ಸಂಪುಟ

ಭಾರತ ಮತ್ತು ಸಾವೋ ಟೋಮ್ ಮತ್ತು ಪ್ರಿನ್ಸಿಪೆ ನಡುವೆ ಶಾಂತಿಯುತ ಉದ್ದೇಶಕ್ಕಾಗಿ ಬಾಹ್ಯಾಕಾಶದ ಬಳಕೆ ಮತ್ತು ಶೋಧನೆಗಾಗಿ ಸಹಕಾರ ಮತ್ತು ಚೌಕಟ್ಟು ಒಪ್ಪಂದದ ಬಗ್ಗೆ ಸಂಪುಟಕ್ಕೆ ವಿವರಣೆ 

Posted On: 28 DEC 2018 3:57PM by PIB Bengaluru

ಭಾರತ ಮತ್ತು ಸಾವೋ ಟೋಮ್ ಮತ್ತು ಪ್ರಿನ್ಸಿಪೆ ನಡುವೆ ಶಾಂತಿಯುತ ಉದ್ದೇಶಕ್ಕಾಗಿ ಬಾಹ್ಯಾಕಾಶದ ಬಳಕೆ ಮತ್ತು ಶೋಧನೆಗಾಗಿ ಸಹಕಾರ ಮತ್ತು ಚೌಕಟ್ಟು ಒಪ್ಪಂದದ ಬಗ್ಗೆ ಸಂಪುಟಕ್ಕೆ ವಿವರಣೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ, ಭಾರತ ಮತ್ತು ಸಾವೋ ಟೋಮ್ ಮತ್ತು ಪ್ರಿನ್ಸಿಪೆ ನಡುವೆ ಶಾಂತಿಯುತ ಉದ್ದೇಶಕ್ಕಾಗಿ ಬಾಹ್ಯಾಕಾಶದ ಬಳಕೆ ಮತ್ತು ಶೋಧನೆಗಾಗಿ ಸಹಕಾರ ಮತ್ತು ಚೌಕಟ್ಟು ಒಪ್ಪಂದದ ಬಗ್ಗೆ ವಿವರಿಸಲಾಯಿತು. ಈ ಚೌಕಟ್ಟು ಒಪ್ಪಂದಕ್ಕೆ ನವದೆಹಲಿಯಲ್ಲಿ 2018ರ ಸೆಪ್ಟೆಂಬರ್ 7ರಂದು ಅಂಕಿತ ಹಾಕಲಾಗಿತ್ತು.

 

ಪ್ರಮುಖ ಅಂಶಗಳು:

 

             i.       ಈ ಚೌಕಟ್ಟು ಒಪ್ಪಂದವು ಭೂ ದೂರ ಸಂವೇದಿ; ಉಪಗ್ರಹ ಸಂವಹನ; ಉಪಗ್ರಹ ಪಥದರ್ಶನ; ಬಾಹ್ಯಾಕಾಶ ವಿಜ್ಞಾನ ಮತ್ತು ಬಾಹ್ಯಾಕಾಶದ ಶೋಧನೆಯ ಕ್ಷೇತ್ರದಲ್ಲಿ ಹೊಸ ಸಂಶೋಧನಾ ಚಟುವಟಿಕೆ ಮತ್ತು ಆನ್ವಯಿಕಗಳ ಸಾಧ್ಯತೆಗಳಿಗೆ ಇಂಬು ನೀಡಲಿದೆ.

 

          ii.       ಈ ಚೌಕಟ್ಟು ಒಪ್ಪಂದವು ಮಾನವತೆಯ ಅನುಕೂಲಕ್ಕಾಗಿ ಬಾಹ್ಯಾಕಾಶ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಕ್ಷೇತ್ರದಲ್ಲಿ ಜಂಟಿ ಚಟುವಟಿಕೆಗಳನ್ನು ಆಯೋಜಿಸಲು ಕಾರಣವಾಗುತ್ತದೆ. ಆ ಮೂಲಕ ಎರಡೂ ದೇಶಗಳ ಎಲ್ಲ ವರ್ಗಗಳು ಮತ್ತು ಪ್ರದೇಶಗಳಿಗೂ ಪ್ರಯೋಜನವಾಗಲಿದೆ.

 

ಪ್ರಮುಖ ಪರಿಣಾಮ:                                               

 

ಈ ಚೌಕಟ್ಟು ಒಪ್ಪಂದವು ಭೂ ದೂರ ಸಂವೇದಿ; ಉಪಗ್ರಹ ಸಂವಹನ; ಉಪಗ್ರಹ ಪಥದರ್ಶನ; ಬಾಹ್ಯಾಕಾಶ ವಿಜ್ಞಾನ ಮತ್ತು ಬಾಹ್ಯಾಕಾಶದ ಶೋಧನೆಯ ಕ್ಷೇತ್ರದಲ್ಲಿ ಹೊಸ ಸಂಶೋಧನಾ ಚಟುವಟಿಕೆ ಮತ್ತು ಆನ್ವಯಿಕಗಳ ಸಾಧ್ಯತೆಗಳಿಗೆ ಇಂಬು ನೀಡಲಿದೆ. ಇದು ಮಾನವತೆಯ ಪ್ರಯೋಜನಕ್ಕಾಗಿ ಬಾಹ್ಯಾಕಾಶ ತಂತ್ರಜ್ಞಾನದ ಆನ್ವಯಿಕಗಳ ಕ್ಷೇತ್ರದಲ್ಲಿ ಜಂಟಿ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸಲು ಕಾರಣವಾಗುತ್ತದೆ. ಆ ಮೂಲಕ ಎರಡೂ ದೇಶಗಳ ಎಲ್ಲ ವರ್ಗ ಮತ್ತು ಪ್ರದೇಶಗಳಿಗೆ ಪ್ರಯೋಜನವಾಗಲಿದೆ.

 

ಹಿನ್ನೆಲೆ:

 

             i.       ಸವೋ-ಟ್ರೋಮ್ ಮತ್ತು ಪ್ರಿನ್ಸಿಪೆಯಲ್ಲಿ ಉಪಗ್ರಹ ನಿಗಾ ನಿಲ್ದಾಣ ಸ್ಥಾಪನೆ ಮತ್ತು ಅದಕ್ಕೆ ಆಗುವ ಆರ್ಥಿಕ ಹೊರೆ ಕುರಿತಂತೆ ಡಿ.ಓ.ಎಸ್. ಪರಿಗಣಿಸಬೇಕು ಎಂಬುದೂ ಸೇರಿದಂತೆ ಭಾರತದೊಂದಿಗೆ ಬಾಹ್ಯಾಕಾಶ ಸಹಕಾರ ಹೊಂದುವ ಸವೋ-ಟೋಮ್ ಮತ್ತು ಪ್ರಿನ್ಸಿಪೆ ಪ್ರಜಾಸತ್ತಾತ್ಮಕ ಗಣರಾಜ್ಯ ಸರ್ಕಾರದ ಆಸಕ್ತಿಯ ಕುರಿತಂತೆ ಬಾಹ್ಯಾಕಾಶ ಇಲಾಖೆ (ಡಿಓಎಸ್), ಅಭಿಪ್ರಾಯವನ್ನು ಕೋರಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಂವಹನಗಳ (2017 ನವೆಂಬರ್), ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿಯ ಸಚಿವಾಲಯ – ಎನ್.ಎಸ್.ಸಿ.ಎಸ್. (2018 ಜನವರಿ) ತರುವಾಯ, ಇಸ್ರೋ ಸವೋ-ಟೋಮ್ ಮತ್ತು ಪ್ರಿನ್ಸಿಪೆಯ ಭೌಗೋಳಿಕ ಸ್ಥಳಗಳಲ್ಲಿ ಪ್ರಾಥಮಿಕ ಅಧ್ಯಯನ ಕೈಗೊಂಡು, ಭಾರತೀಯ ಬಾಹ್ಯಾಕಾಶ ನೆಲ ನಿಲ್ದಾಣ ಮತ್ತು ಅದರ ಸ್ಥಾಪನೆಗೆ  ಸಾವೋ-ಟೋಮ್ ಮತ್ತು ಪ್ರಿನ್ಸಿಪೆಯ ಸೂಕ್ತತೆ ಮತ್ತು ಅದರ ಸ್ಥಾಪನೆಗೆ ಆಗುವ ಹಣಕಾಸು ಪರಿಣಾಮಗಳ ಕುರಿತಂತೆ ಎನ್.ಎಸ್.ಸಿ.ಎಸ್.ಗೆ ತಿಳಿಸಿತು.

 

          ii.       ನಂತರ, 2018ರ ಮಾರ್ಚ್ ಕೊನೆಯ ವಾರದಲ್ಲಿ, ಇಂಗಿತ ಪತ್ರ (ಎಲ್.ಓ.ಐ.)ಗೆ ಇಸ್ರೋ ಅಧ್ಯಕ್ಷರು ಪ್ರತಿನಿಧಿಸಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ಸವೋ-ಟ್ರೋಮ್ ಮತ್ತು ಪ್ರಿನ್ಸಿಪೆಯ ಗಣರಾಜ್ಯ ಸರ್ಕಾರದ ನಡುವೆ ಅದರ ವಿದೇಶಾಂಗ ವ್ಯವಹಾರಗಳು ಮತ್ತು ಸಮುದಾಯಗಳ ಸಚಿವರು ಸವೋ-ಟ್ರೋಮ್ ಮತ್ತು ಪ್ರಿನ್ಸಿಪೆಯಲ್ಲಿ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಗಳಿಗಾಗಿ ನೆಲ ನಿಲ್ದಾಣ ಸ್ಥಾಪನೆ ಮತ್ತು ನಿರ್ವಹಣೆಗಾಗಿ ಅಂಕಿತ ಹಾಕಿದರು.

 

        iii.       ಸವೋ-ಟ್ರೋಮ್ ಮತ್ತು ಪ್ರಿನ್ಸಿಪೆಯ ಪ್ರಾಧಿಕಾರಗಳ ಆಹ್ವಾನದ ಮೇರೆಗೆ ಇಸ್ರೋದ ತಜ್ಞರ ತಂಡ, ಸವೋ-ಟ್ರೋಮ್ ಮತ್ತು ಪ್ರಿನ್ಸಿಪೆಯ ದ್ವೀಪಗಳಿಗೆ ಭೇಟಿ ನೀಡಿ, ನೆಲ ನಿಲ್ದಾಣ ಸ್ಥಾಪನೆಗಾಗಿ ಸೂಕ್ತ ಭೂ ಪ್ರದೇಶವನ್ನು ಗುರುತಿಸಿತು. ನೆಲ ನಿಲ್ದಾಣ ಸ್ಥಾಪನೆಯಾದಾಗಿನಿಂದಲೂ ನಿರ್ದಿಷ್ಟ ಚಟುವಟಿಕೆಯಿದ್ದು, ಈ ನೆಲ ನಿಲ್ದಾಣದ ಪ್ರಯೋಜನವನ್ನು ಪಡೆದುಕೊಳ್ಳಲು ಸೂಕ್ತ ತಂತ್ರಜ್ಞರ ನೇಮಕಕ್ಕೆ ಎರಡೂ ದೇಶಗಳ ನಡುವೆ ಸಹಕಾರ ಅಗತ್ಯವಿದ್ದು, "ಶಾಂತಿಯುತ ಉದ್ದೇಶಕ್ಕಾಗಿ ಬಾಹ್ಯಾಕಾಶದ ಬಳಕೆ ಮತ್ತು ಶೋಧನೆ" ಎಂಬ ಶೀರ್ಷಿಕೆಯಡಿಯಲ್ಲಿ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಬಹು ಚಟುವಟಿಕೆಗಾಗಿ, ಚೌಕಟ್ಟು ಒಪ್ಪಂದಕ್ಕೆ ಅಂಕಿತ ಹಾಕಬೇಕು ಎಂಬುದನ್ನು ಎರಡೂ ದೇಶಗಳು ಒಪ್ಪಿದ್ದವು.

 

*****



(Release ID: 1557849) Visitor Counter : 91