ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಅವರು ಝಾರ್ಖಂಡಿನ ಪಲಮು ನಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು . ಸಾಮೂಹಿಕ ಇ-ಗೃಹಪ್ರವೇಶಕ್ಕೆ ಸಾಕ್ಷಿಯಾದರು. 

Posted On: 05 JAN 2019 1:37PM by PIB Bengaluru

ಪ್ರಧಾನಮಂತ್ರಿ ಅವರು ಝಾರ್ಖಂಡಿನ ಪಲಮು ನಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು . ಸಾಮೂಹಿಕ ಇ-ಗೃಹಪ್ರವೇಶಕ್ಕೆ ಸಾಕ್ಷಿಯಾದರು. 

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಝಾರ್ಖಂಡಿನ ಪಲಮುಗೆ ಭೇಟಿ ನೀಡಿದರು. ಪ್ರಧಾನಮಂತ್ರಿ ಆವಾಸ್ ಯೋಜನೆಯ 25000 ಫಲಾನುಭವಿಗಳ ಇ-ಗೃಹಪ್ರವೇಶಕ್ಕೆ ಅವರು ಸಾಕ್ಷಿಯಾದರು.   ನಾರ್ಥ್ ಕಯೆಲ್ (ಮಂಡಲ್ ಡ್ಯಾಮ್) ಯೋಜನೆಯ ಪುನಶ್ಚೇತನ, ಕನ್ಹಾರ್ ಸೊನೆ ಕೊಳವೆ ನೀರಾವರಿ ಯೋಜನೆ ಮತ್ತು ವಿವಿಧ ನೀರಾವರಿ ಯೋಜನೆಗಳ ಹಾಗೂ ಲೈನಿಂಗ್ ಕೆಲಸಗಳ ಬಲಿಷ್ಠಗೊಳಿಸುವಕೆ ಮುಂತಾದ ಯೋಜನೆಗಳಿಗೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ಮಾಡಿದರು. ಇವುಗಳೆಲ್ಲಾ ಒಟ್ಟಾಗಿ ರೂ 3500 ಕೋಟಿ ಮೌಲ್ಯದ ಯೋಜನೆಗಳಾಗಿವೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. 

 

ಇವುಗಳು, ನೀರಾವರಿಯ ವೆಚ್ಚ ಕಡಿಮೆ  ಮಾಡಿ,  ರೈತರ ಆದಾಯವನ್ನು ಹೆಚ್ಚಿಸುವ  ನಿಟ್ಟಿನಲ್ಲಿ ಸರಕಾರದ 

 ಪ್ರಮುಖ ಯೋಜನೆಗಳಾಗಿವೆ ಎಂದು ಪ್ರಧಾನಮಂತ್ರಿ  ಹೇಳಿದರು. 

 

ಕಳೆದ 47 ವರ್ಷಗಳಿಂದ    ನಾರ್ಥ್ ಕೊಯೆಲ್ (ಮಂಡಲ್ ಡ್ಯಾಮ್) ಯೋಜನೆಯ    ಕಾರ್ಯ ಪೂರ್ಣಗೊಂಡಿರಲಿಲ್ಲ ಎಂದು ಪ್ರಧಾನಮಂತ್ರಿ ಅವರು ಬೊಟ್ಟುಮಾಡಿ ಹೇಳಿದರು. ಈ ಪ್ರದೇಶದ ರೈತರಿಗೆ ಮಾಡಿದ ಕ್ರಿಮಿನಲ್ ಲೋಪ   ಇದಾಗಿದೆ. ರೈತರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡು ಬದ್ಧತೆಯನ್ನು ಪ್ರಧಾನಮಂತ್ರಿ ಅವರು ಪುನರುಚ್ಚರಿಸಿದರು. ದಶಕಗಳಿಂದ ನೆನೆಗುದಿ ಬಿದ್ದಿದ್ದ, 99 ಬೃಹತ್ ನೀರಾವರಿ ಯೋಜನೆಗಳನ್ನಿಂದು ಶೀಘ್ರ ಪಥದಲ್ಲಿ ಸುಮಾರು 90000 ಕೋಟಿ ರೂಪಾಯಿ ವೆಚ್ಚದಲ್ಲಿ ಪೂರ್ಣಗೊಳಿಸುತ್ತಿದ್ದೇವೆ. ಕೇಂದ್ರ ಸರಕಾರವು ರೈತರನ್ನು “ಅನ್ನದಾತ”ರೆಂದು ಭಾವಿಸಿ, ಆ ನಿಟ್ಟಿನಲ್ಲಿ ಕೆಲಸ ಮಾಡುವ ಸಂಕಲ್ಪ ಹೊಂದಿದೆ. ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಮೂಲಭೂತವಾಗಿ ಪರಿಹರಿಸುವ ನಿಟ್ಟಿನಲ್ಲಿ ಸರಕಾರವು ನೂತನ ಕೃಷಿ ಸಂಕಲ್ಪದೊಂದಿಗೆ ಕೆಲಸಮಾಡುತ್ತಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

 

2022ರಲ್ಲಿ ಎಲ್ಲರಿಗೂ ವಸತಿ ಗುರಿಯ ಅಂಗವಾಗಿ, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಇಂದು 25000 ವಸತಿಗಳನ್ನು ನೀಡಲಾಗುತ್ತದೆ. ಈ ಹಿಂದೆ ಪ್ರಾರಂಭಿಸಿದ್ದ ಇಂತಹದ್ದೇ ಹಲವಾರು ಯೋಜನೆಗಳಿಗಿಂತ ಈ ಯೋಜನೆಯು ಹೇಗೆ ಭಿನ್ನವಾಗಿದೆ ಎಂದು ಅವರು ವಿವರಿಸಿದರು. ಇಂದು ಫಲಾನುಭವಿಗಳ ಆಯ್ಕೆ ಅತ್ಯಂತ ಪಾರದರ್ಶಕ ರೀತಿಯಲ್ಲಾಗುತ್ತದೆ. ಅಂತರ್ಜಾಲ ಮೂಲಕ ನೋಂದಾವಣೆಯಾಗುತ್ತದ ಮತ್ತು ಪ್ರಯೋಜನಗಳ ನೇರ ವರ್ಗಾವಣೆಗಾಗಿ ಆನಂತರ ಫಲಾನುಭವಿಗಳ ಬ್ಯಾಂಕು ಖಾತೆಗಳ ಪರಿಶೀಲನೆಯಾಗುತ್ತದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

 

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಾಣವಾಗುತ್ತಿರುವ ವಸತಿಗಳ ಗುಣಮಟ್ಟ ಪರಿವೀಕ್ಷಣೆಗಾಗಿ ಇಂದು ನೂತನ ವ್ಯವಸ್ಥೆ ಅನುಷ್ಠಾನಗೊಳಿಸಲಾಗಿದೆ. ಇದರಲ್ಲಿ ಛಾಯಾಚಿತ್ರ ಮತ್ತು ಜಿಯೊ-ಟ್ಯಾಗ್ಗಿಂಗ್  ಸೇರಿದೆ. ಇಂದು ವಸತಿಯಲ್ಲಿ ಶೌಚಾಲಯವಿರುತ್ತದೆ,  ಜತೆ ವಿದ್ಯುತ್ ಮತ್ತು ಅಡುಗೆ ಅನಿಲ ಸಂಪರ್ಕವನ್ನೂ ನೀಡಲಾಗುತ್ತದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಇಂದು ಪರ್ಯಾಯ ವಿನ್ಯಾಸಗಳು ಲಭ್ಯವಾಗಿವೆ, ವಸತಿಯ ವಿಸ್ತೀರ್ಣದಲ್ಲಿ ಹೆಚ್ಚಳವಾಗಿವೆ, ವಸತಿ ನಿರ್ಮಾಣದಲ್ಲಿ ಸ್ಥಳೀಯ ಸಲಕರಣೆಗಳ ಬಳಕೆಯ ನಿಟ್ಟಿನಲ್ಲಿ ಪ್ರಯತ್ನಗಳಾಗಿವೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ನಿರ್ಮಾಣದ ವೇಗವು ಹೆಚ್ಚಿದೆ. ಕಳೆದ 5 ವರ್ಷಕ್ಕಿಂತಲೂ ಕಡಿಮೆ ಅವಧಿಯಲ್ಲಿ 1.25 ಕೋಟಿಯಷ್ಟು ವಸತಿಗಳ ನಿರ್ಮಾಣವಾಗಿದೆ. ವಸ್ತಿ ನಿರ್ಮಾಣದ ಸರಾಸರಿ ಅವಧಿ 18 ತಿಂಗಳಿಂದ 12 ತಿಂಗಳಿಗೆ ಇಳಿದಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. 

 

ಇಂದು ಫಲಾನುಭವಿಗಳ ಖಾತೆಗೆ 4 ಕಂತುಗಳಲ್ಲಿ 1.25 ಲಕ್ಷ ರೂಪಾಯಿ ಸುಲಭವಾಗಿ ತಲಪುತ್ತದೆ. ಈ ಮೊದಲು ಮೊತ್ತ ಕೇವಲ 70000 ರೂಪಾಯಿಯಾಗಿತ್ತು ಎಂದು ಪ್ರಧಾನಮಂತ್ರಿ ಅವರು ಹೇಳಿದರು.  ಬಡವರ ಸಮೂಲಾಗ್ರ ಸಬಲೀಕರಣಕ್ಕೆ ವಸತಿಯು ಆಧಾರವಾಗು

ತ್ತದೆ.

 ಸ್ವಾತಂತ್ರ್ಯ ಸಿಕ್ಕಿದ ನಂತರ ಪ್ರಪ್ರಥಮ ಬಾರಿಗೆ ಸರಕಾರವು ಮಧ್ಯಮ ವರ್ಗದ ವಸತಿ ಆವಶ್ಯಕತೆ ಬಗ್ಗೆ ಕೂಡಾ ಚಿಂತನೆ ಮಾಡಿದೆ, ಅವರಿಗೆ ಆರ್ಥಿಕ ಸಹಾಯದ ಜತೆ ಬಡ್ಡಿಯಲ್ಲಿ ರಿಯಾಯಿತಿಯನ್ನೂ ನೀಡಲಾಗಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. 

 

ಝಾರ್ಖಂಡ್ ನಲ್ಲಿ ಮೂರು ತಿಂಗಳಿಗೆ ಮೊದಲು ಆರಂಭಿಸಿದ ಪ್ರಧಾನಮಂತ್ರಿ ಜನ್ ಆರೋಗ್ಯ ಯೋಜನೆಯು ಇಂದು ಲಕ್ಷಾಂತರ ಬಡವರಿಗೆ ಔಷಧೀಯ ಸಹಾಯ ಪೂರೈಸುತ್ತಿದೆ. ಮೊದಲ 100 ದಿನಗಳಲ್ಲಿ 6 ಲಕ್ಷ ಜನತೆ ಪ್ರಯೋಜನ ಪಡೆದಿದ್ದಾರೆ, ಮತ್ತು ಇಂದು, ಪ್ರತಿದಿನವೂ ಸರಾಸರಿ 10000 ಜನರು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. 

 

 *****



(Release ID: 1558819) Visitor Counter : 83