೂಪಿಸುವ ನಿಟ್ಟಿನಲ್ಲಿ ಸಾಗುವ ಪಥ ರೂಪಿಸಲು ಸಮಾಲೋಚನೆ. 

2003ರಲ್ಲಿ ಇದು ಕಾರ್ಯರೂಪಕ್ಕೆ ಬಂದಂದಿನಿಂದ , ರೋಮಾಂಚಕ ಗುಜರಾತ್ ಶೃಂಗ ಇತರ ಹಲವು ರಾಜ್ಯಗಳು ವ್ಯಾಪಾರ ಮತ್ತು ಹೂಡಿಕೆಗೆ ಉತ್ತೇಜನ ನೀಡುವ ಶೃಂಗಗಳನ್ನು ಆಯೋಜಿಸಲು ಮುಂದೆ ಬರಲು ವೇಗವರ್ಧಕದಂತೆ ಕೆಲಸ ಮಾಡಿತು. 



(Release ID: 1560681) Visitor Counter : 169