ಸಂಪುಟ
ಕರಾವಳಿ ನಿಯಂತ್ರಣ ವಲಯ (ಸಿ.ಆರ್.ಜಡ್) ಅಧಿಸೂಚನೆ 2018ಕ್ಕೆ ಸಂಪುಟದ ಅನುಮೋದನೆ
Posted On:
28 DEC 2018 3:56PM by PIB Bengaluru
ಕರಾವಳಿ ನಿಯಂತ್ರಣ ವಲಯ (ಸಿ.ಆರ್.ಜಡ್) ಅಧಿಸೂಚನೆ 2018ಕ್ಕೆ ಸಂಪುಟದ ಅನುಮೋದನೆ
ಎಫ್.ಎಸ್.ಐ. ಪ್ರಸಕ್ತ ನಿಯಮಗಳ ರೀತ್ಯ ಸಿ.ಆರ್.ಜಡ್ ಪ್ರದೇಶಗಳಲ್ಲಿ ಜನದಟ್ಟಣೆಯ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗಾಗಿ ಹೆಚ್ಚಿನ ಅವಕಾಶ ಒದಗಿಸುತ್ತದೆ, ಪ್ರವಾಸೋದ್ಯಮ ಮೂಲಸೌಕರ್ಯಕ್ಕಾಗಿ ಮೂಲಭೂತ ಸೌಲಭ್ಯ ಉತ್ತೇಜಿಸುತ್ತದೆ, ಸಿ.ಆರ್.ಜಡ್ ಅನುಮೋದನೆಯನ್ನು ಸುವ್ಯವಸ್ಥಿತಗೊಳಿಸಲಾಗಿದೆ, ಎಲ್ಲ ದ್ವೀಪಗಳ 20 ಮೀಟರ್ ನಲ್ಲಿ ಯಾವುದೇ ಅಭಿವೃದ್ಧಿ ಮಾಡುವ ವಲಯ ಇರುವುದಿಲ್ಲ. ಪರಿಸರಾತ್ಮಕವಾಗಿ ಸೂಕ್ಷ್ಮ ಪ್ರದೇಶಗಳ ಮಾಲಿನ್ಯ ಪ್ರಚೋದನೆಯ ಮೇಲೆ ವಿಶೇಷ ಗಮನಕ್ಕೆ ವಿಶೇಷ ಮಹತ್ವ ನೀಡಲಾಗಿದೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೆಲವು ಉಪವಾಕ್ಯಗಳಿಗೆ ಆವರ್ತಕ ತಿದ್ದುಪಡಿಗಳೊಂದಿಗೆ ಈ ಹಿಂದೆ 2011ರಲ್ಲಿ ಪರಾಮರ್ಶಿಸಿ, ಹೊರಡಿಸಲಾಗಿದ್ದ ಕರಾವಳಿ ನಿಯಂತ್ರಣ ವಲಯ (ಸಿ.ಆರ್.ಜಡ್) ಅಧಿಸೂಚನೆ 2018ಕ್ಕೆ ತನ್ನ ಅನುಮೋದನೆ ನೀಡಿದೆ. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು, 2011ರ ಸಿಆರ್.ಜಡ್. ಅಧಿಸೂಚನೆಯ ನಿಬಂಧನೆಗಳನ್ನು ಅದರಲ್ಲೂ ಸಮುದ್ರ ಮತ್ತು ಕರಾವಳಿ ಪರಿಸರ ವ್ಯವಸ್ಥೆಗಳ ನಿರ್ವಹಣೆ ಮತ್ತು ಸಂರಕ್ಷಣೆಯೊಂದಿಗೆ, ಕರಾವಳಿ ಪ್ರದೇಶಗಳಲ್ಲಿನ ಅಭಿವೃದ್ಧಿ, ಪರಿಸರ ಪ್ರವಾಸೋದ್ಯಮ, ಜೀವನೋಪಾಯದ ಆಯ್ಕೆ ಮತ್ತು ಕರಾವಳಿ ಸಮುದಾಯಗಳ ಸುಸ್ಥಿರ ಅಭಿವೃದ್ಧಿ ಇತ್ಯಾದಿ ಕುರಿತಂತೆ ಸಮಗ್ರವಾಗಿ ಪರಾಮರ್ಶಿಸುವಂತೆ ಇತರ ಬಾಧ್ಯಸ್ಥರು ಸೇರಿದಂತೆ ಕರಾವಳಿ ರಾಜ್ಯಗಳು/ಕೇಂದ್ರಾಂಡಳಿತ ಪ್ರದೇಶಗಳಿಂದ ಸರಣಿ ಮನವಿಗಳು ಸ್ವೀಕೃತವಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪ್ರಯೋಜನಗಳು
ಉದ್ದೇಶಿತ ಸಿ.ಆರ್.ಜಡ್ ಅಧಿಸೂಚನೆ 2018 ಕರಾವಳಿ ವಲಯದಲ್ಲಿ ಹೆಚ್ಚಿನ ಚಟುವಟಿಕೆಗೆ ತನ್ಮೂಲಕ ಕರಾವಳಿ ಪ್ರದೇಶಗಳ ಸಂರಕ್ಷಣೆ ತತ್ವಗಳನ್ನು ಗೌರವಿಸುವ ಮೂಲಕ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದು ಕೇವಲ ಗಣನೀಯ ಉದ್ಯೋಗ ಸೃಷ್ಟಿ ಮಾತ್ರವಲ್ಲದೆ, ಉತ್ತಮ ಜೀವನಕ್ಕೆ ಹಾಗೂ ಭಾರತದ ಆರ್ಥಿಕಗೆ ಮೌಲ್ಯ ತುಂಬಲಿದೆ. ಹೊಸ ಅಧಿಸೂಚನೆಯು ಕರಾವಳಿಯ ದುರ್ಬಲತೆಯನ್ನು ತಗ್ಗಿಸುವುದರ ಜೊತೆಗೆ ಕರಾವಳಿ ಪ್ರದೇಶದ ಪುನಶ್ಚೇತನಗೊಳಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ಪ್ರಮುಖ ಅಂಶಗಳು:
(i) ಸಿ.ಆರ್.ಜಡ್. ಪ್ರದೇಶಗಳಲ್ಲಿ ಪ್ರಸಕ್ತ ರೂಢಿಯಂತೆ ಎಫ್.ಎಸ್.ಐ.ಗೆ ಅವಕಾಶ ನೀಡಿಕೆ: ಸಿ.ಆರ್.ಜಡ್., 2011 ಅಧಿಸೂಚನೆಯ ರೀತ್ಯ ಸಿ.ಆರ್.ಜಡ್ - II (ನಗರ) ಪ್ರದೇಶ, ಪ್ಲೋರ್ ಸ್ಪೇಸ್ ಇಂಡೆಕ್ಸ್ (ಎಫ್.ಎಸ್.ಐ.) ಅಥವಾ ಫ್ಲೋರ್ ಏರಿಯಾ ಅನುಪಾತ (ಎಫ್.ಎ.ಆರ್.) ಅನ್ನು 1991ರ ಅಭಿವೃದ್ಧಿ ನಿಯಂತ್ರಣ ಮಟ್ಟ (ಡಿ.ಸಿ.ಆರ್.)ದ ರೀತ್ಯ ಪ್ರೋಜನ್ ಮಾಡಲಾಗಿದೆ. ಸಿ.ಆರ್.ಜಡ್ 2018ರ ಅಧಿಸೂಚನೆಯಲ್ಲಿ, ಹೊಸ ಅಧಿಸೂಚನೆ ದಿನಾಂಕದಂದು ಚಾಲ್ತಿಯಲ್ಲಿರುವಂತೆ ಇದನ್ನು ಡಿ-ಪ್ರೀಜ್ ಮಾಡಲು ಮತ್ತು ನಿರ್ಮಾಣ ಯೋಜನೆಗಳಿಗೆ ಎಫ್.ಎಸ್.ಐ. ಅನುಮತಿಸಲು ನಿರ್ಧರಿಸಲಾಗಿದೆ. ಇದು ಹೊರಹೊಮ್ಮುವ ಅಗತ್ಯಗಳನ್ನು ಪೂರೈಸಲು ಈ ಪ್ರದೇಶಗಳ ಪುನರಾಭಿವೃದ್ಧಿಗೆ ಅವಕಾಶ ನೀಡುತ್ತದೆ.
(ii) ಜನದಟ್ಟಣೆಯ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಗೆ ಹೆಚ್ಚಿನ ಅವಕಾಶವನ್ನು ಒದಗಿಸುತ್ತವೆ: ಸಿ.ಆರ್.ಜಡ್ –III (ಗ್ರಾಮೀಣ) ಪ್ರದೇಶಗಳು, ಎರಡು ಪ್ರತ್ಯೇಕ ಪ್ರವರ್ಗಗಳನ್ನು ಈ ಕೆಳಕಂಡಂತೆ ನಿರ್ಣಯಿಸಲಾಗಿದೆ:
(a) ಸಿ.ಆರ್.ಜಡ್-III ಎ - 2011 ರ ಜನಗಣತಿ ಪ್ರಕಾರ ಪ್ರತಿ ಚದರ ಕಿಲೋಮೀಟರಿಗೆ 2161 ರಷ್ಟು ಜನ ಸಾಂದ್ರತೆ ಹೊಂದಿರುವ ಜನಸಾಂದ್ರತೆಯುಳ್ಳ ಗ್ರಾಮೀಣ ಪ್ರದೇಶಗಳು ಇವಾಗಿವೆ. ಇಂತಹ ಪ್ರದೇಶಗಳಲ್ಲಿ ಎಚ್.ಟಿ.ಎಲ್. 50 ಮೀಟರ್ ಗಳಷ್ಟು ಅಭಿವೃದ್ಧಿ ಮಾಡಬಾರದ ವಲಯ (ಎನ್.ಡಿ.ಝಡ್) ಅನ್ನು ಸಿಆರ್.ಜಡ್ 2011 ರ ಅಧಿಸೂಚನೆಯಲ್ಲಿ ನಿಗದಿಪಡಿಸಿದಂತೆ ಅತಿ ಎತ್ತರದ ಅಲೆಗಳ ಸಾಲಿನಿಂದ 200 ಮೀಟರ್ ಗಳಿರುತ್ತವೆ, ಏಕೆಂದರೆ ಇಂತಹ ಪ್ರದೇಶಗಳು ನಗರ ಪ್ರದೇಶಗಳ ರೀತಿಯಲ್ಲೇ ಇರುತ್ತದೆ.
(b) ಸಿ.ಆರ್.ಜಡ್-III ಬಿ - 2011 ರ ಜನಗಣತಿ ಪ್ರಕಾರ ಗ್ರಾಮೀಣ ಪ್ರದೇಶಗಳು ಪ್ರತಿ ಚದರ ಕಿಲೋಮೀಟರಿಗೆ 2161 ಕ್ಕಿಂತ ಕಡಿಮೆ ಜನಸಂಖ್ಯೆ ಸಾಂದ್ರತೆಯನ್ನು ಹೊಂದಿವೆ.ಇಂಥ ಪ್ರದೇಶಗಳು ಎಚ್.ಟಿ.ಎಲ್.ನಿಂದ 200 ಮೀಟರ್ ಗಳ ಎನ್.ಡಿ.ಜಡ್. ಪ್ರದೇಶದಲ್ಲಿ ಮುಂದುವರಿಯುತ್ತವೆ.
(iii) ಮೂಲಭೂತ ಸೌಲಭ್ಯಕ್ಕಾಗಿ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಉತ್ತೇಜಿಸುವುದು: ತಾತ್ಕಾಲಿಕ ಪ್ರವಾಸೋದ್ಯಮ ಸೌಲಭ್ಯಗಳಾದ, ಗುಡಾರಗಳು, ಶೌಚಾಲಯ ಸಮುಚ್ಚಯ, ಬದಲಾವಣೆ ಕೊಠಡಿಗಳು, ಕುಡಿಯುವ ನೀರಿನ ಸೌಲಭ್ಯಗಳು ಮುಂತಾದುವಕ್ಕೆ ಬೀಚ್ ಗಳಲ್ಲಿ ಅನುಮತಿಸಲಾಗಿದೆ. ಅಧಿಸೂಚನೆಯನ್ವಯ ಈ ತಾತ್ಕಾಲಿಕ ಪ್ರವಾಸೋದ್ಯಮ ಸೌಕರ್ಯಗಳು ಈಗ ಸಿ.ಆರ್.ಜಡ್ -III ಪ್ರದೇಶದ “ಅಭಿವೃದ್ಧಿ ಮಾಡಬಾರದ ವಲಯ’ (ಎನ್.ಡಿ.ಜಡ್)ಗೂ ಅನುಮತಿಸಲಾಗಿದೆ. ಆದಾಗ್ಯೂ, ಎಚ್.ಟಿ.ಎಲ್.ನಿಂದ 10 ಮೀ. ಅನ್ನು ಅಂಥ ಸೌಲಭ್ಯಕ್ಕಾಗಿ ನಿರ್ವಹಣೆ ಮಾಡಲೇಬೇಕು.
(i) ಸಿಆರ್.ಜಡ್ ಅನುಮೋದನೆಯ ಸುವ್ಯವಸ್ಥಿತಗೊಳಿಸಲಾಗಿದೆ: ಸಿ.ಆರ್.ಜಡ್.ನ ಅನುಮತಿಗಾಗಿ ಪ್ರಕ್ರಿಯೆಗಳನ್ನು ಈಗ ಸುವ್ಯವಸ್ಥಿತಗೊಳಿಸಲಾಗಿದೆ. ಸಿ.ಆರ್.ಜಡ್ -I (ಪರಿಸರ ವಿಜ್ಞಾನದ ಸೂಕ್ಷ್ಮ ಪ್ರದೇಶಗಳು) ಮತ್ತು ಸಿಆರ್.ಜಡ್ IV (ಲೋ ಟೈಡ್ ಲೈನ್ ಮತ್ತು 12 ಸಾಗರ ಮೈಲಿಗಳ ದೂರ ಸಾಗರ ವಾರ್ಡ್ ಮಧ್ಯೆ ಇರುವ ಪ್ರದೇಶ) ನಲ್ಲಿರುವ ಅಂತಹ ಯೋಜನೆಗಳು / ಚಟುವಟಿಕೆಗಳು ಮಾತ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ಸಿ.ಆರ್.ಜಡ್ ಅನುಮತಿಗಾಗಿ ವ್ಯವಹರಿಸಬಹುದು. ಸಿಆರ್.ಜಡ್-II ಮತ್ತು III ಗೆ ಸಂಬಂಧಿಸಿದಂತೆ ಪರವಾನಗಿಗಳ ಅಧಿಕಾರವನ್ನು ರಾಜ್ಯ ಮಟ್ಟದಲ್ಲಿ ಅಗತ್ಯ ಮಾರ್ಗದರ್ಶನದಲ್ಲಿ ನಿಯೋಜಿಸಲಾಗಿದೆ.
(v) ಯಾವುದೇ ಅಭಿವೃದ್ಧಿ ಮಾಡಬಾರದ ವಲಯ (ಎನ್.ಡಿ.ಜಡ್)ದ ಎಲ್ಲ ದ್ವೀಪಗಳಿಗೆ 20 ಮೀಟರ್ ನಿಗದಿಪಡಿಸಲಾಗಿದೆ: ಮುಖ್ಯ ಕರಾವಳಿ ನೆಲಕ್ಕೆ ಹತ್ತಿರದಲ್ಲಿರುವ ದ್ವೀಪಗಳು ಮತ್ತು ಮುಖ್ಯ ನೆಲದ ಎಲ್ಲ ಹಿನ್ನೀರಿನ ದ್ವೀಪ ಪ್ರದೇಶಗಳ ಮಿತಿಗಳನ್ನು ಮತ್ತು ಅಂತಹ ಪ್ರದೇಶಗಳ ವಿಶಿಷ್ಟ ಭೌಗೋಳಿಕತೆಯ ಹಿನ್ನೆಲೆಯಲ್ಲಿ, ಅಂತಹ ಪ್ರದೇಶಗಳ ಪರಿಗಣನೆಯಲ್ಲಿ ಏಕರೂಪತೆಯನ್ನು ತರುವ ಸಲುವಾಗಿ, 20 ಮೀಟರ್ಗಳ ಎನ್.ಡಿ.ಜಡ್ ಅನ್ನು ನಿಗದಿಪಡಿಸಲಾಗಿದೆ.
(vi) ಎಲ್ಲ ಪರಿಸರಾತ್ಮಕ ಸೂಕ್ಷ್ಮ ಪ್ರದೇಶಗಳಿಗೆ ವಿಶೇಷ ಮಹತ್ವನ್ನು ನೀಡಲಾಗಿದೆ: ಸಿ.ಆರ್.ಜಡ್. ಅಧಿಸೂಚನೆಯ ಭಾಗವಾಗಿ, ಸಂರಕ್ಷಣೆ ಮತ್ತು ನಿರ್ವಹಣೆ ಯೋಜನೆಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ.
(vii) ಮಾಲಿನ್ಯ ತಗ್ಗಿಸುವಿಕೆಗೆ ವಿಶೇಷ ಗಮನ ಹರಿಸಲಾಗಿದೆ : ಕರಾವಳಿ ಪ್ರದೇಶಗಳಲ್ಲಿನ ಮಾಲಿನ್ಯವನ್ನು ತಗ್ಗಿಸುವ ಸಲುವಾಗಿ ಸಿಆರ್.ಜಡ್-I ಬಿ ಪ್ರದೇಶದ ಅಗತ್ಯವಿರುವ ರಕ್ಷಣಾತ್ಮಕ ಕಾರ್ಯಕ್ಕೆಒಳಪಟ್ಟು ಅನುಮತಿ ನೀಡಲಾಗಿದೆ.
(viii) ರಕ್ಷಣೆ ಮತ್ತು ವ್ಯೂಹಾತ್ಮಕ ಯೋಜನೆಗಳಿಗೆ ಅಗತ್ಯ ನ್ಯಾಯ ವಿತರಣೆ ಮಾಡಲಾಗಿದೆ.
ಹಿನ್ನೆಲೆ:
ಕರಾವಳಿ ಪರಿಸರವನ್ನು ಸಂರಕ್ಷಿಸುವ ಮತ್ತು ರಕ್ಷಿಸುವ ಉದ್ದೇಶದೊಂದಿಗೆ, ಪರಿಸರ ಮತ್ತು ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯವು ಕರಾವಳಿ ನಿಯಂತ್ರಣ ವಲಯ ಅಧಿಸೂಚನೆ 1991ನ್ನು ಅಧಿಸೂಚಿಸಿದ್ದು, ಇದನ್ನು ಆನಂತರ 2011ರಲ್ಲಿ ಪರಿಷ್ಕರಿಸಲಾಗಿತ್ತು. ಮನವಿಗಳು ಸ್ವೀಕಾರವಾಗುವ ಆಧಾರದ ಮೇಲೆ ಅಧಿಸೂಚನೆಗೆ ಕಾಲ ಕಾಲಕ್ಕೆ ತಿದ್ದುಪಡಿ ಮಾಡಲಾಗಿದೆ.
ವಿವಿಧ ಕರಾವಳಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಜೊತೆಗೆ ಸಾಗರ ಮತ್ತು ಕರಾವಳಿ ಪರಿಸರ ವ್ಯವಸ್ಥೆಗಳ ನಿರ್ವಹಣೆ ಮತ್ತು ಸಂರಕ್ಷಣೆಯೊಂದಿಗೆ ಸಂಬಂಧಿಸಿದ ಇತರ ಮಧ್ಯಸ್ಥಗಾರರ ಜೊತೆಗೆ, ಕರಾವಳಿ ಪ್ರದೇಶಗಳಲ್ಲಿ ಅಭಿವೃದ್ಧಿ, ಪರಿಸರ ಪ್ರವಾಸೋದ್ಯಮ, ಜೀವನಾಧಾರ ಆಯ್ಕೆಗಳು ಮತ್ತು ಕರಾವಳಿ ಸಮುದಾಯಗಳ ಸುಸ್ಥಿರ ಅಭಿವೃದ್ಧಿ ಇತ್ಯಾದಿಗಳ ಬಾಧ್ಯಸ್ಥರ ಮನವಿಗಳ ಸಂಖ್ಯೆಯ ಆಧಾರದ ಮೇಲೆ ಅಧಿಸೂಚನೆ ಸಮಗ್ರ ಪರಿಷ್ಕರಣೆ ಕೈಗೊಳ್ಳಲು ಹೆಚ್ಚಿನ ಸಮಯದ ಅಗತ್ಯವಿದೆ ಎಂಬುದನ್ನು ಮನಗಾಣಲಾಗಿದೆ. ಹೀಗಾಗಿ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು, 2011ರ ಸಿ.ಆರ್.ಜಡ್. ಅಧಿಸೂಚನೆಯಲ್ಲಿ ಸೂಕ್ತ ಬದಲಾವಣೆ ಕೋರಿ ಕರಾವಳಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಇತರ ಬಾಧ್ಯಸ್ಥರು ಮಾಡಿರುವ ಶಿಫಾರಸುಗಳ ಪರಿಶೀಲನೆಗಾಗಿ 2014ರ ಜೂನ್ ನಲ್ಲಿ ಡಾ. ಶೈಲೇಶ್ ನಾಯಕ್ (ಕಾರ್ಯದರ್ಶಿ, ಭೂ ವಿಜ್ಞಾನಗಳ ಸಚಿವಾಲಯ) ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿತ್ತು..
ಶೈಲೇಶ್ ನಾಯಕ್ ಸಮಿತಿ ರಾಜ್ಯ ಸರ್ಕಾರಗಳು ಮತ್ತು ಇತರ ಬಾಧ್ಯಸ್ಥರೊಂದಿಗೆ ವಿಸ್ತೃತ ಶ್ರೇಣಿಯ ಸಮಾಲೋಚನೆಗಳನ್ನು ನಡೆಸಿ, 2015ರಲ್ಲಿ ತನ್ನ ಶಿಫಾರಸುಗಳನ್ನು ಸಲ್ಲಿಸಿತು. ಈ ಶಿಫಾರಸುಗಳನ್ನು ಕರಾವಳಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಂಸತ್ ಸದಸ್ಯರೊಂದಿಗೆ ಜೊತೆಗೆ ಭಾರತ ಸರ್ಕಾರದ ಸಂಬಂಧಿತ ಸಚಿವರುಗಳೊಂದಿಗೆ ಮತ್ತೆ ಪರಿಶೀಲನೆ ನಡೆಸಲಾಯಿತು. ಈ ಸಂಬಂಧ 2018ರ ಏಪ್ರಿಲ್ ನಲ್ಲಿ ಕರಡು ಅಧಿಸೂಚನೆಯನ್ನು ಹೊರಡಿಸಿ ಸಾರ್ವಜನಿಕರಿಂದ ಅಭಿಪ್ರಾಯ ಆಹ್ವಾನಿಸಲಾಯಿತು.
ಸರ್ಕಾರದಿಂದ ಸ್ವೀಕರಿಸಲಾದ ಹಲವಾರು ಸಲಹೆಗಳು ಮತ್ತು ಅಭಿಪ್ರಾಯಗಳು ಮತ್ತು ಕರಾವಳಿ ಪ್ರದೇಶಗಳ ಸುಸ್ಥಿರ ಅಭಿವೃದ್ಧಿಯ ಆಧಾರದ ಮೇಲೆ ಮತ್ತು ಕರಾವಳಿ ಪರಿಸರವನ್ನು ಸಂರಕ್ಷಿಸುವ ಅವಶ್ಯಕತೆ ಇರುವ ಒಟ್ಟಾರೆ ಅಭಿಪ್ರಾಯದ ಹಿನ್ನೆಲೆಯಲ್ಲಿ, ಸರಕಾರ ಕರಾವಳಿ ನಿಯಂತ್ರಣ ವಲಯ ಅಧಿಸೂಚನೆ 2018 ಅನ್ನು ಅಂಗೀಕರಿಸಿದ್ದು, ಇದು ಕರಾವಳಿ ಸಮುದಾಯಗಳ ಆಕಾಂಕ್ಷೆಗಳು ಮತ್ತು ಬಡ ಮತ್ತು ದುರ್ಬಲ ಜನವರ್ಗದ ಕಲ್ಯಾಣವನ್ನು ಖಾತ್ರಿಪಡಿಸುತ್ತದೆ.
ಸಿ.ಆರ್.ಜಡ್. ಅಧಿಸೂಚನೆಯಲ್ಲಿ ತರಲಾಗಿರುವ ಬದಲಾವಣೆಗಳು ಕೈಗೆಟಕುವ ದರದ ಮನೆಗಳ ಹೆಚ್ಚುವರಿ ಅವಕಾಶವನ್ನು ಸೃಷ್ಟಿಸುತ್ತವೆ. ಇದು ಕೇವಲ ವಸತಿ ಕ್ಷೇತ್ರಕ್ಕೆ ಮಾತ್ರವೇ ಅಲ್ಲದೆ, ಆಶ್ರಯಕ್ಕಾಗಿ ಎದಿರುನೋಡುತ್ತಿರುವ ಜನರಿಗೆ ಹೆಚ್ಚಿನ ಪ್ರಯೋಜನ ತರಲಿದೆ. ಈ ಅಧಿಸೂಚನೆಯನ್ನು ಸಮತೋಲಿತವಾಗಿ ವಿನ್ಯಾಸಗೊಳಿಸಲಾಗಿದ್ದು, ಇದು ಎರಡನ್ನೂ ಈಡೇರಿಸುತ್ತದೆ. ಪ್ರವಾಸೋದ್ಯಮವು ದೊಡ್ಡ ಸಂಖ್ಯೆ ಜೀವನೋಪಾಯ ಮತ್ತು ಉದ್ಯೋಗ ಸೃಷ್ಟಿಸುವುದಾಗಿದೆ. ಈ ಹೊಸ ಅಧಿಸೂಚನೆ ಹೆಚ್ಚಿನ ಚಟುವಟಿಕೆ, ಹೆಚ್ಚಿನ ಮೂಲಸೌಕರ್ಯ ಮತ್ತು ಹೆಚ್ಚು ಅವಕಾಶಗಳೊಂದಿಗೆ ಪ್ರವಾಸೋದ್ಯಮ ಉತ್ತೇಜಿಸುತ್ತದೆ ಮತ್ತು ಪ್ರವಾಸೋದ್ಯಮದ ವಿವಿಧ ಆಯಾಮಗಳಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಬಹುದೂರ ಸಾಗಲಿದೆ. ಜೊತೆಗೆ ಇದು ಸಾಗರದ ಅಗಾಧ ಸೌಂದರ್ಯವನ್ನು ಆಸ್ವಾದಿಸುವ ಮತ್ತು ನೋಡುವ ಬಯಕೆಯುಳ್ಳ ಜನರಿಗೂ ಸ್ಫೂರ್ತಿ, ಉತ್ತೇಜನ ನೀಡಲಿದೆ.
(Release ID: 1557840)
Visitor Counter : 128