ಸಂಪುಟ

ಪೋಲ್ಯಾಂಡ್ ನ ಕಟೋವೈಸಿಯ ಕಾಪ್ 24ರಲ್ಲಿನ ಭಾರತದ ಪ್ರಸ್ತಾಪಕ್ಕೆ ಸಂಪುಟದ ಪೂರ್ವಾನ್ವಯ ಅನುಮೋದನೆ

Posted On: 02 JAN 2019 5:53PM by PIB Bengaluru

ಪೋಲ್ಯಾಂಡ್ ನ ಕಟೋವೈಸಿಯ ಕಾಪ್ 24ರಲ್ಲಿನ ಭಾರತದ ಪ್ರಸ್ತಾಪಕ್ಕೆ ಸಂಪುಟದ ಪೂರ್ವಾನ್ವಯ ಅನುಮೋದನೆ

 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2018ರ ಡಿಸೆಂಬರ್ 2ರಿಂದ 15ರವರೆಗೆ ಪೋಲ್ಯಾಂಡ್ ನ ಕಟೋವೈಸೆಯಲ್ಲಿ ನಡೆದ ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ಚೌಕಟ್ಟು ಒಪ್ಪಂದ (ಯು.ಎನ್.ಎಫ್.ಸಿ.ಸಿ.ಸಿ.) ದ 24ನೇ ಪಕ್ಷಕಾರರ ಸಮಾವೇಶ (ಕಾಪ್) ಮಾತುಕತೆಯಲ್ಲಿ ಭಾರತದ ನಿಲುವಿಗೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ. ಇದು 2018ರ ನವೆಂಬರ್ 28ರಂದು ನೀಡಲಾಗಿದ್ದ ಈ ಹಿಂದಿನ ಅನುಮೋದನೆಯ ಮುಂದುವರಿಕೆಯಾಗಿದೆ.

 

ಭಾರತೀಯ ನಿಯೋಗದ ನೇತೃತ್ವವನ್ನು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಡಾ. ಹರ್ಷವರ್ಧನ್ ವಹಿಸಿದ್ದರು. ಈ ಸಭೆಯ ಪ್ರಮುಖ ಗಮನ 2020ರ ನಂತರ ಅವಧಿಯಲ್ಲಿ ಪ್ಯಾರಿಸ್ ಒಪ್ಪಂದದ ಅನುಷ್ಠಾನ ಕುರಿತಂತೆ ಮಾರ್ಗಸೂಚಿಗಳನ್ನು ಆಖೈರುಗೊಳಿಸುವುದಾಗಿತ್ತು. ಭಾರತದ ಪ್ರಸ್ತಾಪವು ಯು.ಎನ್.ಎಫ್.ಸಿ.ಸಿ.ಸಿ. ಮತ್ತು ಪ್ಯಾರಿಸ್ ಒಪ್ಪಂದದ ನೀತಿಗಳು ಮತ್ತು ನಿಯಮಾವಳಿಗಳು ಅದರಲ್ಲೂ ಸಮಾನತೆ ಮತ್ತು ನ್ಯಾಯದ ನೀತಿಗಳು ಆದರೆ ವಿಭಿನ್ನತೆಯಿಂದ ಕೂಡಿದ ಹೊಣೆಗಾರಿಕೆಗಳು ಮತ್ತು ನಿರೀಕ್ಷಿತ ಸಾಮರ್ಥ್ಯ (ಸಿಬಿಪಿಆರ್-ಆರ್.ಸಿ.)ನಿಂದ ಮಾರ್ಗದರ್ಶನ ಮಾಡಲ್ಪಟ್ಟಿದ್ದವು.

 

ಭಾರತವು ಪ್ಯಾರಿಸ್ ಒಪ್ಪಂದದ ಬಗ್ಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸಿತು ಮತ್ತು ಕಾಪ್ 24ರ ವೇಳೆ ಪ್ಯಾರಿಸ್ ಒಪ್ಪಂದವನ್ನು ಸಂಪೂರ್ಣವಾಗಿ ಸಾಮೂಹಿಕ ರೀತಿಯಲ್ಲಿ ಕಾರ್ಯಗತಗೊಳಿಸುವ ಭರವಸೆಯನ್ನು ಪುನರುಚ್ಚರಿಸುವ ಮೂಲಕ ತನ್ನ ನಾಯಕತ್ವವನ್ನು ಒತ್ತಿ ಹೇಳಿತು. ಪರಿಸರವನ್ನು ರಕ್ಷಿಸುವ ನಮ್ಮ ಸಾಂಪ್ರದಾಯಿಕ ತತ್ವಗಳಿಗೆ ಅನುಗುಣವಾಗಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಹವಾಮಾನ ಬದಲಾವಣೆಯ ಕಾಳಜಿಯನ್ನು ನಿಭಾಯಿಸಲು ಭಾರತ ಸರ್ಕಾರ ಹಲವಾರು ಪ್ರಯತ್ನಗಳನ್ನು ಕೈಗೊಂಡಿದೆ ಮತ್ತು ಈ ಉಪಕ್ರಮಗಳು ಹವಾಮಾನ ಕ್ರಮದ ಕಡೆಗೆ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ. ಸೌರ ಶಕ್ತಿಯಿಂದ 24 ಗಿ.ವ್ಯಾ ಸ್ಥಾಪಿತ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಸೇರಿದಂತೆ 74 ಗಿ.ವ್ಯಾ. ನವೀಕರಿಸಬಹುದಾದ ಇಂಧನಕ್ಕಾಗಿ ಉತ್ತೇಜನ; ಅಂತಾರಾಷ್ಟ್ರೀಯ ಸೌರ ಸಹಯೋಗದ ಮೂಲಕ ವರ್ಧಿತ ಸೌರಶಕ್ತಿ ಸಾಮರ್ಥ್ಯದ ಅನ್ವೇಷಣೆಯಲ್ಲಿ ಪ್ರಪಂಚವನ್ನು ಮುನ್ನಡೆಸುವುದು; ಇಂಧನ ದಕ್ಷತೆಯ ಕ್ರಮಗಳು ಇವುಗಳಿಗೆ ಕೆಲವು ಉದಾಹರಣೆಗಳಾಗಿವೆ.

 

ಆದಾಗ್ಯೂ ಅಭಿವೃದ್ಧಿಶೀಲ ರಾಷ್ಟ್ರಗಳ ಕ್ರಮಗಳು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಹಣಕಾಸು, ಸಾಮರ್ಥ್ಯವರ್ಧನೆ ಮತ್ತು ತಾಂತ್ರಿಕ ಬೆಂಬಲ ಸೇರಿದಂತೆ ಸುಸ್ಥಿರ ಮತ್ತು ಸೂಕ್ತವಾದ ಅನುಷ್ಠಾನದ ಮೂಲಕ ಪೂರಕವಾಗಿದೆ ಎಂಬುದನ್ನು ಖಚಿತಪಡಿಸುವುದು ಮುಖ್ಯವಾಗಿದೆ. ಅಳವಡಿಸಿಕೊಳ್ಳಲಾದ ಮಾರ್ಗದರ್ಶನಗಳು, ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಅಭಿವೃದ್ಧಿ ಶೀಲ ರಾಷ್ಟ್ರಗಳಿಗೆ ಅನುಷ್ಠಾನದ ಸ್ವರೂಪದಲ್ಲಿ ಕಾರ್ಯಗತಗೊಳಿಸುವ ಹೊಣೆಯನ್ನು ಒದಗಿಸುತ್ತವೆ ಮತ್ತು  ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಹವಾಮಾನ ಹಣಕಾಸು ಯೋಜನೆಯ ಯೋಜಿತ ಮಟ್ಟಗಳಲ್ಲಿ ಸ್ಪಷ್ಟತೆ ತರಲು ಸವಿವರವಾದ ಮಾಹಿತಿಯನ್ನು ಒದಗಿಸುವುದು ಅಗತ್ಯವಾಗಿದೆ.  ಪಕ್ಷಕಾರರು ಹೊಸ ಸಮಗ್ರ ಹಣಕಾಸು ಗುರಿಗಳನ್ನು 2020ರ ತರುವಾಯ 100 ಶತಕೋಟಿ ಅಮೆರಿಕನ್ ಡಾಲರ್ ಗಳ ಭೂಮಿಕೆಯ ಹೊಸ ಸಂಚಿತ  ಹಣಕಾಸು ಸ್ಥಾಪನೆಗಾಗಿ ಕಾರ್ಯೋನ್ಮುಖವಾಗಲು ಸಮ್ಮತಿ ಸೂಚಿಸಿವೆ.

 

ಒಟ್ಟಾರೆಯಾಗಿ, ಭಾರತದ ದೀರ್ಘಾವಧಿಯ ಹಿತಾಸಕ್ತಿಗಳನ್ನು ರಕ್ಷಿಸಲಾಗಿದೆ. ಅಮೆರಿಕದ ಜಾಗತಿಕ ಸ್ಟಾಕ್ ಟೇಕ್ (ಜಿಎಸ್ಟಿ) ರಿಸರ್ವೇಷನ್ ನಿರ್ಧಾರದ ಕುರಿತಂತೆ ಜಿಎಸ್ಟಿ ಪ್ರಕ್ರಿಯೆಯ ಫಲಶ್ರುತಿಯಲ್ಲಿ ಇಕ್ವಿಟಿಯನ್ನು ಪರಿಗಣಿಸುವ ಅಗತ್ಯದ ಬಗ್ಗೆ ಭಾರತವು ತಿಳಿಸಿದ್ದು, ಪ್ಯಾರಿಸ್ ಒಪ್ಪಂದದ ಆದೇಶದ ರೀತ್ಯ ಇದು ಜಿಎಸ್ಟಿ ಪ್ರಕ್ರಿಯೆಯ ಪ್ರಮುಖ ಭಾಗವಾಗಿದ್ದು, ಬಡವರು ಮತ್ತು ಅಂಚಿನಲ್ಲಿರುವವರು ಎದುರಿಸುವ ಸೂಕ್ಷ್ಮತೆ, ಸಮಸ್ಯೆಗಳು ಮತ್ತು ಸವಾಲುಗಳ ಪರಿಹಾರದ ಖಾತ್ರಿಪಡಿಸುವ ಬಗ್ಗೆ ಪ್ರಸ್ತಾಪಿಸಿದೆ.

 

*****



(Release ID: 1558330) Visitor Counter : 63