ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನ ಮಂತ್ರಿ ಅವರಿಗೆ ಮೊಟ್ಟ ಮೊದಲ ಫಿಲಿಪ್ ಕೋಟ್ಲರ್ ಅಧ್ಯಕ್ಷೀಯ ಪ್ರಶಸ್ತಿ ಪ್ರದಾನ. 

Posted On: 14 JAN 2019 2:03PM by PIB Bengaluru

ಪ್ರಧಾನ ಮಂತ್ರಿ ಅವರಿಗೆ ಮೊಟ್ಟ ಮೊದಲ ಫಿಲಿಪ್ ಕೋಟ್ಲರ್ ಅಧ್ಯಕ್ಷೀಯ ಪ್ರಶಸ್ತಿ ಪ್ರದಾನ. 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಮೊಟ್ಟ ಮೊದಲ ಫಿಲಿಪ್ ಕೋಟ್ಲರ್ ಅಧ್ಯಕ್ಷೀಯ ಪ್ರಶಸ್ತಿಯನ್ನು ಹೊಸದಿಲ್ಲಿಯ 7 ನೇ ಲೋಕ ಕಲ್ಯಾಣ ಮಾರ್ಗದಲ್ಲಿಯ ನಿವಾಸದಲ್ಲಿ ಸ್ವೀಕರಿಸಿದರು. 

ಈ ಪ್ರಶಸ್ತಿಯು ಜನತೆ, ಲಾಭ ಮತ್ತು ಭೂಗ್ರಹ -ಈ ತ್ರಿವಳಿ ಅಂಶಗಳಿಗೆ ನೀಡಿದ ಆದ್ಯತೆಯಾಧಾರದ ಮೇಲೆ ಕೊಡಲಾಗುತ್ತದೆ. ಇದನ್ನು ವಾರ್ಷಿಕ ನೆಲೆಯಲ್ಲಿ ರಾಷ್ಟ್ರದ ಒಬ್ಬರು ನಾಯಕರಿಗೆ ನೀಡಲಾಗುತ್ತದೆ.

ಪ್ರಶಸ್ತಿ ಫಲಕ ಹೀಗೆ ಹೇಳುತ್ತದೆ:

“ಶ್ರೀ ನರೇಂದ್ರ ಮೋದಿ ಅವರನ್ನು ದೇಶಕ್ಕೆ ನೀಡಿದ ಶ್ರೇಷ್ಟತಮ ನಾಯಕತ್ವಕ್ಕಾಗಿ ಆಯ್ಕೆ ಮಾಡಲಾಗಿದೆ. ಭಾರತಕ್ಕಾಗಿ ಅವರ ನಿಸ್ವಾರ್ಥ ಸೇವೆ ಜೊತೆಗೆ ಆಯಾಸಗೊಳ್ಳದ ಅವರ ಚೈತನ್ಯದ ಫಲವಾಗಿ ಅಸಾಧಾರಣ ಆರ್ಥಿಕ, ಸಾಮಾಜಿಕ ಮತ್ತು ತಾಂತ್ರಿಕ ಪ್ರಗತಿಯನ್ನು ದೇಶವು ಸಾಧಿಸುವಂತಾಗಿದೆ.” 

“ಅವರ ನಾಯಕತ್ವದಲ್ಲಿ , ಭಾರತವು ಈಗ ಅನ್ವೇಷಣೆಯ ಮತ್ತು ಮೌಲ್ಯವರ್ಧಿತ ಉತ್ಪಾದನೆಯ (ಮೇಕ್ ಇನ್ ಇಂಡಿಯಾ ) ಕೇಂದ್ರವಾಗಿ ಹಾಗು ಮಾಹಿತಿ ತಂತ್ರಜ್ಞಾನ , ಲೆಕ್ಕಪತ್ರ ಮತ್ತು ಹಣಕಾಸು ಸೇವೆಗಳಂತಹ ವೃತ್ತಿಪರ ಸೇವೆಗಳಿಗೆ ಜಾಗತಿಕ ತಾಣವಾಗಿ ಗುರುತಿಸಲ್ಪಟ್ಟಿದೆ “ ಎಂಬುದನ್ನೂ ಪ್ರಶಸ್ತಿ ಪತ್ರವು ಉಲ್ಲೇಖಿಸಿದೆ.

“ಅವರ ದೂರದರ್ಶಿತ್ವದ ಚಿಂತನೆಯ ನಾಯಕತ್ವದಿಂದಾಗಿ ಡಿಜಿಟಲ್ ಕ್ರಾಂತಿ (ಡಿಜಿಟಲ್ ಇಂಡಿಯಾ ) ಯಾಗಿದೆ, ಸಾಮಾಜಿಕ ಲಾಭಗಳಿಗಾಗಿ ವಿಶಿಷ್ಟ ಗುರುತಿನ ಸಂಖ್ಯೆ, ಆಧಾರ್. ಹಣಕಾಸು ಸೇರ್ಪಡೆಗಳನ್ನು ಇದು ಒಳಗೊಂಡಿದೆ. ಇದರಿಂದ ಉದ್ಯಮಶೀಲತ್ವ, ವ್ಯಾಪಾರೋದ್ಯಮಕ್ಕೆ ಅನುಕೂಲಕರ ತಾಣವಾಗಿ ರೂಪುಗೊಳ್ಳುವುದಕ್ಕೆ ಸಾಧ್ಯವಾಗಿದೆ. ಮತ್ತು ಇದು 21 ನೇ ಶತಮಾನದ ಮೂಲಸೌಕರ್ಯಗಳನ್ನು ರೂಪಿಸುತ್ತಿದೆ” ಎಂದೂ ಪ್ರಶಸ್ತಿ ಪತ್ರ ಬಣ್ಣಿಸಿದೆ.

ಪ್ರಶಸ್ತಿ ಫಲಕವು ಮೇಕ್ ಇನ್ ಇಂಡಿಯಾ, ನವೋದ್ಯಮ ಭಾರತ, ಡಿಜಿಟಲ್ ಇಂಡಿಯಾ ಮತ್ತು ಸ್ವಚ್ಚ ಭಾರತ್ ಉಪಕ್ರಮಗಳನ್ನು ಉಲ್ಲೇಖಿಸಿದೆ. “ಇವುಗಳಿಂದಾಗಿ ಭಾರತವಿಂದು ಜಗತ್ತಿನಲ್ಲಿಯೇ ಅತ್ಯಂತ ಆಕರ್ಷಕ ಉತ್ಪಾದನಾ ಮತ್ತು ವ್ಯಾಪಾರೋದ್ಯಮ ತಾಣವಾಗಿ ಸ್ಥಾಪಿತವಾಗಿದೆ ” ಎಂದೂ ಅದರಲ್ಲಿ ನಮೂದಿಸಲಾಗಿದೆ. 

ಪ್ರೊ. ಫಿಲಿಪ್ ಕೋಟ್ಲರ್ ಅವರು ನಾರ್ತ್ ವೆಸ್ಟರ್ನ್ ವಿಶ್ವವಿದ್ಯಾಲಯದ ಕೆಲ್ಲಾಗ್ ಉದ್ಯಮಾಡಳಿತ ಸ್ಕೂಲ್ ನ ಮಾರುಕಟ್ಟೆ ವಿಭಾಗದ ಪ್ರಖ್ಯಾತ ಪ್ರಾಧ್ಯಾಪಕರಾಗಿದ್ದಾರೆ. ತಮ್ಮ ಅನಾರೋಗ್ಯದ ಕಾರಣದಿಂದ ಅವರು ಈ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಯು.ಎಸ್.ಎ.ಯ ಜಾರ್ಜಿಯಾದ ಎ.ಎಂ.ಒ.ಆರ್.ವೈ. ವಿಶ್ವವಿದ್ಯಾಲಯದ ಡಾ. ಜಗದೀಶ ಸೇಥ್ ಅವರನ್ನು ನಿಯೋಜಿಸಿ ಕಳುಹಿಸಿಕೊಟ್ಟಿದ್ದರು.
 

***



(Release ID: 1560065) Visitor Counter : 105